ಪ್ರತಿ ತಿಂಗಳು ಸರ್ಕಾರದಿಂದ ಪಿಂಚಣಿ ಪಡೆದುಕೊಳ್ಳುತ್ತಿರುವವರಿಗೆ ಮಾರ್ಚ್ 2024 ತಿಂಗಳಿನ ಪಿಂಚಣಿ (pension) ಬಿಡುಗಡೆ ಮಾಡಲಾಗಿದೆ ಎಂದು ಸಾಮಾಜಿಕ ಭದ್ರತಾ ಪಿಂಚಣಿಗಳ ನಿರ್ದೇಶನಾಲಯ ಮಾಹಿತಿ ನೀಡಿದ್ದು ನಿಮ್ಮ ಖಾತೆಗೆ (Bank Account) ಹಣ ಬಂದಿದೆಯಾ ಅಂತ ಚೆಕ್ ಮಾಡಿಕೊಳ್ಳಬಹುದು.

ನಾವು ಎಷ್ಟು ವರ್ಷ ದುಡಿದರೂ ಕೂಡ ಕೆಲವೊಂದು ಕೆಲಸದಲ್ಲಿ ಪಿಂಚಣಿ (pension) ಪಡೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಸರ್ಕಾರ ಕೆಲವು ಪ್ರಮುಖ ಯೋಜನೆಯ ಮೂಲಕ ಸಮಾಜದಲ್ಲಿ ವಾಸಿಸುವ ಕೆಲವು ಜನರಿಗೆ ಪಿಂಚಣಿ ಹಣವನ್ನು ಒದಗಿಸುತ್ತದೆ ಹಾಗೂ ಉಚಿತವಾಗಿ ಪ್ರತಿ ತಿಂಗಳು ಒಂದಷ್ಟು ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

Pension

ಇದೀಗ ಪ್ರತಿ ತಿಂಗಳಿನಂತೆ ಈ ತಿಂಗಳು ಕೂಡ ಸಾಮಾಜಿಕ ಭದ್ರತಾ ಪಿಂಚಣಿಗಳ ನಿರ್ದೇಶನಾಲಯ ಫಲಾನುಭವಿಗಳಿಗೆ ಪಿಂಚಣಿ ಹಣವನ್ನು ಬಿಡುಗಡೆ ಮಾಡಿದೆ.

ಬಿಗ್ ಅಪ್ಡೇಟ್! ಇಂತಹ ಮಹಿಳೆಯರಿಗೆ 6 ಮತ್ತು 7ನೇ ಕಂತಿನ ಗೃಹಲಕ್ಷ್ಮಿ ಹಣ ಜಮೆ ಆಗೋಲ್ಲ

ಯಾರೆಲ್ಲಾ ಪಿಂಚಣಿ ಪಡೆದುಕೊಳ್ಳಬಹುದು?

ಅಂಗವಿಕಲರ ಪಿಂಚಣಿ
ವಿಧವಾ ವೇತನ
ಸಂಧ್ಯಾ ಸುರಕ್ಷಾ ಪಿಂಚಣಿ
ವೃದ್ಧಾಪ್ಯದ ಪಿಂಚಣಿ

ಈ ಎಲ್ಲಾ ಪಿಂಚಣಿ ಹಣವನ್ನ ಮಾರ್ಚ್ ತಿಂಗಳಿಗೆ ಅನುಗುಣವಾಗುವಂತೆ ಬಿಡುಗಡೆ ಮಾಡಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ತಿಂಗಳು ಸಾವಿರಾರು ಕೋಟಿ ರೂಪಾಯಿಗಳನ್ನು ಮೀಸಲು ಇಡುತ್ತಾರೆ ಎನ್ನುವುದು ಗಮನಾರ್ಹ.

ರೇಷನ್ ಕಾರ್ಡ್ ಅಪ್ಡೇಟ್ ಬಗ್ಗೆ ಮಹತ್ವದ ಆದೇಶ! ಹೊಸ ನಿಯಮ ತಂದ ಸರ್ಕಾರ

Pensionಮೊಬೈಲ್ ನಲ್ಲಿ ಚೆಕ್ ಮಾಡಬಹುದು ಸ್ಟೇಟಸ್! (Check pension status in mobile)

ಕಂದಾಯ ಇಲಾಖೆ, ಹಳ್ಳಿಗಾರು ಪಿಂಚಣಿ ಲಿಸ್ಟ್ ಬಿಡುಗಡೆ ಮಾಡಿದ್ದು ಯಾರ ಖಾತೆಗೆ ಹಣ ಬಂದಿದೆ ಎನ್ನುವುದನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.

ಇದಕ್ಕಾಗಿ ನೀವು ಮೊದಲು ಸಾಮಾಜಿಕ ಭದ್ರತಾ ಪಿಂಚಣಿ ನಿರ್ದೇಶನಾಲಯ ಇದರ ಅಧಿಕೃತ ವೆಬ್ಸೈಟ್ https://dssp.karnataka.gov.in/dssp/villageWise_list_Of_beneficiaries.aspx ಅನು ನಿಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ ನಲ್ಲಿ ಓಪನ್ ಮಾಡಿ.

ನಂತರ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಮೊದಲಾದವುಗಳನ್ನು ಆಯ್ಕೆ ಮಾಡಿ, ಭರ್ತಿ ಮಾಡಿ. ಈಗ ನೀವು ಐದು ಸಂಖ್ಯೆಗಳ ಕ್ಯಾಪ್ಚ ಕೋಡ್ ನಮೂದಿಸಬೇಕು. ಈಗ ಸರ್ಚ್ ಎನ್ನುವ ಬಟನ್ ಕ್ಲಿಕ್ ಮಾಡಿ. ನಿಮ್ಮ ಹಳ್ಳಿ ಅಥವಾ ಗ್ರಾಮದ ಪಿಂಚಣಿದಾರರ ಲಿಸ್ಟ್ ನಿಮ್ಮ ಕಣ್ಮುಂದಿರುತ್ತದೆ.

ಎರಡು ತಿಂಗಳ ಅನ್ನಭಾಗ್ಯ ಯೋಜನೆ ಹಣ ಬರದೇ ಇದ್ರೆ ತಕ್ಷಣ ಈ ಕೆಲಸ ಮಾಡಿ!

ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಿ

ನೀವು ನಿಮ್ಮ ಆಂಡ್ರಾಯ್ಡ್ ಮೊಬೈಲ್ ನಲ್ಲಿ ಡಿಬಿಟಿ ಕರ್ನಾಟಕ (DBT Karnataka mobile application) ಎನ್ನುವ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ

ನಿಮ್ಮ ಖಾತೆಗೆ ಜಮಾ ಆಗಲಿರುವ ಯಾವುದೇ ಡಿ ಬಿ ಟಿ ಹಣದ ಬಗ್ಗೆ ಇಲ್ಲಿ ಮಾಹಿತಿ ಪಡೆದುಕೊಳ್ಳಬಹುದು. ಈ ಅಪ್ಲಿಕೇಶನ್ ನಲ್ಲಿ ನೀವು ಪಿಂಚಣಿ ಹಣದ ಬಗ್ಗೆ ಹಾಗೂ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯದ DBT ಹಣದ ಬಗ್ಗೆ ಮಾಹಿತಿ ಪಡೆಯಬಹುದು.

ರೈತರಿಗೆ ಸಿಹಿ ಸುದ್ದಿ! 19 ಲಕ್ಷ ರೈತರಿಗೆ ಬೆಳೆ ವಿಮೆ ಹಣ ಬಿಡುಗಡೆ; ಖಾತೆ ಚೆಕ್ ಮಾಡಿಕೊಳ್ಳಿ

March Month pension money released, Check your Bank account