ಮೊದಲು ಈ ಜಿಲ್ಲೆಗಳಿಗೆ ಗೃಹಲಕ್ಷ್ಮಿ 7ನೇ ಕಂತಿನ ಹಣ ಬಿಡುಗಡೆ! ಚೆಕ್ ಮಾಡಿಕೊಳ್ಳಿ
ರಾಜ್ಯದ ಗ್ಯಾರಂಟಿ ಯೋಜನೆ (guarantee schemes) ಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಬಗ್ಗೆ ಸಾಕಷ್ಟು ಉತ್ತಮ ಪ್ರಕ್ರಿಯೆಗಳು ಬರುತ್ತಿವೆ. ಒಂದಷ್ಟು ಮಹಿಳೆಯರ ಖಾತೆಗೆ (Bank Account) ಹಣ ಬಿಡುಗಡೆ ಆಗದೇ ಇದ್ದರೂ ಕೂಡ ಇನ್ನೂ ಸಾಕಷ್ಟು ಮಹಿಳೆಯರು ಅರ್ಜಿ ಸಲ್ಲಿಸಿದ ನಂತರ ಕಳೆದ ಆರು ತಿಂಗಳುಗಳಿಂದ, ಗೃಹಲಕ್ಷ್ಮಿ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ.
ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ಸುಲಭವಾಗಿ ಎರಡು ಸಾವಿರ ರೂಪಾಯಿಗಳನ್ನು ಮಹಿಳೆಯರು ತಮ್ಮ ತಿಂಗಳ ಸಣ್ಣಪುಟ್ಟ ಖರ್ಚು ನಿಭಾಯಿಸಲು ಪಡೆದುಕೊಳ್ಳಬಹುದಾಗಿದೆ.
ಇದೀಗ 7ನೇ ಕಂತಿನ ಗೃಹ ಲಕ್ಷ್ಮಿ ಯೋಜನೆಯ ಹಣ ಬಿಡುಗಡೆ (Money Deposit) ಆಗಿದೆ, ಯಾವ ಜಿಲ್ಲೆಗಳಿಗೆ ಮೊದಲು ಬಿಡುಗಡೆ ಮಾಡಲಾಗಿದೆ ಎನ್ನುವ ಬಗ್ಗೆ ಇಲ್ಲಿದೆ ವಿವರ.
ಹೊಸ ರೇಷನ್ ಕಾರ್ಡ್ ಪಡೆಯೋಕೆ ಕಾಯ್ತಾ ಇರೋರಿಗೆ ಗುಡ್ ನ್ಯೂಸ್; ವಿತರಣೆಗೆ ದಿನಾಂಕ ಫಿಕ್ಸ್
ಏಳನೇ ಕಂತಿನ ಹಣ ಬಿಡುಗಡೆ ಆದ ಜಿಲ್ಲೆಗಳು (7th installment released in these district)
ಶಿವಮೊಗ್ಗ
ಧಾರವಾಡ
ತುಮಕೂರು
ಚಾಮರಾಜನಗರ
ವಿಜಯಪುರ
ಬೆಳಗಾವಿ
ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ
ರಾಮನಗರ
ಕೊಪ್ಪಳ
ದಕ್ಷಿಣ ಕನ್ನಡ
ತುಮಕೂರು
ಹಾವೇರಿ
ಉತ್ತರ ಕನ್ನಡ
ಕೋಲಾರ
ಗದಗ
ವಿಜಯನಗರ
ಬೀದರ್
ರಾಯಚೂರು
ಮೈಸೂರು
ಚಿತ್ರದುರ್ಗ
ಹಾಸನ
ಬಳ್ಳಾರಿ
ಯಾದಗಿರಿ
ಮಾರ್ಚ್ ತಿಂಗಳ ಅನ್ನಭಾಗ್ಯ ಯೋಜನೆ ಅಕ್ಕಿ ಹಣದ ಮಹತ್ವದ ಅಪ್ಡೇಟ್ ನೀಡಿದ ಸರ್ಕಾರ
ಇಷ್ಟು ಜಿಲ್ಲೆಗಳಿಗೆ 7ನೇ ಕಂತಿನ ಹಣ ಬಿಡುಗಡೆ ಆಗಿದೆ, ಮಹಿಳೆಯರು ತಕ್ಷಣ ತಮ್ಮ ಖಾತೆಯನ್ನು ಚೆಕ್ ಮಾಡಿಕೊಳ್ಳಬಹುದು. ಉಳಿದ ಜಿಲ್ಲೆಗಳಿಗೂ ಕೂಡ ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುವುದು ಹಾಗಾಗಿ ಯಾವ ಮಹಿಳೆಯರು ಕೂಡ ತಮ್ಮ ಖಾತೆಗೆ ಹಣ ಬಂದಿಲ್ಲ ಎಂದು ಚಿಂತಿಸುವ ಅಗತ್ಯ ಇಲ್ಲ.. March 31ರ ಒಳಗೆ ಎಲ್ಲರ ಖಾತೆಗೆ ಹಣ ಬಿಡುಗಡೆ ಆಗಲಿದೆ ಎಂದು ಸರ್ಕಾರ ಭರವಸೆ ನೀಡಿದೆ.
ಗೃಹಜ್ಯೋತಿ ಯೋಜನೆ ಅಡಿ ಉಚಿತ ವಿದ್ಯುತ್ ಪಡೆಯುತ್ತಿರುವವರಿಗೆ ಹೊಸ ಅಪ್ಡೇಟ್
ಈ ರೀತಿ ಸ್ಟೇಟಸ್ ಚೆಕ್ ಮಾಡಿ! (Check your DBT status)
ನೀವು ನಿಮ್ಮ ಮೊಬೈಲ್ ನಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಬಂದಿದ್ಯೋ ಇಲ್ವೋ ಎಂಬುದನ್ನು ಚೆಕ್ ಮಾಡಬಹುದು. ಅದಕ್ಕಾಗಿ ಮೊದಲು ನಿಮ್ಮ ಮೊಬೈಲ್ ನಲ್ಲಿ DBT Karnataka ಏನು ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.
ಅಪ್ಲಿಕೇಶನ್ ಗಾಗಿ https://play.google.com/store/apps/details?id=com.dbtkarnataka ಈ ಲಿಂಕ್ ಕ್ಲಿಕ್ ಮಾಡಿ.
ಅಪ್ಲಿಕೇಶನ್ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡ ನಂತರ ಇನ್ಸ್ಟಾಲ್ ಮಾಡಬೇಕು. ಅದಕ್ಕಾಗಿ ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಬೇಕು ಮೊಬೈಲ್ ಗೆ ಒಂದು ಓಟಿಪಿ ಕಳುಹಿಸಲಾಗುತ್ತದೆ ಅದನ್ನ ನಮೂದಿಸಬೇಕು.
ಕೆಲ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ಜಮಾ ಆಗದೆ ಇರಲು ಇಲ್ಲಿದೆ ಕಾರಣ!
ಈಗ ನೀವು mPIN ರಚಿಸಬೇಕು 4 ಅಂಕಿಯ ಈ ಪಾಸ್ವರ್ಡ್ ಪ್ರತಿ ಬಾರಿ ನೀವು ಅಪ್ಲಿಕೇಶನ್ ತೆರೆಯುವಾಗ ಬೇಕಾಗುತ್ತದೆ. ಈಗ ಪ್ರೊಫೈಲ್ ನಲ್ಲಿ ನೀವು ನಿಮ್ಮ ಖಾತೆಗೆ ಸರ್ಕಾರದಿಂದ ಯಾವುದೇ DBT ಆಗಿರುವ ಹಣದ ಬಗ್ಗೆ ಸ್ಟೇಟಸ್ ತಿಳಿದುಕೊಳ್ಳಬಹುದು.
Gruha lakshmi scheme money released for these districts first