ಸೋಲಾರ್ ಪಂಪ್ ಸೆಟ್ ಅಳವಡಿಸಿಕೊಳ್ಳಲು ರೈತರಿಗೆ 50% ಸಹಾಯಧನ! ಅರ್ಜಿ ಆಹ್ವಾನ

ದೇಶದಲ್ಲಿ ರೈತ (farmers ) ಇಲ್ಲದೆ ಇತರರು ಬದುಕಲು ಸಾಧ್ಯವೇ ಇಲ್ಲ. ರೈತ ಕಷ್ಟಪಟ್ಟು ತನ್ನ ಜಮೀನಿನಲ್ಲಿ ದುಡಿದು ಆಹಾರ ತಯಾರಿಸಿದಾಗ ಮಾತ್ರ ನಾವು ಜೀವನ ನಡೆಸುವುದಕ್ಕೆ ಸಾಧ್ಯ. ಇದೇ ಕಾರಣಕ್ಕೆ ದೇಶದಲ್ಲಿ ವಾಸಿಸುವ ರೈತರಿಗೆ ಅನುಕೂಲವಾಗುವ ಹಲವು ಯೋಜನೆಗಳು (schemes) ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಪರಿಚಯಗೊಂಡಿವೆ.

ಕುಸುಮ್ ಬಿ ಯೋಜನೆ! (Kusum B scheme)

ರೈತರ ಉದ್ಧಾರ ಅಥವಾ ರೈತರ ಕೃಷಿ ಅಭಿವೃದ್ಧಿ ಅಂತ ಬಾಯಿ ಮಾತಲ್ಲಿ ಹೇಳಿದ್ರೆ ಪ್ರಯೋಜನ ಇಲ್ಲ. ನಿಜಕ್ಕೂ ರೈತರಿಗೆ ಅದರ ಸವಿ ಸಿಗಬೇಕು ಇದಕ್ಕಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಕುಸುಮ್ ಬಿ ಎನ್ನುವ ಯೋಜನೆಯನ್ನು ಪರಿಚಯಿಸಿವೆ.

ಜಮೀನು, ಆಸ್ತಿ ಪತ್ರಗಳಿಗೆ ಆಧಾರ್ ಜೋಡಣೆ ಕಡ್ಡಾಯ! ಸರ್ಕಾರ ಖಡಕ್ ವಾರ್ನಿಂಗ್

ಈ ಯೋಜನೆಯ ಅಡಿಯಲ್ಲಿ ರೈತರು ತಮ್ಮ ತೋಟಗಳಲ್ಲಿ ಸೋಲಾರ್ ಪಂಪ್ ಸೆಟ್ (solar pump set) ಅಳವಡಿಸಿಕೊಳ್ಳಲು ಸಾಧ್ಯ, ಸೋಲಾರ್ ಪಂಪ್ ಸೆಟ್ ಹಾಕಿಕೊಂಡರೆ ಗಣನೀಯ ಪ್ರಮಾಣದಲ್ಲಿ ವಿದ್ಯುತ್ ಉಳಿತಾಯ ಮಾಡಬಹುದು. ಅಷ್ಟೇ ಅಲ್ಲ ತಮ್ಮ ಹೊಲಕ್ಕೆ ಬೇಕಾಗಿರುವ ನೀರಾವರಿ ಸೌಲಭ್ಯವನ್ನು ಕೂಡ ಒದಗಿಸಿಕೊಳ್ಳಬಹುದು.

ರೈತರಿಗೆ ಸಿಗುತ್ತೆ 50% ನಷ್ಟು ಸಬ್ಸಿಡಿ!

ಇಂಧನ ಸಚಿವ ಕೆಜೆ ಜಾರ್ಜ್, ರೈತರಿಗೆ ನೀಡುವ ಸಬ್ಸಿಡಿ (subsidy) ಬಗ್ಗೆ ಮಾಹಿತಿ ನೀಡಿದ್ದಾರೆ. ರೈತರು ತಮ್ಮ ಜಮೀನು ಚೆನ್ನಾಗಿರಬೇಕು ಅಥವಾ ಉತ್ತಮ ಫಸಲು ಬರಬೇಕು ಅಂದ್ರೆ ಅದಕ್ಕೆ ಕಾಲಕಾಲಕ್ಕೆ ಸರಿಯಾಗಿ ನೀರುಣಿಸುವುದು ಬಹಳ ಮುಖ್ಯ. ಇದಕ್ಕೆ ಪಂಪ್ ಸೆಟ್ (pump set) ಅಗತ್ಯ ಇದೆ ಹಾಗೂ ಅದು ವಿದ್ಯುತ್ ಚಾಲಿತವಾಗಿರುತ್ತದೆ. ಈ ರೀತಿ ವಿದ್ಯುತ್ ಬಳಕೆ ಮಾಡಿದಾಗ ವಿದ್ಯುತ್ ಬಿಲ್ ಕೂಡ ಅಷ್ಟೇ ಜಾಸ್ತಿ ಬರುತ್ತದೆ ಎನ್ನುವುದು ಸಾಮಾನ್ಯವಾಗಿ ಗೊತ್ತಿರುವ ವಿಚಾರ.

ಆದರೆ ಇನ್ನು ಮುಂದೆ ಈ ಕಷ್ಟ ರೈತರು ಪಡಬೇಕಾಗಿಲ್ಲ. ಪರಿಸರ ಸ್ನೇಹಿರುವಂತಹ ಸೋಲಾರ್ ಮೂಲಕ ಪಂಪ್ ಸೆಟ್ (environmental friendly solar pump set) ಅಳವಡಿಸಿಕೊಳ್ಳಬಹುದು.

ಮಹಿಳೆಯರಿಗೆ ಒಂದು ತಿಂಗಳ ಕಾಲ ಉಚಿತ ಹೊಲಿಗೆ ತರಬೇತಿಗೆ ಅರ್ಜಿ ಆಹ್ವಾನ!

ಸೋಲಾರ್ ಪಂಪ್ಸೆಟ್ ಖರೀದಿಗೆ 50% ನಷ್ಟು ಸಬ್ಸಿಡಿ!

solar water pumpರಾಜ್ಯದಲ್ಲಿ ವಾಸಿಸುವ ರೈತರು ಕುಸುಮ್ ಬಿ ಯೋಜನೆಯ ಅಡಿಯಲ್ಲಿ ಸೋಲಾರ್ ಪಂಪ್ ಸೆಟ್ ನ್ನ (solar pump set) ತಮ್ಮ ತೋಟ ಅಥವಾ ಹೊಲಗಳಲ್ಲಿ ಅಳವಡಿಸಿಕೊಳ್ಳಲು 50% ವರೆಗೆ ಸಬ್ಸಿಡಿ ಪಡೆದುಕೊಳ್ಳಲು ಸಾಧ್ಯವಿದೆ.

ಈ ಹಿಂದೆ ಈ ಸಬ್ಸಿಡಿ ಕೇವಲ 30% ನಷ್ಟು ಮಾತ್ರ ಇತ್ತು. ಆದರೆ ರಾಜ್ಯದಲ್ಲಿ ಈಗ ವಿದ್ಯುತ್ ಅಭಾವವು ಇದೆ. ಜೊತೆಗೆ ವಿದ್ಯುತ್ ಬೇಡಿಕೆ ಹೆಚ್ಚುತ್ತಿದೆ. ಇದೆಲ್ಲವನ್ನು ಸರಿ ತೂಗಿಸಿಕೊಂಡು ಹೋಗಲು ರಾಜ್ಯ ಸರ್ಕಾರ 50%ನಷ್ಟು ಸಬ್ಸಿಡಿ ನೀಡುತ್ತಿದೆ.

ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಯ ಪೆಂಡಿಂಗ್ ಹಣ ಜಮಾ! ಖಾತೆ ಚೆಕ್ ಮಾಡಿಕೊಳ್ಳಿ

ಹೀಗಾಗಿ ಸಾಕಷ್ಟು ರೈತರು ಸೋಲಾರ್ ಪಂಪ್ ಅಳವಡಿಸಿಕೊಳ್ಳಲು ನಿರ್ಧರಿಸಿದ್ದಾರೆ. ನೀವು ಒಮ್ಮೆ ಸೋಲಾರ್ ಪಂಪ್ ಅಳವಡಿಸಿಕೊಂಡರೆ ಸಾಕಷ್ಟು ವರ್ಷ ಅದನ್ನು ಬಳಸಬಹುದು. ಯಾರಿಗೆ ಸೋಲಾರ್ ಅಳವಡಿಸಿಕೊಳ್ಳುವ ಅಗತ್ಯ ಇರುತ್ತದೆಯೋ ಹಾಗೂ ಸ್ಥಳಾವಕಾಶ ಇದೆಯೋ ಅಂತವರು ಹತ್ತಿರದ ರೈತ ಅಭಿವೃದ್ಧಿ ಕೇಂದ್ರಕ್ಕೆ ಹೋಗಿ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು.

50 Percent subsidy for farmers to adopt solar pump set

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories