ಎರಡು ತಿಂಗಳ ಅನ್ನಭಾಗ್ಯ ಯೋಜನೆ ಹಣ ಬರದೇ ಇದ್ರೆ ತಕ್ಷಣ ಈ ಕೆಲಸ ಮಾಡಿ!
ನೀವು ಬಿಪಿಎಲ್ ಕಾರ್ಡ್ ಹೋಲ್ಡರ್ ಆಗಿದ್ರೆ ಅನ್ನಭಾಗ್ಯ ಯೋಜನೆ (Annabhagya scheme) ಹಣ ಪ್ರತಿ ತಿಂಗಳು ನಿಮ್ಮ ಖಾತೆಗೆ (Bank Account) ಜಮಾ ಆಗುತ್ತದೆ
ನಿಮಗೆಲ್ಲ ತಿಳಿದಿರುವಂತೆ ರೇಷನ್ ಕಾರ್ಡ್ (ration Card) ಹೊಂದಿದ್ರೆ ಅದರಲ್ಲೂ ಬಿಪಿಎಲ್ ಕಾರ್ಡ್ ಹೋಲ್ಡರ್ ನೀವು ಆಗಿದ್ರೆ ನಿಮಗೆ ಅನ್ನಭಾಗ್ಯ ಯೋಜನೆ (Annabhagya scheme) ಯ ಹಣ ಪ್ರತಿ ತಿಂಗಳು ನಿಮ್ಮ ಖಾತೆಗೆ (Bank Account) ನೇರವಾಗಿ ಜಮಾ ಮಾಡಲಾಗುತ್ತದೆ
ಅನ್ನಭಾಗ್ಯ ಯೋಜನೆ ಆರಂಭವಾಗಿ ಆರು ತಿಂಗಳು ಕಳೆದಿದೆ. ಹಾಗೂ ಈ ಆರು ತಿಂಗಳ ಅವಧಿಯಲ್ಲಿ ಫಲಾನುಭವಿಗಳ ಖಾತೆಗೆ ಸರ್ಕಾರ ಲಕ್ಷಾಂತರ ರೂಪಾಯಿಗಳನ್ನು ಮೀಸಲಿಟ್ಟು ಹಣ ವರ್ಗಾವಣೆ ಮಾಡಿದೆ.
ಇಷ್ಟಕ್ಕೂ ಸರ್ಕಾರಕ್ಕೆ ಅಕ್ಕಿ ಹೊಂದಾಣಿಕೆ ಮಾಡಲು ಸಾಧ್ಯವಾಗದೆ ಇರುವ ಹಿನ್ನೆಲೆಯಲ್ಲಿ ಹಣವನ್ನ ಡಿ ಬಿ ಟಿ (DBT) ಮಾಡಲಾಗುತ್ತಿದೆ. ಯಾಕೆಂದರೆ ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೂ ಮೊದಲು ಪ್ರಣಾಳಿಕೆಯಲ್ಲಿ 5 ಕೆಜಿ ಉಚಿತವಾಗಿ ಅಕ್ಕಿಯನ್ನು ನೀಡುವುದಾಗಿ ಹೇಳಿತು
ಅಂದರೆ ಕೇಂದ್ರ ಸರ್ಕಾರ ಈಗಾಗಲೇ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ.
ರೈತರಿಗಾಗಿ ರಾತ್ರೋ-ರಾತ್ರಿ ಹೊಸ ಯೋಜನೆ ಜಾರಿಗೆ ತಂದ ಸರ್ಕಾರ! ಅರ್ಜಿ ಸಲ್ಲಿಸಿ
Covid-19 ಅವಧಿಯ ನಂತರ ಬಡವರ್ಗದ ಜನರ ಹಸಿವು ನೀಗಿಸುವುದಕ್ಕಾಗಿ 5 ಕೆಜಿ ಉಚಿತ ಅಕ್ಕಿಯನ್ನು ಸರ್ಕಾರ ನೀಡುತ್ತಿದೆ. ಹಾಗೂ 2025 ರ ವರೆಗೂ ಕೂಡ ಇದನ್ನು ಮುಂದುವರಿಸುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ತಿಳಿಸಿದ್ದಾರೆ.
ಇನ್ನು ಇದರ ಜೊತೆಗೆ ರಾಜ್ಯ ಸರ್ಕಾರ ಕೂಡ ಐದು ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡುತ್ತೆ ಎನ್ನುವ ಭರವಸೆ ಇತ್ತು ಅವರ ಭರವಸೆಯನ್ನು ಈಡೇರಿಸಲು ಸರ್ಕಾರಕ್ಕೆ ಇದುವರೆಗೆ ಸಾಧ್ಯವಾಗಿಲ್ಲ. ಯಾಕೆಂದರೆ ರಾಜ್ಯಕ್ಕೆ ಫಲಾನುಭವಿಗಳಿಗೆ ಕೊಡುವಷ್ಟು ಅಕ್ಕಿ ದಾಸ್ತಾನು ಇಲ್ಲ.
ರೈತರಿಗೆ ಸಿಹಿ ಸುದ್ದಿ! 19 ಲಕ್ಷ ರೈತರಿಗೆ ಬೆಳೆ ವಿಮೆ ಹಣ ಬಿಡುಗಡೆ; ಖಾತೆ ಚೆಕ್ ಮಾಡಿಕೊಳ್ಳಿ
ಇದು ತಾತ್ಕಾಲಿಕ ಪರಿಹಾರ ಅಷ್ಟೇ!
ಸರ್ಕಾರ ಈಗಾಗಲೇ ತಿಳಿಸಿರುವಂತೆ ಅನ್ನ ಬಳಕೆಯ ಯೋಜನೆ ಅಡಿಯಲ್ಲಿ ಉಚಿತವಾಗಿ ಕೊಡಬೇಕಾಗಿರುವ 5 ಕೆಜಿ ಅಕ್ಕಿಯ ಬದಲು ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ ಫಲಾನುಭವಿಗಳ ಖಾತೆಗೆ 170 ಜಮಾ ಆಗುತ್ತಿದೆ. ಆದರೆ ಸರ್ಕಾರ ತಿಳಿಸಿರುವಂತೆ ಇದು ಶಾಶ್ವತವಾಗಿ ಸಿಕ್ಕಿರುವ ಪರಿಹಾರ ಅಲ್ಲ.
ಅಕ್ಕಿಯನ್ನು ಆದಷ್ಟು ಬೇಗ ಹೊಂದಾಣಿಕೆ ಮಾಡಲು ಪ್ರಯತ್ನಿಸುತ್ತೇವೆ, ಅಥವಾ ಅಕ್ಕಿಯ ಬದಲು ಇತರ ಪಡಿತರ ವಸ್ತುಗಳನ್ನು ವಿತರಣೆ ಮಾಡುತ್ತೇವೆ. ಯಾವಾಗ ಈ ರೀತಿಯ ಹೊಂದಾಣಿಕೆ ಮಾಡಲು ಸಾಧ್ಯವಾಗುತ್ತದೆಯೋ ಆಗ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ (Money Deposit) ಆಗುವುದನ್ನು ಸ್ಥಗಿತಗೊಳಿಸಲಾಗುವುದು ಎಂದು ಸರ್ಕಾರ ತಿಳಿದಿದೆ.
ಗೃಹಲಕ್ಷ್ಮಿ 7ನೇ ಕಂತಿನ ಹಣ ಬಿಡುಗಡೆ! ನಿಮ್ಮ ಖಾತೆಗೆ ಇನ್ನೂ ಬರದಿದ್ರೆ ಈ ರೀತಿ ಮಾಡಿ
ಮಾರ್ಚ್ ತಿಂಗಳಲ್ಲಿ ಹಣ ಬಿಡುಗಡೆ!
ಸಾಕಷ್ಟು ಜನರಿಗೆ ಜನವರಿ ಮತ್ತು ಫೆಬ್ರವರಿ ಕಂತಿನ ಹಣ ಸಿಕ್ಕಿಲ್ಲ. ಮಾರ್ಚ್ ತಿಂಗಳಿನಲ್ಲಿ ಅನ್ನ ಭಾಗ್ಯ ಯೋಜನೆಯ ಹಣವನ್ನು ಬಿಡುಗಡೆ ಮಾಡಲಾಗಿದೆ. ಒಂದು ವೇಳೆ ಕಳೆದ ಎರಡು ತಿಂಗಳಲ್ಲಿ ಖಾತೆಗೆ ಹಣ ಜಮಾ ಆಗದೆ ಇದ್ದರೆ ನೀವು ನೇರವಾಗಿ ಬ್ಯಾಂಕಿಗೆ ಹೋಗಿ ಈ ಕೆ ವೈ ಸಿ ಅಪ್ಡೇಟ್ ಆಗಿದ್ಯೋ ಇಲ್ವೋ ಅಂತ ಚೆಕ್ ಮಾಡಿ.
ಇಂಥವರಿಗೆ ಹಣ ಬರುವುದಿಲ್ಲ
ಮಾರ್ಚ್ ತಿಂಗಳಲ್ಲಿ ಇಂಥವರಿಗೆ ಹಣ ಬರುವುದಿಲ್ಲ ಯಾರಿಗೆ ಅಂದರೆ ಪಡಿತರ ಚೀಟಿ (Ration Card) ಮಹಿಳೆಯ ಹೆಸರಿನಲ್ಲಿ ಇದ್ದು ಬ್ಯಾಂಕ್ ಖಾತೆ ಪತಿಯ ಹೆಸರಿನಲ್ಲಿ ಇದ್ದರೆ ಆಗ ಒಂದಕ್ಕೊಂದು ಹೊಂದಾಣಿಕೆ ಆಗದೆ ಇರುವ ಹಿನ್ನೆಲೆಯಲ್ಲಿ ಅಂತವರ ಖಾತೆಗೆ DBT ಆಗದೆ ಇರಬಹುದು. ಹಾಗಾಗಿ ಒಂದು ವೇಳೆ ನಿಮ್ಮ ಖಾತೆಗೆ ಹಣ ಬಾರದೆ ಇದ್ದರೆ ತಕ್ಷಣ ಬ್ಯಾಂಕಿಗೆ ಹೋಗಿ ಸರಿಪಡಿಸಿಕೊಳ್ಳಿ.
ರೇಷನ್ ಕಾರ್ಡ್ ಮಾಡಿಸಲು ಅರ್ಜಿ ಸ್ವೀಕಾರ; ಹೊಸ ರೇಷನ್ ಕಾರ್ಡ್ ಬಗ್ಗೆ ಬಿಗ್ ಅಪ್ಡೇಟ್
If you don’t get Annabhagya Yojana money for two months, do this