ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಹಣ ಬಿಡುಗಡೆ! ಇಂತಹ ಮಹಿಳೆಯರಿಗೆ ಮಾತ್ರ ಹಣ ಜಮಾ
ಸರ್ಕಾರ ಬಿಡುಗಡೆ ಮಾಡಿದೆ ಪೆಂಡಿಂಗ್ ಇರುವ ಗೃಹ ಲಕ್ಷ್ಮಿ ಹಣ; ಪಡೆದುಕೊಳ್ಳಲು ಹೀಗೆ ಮಾಡಿ!
ರಾಜ್ಯ ಸರ್ಕಾರ ಮಹಿಳೆಯರಿಗಾಗಿಯೇ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯನ್ನು ಜಾರಿಗೆ ತಂದಿರುವುದು ಪ್ರತಿಯೊಬ್ಬರಿಗೂ ಗೊತ್ತು. ಈ ಯೋಜನೆ ಜಾರಿಗೆ ಬಂದ ಮೇಲೆ ಸಾಕಷ್ಟು ಮಹಿಳೆಯರಿಗೆ ಪ್ರತಿ ತಿಂಗಳು ತಮ್ಮ ಖಾತೆಯಲ್ಲಿ (Bank Account) ಒಂದಷ್ಟು ಹಣವನ್ನ ಉಳಿಸಿಕೊಳ್ಳಲು ಸಾಧ್ಯವಾಗುತ್ತಿದೆ.
ಮಹಿಳೆಯರು, ಅದರಲ್ಲಿಯೂ ಹಳ್ಳಿ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರು ಪ್ರತಿ ತಿಂಗಳು ತಮ್ಮ ಖರ್ಚಿಗೆ ಬೇಕಾದ ಹಣವನ್ನು ಹೊಂದಿಸಲು ಕೂಡ ಕಷ್ಟ ಪಡುತ್ತಾರೆ.. ಆದರೆ ಈಗ ಸರ್ಕಾರ ಉಚಿತವಾಗಿ 2000 ಗಳನ್ನ ಮಹಿಳೆಯರ ಖಾತೆಗೆ ನೇರವಾಗಿ ಜಮಾ ಮಾಡುತ್ತಿರುವುದು, ಅಂತಹ ಮಹಿಳೆಯರ ಮುಖದಲ್ಲಿ ಮಂದಹಾಸ ಮೂಡಿಸದೆ.
ಕ್ಯಾನ್ಸಲ್ ಮಾಡಲಾದ ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ! ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ
ಹೌದು, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿರುವುದು ಕೋಟ್ಯಾಂತರ ಮಹಿಳೆಯರಿಗೆ ಲಾಭದಾಯಕವಾಗಿದೆ ಎನ್ನಬಹುದು.
ಪ್ರತಿ ತಿಂಗಳು 2,000 ಗಳಂತೆ ಈಗಾಗಲೇ 14,000 ಖಾತೆಯನ್ನು ತಲುಪಿದೆ. ಆದರೂ ಇನ್ನೂ ಲಕ್ಷಾಂತರ ಮಹಿಳೆಯರ ಖಾತೆಗೆ ಹಣ ವರ್ಗಾವಣೆ (Money Deposit) ಆಗಿಲ್ಲ. ಇದೀಗ ಸರ್ಕಾರ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದು ಪೆಂಡಿಂಗ್ (pending amount released) ಇರುವ ಹಣವನ್ನು ಕೂಡ ಬಿಡುಗಡೆ ಮಾಡುತ್ತಿದೆ.
ಯಾಕೆ ನಿಮ್ಮ ಖಾತೆಗೆ ಹಣ ಜಮಾ ಆಗುತ್ತಿಲ್ಲ ಗೊತ್ತಾ?
ಗೃಹಲಕ್ಷ್ಮಿ ಯೋಜನೆಯ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಹಾಗಾಗಿ ಇದೊಂದು ಆಟೋಮ್ಯಾಟಿಕ್ ಆಗಿರುವ ಪ್ರಕ್ರಿಯೆ. ನೀವು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಾಗೂ ಅರ್ಜಿಯಲ್ಲಿ ಎಲ್ಲಾ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಂಡಿದ್ದಾರೆ ಹಾಗೂ up-to-date ಆಗಿದ್ರೆ ಮಿಸ್ ಆಗದೆ ನಿಮ್ಮ ಖಾತೆಗೆ ಹಣ ಬರುತ್ತೆ.
ಈಗಾಗಲೇ ಸರ್ಕಾರ ತಿಳಿಸಿರುವಂತೆ ನಿಮ್ಮ ಖಾತೆಗೆ ಕೆವೈಸಿ (E-KYC) ಪ್ರಕ್ರಿಯೆ ಆಗಿರಬೇಕು, ಇದರ ಜೊತೆಗೆ ಎನ್‌ಪಿಸಿಐ ಮ್ಯಾಪಿಂಗ್ (NPCI mapping ) ಕೂಡ ಕಡ್ಡಾಯ. ಗೃಹಲಕ್ಷ್ಮಿ ಅರ್ಜಿ ಸಲ್ಲಿಸುವಾಗ ದಾಖಲೆಗಳನ್ನು ಸರಿಯಾಗಿ ಕೊಡಬೇಕು.
ಇದರ ಜೊತೆಗೆ ನಿಮ್ಮ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಲಿಂಕ್ ಆಗುವುದು ಕೂಡ ಕಡ್ಡಾಯ. ಎಲ್ಲಾ ಕೆಲಸಗಳು ಸಂಪನ್ನಗೊಂಡಿದ್ದರೆ ಮಿಸ್ ಆಗದೇ ನಿಮ್ಮ ಖಾತೆಗೆ ಹಣ ಬರುತ್ತೆ.
ಆಸ್ತಿ, ಜಮೀನಿನ ಪಹಣಿಗೆ ಆಧಾರ್ ಲಿಂಕ್ ಕಾರ್ಯ ಶುರು! ಸರ್ಕಾರದ ಕಟ್ಟುನಿಟ್ಟಿನ ಆದೇಶ
ಪೆಂಡಿಂಗ್ ಇರುವ ಹಣವು ಕೂಡ ಬಿಡುಗಡೆ ಆಗ್ತಾ ಇದೆ!
ಹೌದು, ಕಳೆದ ತಿಂಗಳು, 23, 24, 25 ಹಾಗೂ 26 ನೇ ತಾರೀಖಿನಂದು ಹಾವೇರಿಯ ಮಹಿಳೆ ಒಬ್ಬರಿಗೆ ಪ್ರತಿದಿನ 2000 ಗಳಂತೆ 5 ದಿನಗಳ ಕಾಲ 10,000ಗಳನ್ನು ಜಮಾ ಮಾಡಲಾಗಿದೆ. ಈ ಮಹಿಳೆ ಯೋಜನೆ ಆರಂಭವಾದಾಗಲೇ ಅರ್ಜಿ ಸಲ್ಲಿಸಿದ್ದರು
ಆದರೆ ಕೆಲವು ತಾಂತ್ರಿಕ ದೋಷಗಳು ಹಾಗೂ ಅವರ ಬ್ಯಾಂಕ್ ಖಾತೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇರುವುದು ಪ್ರಮುಖ ಕಾರಣವಾಗಿತ್ತು. ಈ ಕೆಲಸವನ್ನು ಮಾಡಿಕೊಂಡ ನಂತರ ಪೆಂಡಿಂಗ್ ಇರುವ ಹಣ ಜಮಾ ಆಗಿದೆ.
ಮದುವೆ ಆಗೋದಿದ್ರೆ ಸರ್ಕಾರವೇ ಕೊಡುತ್ತೆ 50 ಸಾವಿರ ರೂಪಾಯಿ; ಹೀಗೆ ಅರ್ಜಿ ಸಲ್ಲಿಸಿ!
ಈ ಅಧಿಕಾರಿಗಳನ್ನು ಭೇಟಿ ಮಾಡಿ!
ನಿಮ್ಮ ಖಾತೆಗೂ ಕೂಡ ಇದುವರೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಾರದೆ ಇದ್ದರೆ ನಿಮ್ಮ ಅರ್ಜಿ ಸಲ್ಲಿಕೆಯ ಸಮಯದಲ್ಲಿ ಯಾವುದಾದರೂ ಸಮಸ್ಯೆ ಆಗಿದೆಯಾ ಎನ್ನುವುದನ್ನು ಚೆಕ್ ಮಾಡಬೇಕು.
ಇದಕ್ಕಾಗಿ ನೀವು ಹತ್ತಿರದ ಸಿಡಿಪಿಓ ಕಚೇರಿಗೆ ಭೇಟಿ ನೀಡಿ ನೀವು ಅರ್ಜಿ ಸಲ್ಲಿಸಿದ ಅಕನಾಲೆಜ್ಮೆಂಟ್ (acknowledgement) ನಿಮ್ಮ ಬಳಿ ಇದ್ದರೆ ಅದರ ಜೊತೆಗೆ ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ವಿವರಗಳನ್ನು ತೆಗೆದುಕೊಂಡು ಹೋಗಿ.
ಎಲ್ಲ ಮಾಹಿತಿಗಳನ್ನು ಕೊಟ್ಟು ಸಿಡಿಪಿಓ ಕಚೇರಿಯಲ್ಲಿ ನಿಮ್ಮ ಅರ್ಜಿ ಸಲ್ಲಿಕೆ ಅನುಮೋದನೆಗೊಂಡಿದ್ಯೋ ಇಲ್ಲವೋ ಎನ್ನುವುದನ್ನು ಚೆಕ್ ಮಾಡಿ. ಸಿಡಿಪಿಓ ಅಧಿಕಾರಿಗಳು ಯಾವುದೇ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕೇಳಿದರೆ ತಕ್ಷಣ ಅದಕ್ಕೆ ಪರಿಹಾರವನ್ನು ಸೂಚಿಸುತ್ತಾರೆ.
ಚಿಂತೆ ಬೇಡ! 6 ಮತ್ತು 7ನೇ ಕಂತಿನ ಗೃಹಲಕ್ಷ್ಮಿ ಹಣ ಒಟ್ಟಿಗೆ ಜಮಾ ಆಗಲಿದೆ! ಇಲ್ಲಿದೆ ಮಾಹಿತಿ
ಹೊಸ ಅರ್ಜಿ ಸಲ್ಲಿಕೆಗೆ ಅವಕಾಶ!
ಇಂದು ನಿಮ್ಮ ಬ್ಯಾಂಕ್ ಖಾತೆಗೆ ಕೆವೈಸಿ ಆಗಿದ್ರು ಕೂಡ ನಿಮ್ಮ ಖಾತೆಗೆ ಹಣ ಬರ್ತಾ ಇಲ್ಲ ಅಂತ ಆದರೆ ನೀವು ಸಲ್ಲಿಕೆ ಮಾಡಿರುವ ಅರ್ಜಿ ಸರಿಯಾಗಿ ಸರ್ಕಾರಕ್ಕೆ ತಲುಪದೇ ಇದ್ದಿರಬಹುದು ಅಥವಾ ಅರ್ಜಿಯಲ್ಲಿ ಯಾವುದೇ ಸಮಸ್ಯೆ ಇದ್ದೀರಬಹುದು ಹಾಗಾಗಿ ನೀವು ಹೊಸದಾಗಿ ಮತ್ತೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಈ ರೀತಿ ಮಾಡುವುದರಿಂದ ನೀವು ಮುಂದಿನ ಕಂತಿನ ಹಣವನ್ನು ತಪ್ಪದೇ ನಿಮ್ಮ ಖಾತೆಗೆ ಬರುವಂತೆ ಮಾಡಿಕೊಳ್ಳಬಹುದು.
Gruha Lakshmi Yojana Pending Fund Release, Money deposit only for such women