ಗೃಹಜ್ಯೋತಿ ಯೋಜನೆ (Gruha Jyothi Yojana) ಮೂಲಕ ಪ್ರತಿ ತಿಂಗಳು 200 ಯೂನಿಟ್ ಗಿಂತಲೂ ವಿದ್ಯುತ್ ಕಡಿಮೆ ಬಳಕೆ ಮಾಡುವವರು, ಉಚಿತ ವಿದ್ಯುತ್ತನ್ನು (free electricity) ಪಡೆದುಕೊಳ್ಳುತ್ತಾರೆ. ಈ ರೀತಿ ಉಚಿತ ವಿದ್ಯುತ್ ಸೌಲಭ್ಯ ಪಡೆದುಕೊಳ್ಳುತ್ತಿರುವ ಗ್ರಾಹಕರ ಸಂಖ್ಯೆ ಒಂದೆರಡಲ್ಲ ಬರೋಬರಿ 1.20 ಕೋಟಿ.
ಹೌದು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಜ್ಯೋತಿ ಯೋಜನೆ ಕೂಡ ಒಂದಾಗಿದ್ದು, ಯೋಜನೆಯ ಅಡಿಯಲ್ಲಿ 200 ಯೂನಿಟ್ ಗಿಂತ ವಿದ್ಯುತ್ ಕಡಿಮೆ ಬಳಕೆ ಮಾಡಿದರೆ ಅಂತವರಿಗೆ ಒಂದೇ ಒಂದು ರೂಪಾಯಿ ವಿದ್ಯುತ್ ಪಾವತಿಸಬೇಕಾಗಿ ಇಲ್ಲ.
ಈ ಯೋಜನೆಯಲ್ಲಿ ರೈತರಿಗೆ ಸಿಗುತ್ತೆ 10,000 ಸಹಾಯಧನ! ನೇರವಾಗಿ ಖಾತೆಗೆ ಜಮಾ
ಸಂಪೂರ್ಣವಾಗಿ ವಿದ್ಯುತ್ ಉಚಿತವಾಗುತ್ತದೆ. ಆದರೆ ಶೂನ್ಯ ವಿದ್ಯುತ್ ಬಿಲ್ ಪಾವತಿ (Zero Electric Bill) ಮಾಡುತ್ತಿರುವವರಿಗೆ ಇದೀಗ ಆತಂಕ ಎದುರಾಗಿದೆ. ಅಂತಹ ಟೆನ್ಶನ್ ಶುರು ಆಗಿದೆ, ಯಾಕೆ ಅಂತೀರಾ?
ಇಲ್ಲಿಯವರಿಗೆ ಇದ್ದ ವಿದ್ಯುತ್ ಬೇಡಿಕೆ ಗಿಂತ ಈಗ ವಿದ್ಯುತ್ ಬೇಡಿಕೆ ಡಬ್ಬಲ್ ಆಗಿದೆ. ಯಾಕಂದ್ರೆ ಇದು ಬೇಸಿಗೆಕಾಲ ವಿದ್ಯುತ್ ಬಳಕೆ ಜಾಸ್ತಿ. ನಾವು ಮನೆಯಲ್ಲಿ ಉರಿಸುವ ಎಸಿ ಫ್ಯಾನ್ ಕೂಲರ್ ಮೊದಲಾದವು ಹೆಚ್ಚು ವಿದ್ಯುತ್ ಬಳಕೆ ಮಾಡಿಕೊಳ್ಳುತ್ತವೆ. ಇದರಿಂದಾಗಿ ಅನಿವಾರ್ಯವಾಗಿ ವಿದ್ಯುತ್ ಬಿಲ್ ಜಾಸ್ತಿ ಆಗುತ್ತೆ.
ಇಂತಹವರಿಗೆ ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ಬಂದ್! ಸರ್ಕಾರ ಖಡಕ್ ವಾರ್ನಿಂಗ್
ಹೆಚ್ಚುವರಿಯಾಗಿ ಪಾವತಿಸಬೇಕು ವಿದ್ಯುತ್ ಬಿಲ್!
ಕಳೆದ ಎರಡು ತಿಂಗಳಿಗೆ ಹೋಲಿಕೆ ಮಾಡಿದರೆ ಈ ತಿಂಗಳಿನಲ್ಲಿ ಶೇಕಡ 20% ನಷ್ಟು ವಿದ್ಯುತ್ ಬೇಡಿಕೆ ಹೆಚ್ಚಾಗಿದೆ ಎಂದು ಹೇಳಲಾಗಿದೆ. ಇದರಿಂದಾಗಿ ವಿದ್ಯುತ್ ಬಿಲ್ ಪಾವತಿ ಮಾಡುವವರ ಸಂಖ್ಯೆಯು ಜಾಸ್ತಿಯಾಗಿದೆ
ಅಂದರೆ ಸಾಕಷ್ಟು ಜನ ಎಂದಿಗಿಂತ ಹೆಚ್ಚಿಗೆ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ. ಹೆಚ್ಚುವರಿ ವಿದ್ಯುತ್ ಗೆ, ಅಂದ್ರೆ 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ ನಂತರದ 50 ಯೂನಿಟ್ ಗಳಿಗೆ ಪ್ರತಿ ಯೂನಿಟ್ ಗೆ 7 ರೂಪಾಯಿಗಳಂತೆ ಚಾರ್ಜ್ ಮಾಡಲಾಗುವುದು.
ಇನ್ಮುಂದೆ ಇಂತಹವರಿಗೆ ಸಿಗೋಲ್ಲ ಉಚಿತ ಕರೆಂಟ್! ಕಟ್ಟಬೇಕು ಸಂಪೂರ್ಣ ವಿದ್ಯುತ್ ಬಿಲ್
ಉಚಿತವಾಗಿ ವಿದ್ಯುತ್ ಪಡೆದುಕೊಳ್ಳುತ್ತಿರುವವರು ಕೂಡ ಇನ್ನು ಮುಂದೆ ಹೆಚ್ಚಿನ ವಿದ್ಯುತ್ ಬಳಕೆ ಮಾಡಿದರೆ ಗೃಹಜ್ಯೋತಿ ಯೋಜನೆಯಿಂದ ಅಂಥವರನ್ನು ಹೊರಗಿಡುವ ಸಾಧ್ಯತೆ ಇದೆ
ಹಾಗಾಗಿ ಪ್ರತಿದಿನ ವಿದ್ಯುತ್ ಬಳಕೆ ಮಾಡುವಾಗ ಬಹಳ ಜಾಗರೂಕತೆಯಿಂದ ಇರಿ. ಹಿತಮಿತವಾಗಿ ವಿದ್ಯುತ್ ಬಳಸಿ. ಅನಗತ್ಯ ಸಮಯದಲ್ಲಿ ಎಸಿ ಕೂಲರ್ ಹಾಗೂ ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳ ಸ್ವಿಚ್ ಆಫ್ ಮಾಡುವುದನ್ನು ಮರೆಯಬೇಡಿ.
ಹಗಲಿನ ಸಮಯದಲ್ಲಿ ಆದಷ್ಟು ನೈಸರ್ಗಿಕ ಗಾಳಿ ಮತ್ತು ಬೆಳಕು ಮನೆಯೊಳಗೆ ಬರುವಂತೆ ನೋಡಿಕೊಳ್ಳಿ. ಆಗ ನೀವು ದಿನದ 24 ಗಂಟೆ ಫ್ಯಾನ್ ಅಥವಾ ಎಸಿ ಉರಿಸುವ ಅಗತ್ಯ ಇರುವುದಿಲ್ಲ.. ವಿದ್ಯುತ್ ಬಿಲ್ ಪಾವತಿ ಮಾಡುವ ಪ್ರಸಂಗವು ಬರುವುದಿಲ್ಲ!
ಗೃಹಲಕ್ಷ್ಮಿ 7ನೇ ಕಂತಿನ ಹಣಕ್ಕೆ ಬ್ಯಾಂಕಿನಿಂದ ಎಸ್ಎಂಎಸ್ ಬಾರದೆ ಇದ್ರೆ ಈ ರೀತಿ ಮಾಡಿ!
Big update for those who are getting free Electricity of Gruha jyothi Yojana
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.