ಗೃಹಲಕ್ಷ್ಮಿ 7ನೇ ಕಂತಿನ ಹಣ ಬಿಡುಗಡೆ! ನಿಮ್ಮ ಖಾತೆಗೆ ಇನ್ನೂ ಬರದಿದ್ರೆ ಈ ರೀತಿ ಮಾಡಿ
ಅಂತೂ ಇಂತೂ ಫೆಬ್ರವರಿ ತಿಂಗಳಿನ ಗೃಹಲಕ್ಷ್ಮಿ (Gruha lakshmi scheme) ಯೋಜನೆಯ ಹಣ ಬಿಡುಗಡೆ ಆಗಿದೆ.
ಅಂತೂ ಇಂತೂ ಫೆಬ್ರವರಿ ತಿಂಗಳಿನ ಗೃಹಲಕ್ಷ್ಮಿ (Gruha lakshmi scheme) ಯೋಜನೆಯ ಹಣ ಬಿಡುಗಡೆ ಆಗಿದೆ. ಯಾವುದೇ ಯೋಜನೆಯ ಹಣ ಬಿಡುಗಡೆ ಆದ್ರೆ ಒಂದೇ ಸಲ ಎಲ್ಲರ ಖಾತೆಗೆ ಜಮಾ ಆಗಲು ಸಾಧ್ಯವಿಲ್ಲ.
ಅದಕ್ಕೆ ಆರ್ ಬಿ ಐ ನ ಹಾಗೂ ಸರ್ಕಾರದ ಕೆಲವು ನಿಯಮಗಳು ತಡೆಯೊಡ್ಡುತ್ತವೆ. ಹಾಗಾಗಿ ಕೆಲವು ಜಿಲ್ಲೆಗಳಿಗೆ ಮೊದಲು 7ನೇ ಕಂತಿನ ಹಣ ಜಮಾ ಆಗುತ್ತದೆ ಹಾಗೂ ನಂತರದ ದಿನಗಳಲ್ಲಿ ಎಲ್ಲಾ ಫಲಾನುಭವಿಗಳ ಖಾತೆಗೂ (Bank Account) ಹಣ ಬರುತ್ತದೆ ಎಂದು ಸರ್ಕಾರ ತಿಳಿಸಿದೆ.
ರೇಷನ್ ಕಾರ್ಡ್ ಮಾಡಿಸಲು ಅರ್ಜಿ ಸ್ವೀಕಾರ; ಹೊಸ ರೇಷನ್ ಕಾರ್ಡ್ ಬಗ್ಗೆ ಬಿಗ್ ಅಪ್ಡೇಟ್
ಗೃಹಲಕ್ಷ್ಮಿ ಯೋಜನೆಯ ಹಣ ಬಾರದೆ ಇರಲು ಕಾರಣಗಳು!
ಎನ್ ಪಿ ಸಿ ಐ ಮ್ಯಾಪಿಂಗ್ ಆಗದೆ ಇರುವುದು
ಅರ್ಜಿ ಸಲ್ಲಿಕೆ ಸರಿಯಾಗಿ ಆಗದೆ ಇರುವುದು
ಈ ಕೆ ವೈ ಸಿ ಅಪ್ಡೇಟ್ ಆಗದೆ ಇರುವುದು
ಆಧಾರ್ ಅಪ್ಡೇಟ್ ಆಗದೆ ಇರುವುದು
ರೇಷನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಆಗದೆ ಇರುವುದು
ಬ್ಯಾಂಕ್ ಖಾತೆ ಆಕ್ಟಿವ್ ಆಗಿಲ್ಲದೆ ಇರುವುದು
ತಾಂತ್ರಿಕ ದೋಷಗಳು.
ಬಿಪಿಎಲ್ ಕಾರ್ಡುದಾರರಿಗೆ ಗುಡ್ ನ್ಯೂಸ್; ಈ ತಿಂಗಳ ಅನ್ನಭಾಗ್ಯ ಹಣ ಬಿಡುಗಡೆ!
ಈ ಎಲ್ಲಾ ಸಮಸ್ಯೆಗೆ ಪರಿಹಾರ ಬೇಕು ಅಂದ್ರೆ ನೀವು ನಿಮ್ಮ ಅರ್ಜಿ ಸಲ್ಲಿಸಿದ ಬಳಿಕ ಸಿಕ್ಕ ಸ್ವೀಕೃತಿ ಪ್ರತಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಬ್ಯಾಂಕ್ ಖಾತೆಯ ವಿವರ ದಾಖಲೆಗಳನ್ನು ತೆಗೆದುಕೊಂಡು ಸಿಡಿಪಿಓ ಕಚೇರಿಗೆ ಭೇಟಿ ನೀಡಿ.
ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಹಾಗೆ ಅಲ್ಲಿ ಮಹಿಳೆಯರ ಬಹುತೇಕ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸೂಚಿಸಲಾಗುತ್ತದೆ. ಹಾಗಾಗಿ ನೀವು ಕೂಡ ನಿಮ್ಮ ಖಾತೆಗೆ ಯಾಕೆ ಹಣ ಬಂದಿಲ್ಲ ಎನ್ನುವುದನ್ನ ತಿಳಿದುಕೊಂಡು ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು.
7ನೇ ಕಂತಿನ ಹಣ ಬಿಡುಗಡೆ!
ಹೌದು ಸರ್ಕಾರ ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದೆ. ಕಳೆದ ಆರು ತಿಂಗಳುಗಳಿಂದ ತಲಾ ಎರಡು ಸಾವಿರ ರೂಪಾಯಿಗಳನ್ನು ಪ್ರತಿ ತಿಂಗಳು ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಿಕೊಂಡು ಬರಲಾಗುತ್ತಿದೆ ಅಂದರೆ ಇಲ್ಲಿಯವರೆಗೆ 12,000 ಫಲಾನುಭವಿ ಮಹಿಳೆಯರ ಖಾತೆಯನ್ನು ತಲುಪಿವೆ. ಇದೀಗ ಫೆಬ್ರವರಿ ತಿಂಗಳ ಹಣ ಮಾರ್ಚ್ 15 ರಂದು ಬಿಡುಗಡೆ ಆಗಿದೆ.
ಸೋಲಾರ್ ಪಂಪ್ ಸೆಟ್ ಅಳವಡಿಸಿಕೊಳ್ಳಲು ರೈತರಿಗೆ 50% ಸಹಾಯಧನ! ಅರ್ಜಿ ಆಹ್ವಾನ
ಆರಂಭದಲ್ಲಿ ಎಲ್ಲಾ ಜಿಲ್ಲೆಗೂ ಹಣ ಬರುವುದಿಲ್ಲ. ಹಾಗಂತ ತಮಗೆ ಹಣ ಬಾರದೆ ಇರಬಹುದು ಎಂದು ಟೆನ್ಶನ್ ಮಾಡಿಕೊಳ್ಳುವ ಅಗತ್ಯ ಇಲ್ಲ. ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಪ್ರತಿಯೊಬ್ಬರ ಖಾತೆಗೆ ಒಂದೇ ದಿನ ಅಷ್ಟು ದೊಡ್ಡ ಮೊತ್ತದ ಹಣವನ್ನು ವರ್ಗಾವಣೆ ಮಾಡುವುದು ಕಷ್ಟವಾಗುತ್ತದೆ. ಹಾಗಾಗಿ ಹಂತ ಹಂತವಾಗಿ ಜಿಲ್ಲೆಯಿಂದ ಜಿಲ್ಲೆಗೆ ಹಣ ವರ್ಗಾವಣೆ ಮಾಡಿಕೊಂಡು ಬರಲಾಗುತ್ತದೆ. ಆದ್ದರಿಂದ, ಮಾರ್ಚ್ 31ರವರೆಗೆ ಕಾಯುವುದು ಒಳ್ಳೆಯದು.
Gruha lakshmi 7th installment money released, If you not received, do this