ಬರ ಪರಿಹಾರ ಹಣ ಪಡೆದುಕೊಳ್ಳಲು ಈ ದಾಖಲೆಗಳನ್ನು ಸಲ್ಲಿಸಿ! ಇಲ್ಲಿದೆ ಮಾಹಿತಿ

ರೈತರಿಗೆ ಬರ ಪರಿಹಾರ (Drought Relief) ಹಣವನ್ನು ರಾಜ್ಯ ಸರ್ಕಾರ ರೈತರ ಖಾತೆಗೆ (Bank Account) ಜಮಾ ಮಾಡಿದೆ.

ಕಳೆದ ಬಾರಿ ಮಳೆ ಅಭಾವದಿಂದ ಸಾಕಷ್ಟು ರೈತರು ಕಷ್ಟ ಪಡುವಂತೆ ಆಗಿದೆ. ಸರಿಯಾಗಿ ಫಸಲು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ, ಯಾಕಂದ್ರೆ ಉತ್ತಮ ಪ್ರಮಾಣದಲ್ಲಿ ಜಮೀನಿಗೆ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ.

ರೈತರ (farmers) ಮಾತ್ರವಲ್ಲದೆ ಇಂದು ಸಾಮಾನ್ಯರು ಕೂಡ ನೀರಿಗೆ ಪರದಾಡುವ ಪರಿಸ್ಥಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಬರ ಪರಿಹಾರ (Drought Relief) ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು ಮೊದಲ ಹಂತದಲ್ಲಿ ಎರಡು ಸಾವಿರ ರೂಪಾಯಿಗಳನ್ನು ಖಾತೆಗೆ (Bank Account) ಜಮಾ ಮಾಡಿದೆ. ಈ ಹಣವನ್ನು ಪಡೆದುಕೊಳ್ಳಲು ಪ್ರಮುಖ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ ಎಂದು ತಿಳಿಸಿದೆ.

ಗ್ರಾಮ ಪಂಚಾಯತ್ ಉದ್ಯೋಗಕ್ಕೆ ಅರ್ಜಿ ಆಹ್ವಾನ! 63,000 ಸಂಬಳ; ತಕ್ಷಣ ಅರ್ಜಿ ಸಲ್ಲಿಸಿ

ಬರ ಪರಿಹಾರ ಹಣ ಪಡೆದುಕೊಳ್ಳಲು ಈ ದಾಖಲೆಗಳನ್ನು ಸಲ್ಲಿಸಿ! ಇಲ್ಲಿದೆ ಮಾಹಿತಿ - Kannada News

ಬರ ಪರಿಹಾರಕ್ಕೆ ಕ್ರಮ!

ರಾಜ್ಯದಲ್ಲಿ ಒಟ್ಟು 223 ಪ್ರದೇಶಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ. ಕೇಂದ್ರ ಸರ್ಕಾರದಿಂದ ಅನುದಾನ ದೊರೆತಿಲ್ಲ ಎಂದು ದೂರಿರುವ ರಾಜ್ಯ ಸರ್ಕಾರ ತಾನೇ ಮುಂದಾಗಿ ರೈತರಿಗೆ ಬರ ಪರಿಹಾರ ನೀಡಲು ಹೊರಟಿದೆ.

2023-24ನೇ ಸಾಲಿನ ಬಿತ್ತನೆ ಮಾಡಿರುವ ಸುಮಾರು 1,97,729 ರೈತರಿಗೆ 37 ಕೋಟಿ 59 ಲಕ್ಷ ರೂ.ಗಳ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದೆ ಇಂದು ಸರ್ಕಾರ ಹೇಳಿಕೊಂಡಿದೆ.

ಕೆಲ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ಜಮಾ ಆಗದೆ ಇರಲು ಇಲ್ಲಿದೆ ಕಾರಣ!

drought relief Fundಬರ ಪರಿಹಾರ ಪಡೆದುಕೊಳ್ಳಲು ಈ ದಾಖಲೆ ಕಡ್ಡಾಯ

ರೈತರು FID ಅಂದ್ರೆ ಫ್ರೂಟ್ಸ್ ಐಡಿ ಹೊಂದಿರುವುದು ಕಡ್ಡಾಯವಾಗಿ ಇದ್ದರೆ ಮಾತ್ರ ಸರ್ಕಾರದ ಪ್ರಮುಖ ಯೋಜನೆಗಳ ಪ್ರಯೋಜನ ರೈತರಿಗೆ ಸಿಗುತ್ತದೆ. ಇದೀಗ ಬರ ಪರಿಹಾರ ನಿಧಿ ಪಡೆದುಕೊಳ್ಳುವುದಕ್ಕೂ ಕೂಡ ಈ ದಾಖಲೆಯನ್ನು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ನಿಮ್ಮ ಬಳಿ ಎಫ್ ಐಡಿ ಇಲ್ಲದೆ ಇದ್ದರೆ ತಕ್ಷಣ ಅರ್ಜಿ ಸಲ್ಲಿಸಿ ಐಡಿ ಪಡೆದುಕೊಳ್ಳಿ.

ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಕೆ ಪ್ರಾರಂಭ! ಹೀಗೆ ಅರ್ಜಿ ಸಲ್ಲಿಸಿ

FID ಮಾಡಿಸಲು ಬೇಕಾಗಿರುವ ದಾಖಲೆಗಳು!

ಭೂಮಿಯ ದಾಖಲೆ ಇರುವ ಪಹಣಿ
ಆಧಾರ್ ಕಾರ್ಡ್
ಪಡಿತರ ಚೀಟಿ
ಆದಾಯ ಪ್ರಮಾಣ ಪತ್ರ
ವಿಳಾಸದ ಪುರಾವೆ
ಮೊಬೈಲ್ ಸಂಖ್ಯೆ

ಎಲ್ಲಿ ಅರ್ಜಿ ಸಲ್ಲಿಸಬಹುದು?

ರೈತ ಸಂಪರ್ಕ ಕೇಂದ್ರ
ತೋಟಗಾರಿಕೆ ಇಲಾಖೆ
ರೇಷ್ಮೆ ಇಲಾಖೆ
ನಾಗರಿಕ ಸೇವಾ ಕೇಂದ್ರಗಳು.

ಜಮೀನು, ಆಸ್ತಿ ರಿಜಿಸ್ಟ್ರೇಷನ್ ಮಾಡಿಕೊಳ್ಳುವವರಿಗೆ ಸರ್ಕಾರದಿಂದ ಹೊಸ ರೂಲ್ಸ್!

FID ಇರುವ ರೈತರು https://fruits.karnataka.gov.in/ ಇಲ್ಲಿ ತಮ್ಮ ಸರ್ವೆ ನಂಬರ್ ಹಾಕಿದ್ರೆ ಜಮೀನಿನ ಎಲ್ಲಾ ವಿವರಗಳು ಲಭ್ಯವಾಗುತ್ತದೆ. ರೈತರು ಇದುವರೆಗೆ ಎಫ್ ಐ ಡಿ ಪಡೆದುಕೊಂಡಿಲ್ಲವಾದರೆ ತಕ್ಷಣ ಕೆಲಸ ಮಾಡಿ ಹಾಗೂ ಬರ ಪರಿಹಾರದ ಹಣ ಪಡೆದುಕೊಳ್ಳಿ.

Submit these documents to get drought relief Fund, Here is the information

Follow us On

FaceBook Google News

Submit these documents to get drought relief Fund, Here is the information