ರೈತರಿಗಾಗಿ ರಾತ್ರೋ-ರಾತ್ರಿ ಹೊಸ ಯೋಜನೆ ಜಾರಿಗೆ ತಂದ ಸರ್ಕಾರ! ಅರ್ಜಿ ಸಲ್ಲಿಸಿ
ಈ ಬಾರಿ ಎಲೆಕ್ಷನ್ ನಲ್ಲಿ ಗೆದ್ದು ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಸರ್ಕಾರ (Congress government) ಜನರ ಹಿತಾಸಕ್ತಿ ಕಾಯ್ದುಕೊಳ್ಳುವಂತಹ ಕೆಲವು ಪ್ರಮುಖ ಕೆಲಸಗಳನ್ನು ಮಾಡಿದೆ.
ಅದರಲ್ಲೂ ಮಹಿಳೆಯರಿಗೆ ಮತ್ತು ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಪರಿಚಯಿಸಿದೆ. ರೈತಾಪಿ ವರ್ಗದ ಉದ್ದಾರಕ್ಕಾಗಿ ಹೀಗಿರುವ ಯೋಜನೆಗಳನ್ನು ಇನ್ನಷ್ಟು ಮುತುವರ್ಜಿಯಿಂದ ಯಿಂದ ರೈತರಿಗೆ ಒದಗಿಸುವುದರ ಜೊತೆಗೆ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಕೃಷಿ ಭಾಗ್ಯ ಯೋಜನೆ ಕೂಡ ಒಂದು.
ರೈತರಿಗೆ ಸಿಹಿ ಸುದ್ದಿ! 19 ಲಕ್ಷ ರೈತರಿಗೆ ಬೆಳೆ ವಿಮೆ ಹಣ ಬಿಡುಗಡೆ; ಖಾತೆ ಚೆಕ್ ಮಾಡಿಕೊಳ್ಳಿ
ರೈತರಿಗಾಗಿ ಹೊಸ ಭಾಗ್ಯ ಜಾರಿಗೆ ತಂದ ರಾಜ್ಯ ಸರ್ಕಾರ!
ರಾಜ್ಯದಲ್ಲಿ ವಾಸಿಸುವ ರೈತರ (farmers) ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ ಎನ್ನಬಹುದು. ಇದೀಗ ರಾಜ್ಯದ 24 ಜಿಲ್ಲೆಗಳಲ್ಲಿ ನೂರಾರು ತಾಲೂಕುಗಳಲ್ಲಿ ಪ್ಯಾಕೇಜ್ ಮಾದರಿಯಲ್ಲಿ ಕೃಷಿ ಭಾಗ್ಯ ಯೋಜನೆಯನ್ನು (Krishi Bhagya scheme) ಸರ್ಕಾರ ರೈತರಿಗಾಗಿ ನೀಡುತ್ತಿದೆ.
ಏನಿದು ಕೃಷಿ ಭಾಗ್ಯ ಯೋಜನೆ? (Krishi Bhagya scheme)
ಇತ್ತೀಚಿನ ದಿನಗಳಲ್ಲಿ ನೀರಿನ ಅಭಾವ ಬಹಳ ದೊಡ್ಡ ಸಮಸ್ಯೆಯನ್ನು ಉಂಟು ಮಾಡುತ್ತಿದೆ. ಅದರಲ್ಲೂ ರೈತರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎನ್ನಬಹುದು. ಯಾಕೆಂದರೆ ತಮ್ಮ ಜಮೀನಿಗೆ ಸರಿಯಾಗಿ ನೀರುಣಿಸಲು ಸಾಧ್ಯವಾಗುತ್ತಿಲ್ಲ. ರೈತರ ಫಸಲು ಸರಿಯಾಗಿ ಬಂದಿಲ್ಲ ಅಂದ್ರೆ ಅದರ ನೇರವಾದ ಪರಿಣಾಮ ಬೆಲೆ ಏರಿಕೆ ರೂಪದಲ್ಲಿ ಪ್ರತಿಯೊಬ್ಬರ ಮೇಲೆ ಬೀರಲಿದೆ.
ಗೃಹಲಕ್ಷ್ಮಿ 7ನೇ ಕಂತಿನ ಹಣ ಬಿಡುಗಡೆ! ನಿಮ್ಮ ಖಾತೆಗೆ ಇನ್ನೂ ಬರದಿದ್ರೆ ಈ ರೀತಿ ಮಾಡಿ
ಹಾಗಾಗಿ ರೈತರು ತಮ್ಮ ಹೊಲಗಳಲ್ಲಿ ಮಳೆ ನೀರಿನ ಸಂಗ್ರಹಣೆ (rainwater harvesting) ಮಾಡುವ ಹೊಂಡ ಸ್ಥಾಪಿಸುವುದಕ್ಕೆ ರಾಜ್ಯ ಸರ್ಕಾರ ಸಹಾಯ ಧನ ನೀಡುತ್ತಿದೆ. ಮಳೆ ನೀರನ್ನು ಸಂಗ್ರಹಿಸುವುದಕ್ಕೆ ಅಗತ್ಯ ಇರುವ ಕೃಷಿ ಹೊಂಡ, ಪಾಲಿಥಿನ್ ಹೊದಿಕೆ, ತಂತಿ ಬೇಲಿ, ಸೋಲಾರ್ ಪಂಪ್ ಸೆಟ್, ಸೂಕ್ಷ್ಮ ನೀರಾವರಿ ಘಟಕ ಸ್ಥಾಪನೆ ಈ ಮೊದಲಾದವುಗಳಿಗೆ ಸರ್ಕಾರದಿಂದ ಕೃಷಿಭಾಗ್ಯ ಯೋಜನೆ ಅಡಿಯಲ್ಲಿ ಸಹಾಯಧನ ಪಡೆಯಬಹುದು.
ಕೃಷಿ ಭಾಗ್ಯ ಯೋಜನೆ ಯಾರಿಗೆ ಲಭ್ಯವಾಗಲಿದೆ?
ಖಾಸಗಿ ಭೂಮಿ ಹೊಂದಿರುವ ರೈತರಿಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ಮಳೆ ನೀರಿನ ಸಂಗ್ರಹಣೆಗೆ ಹೆಚ್ಚಿನ ಸಹಾಯಧನವನ್ನು ಪಡೆದುಕೊಳ್ಳುತ್ತಾರೆ. ನೀವು ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಅಗತ್ಯ ಇರುವ ಮಾಹಿತಿಗಳನ್ನು ನೀಡಿ ಮಳೆ ನೀರಿನ ಸಂಗ್ರಹ ಮಾಡಿಕೊಳ್ಳಲು ಸರ್ಕಾರದಿಂದ ಸಹಾಯಧನ ಪಡೆಯುವುದಕ್ಕಾಗಿ ಅರ್ಜಿ ಸಲ್ಲಿಸಬಹುದು.
ರೇಷನ್ ಕಾರ್ಡ್ ಮಾಡಿಸಲು ಅರ್ಜಿ ಸ್ವೀಕಾರ; ಹೊಸ ರೇಷನ್ ಕಾರ್ಡ್ ಬಗ್ಗೆ ಬಿಗ್ ಅಪ್ಡೇಟ್
ಕೃಷಿ ಭಾಗ್ಯ ಯೋಜನೆಗೆ ಬೇಕಾಗಿರುವ ದಾಖಲೆಗಳು ಇಂತಿವೆ
ಆಧಾರ್ ಕಾರ್ಡ್
ಭೂಮಿಯ ಪಹಣಿ ಪತ್ರ
ವಿಳಾಸ ಅವರೇ
FID ದಾಖಲೆ
ಆದಾಯ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ
ಬ್ಯಾಂಕ ಖಾತೆಯ ವಿವರ
ಫೋಟೋ
ಬಿಪಿಎಲ್ ಕಾರ್ಡುದಾರರಿಗೆ ಗುಡ್ ನ್ಯೂಸ್; ಈ ತಿಂಗಳ ಅನ್ನಭಾಗ್ಯ ಹಣ ಬಿಡುಗಡೆ!
ಇಷ್ಟು ಬೇಸಿಕ್ ದಾಖಲೆಗಳನ್ನು ನೀವು ಹೊಂದಿದ್ದರೆ ಹತ್ತಿರದ ರೈತ ಸಂಪರ್ಕ ಸೇವಾ ಕೇಂದ್ರಕ್ಕೆ ಹೋಗಿ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿ.
The government implemented a new scheme overnight for farmers