ಮಹಿಳೆಯರಿಗೆ ಒಂದು ತಿಂಗಳ ಕಾಲ ಉಚಿತ ಹೊಲಿಗೆ ತರಬೇತಿಗೆ ಅರ್ಜಿ ಆಹ್ವಾನ!

Story Highlights

ಉಚಿತ ತರಬೇತಿ ಪಡೆದುಕೊಂಡು ನೀವು ನಿಮ್ಮದೇ ಆದ ಸ್ವಂತ sewing machine ಇಟ್ಟುಕೊಂಡು ಪ್ರತಿ ತಿಂಗಳು ಕೈತುಂಬ ಸಂಪಾದನೆ ಮಾಡಬಹುದು.

ನೀವು ಮನೆಯಲ್ಲಿಯೇ ಕುಳಿತು ಯಾವುದಾದರೂ ಸ್ವಂತ ಉದ್ಯಮ (own business) ಆರಂಭಿಸಬೇಕು ಅಂದುಕೊಂಡಿದ್ದೀರಾ? ಬರಿ ಅಡುಗೆ ಮಾಡಿದ್ರೆ ಹೇಗೆ ನನ್ನದೇ ಆದ ರೀತಿಯಲ್ಲಿ ಹಣ ಸಂಪಾದಿಸಬೇಕು ಅಂತ ಅಂದುಕೊಂಡಿದ್ದೀರಾ ? ಹಾಗೇನಾದರೂ ಅಂದುಕೊಳ್ಳುವ ಮಹಿಳೆ ನೀವಾಗಿದ್ರೆ ಈ ಸುದ್ದಿ ನಿಮಗಾಗಿ.

ಸರ್ಕಾರದಿಂದ ಉಚಿತವಾಗಿ ಹೊಲಿಗೆ ಯಂತ್ರ ಪಡೆದುಕೊಳ್ಳಲು ಕೆಲವು ಯೋಜನೆಗಳನ್ನು ಪರಿಚಯಿಸಲಾಗಿದೆ. ಇದೀಗ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಅಡಿಯಲ್ಲಿ ಮಹಿಳೆಯರು ಹೊಲಿಗೆ ತರಬೇತಿಯನ್ನು ಕೂಡ ಉಚಿತವಾಗಿ ಪಡೆದುಕೊಳ್ಳಬಹುದು.

ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಯ ಪೆಂಡಿಂಗ್ ಹಣ ಜಮಾ! ಖಾತೆ ಚೆಕ್ ಮಾಡಿಕೊಳ್ಳಿ

ಇಲ್ಲಿ ಉಚಿತ ತರಬೇತಿ ಪಡೆದುಕೊಂಡು ನೀವು ನಿಮ್ಮದೇ ಆದ ಸ್ವಂತ sewing machine ಇಟ್ಟುಕೊಂಡು ಪ್ರತಿ ತಿಂಗಳು ಕೈತುಂಬ ಸಂಪಾದನೆ ಮಾಡಬಹುದು. ಇದಕ್ಕೆ ಬೇಕಾಗಿರುವುದು ಕೇವಲ ನಿಮ್ಮ ಆಸಕ್ತಿ ಅಷ್ಟೇ!

ಉಚಿತ ಹೊಲಿಗೆ ತರಬೇತಿ ಪಡೆದುಕೊಳ್ಳುವುದು ಹೇಗೆ? (How to get free sewing training)

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಮಹಿಳೆಯರಿಗಾಗಿಯೇ ಉಚಿತ ಹೊಲಿಗೆ ತರಬೇತಿ ಆರಂಭಿಸಿದ್ದು ಇದು ಒಂದು ತಿಂಗಳ ಕಾಲ ನಡೆಯುತ್ತದೆ. ಈ ಉಚಿತ ಹೊಲಿಗೆ ತರಬೇತಿಯನ್ನು ಯಾರು ಪಡೆದುಕೊಳ್ಳಬಹುದು ಎನ್ನುವುದನ್ನು ನೋಡೋಣ.

* 18 ರಿಂದ 40 ವರ್ಷದ ಮಹಿಳೆಯರು ತರಬೇತಿಯಲ್ಲಿ ಪಾಲ್ಗೊಳ್ಳಬಹುದು

* ಕನ್ನಡ ಭಾಷೆ ಓದಲು ಮತ್ತು ಬರೆಯಲು ತಿಳಿದಿರಬೇಕು

* ಸ್ವಉದ್ಯೋಗ ಮಾಡೋದಕ್ಕೆ ಆಸಕ್ತಿ ಇರಬೇಕು

* ಬಿಪಿಎಲ್ ರೇಷನ್ ಕಾರ್ಡ್ ಇದ್ರೆ ಅಂತಹ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ

* ತರಬೇತಿ ಸಮಯದಲ್ಲಿ ಊಟ ವಸತಿ ಉಚಿತವಾಗಿ ಸಿಗುತ್ತದೆ.

ಆಸ್ತಿ ನೋಂದಣಿಗೆ ಇನ್ಮುಂದೆ ಸರ್ಕಾರದ ಹೊಸ ರೂಲ್ಸ್! ಹೊಸ ನಿಮಯ ತಿಳಿಯಿರಿ

sewing machineಯಾವಾಗ ತರಬೇತಿ ನಡೆಯಲಿದೆ?

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ತಿಳಿಸಿರುವಂತೆ 18 ಮಾರ್ಚ್ 2024 ರಿಂದ, 18 ಏಪ್ರಿಲ್ 2024ರ ವರೆಗೆ ಉಚಿತ ಹೊಲಿಗೆ ತರಬೇತಿ ನಡೆಯಲಿದೆ.

ತರಬೇತಿ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು!

ಆಧಾರ್ ಕಾರ್ಡ್
ಬ್ಯಾಂಕ್ ಪಾಸ್ ಬುಕ್ ಪ್ರತಿ
ರೇಷನ್ ಕಾರ್ಡ್
ಪಾಸ್ ಪೋರ್ಟ್ ಅಳತೆಯ ಫೋಟೋ
ಈ ದಾಖಲೆಗಳನ್ನು ತೆಗೆದುಕೊಂಡು ನೀವು ನೇರವಾಗಿ ತರಬೇತಿ ನಡೆಯುವ ಸ್ಥಳಕ್ಕೆ ಹೋಗಬಹುದು.

ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಹಣ ಬಿಡುಗಡೆ! ಇಂತಹ ಮಹಿಳೆಯರಿಗೆ ಮಾತ್ರ ಹಣ ಜಮಾ

ತರಬೇತಿ ನಡೆಯುವ ಸ್ಥಳ!

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ,
ಇಂಡಸ್ಟ್ರಿಯಲ್ ಏರಿಯಾ
ಹೆಗಡೆ ರಸ್ತೆ, ಕುಮಟಾ
ಉತ್ತರ ಕನ್ನಡ ಜಿಲ್ಲೆ 581 343.

ಸಂಪರ್ಕಿಸಬೇಕಾದ ವಿಳಾಸ!

ನೀವು ಆನ್ಲೈನ್ ಮೂಲಕ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅಗತ್ಯ ಇಲ್ಲ. ಆದರೆ ಈ ಕೆಳಗೆ ಕೊಡಲಾದ ಫೋನ್ ನಂಬರ್ ಕರೆ ಮಾಡಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ಫೋನ್ ನಂಬರ್ ಗಳು ಇಂತಿವೆ!

9449860007
9538281989
9916783825
8880444612

ಕ್ಯಾನ್ಸಲ್ ಮಾಡಲಾದ ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ! ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ

Apply for free sewing training for women for one month

Related Stories