ಹೊಸ ರೇಷನ್ ಕಾರ್ಡ್ ಪಡೆಯೋಕೆ ಕಾಯ್ತಾ ಇರೋರಿಗೆ ಗುಡ್ ನ್ಯೂಸ್; ವಿತರಣೆಗೆ ದಿನಾಂಕ ಫಿಕ್ಸ್
ಈಗಾಗಲೇ 57,000 ಕಾರ್ಡ್ ಗಳನ್ನು ವಿತರಣೆ ಮಾಡಲಾಗಿದೆ ಹಾಗೂ ಮೆಡಿಕಲ್ ಎಮರ್ಜೆನ್ಸಿ ಗಾಗಿ 774 ಕಾರ್ಡ್ ಗಳನ್ನು ಫಲಾನುಭವಿಗಳು ಪಡೆದುಕೊಂಡಿದ್ದಾರೆ.
ನೀವು ಹೊಸ ರೇಷನ್ ಕಾರ್ಡ್ (Ration card) ಗಾಗಿ ಕಾಯ್ತಾ ಇದ್ದೀರಾ? ಕಳೆದ ಎರಡುವರೆ ವರ್ಷದ ಹಿಂದೆ ಸಲ್ಲಿಸಿದ ರೇಷನ್ ಕಾರ್ಡ್ ಅರ್ಜಿ ಇದುವರೆಗೆ ಮಾನ್ಯ ಆಗಿಲ್ವಾ? ಇದೇ ಕಾರಣಕ್ಕೆ ಸರ್ಕಾರದ ಯೋಜನೆಯ ಪ್ರಯೋಜನ ನಿಮಗೆ ಸಿಕ್ತಾ ಇಲ್ವಾ? ಹಾಗೇನಾದ್ರೂ ಆಗಿದ್ರೆ ಇನ್ನು ಮುಂದೆ ಆ ಟೆನ್ಶನ್ ನಿಮಗೆ ಬೇಡ..
ಯಾಕಂದ್ರೆ ರಾಜ್ಯ ಸರ್ಕಾರ ಈಗ ಹೊಸ ರೇಷನ್ ಕಾರ್ಡ್ ವಿಲೇವಾರಿಗೆ ಮುಂದಾಗಿದೆ. ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿರುವ 2.95 ಲಕ್ಷ ರೇಷನ್ ಕಾರ್ಡ್ ಅರ್ಜಿಗಳನ್ನು ಪರಿಶೀಲನೆ ಮಾಡಿ ವಿತರಣೆ ಮಾಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಆಹಾರ ಸಚಿವ ಕೆ. ಹೆಚ್ ಮುನಿಯಪ್ಪ ಸ್ಪಷ್ಟನೆ ನೀಡಿದ್ದಾರೆ.
ಮಾರ್ಚ್ ತಿಂಗಳ ಅನ್ನಭಾಗ್ಯ ಯೋಜನೆ ಅಕ್ಕಿ ಹಣದ ಮಹತ್ವದ ಅಪ್ಡೇಟ್ ನೀಡಿದ ಸರ್ಕಾರ
ಇದೇ ದಿನ ಪಡಿತರ ಚೀಟಿ ವಿತರಣೆ!
ರಾಜ್ಯ ಸರ್ಕಾರ ಕಳೆದ ಎರಡುವರೆ ವರ್ಷಗಳಿಂದ ರಾಜ್ಯದ ಜನತೆಗೆ ವಿತರಣೆ ಮಾಡಲು ಸಾಧ್ಯವಾಗದೆ ಇರುವ ಪಡಿತರ ಚೀಟಿ ಗಳನ್ನು ಈಗ ವಿಲೆವಾರಿ ಮಾಡಲು ಹೊರಟಿದೆ. ಇವುಗಳಲ್ಲಿ ಎಪಿಎಲ್ (APL Card) ಮತ್ತು ಬಿಪಿಎಲ್ (BPL Card) ಎಂದು ವರ್ಗ ಮಾಡಲಾಗುತ್ತದೆ.
ಹಾಗೂ ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ನೀಡಲಾಗುತ್ತದೆ. ಮಾರ್ಚ್ 31 ಪರಿಶೀಲನೆ ಮುಗಿಸಲು ಕೊನೆಯ ದಿನಾಂಕ ಹಾಗೂ ಏಪ್ರಿಲ್ ಒಂದರಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಅಥವಾ ಸೇವಾ ಕೇಂದ್ರಗಳಲ್ಲಿ ಹೊಸ ಪಡಿತರ ಚೀಟಿ ಪಡೆದುಕೊಳ್ಳಬಹುದು. ಇದನ್ನು ಬಹುಶ ಜಿಲ್ಲಾವಾರು ಬಿಡುಗಡೆ ಮಾಡಲಾಗುವುದು. ಸರ್ಕಾರದ ಡೇಟಾಬೇಸ್ ನಲ್ಲಿ ಯಾರ ಹೆಸರನ್ನು ಸೇರಿಸಿರುತ್ತದೆಯೋ ಅವರಿಗೆ ಮಾತ್ರ ಪಡಿತರ ಚೀಟಿ ವಿತರಣೆ ಮಾಡಲಾಗುವುದು.
ಈಗಾಗಲೇ 57,000 ಕಾರ್ಡ್ ಗಳನ್ನು ವಿತರಣೆ ಮಾಡಲಾಗಿದೆ ಹಾಗೂ ಮೆಡಿಕಲ್ ಎಮರ್ಜೆನ್ಸಿ ಗಾಗಿ 774 ಕಾರ್ಡ್ ಗಳನ್ನು ಫಲಾನುಭವಿಗಳು ಪಡೆದುಕೊಂಡಿದ್ದಾರೆ.
ಗೃಹಜ್ಯೋತಿ ಯೋಜನೆ ಅಡಿ ಉಚಿತ ವಿದ್ಯುತ್ ಪಡೆಯುತ್ತಿರುವವರಿಗೆ ಹೊಸ ಅಪ್ಡೇಟ್
ಹೊಸ ಪಡಿತರ ಚೀಟಿ (New Ration card) ಪಡೆದುಕೊಳ್ಳಲು ಸಹ ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರ ತಿಳಿಸಿದೆ. ಆದರೆ ಇದುವರೆಗೆ ಆ ಪ್ರಕ್ರಿಯೆ ಆರಂಭವಾಗಿಲ್ಲ. ಆದಾಗ್ಯೂ ಯಾವುದೇ ತುರ್ತು ವೈದ್ಯಕೀಯ ಪ್ರಯೋಜನ ಪಡೆದುಕೊಳ್ಳುವ ಸಲುವಾಗಿ ರೇಷನ್ ಕಾರ್ಡ್ ಅಗತ್ಯ ಇದ್ದವರು ತಕ್ಷಣ ಅರ್ಜಿ ಸಲ್ಲಿಸಿ ವಿಶೇಷ ಪರವಾನಿಗೆ ಆಧಾರದ ಮೇಲೆ ರೇಷನ್ ಕಾರ್ಡ್ ಪಡೆಯಬಹುದು.
ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ!
ನೀವು ಈಗಾಗಲೇ ರೇಷನ್ ಕಾರ್ಡ್ ಹೊಂದಿದ್ರೆ ಅದರಲ್ಲಿ ಅಗತ್ಯ ಇರುವ ತಿದ್ದುಪಡಿಗಳನ್ನು ಮಾಡಿಕೊಳ್ಳಬಹುದು. ಉದಾಹರಣೆಗೆ ಮನೆಗೆ ಬಂದಿರುವ ಸೊಸೆ ಅಥವಾ ಮಗುವಿನ ಜನನ ಆಗಿದ್ದರೆ ಅವರ ಹೆಸರುಗಳನ್ನು ಸೇರಿಸಬಹುದು. ಅದೇ ರೀತಿ ಪಡಿತರ ಚೀಟಿಯಲ್ಲಿ ಯಾವುದೇ ಬದಲಾವಣೆ ಆಗಬೇಕಿದ್ದರೆ, ಮೃತಪಟ್ಟವರ ಹೆಸರನ್ನು ತೆಗೆಸಬೇಕಿದ್ದರೆ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಬಹುದು.
ಬರ ಪರಿಹಾರ ಹಣ ಪಡೆದುಕೊಳ್ಳಲು ಈ ದಾಖಲೆಗಳನ್ನು ಸಲ್ಲಿಸಿ! ಇಲ್ಲಿದೆ ಮಾಹಿತಿ
ಇನ್ನು ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಹೊಸದಾಗಿ ಮದುವೆ ಆಗಿರುವ ನವಜೋಡಿ ಪ್ರತ್ಯೇಕವಾಗಿ ಜೀವನ ನಡೆಸಲು ಆರಂಭಿಸಿದರೆ ಅಂತವರು ಅರ್ಜಿ ಸಲ್ಲಿಸಬಹುದು. ಅಥವಾ ಈಗಿರುವ ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸುವವರು ಹಳೆಯ ಕಾರ್ಡ್ ನಿಂದ ಹೆಸರನ್ನು ತೆಗೆಸಿ ಹೊಸ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಬಹುದು.
ಇನ್ನು ಆನ್ಲೈನ್ ಪೋರ್ಟಲ್ (online portal) ಗಳು ನಿರ್ದಿಷ್ಟ ಅವಧಿಗೆ ಮಾತ್ರ ತೆರೆದಿರುತ್ತವೆ ಹಾಗಾಗಿ ನೀವು ಹತ್ತಿರದ ಸೇವಾ ಕೇಂದ್ರಗಳಲ್ಲಿ ಈ ಬಗ್ಗೆ ಮಾಹಿತಿ ಪಡೆದುಕೊಂಡು ತಿದ್ದುಪಡಿಗೆ ಅಥವಾ ಹೊಸ ಅರ್ಜಿ ಸಲ್ಲಿಸುವುದಕ್ಕೆ ಪ್ರಯತ್ನಿಸಿ.
ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಕೆ ಪ್ರಾರಂಭ! ಹೀಗೆ ಅರ್ಜಿ ಸಲ್ಲಿಸಿ
Good news for those who are waiting to get new ration card