ಕ್ಯಾನ್ಸಲ್ ಮಾಡಲಾದ ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ! ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ
ಈಗಾಗಲೇ ರೇಷನ್ ಕಾರ್ಡ್ (ration card) ಇಲ್ಲದೆ ಇರುವವರು, ಹೊಸ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress government) ಅಧಿಕಾರಕ್ಕೆ ಬಂದ ನಂತರ ಜನರ ಕಲ್ಯಾಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದರ ಜೊತೆಗೆ ಕೆಲವು ವಿಚಾರಗಳಲ್ಲಿ ಸರ್ಕಾರಕ್ಕೆ ಆಗುತ್ತಿರುವ ವಂಚನೆಯನ್ನು ತಡೆಗಟ್ಟುವ ಸಲುವಾಗಿ ಪ್ರಮುಖ ಕಟ್ಟುನಿಟ್ಟಿನ ನಿರ್ಧಾರಗಳನ್ನು ಕೂಡ ಕೈಗೊಂಡಿದೆ. ಅವುಗಳಲ್ಲಿ ರೇಷನ್ ಕಾರ್ಡ್ ರದ್ದುಪಡಿ (Canceled Ration Card) ಕೂಡ ಒಂದು.
ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಗೆ ರೇಷನ್ ಕಾರ್ಡ್ ಪ್ರಮುಖ ದಾಖಲೆ ಎನ್ನುವುದು ಎಲ್ಲರಿಗೂ ಗೊತ್ತು. ಇದೇ ಕಾರಣಕ್ಕೆ ಈಗಾಗಲೇ ರೇಷನ್ ಕಾರ್ಡ್ (ration card) ಇಲ್ಲದೆ ಇರುವವರು, ಹೊಸ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ ಹಾಗೂ ಅರ್ಜಿ ಸಲ್ಲಿಕೆ ಮಾಡಿರುವವರು ಹೊಸ ಪಡಿತರ ಚೀಟಿ ಪಡೆದುಕೊಳ್ಳುವುದಕ್ಕೆ ಕಾಯುತ್ತಿದ್ದಾರೆ.
ಚಿಂತೆ ಬೇಡ! 6 ಮತ್ತು 7ನೇ ಕಂತಿನ ಗೃಹಲಕ್ಷ್ಮಿ ಹಣ ಒಟ್ಟಿಗೆ ಜಮಾ ಆಗಲಿದೆ! ಇಲ್ಲಿದೆ ಮಾಹಿತಿ
ಆದರೆ ಇದೆಲ್ಲದರ ನಡುವೆ ಇನ್ನೂ ಒಂದಷ್ಟು ಜನ ತಮಗೆ ಅಗತ್ಯ ಇಲ್ಲದೆ ಇದ್ದರೂ ಬಿಪಿಎಲ್ ರೇಶನ್ ಕಾರ್ಡ್ ಪಡೆದುಕೊಂಡಿದ್ದು, ಸರ್ಕಾರದ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅಂತವರ ಕಾರ್ಡ್ ರದ್ದು ಪಡಿಸುತ್ತಿದೆ ಸರ್ಕಾರ.
ಬಿಪಿಎಲ್ ರೇಷನ್ ಕಾರ್ಡ್ (BPL Ration card) ಎನ್ನುವುದು ಬಡತನ ರೇಖೆಗಿಂತ ಕೆಳಗಿರುವವರಿಗೆ ಕೊಡಲ್ಪಡುವ ಒಂದು ಕಾರ್ಡ್ ಆಗಿದೆ. ಇದನ್ನು ಉಳ್ಳವರು ಕೂಡ ಪಡೆದುಕೊಂಡಿದ್ದು, ಸದ್ಯ ಅಂಥವರನ್ನ ಗುರುತಿಸಿ ರಾಜ್ಯ ಸರ್ಕಾರ ರೇಷನ್ ಕಾರ್ಡ್ ರದ್ದುಪಡಿ (Ration Card cancellation) ಮಾಡುತ್ತಿದೆ. ನೀವೇನಾದ್ರೂ ಆ ಲಿಸ್ಟಿನಲ್ಲಿ ಸೇರಿಕೊಂಡಿದ್ದರೆ, ನಿಮ್ಮ ರೇಷನ್ ಕಾರ್ಡ್ ಕೂಡ ರದ್ದಾಗಿರಬಹುದು ಅದನ್ನು ಈ ರೀತಿ ಚೆಕ್ ಮಾಡಿಕೊಳ್ಳಿ.
ಇಂಥವರ ರೇಷನ್ ಕಾರ್ಡ್ ಕ್ಯಾನ್ಸಲ್! ಸರ್ಕಾರದ ಯಾವ ಸೌಲಭ್ಯವೂ ಸಿಗೋದಿಲ್ಲ
ರೇಷನ್ ಕಾರ್ಡ್ ರದ್ದುಪಡಿ ಲಿಸ್ಟ್ ನೋಡುವುದು ಹೇಗೆ?
* ಆಹಾರ ಇಲಾಖೆಯ https://ahara.kar.nic.in/Home/EServices ಈ ವೆಬ್ಸೈಟ್ಗೆ ಭೇಟಿ ನೀಡಿ.
* ಎಡಭಾಗದಲ್ಲಿ ಮೂರು ಲೈನ್ ಕಾಣಿಸುತ್ತದೆ ಅಲ್ವಾ, ಅದರ ಮೇಲೆ ಕ್ಲಿಕ್ ಮಾಡಿ.
* ಈಗ ಇ – ಪಡಿತರ ಸ್ಥಿತಿ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
* ಬಳಿಕ ರದ್ದುಪಡಿಸಲಾದ /ತಡೆ ಹಿಡಿಯಲಾದ ಪಡಿತರ ಚೀಟಿ ಲಿಸ್ಟ್ ಎನ್ನುವ ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ.
* ಈಗ ನೀವು ನಿಮ್ಮ ಜಿಲ್ಲೆ ಮತ್ತು ತಾಲೂಕನ್ನು ಆಯ್ಕೆ ಮಾಡಿ. ರೇಷನ್ ಕಾರ್ಡ್ ರದ್ದಾಗಿದ್ಯೋ ಇಲ್ವೋ ಎನ್ನುವುದನ್ನು ತಿಳಿದುಕೊಳ್ಳಬಹುದು. ಇಲ್ಲಿ ಪ್ರತಿ ತಿಂಗಳುವಾರು ರದ್ದಾಗಿರುವ ಲಿಸ್ಟ್ ಕೊಡಲಾಗಿದ್ದು ನೀವು ಯಾವ ತಿಂಗಳಿನಲ್ಲಿ ರೇಷನ್ ಕಾರ್ಡ್ ರದ್ದಾಗಿದೆ ಎನ್ನುವುದನ್ನು ತಿಳಿದುಕೊಳ್ಳಬಹುದು.
ಮಾರ್ಚ್ 15ರೊಳಗೆ ಈ ಕೆಲಸ ಮಾಡಿದ್ರೆ ಮಾತ್ರ ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಜಮಾ!
ರೇಷನ್ ಕಾರ್ಡ್ ರದ್ದುಪಡಿ ಮಾಡಲಾಗಿದ್ರೆ ಅಥವಾ ತಡೆಹಿಡಿಯಲಾಗಿದ್ದರೆ ಅದಕ್ಕೆ ಕಾರಣವನ್ನು ಕೂಡ ನೀಡುತ್ತಾರೆ. ಹಾಗಾಗಿ ಈ ಲಿಸ್ಟ್ ಚೆಕ್ ಮಾಡಿಕೊಳ್ಳಿ. ಒಂದು ವೇಳೆ ತಪ್ಪಾಗಿ ನಿಮ್ಮ ಹೆಸರು ಸೇರಿಕೊಂಡಿದ್ದರೆ ಆಹಾರ ಇಲಾಖೆಗೆ ದೂರು ಸಲ್ಲಿಸುವುದು ಮೂಲಕ ನಿಮ್ಮ ರೇಷನ್ ಕಾರ್ಡ್ ಹಿಂಪಡೆಯಲು ಸಾಧ್ಯ.
Canceled Ration Card List Released, Check your name