Karnataka NewsBangalore News

ಕೆಲ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ಜಮಾ ಆಗದೆ ಇರಲು ಇಲ್ಲಿದೆ ಕಾರಣ!

ಕೋಟ್ಯಾಂತರ ಮಹಿಳೆಯರು ರಾಜ್ಯ ಸರ್ಕಾರ ಜಾರಿಗೆ ತಂದ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಗೆ ಕಳೆದ ಆರು ತಿಂಗಳ ಹಿಂದೆ ಅರ್ಜಿ ಸಲ್ಲಿಸಿದರು. ಇದರಲ್ಲಿ ಸರ್ಕಾರ ತಿಳಿಸಿರುವ ಮಾಹಿತಿಯ ಪ್ರಕಾರ ಶೇಕಡ 90ರಷ್ಟು ಮಹಿಳೆಯರ ಖಾತೆಗೆ (Bank Account) ಪ್ರತಿ ತಿಂಗಳು ಹಣ ವರ್ಗಾವಣೆ (DBT) ಆಗುತ್ತಿದೆ.

ಆದಾಗ್ಯೂ ಇನ್ನು 10% ನಷ್ಟು ಮಹಿಳೆಯರ ಖಾತೆಗೆ ಹಣ ಬಂದಿಲ್ಲ, ಅಂದ್ರೆ 8 ಲಕ್ಷಕ್ಕೂ ಅಧಿಕ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳೆ ಆಗಿದ್ದರು ಕೂಡ ಅವರ ಖಾತೆಗೆ ಹಣ ಬರುತ್ತಿಲ್ಲ.

Gruha Lakshmi money received only 2,000, Update About Pending Money

ಇದಕ್ಕೆಲ್ಲ ಕಾರಣ ಏನು ಹಾಗೂ ಪರಿಹಾರ ಏನು ಎಂಬುದನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉತ್ತರ ನೀಡಿದ್ದಾರೆ.

ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಕೆ ಪ್ರಾರಂಭ! ಹೀಗೆ ಅರ್ಜಿ ಸಲ್ಲಿಸಿ

ನಿಜಕ್ಕೂ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗದೆ ಇರಲು ಇದೇ ಕಾರಣ!

* ಈಕೆ ವೈಸಿ (E-KYC) ಆಗದೆ ಇದ್ದರೆ, ಹಣ ವರ್ಗಾವಣೆಯಾಗುವುದಿಲ್ಲ. ಇಂದು ಗೃಹಲಕ್ಷ್ಮಿ ಯೋಜನೆ ಮಾತ್ರವಲ್ಲದೇ ಬೇರೆ ಯಾವುದೇ ಯೋಜನೆಯ ಪ್ರಯೋಜನ ಪಡೆದುಕೊಳ್ಳುವುದಕ್ಕೂ ಕೂಡ ನೀವು ಬ್ಯಾಂಕ್ ನಲ್ಲಿ account ಹೊಂದಿರುವುದು ಕಡ್ಡಾಯ.

ಹಾಗೂ ಆ ಖಾತೆಗೆ ಈ ಕೆ ವೈ ಸಿ ಅಪ್ಡೇಟ್ ಆಗಿರುವುದು ಕೂಡ ಕಡ್ಡಾಯ. ಈಗ ಬಹುತೇಕ ಎಲ್ಲಾ ಮಹಿಳೆಯರ ಖಾತೆಗೆ ಈಕೆ ವೈ ಸಿ ಮಾಡಿಸಲಾಗಿದೆ. ಉಳಿದವರು ತಕ್ಷಣ ಬ್ಯಾಂಕಿಗೆ ಹೋಗಿ ಈ ಕೆಲಸ ಮಾಡಿಸಿಕೊಳ್ಳಬಹುದು.

* ಅಧಿಕಾರಿಗಳು ಕರೆ ಮಾಡಬಹುದು- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿರುವ ಪ್ರಕಾರ ಮಹಿಳೆಯರಿಗೆ ಸಿಡಿಪಿಓ (CDPO officer) ಅಧಿಕಾರಿಗಳು ಕರೆ ಮಾಡಿ ಅವರ ಖಾತೆಗೆ ಹಣ ಬಂದಿದೆಯೋ ಇಲ್ಲವೋ ಅಂತ ಚೆಕ್ ಮಾಡಬೇಕು. ಒಂದು ವೇಳೆ ಬಾರದೇ ಇದ್ದರೆ ಅದನ್ನು ಸರ್ಕಾರದ ಗಮನಕ್ಕೆ ತರಬೇಕು ಹಾಗೂ ಮಹಿಳೆಯರಿಗೆ ಸೂಕ್ತ ಸಲಹೆ ನೀಡಬೇಕು ಎಂದು ತಿಳಿಸಿದ್ದಾರೆ.

ಜಮೀನು, ಆಸ್ತಿ ರಿಜಿಸ್ಟ್ರೇಷನ್ ಮಾಡಿಕೊಳ್ಳುವವರಿಗೆ ಸರ್ಕಾರದಿಂದ ಹೊಸ ರೂಲ್ಸ್!

* ಮಹಿಳೆಯರು ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರು ಕೂಡ ಅದು ಆಕ್ಟಿವ್ ಆಗಿಲ್ಲದೆ ಇರಬಹುದು. ಬಹಳ ಹಳೆಯ ಬ್ಯಾಂಕ್ ಖಾತೆ ಆಗಿರಬಹುದು ಇಂತಹ ಸಂದರ್ಭದಲ್ಲಿ ಮಿನಿಮಮ್ ಬ್ಯಾಲೆನ್ಸ್ (Bank minimum balance) ಕಾಯ್ದುಕೊಳ್ಳುವುದರ ಮೂಲಕ ಮತ್ತೆ ಈ ಖಾತೆಯನ್ನು ಆಕ್ಟಿವೇಟ್ ಮಾಡಿಕೊಂಡರೆ ಅಂತವರ ಖಾತೆಗೆ ಹಣ ಜಮಾ ಆಗುತ್ತದೆ.

* ಮಹಿಳೆಯರ ಖಾತೆಗೆ ಹಣ ಬರಬೇಕು ಅಂದ್ರೆ ದಾಖಲೆಗಳು ಸರಿಯಾಗಿ ಇರಬೇಕು. ಉದಾಹರಣೆಗೆ ಬ್ಯಾಂಕ್ ಖಾತೆಯಲ್ಲಿ ಇರುವ ಹೆಸರಿಗೂ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ನಲ್ಲಿ ಇರುವ ಹೆಸರಿಗೂ ಸಾಕಷ್ಟು ವ್ಯತ್ಯಾಸಗಳು ಕಂಡುಬಂದಿದೆ.

ಈ ರೀತಿ ಹೆಸರಿನಲ್ಲಿ ಬದಲಾವಣೆ ಇದ್ದರೆ ಸರ್ಕಾರದ ಡೇಟಾಬೇಸ್ ನಲ್ಲಿ ತಪ್ಪಾಗಿ ತೋರಿಸಬಹುದು. ಹಾಗಾಗಿ ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ನಲ್ಲಿ ಅಗತ್ಯ ಇರುವ ಬದಲಾವಣೆಗಳನ್ನು ಮಾಡಿಕೊಂಡು, ನಂತರ ಖಾತೆಗೆ ಲಿಂಕ್ ಮಾಡಿದ್ರೆ ಗೃಹಲಕ್ಷ್ಮಿ ಹಣ ಬಾರದೆ ಇರುವುದಿಲ್ಲ.

* ಮತ್ತೆ ಅರ್ಜಿ ಸಲ್ಲಿಸಿ ನೋ ಪ್ರಾಬ್ಲಮ್- ಹಣ ಬಂದಿಲ್ಲ ಬಂದಿಲ್ಲ ಅಂತ ಬೇಸರ ವ್ಯಕ್ತಪಡಿಸಿಕೊಳ್ಳುವುದಕ್ಕಿಂತ ಮತ್ತೊಮ್ಮೆ ಎಲ್ಲಾ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಂಡು ಅರ್ಜಿ ಸಲ್ಲಿಸಿ ಆಗ ಮಿಸ್ ಆಗದೆ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ.

ನಿಮ್ಮ ಆಸ್ತಿ, ಜಮೀನಿನ ದಾಖಲೆಗಳನ್ನು ಒಂದೇ ಕ್ಲಿಕ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ! ಡೈರೆಕ್ಟ್ ಲಿಂಕ್

Gruha Lakshmi Yojanaಏಳನೇ ಕಂತಿನ ಹಣ ಬಿಡುಗಡೆ!

ಸರ್ಕಾರ ಈಗಾಗಲೇ ತಿಳಿಸಿರುವಂತೆ ಫೆಬ್ರವರಿ ತಿಂಗಳಿನ ಹಣವನ್ನು ಮಾರ್ಚ್ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗುವುದು ಮಾರ್ಚ್ 15ರಿಂದ 20 ನೇ ತಾರೀಖಿನ ಒಳಕ್ಕೆ ನೀವು ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣವನ್ನು ನಿರೀಕ್ಷೆ ಮಾಡಬಹುದು.

ಮಾರ್ಚ್ ತಿಂಗಳ ಎಲ್ಲಾ ಪಿಂಚಣಿ ಹಣ ಬಿಡುಗಡೆ! ನಿಮ್ಮ ಖಾತೆಗೆ ಬಂದಿದ್ಯಾ ಚೆಕ್ ಮಾಡಿ

ಇನ್ನು ಸರ್ಕಾರದ ಮಾಹಿತಿಯ ಪ್ರಕಾರ ಇದುವರೆಗೆ ಒಂದೇ ಒಂದು ಹಣವು ಜಮಾ ಆಗದೇ ಇರುವ ಮಹಿಳೆಯರಿಗೆ ಖಾತೆಯಲ್ಲಿ ಇರುವ ಸಮಸ್ಯೆ ಪರಿಹಾರವಾದರೆ ಪೆಂಡಿಂಗ್ ಇರುವ ಹಣವನ್ನು ಜಮಾ ಮಾಡಲಾಗುವುದು.

Here is the reason why Gruha Lakshmi Scheme money is not deposited

Our Whatsapp Channel is Live Now 👇

Whatsapp Channel

Related Stories