Karnataka NewsBangalore News

ಇನ್ಮುಂದೆ ಇಂತಹವರಿಗೆ ಸಿಗೋಲ್ಲ ಉಚಿತ ಕರೆಂಟ್! ಕಟ್ಟಬೇಕು ಸಂಪೂರ್ಣ ವಿದ್ಯುತ್ ಬಿಲ್

ರಾಜ್ಯದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದೆ. ಪ್ರತಿಯೊಬ್ಬರು ಬಿಸಿಲಿನ ತಾಪಮಾನ ತಡೆದುಕೊಳ್ಳಲು ಕಷ್ಟಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಎಸಿ, ಫ್ಯಾನ್, ಕೂಲರ್ ಮೊದಲಾದವುಗಳ ಬಳಕೆ ಜಾಸ್ತಿ ಆಗುತ್ತಿದೆ. ಹಾಗಾಗಿ ಸರ್ಕಾರ ನೀಡುತ್ತಿರುವ 200 ಯೂನಿಟ್ (unit) ಗಿಂತಲೂ ಅಧಿಕ ಯೂನಿಟ್ ಬಳಕೆ ಮಾಡುತ್ತಿರುವುದರಿಂದ ಸಾಕಷ್ಟು ಜನ ಸಂಪೂರ್ಣ ಬಿಲ್ (Electricity Bill) ಪಾವತಿ ಮಾಡುವಂತೆ ಆಗಿದೆ.

ಹೌದು, ರಾಜ್ಯ ಸರ್ಕಾರ ಗ್ಯಾರಂಟಿ (guarantee scheme) ಯೋಜನೆಯ ಜಾರಿಗೆ ತಂದ ನಂತರ 200 ಯೂನಿಟ್ ವರೆಗೆ ಸುಲಭವಾಗಿ ಉಚಿತ ವಿದ್ಯುತ್ ಅನ್ನು ಲಕ್ಷಾಂತರ ಕುಟುಂಬಗಳು ಪಡೆದುಕೊಳ್ಳುತ್ತಿದ್ದಾರೆ.

sudden rise in electricity prices even Gruha Jyothi Yojana

ಮಾರ್ಚ್ 25ರೊಳಗೆ ಈ ಕೆಲ್ಸ ಮಾಡದಿದ್ರೆ ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಸಿಗೋದಿಲ್ಲ

200 ಯೂನಿಟ್ ಒಳಗೆ ವಿದ್ಯುತ್ ಖರ್ಚು ಮಾಡಿದರೆ ಅಂತವರು ಒಂದೇ ಒಂದು ರೂಪಾಯಿ ಬಿಲ್ ಪಾವತಿ ಮಾಡಬೇಕಾಗಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಪ್ರತಿಯೊಬ್ಬರೂ ಕೂಡ ವಿದ್ಯುತ್ ಬಳಕೆ ಜಾಸ್ತಿ ಮಾಡುತ್ತಿದ್ದಾರೆ. ಹಾಗಾಗಿ ಬೇಸಿಗೆ ಟೈಮ್ ನಲ್ಲಿ ಕಡಿಮೆ ವಿದ್ಯುತ್ ಬಳಸುವವರು ಕೂಡ ಹೆಚ್ಚಿನ ವಿದ್ಯುತ್ ಬಳಸುತ್ತಿದ್ದು ವಿದ್ಯುತ್ ಬಿಲ್ ಪಾವತಿಸಬೇಕಾಗಿ ಬಂದಿದೆ.

Electricity billಪಾವತಿಸಬೇಕು ಹೆಚ್ಚುವರಿ ಬಿಲ್!

150 ಯೂನಿಟ್ ಸರಾಸರಿ ಬಳಕೆ ಆಗಿದ್ದರೆ ಈಗ 50 ಯೂನಿಟ್ ಜಾಸ್ತಿ ಆಗಿದ್ದರು ಕೂಡ ಪ್ರತಿ ಯೂನಿಟ್ ಗೆ ಏಳು ರೂಪಾಯಿಗಳಂತೆ ಹೆಚ್ಚುವರಿ ಆಗಿ ಪಾವತಿಸಬೇಕು. ಬೇಸಿಗೆಯಿಂದಾಗಿ ಹೆಚ್ಚುವರಿ 20% ನಷ್ಟು ವಿದ್ಯುತ್ ಬಳಕೆ ಹೆಚ್ಚಾಗಿದೆ ಎಂದು ವರದಿಯಾಗಿದೆ. ಇದರಿಂದಾಗಿ ಗೃಹಜ್ಯೋತಿ ಪ್ರಯೋಜನ ಪಡೆದುಕೊಳ್ಳುತ್ತಿರುವವರು ಕೂಡ ಇಂದು ಉಳಿದವರಂತೆ ಫುಲ್ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಆಗಿದೆ.

ಕೃಷಿಭಾಗ್ಯ ಯೋಜನೆಯಲ್ಲಿ ನಿಮಗೂ ಸಹ ಹಣ ಸಿಗುತ್ತಾ? ಈ ರೀತಿ ಚೆಕ್ ಮಾಡಿಕೊಳ್ಳಿ

ನಿರ್ದಿಷ್ಟ ವಿದ್ಯುತ್ ಬಳಕೆಯ ಮೇಲೆ 10% ನಷ್ಟು ಹೆಚ್ಚುವರಿಯಾಗಿ ಸರ್ಕಾರ ವಿದ್ಯುತ್ ಬಳಕೆಗೆ ಅವಕಾಶ ಕೊಟ್ಟಿತ್ತು. ಆದರೆ ಈಗ 200 ಯೂನಿಟ್ ಗಳನ್ನು ನೀಡುತ್ತಿರುವರಿಂದ ಸಂಪೂರ್ಣ ಮೊತ್ತವನ್ನು ಸಾರ್ವಜನಿಕರು ಪಾವತಿ ಮಾಡಬೇಕು ಎಂದು ಸರ್ಕಾರ ತಿಳಿಸಿದೆ.

ಬೇಸಿಗೆ ಕಾಲದಲ್ಲಿ ಅತಿಯಾಗಿ ವಿದ್ಯುತ್ ಬಳಸುವವರು ಇದನ್ನು ಗಮನಿಸಬೇಕು, ಸರ್ಕಾರ ಕೊಟ್ಟಿರುವ ನಿಗದಿತ ಯೂನಿಟ್ ಹೊರತುಪಡಿಸಿ ಹೆಚ್ಚುರಿಯಾಗಿ ಯೂನಿಟ್ ಬಳಕೆ ಮಾಡಿದರೆ ಹೆಚ್ಚು ಬಳಕೆ ಮಾಡಿದ ಯೂನಿಟ್ ಗೆ ಮಾತ್ರವಲ್ಲ ಸಂಪೂರ್ಣ ಬಿಲ್ ಪಾವತಿಸಬೇಕಾಗುತ್ತದೆ. ಹಾಗಾಗಿ ಹೆಚ್ಚು ವಿದ್ಯುತ್ ಬಳಕೆ ಮಾಡುತ್ತಿರುವವರು ಸ್ವಲ್ಪ ವಿದ್ಯುತ್ ಬಳಕೆ ಕಡಿಮೆ ಮಾಡಿದ್ರೆ ಈ ಸಮಸ್ಯೆ ಬರುವುದಿಲ್ಲ.

ಮೊದಲು ಈ ಜಿಲ್ಲೆಗಳಿಗೆ ಗೃಹಲಕ್ಷ್ಮಿ 7ನೇ ಕಂತಿನ ಹಣ ಬಿಡುಗಡೆ! ಚೆಕ್ ಮಾಡಿಕೊಳ್ಳಿ

such people will not get free Electricity, Full electricity bill to be paid

Our Whatsapp Channel is Live Now 👇

Whatsapp Channel

Related Stories