Karnataka NewsBengaluru News

ಇಂಥವರ ರೇಷನ್ ಕಾರ್ಡ್ ಕ್ಯಾನ್ಸಲ್! ಸರ್ಕಾರದ ಯಾವ ಸೌಲಭ್ಯವೂ ಸಿಗೋದಿಲ್ಲ

ನಿಮ್ಮ ಬಳಿ ಬಿಪಿಎಲ್ ರೇಷನ್ (BPL Ration card) ಕಾರ್ಡ್ ಇದ್ಯಾ? ಸರ್ಕಾರದಿಂದ ಸಿಗುವ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುತ್ತಿದ್ದೀರಾ? ಹಾಗಾದ್ರೆ ನಿಮಗೆ ಇನ್ನು ಮುಂದೆ ರೇಷನ್ ಕಾರ್ಡ್ ಪ್ರಯೋಜನ ಸಿಗದೇ ಇರಬಹುದು.

ನಿಮ್ಮ ರೇಷನ್ ಕಾರ್ಡ್ ರದ್ದಾಗಬಹುದು.. ಯಾಕೆ ಅಂತ ಆತಂಕ ಆಗಿರಬೇಕು ಅಲ್ವಾ ? ಅದಕ್ಕೆ ಕಾರಣವನ್ನು ನಾವು ಈ ಲೇಖನದಲ್ಲಿ ತಿಳಿಸುತ್ತೇವೆ ಮುಂದೆ ಓದಿ..

Order to cancel the BPL ration card of such people

ಹೌದು, ರೇಷನ್ ಕಾರ್ಡ್ ಹೊಂದಿರುವವರಿಗೆ ಸರ್ಕಾರ ಒಂದು ಆಘಾತಕಾರಿ ವಿಚಾರವನ್ನು ಹೇಳಿದೆ, ಇಂತಹ ಕೆಲಸವನ್ನು ಮಾಡಿದರೆ ಅವರ ರೇಷನ್ ಕಾರ್ಡ್ ತಡೆಹಿಡಿಯಲಾಗುತ್ತದೆ ಅಥವಾ ರದ್ದುಪಡಿಸಲಾಗುತ್ತದೆ ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ.

ಆಹಾರ ಇಲಾಖೆಯ ಸಚಿವ ಕೆಎಚ್ ಮುನಿಯಪ್ಪ (food minister K.H muniyappa) ರೇಷನ್ ಕಾರ್ಡ್ ರದ್ದುಪಡಿ ವಿಚಾರಕ್ಕೆ ಸಂಬಂಧಪಟ್ಟಂತೆ ಕೆಲವು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಮಾರ್ಚ್ 15ರೊಳಗೆ ಈ ಕೆಲಸ ಮಾಡಿದ್ರೆ ಮಾತ್ರ ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಜಮಾ!

ಅನ್ನಭಾಗ್ಯ ಯೋಜನೆಯ ಪ್ರಯೋಜನ ಸಿಕ್ತಾ ಇದೆಯಾ?

ಬಡತನ ರೇಖೆಗಿಂತ ಕೆಳಗಿರುವವರಿಗೆ (below poverty line) ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುತ್ತದೆ ಹಾಗೂ ಅವರು ಉಚಿತವಾಗಿ ಪಡಿತರ ವಸ್ತುಗಳನ್ನು ನ್ಯಾಯಬೆಲೆ ಅಂಗಡಿಗೆ ಹೋಗಿ ತೆಗೆದುಕೊಂಡು ಬರಬಹುದು.

ಇನ್ನು ಕೇಂದ್ರ ಸರ್ಕಾರ (Central government) ಈಗಾಗಲೇ ಐದು ಕೆಜಿ ಉಚಿತ ಅಕ್ಕಿಯನ್ನು ನೀಡುತ್ತಿದೆ ಇದರ ಜೊತೆಗೆ ರಾಜ್ಯ ಸರ್ಕಾರ ಕೂಡ 5 ಕೆಜಿ ಅಕ್ಕಿ ಉಚಿತವಾಗಿ ನೀಡಬೇಕಿತ್ತು. ದುರದೃಷ್ಟವಶಾತ್ ರಾಜ್ಯ ಸರ್ಕಾರದ ಬಳಿ ಅಷ್ಟು ಅಕ್ಕಿ ದಾಸ್ತಾನು ಇಲ್ಲದೆ ಇರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಪ್ರತಿ ಫಲಾನುಭವಿ ವ್ಯಕ್ತಿಗೆ ಒಂದು ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ 170ಗಳನ್ನ 5 ಕೆಜಿ ಅಕ್ಕಿಗೆ ವಿತರಣೆ ಮಾಡುತ್ತಿದೆ ಅಂದರೆ ಮನೆಯ ಯಜಮಾನನ ಖಾತೆಗೆ ಇಷ್ಟು ಹಣ ಪ್ರತಿ ತಿಂಗಳು ನೇರವಾಗಿ ವರ್ಗಾವಣೆ ಆಗುತ್ತಿದೆ.

ಕಳೆದ ಆರು ತಿಂಗಳಿನಿಂದ ಅನ್ನ ಭಾಗ್ಯ ಯೋಜನೆಯ ಪ್ರಯೋಜನವನ್ನು ಹಲವರು ಪಡೆದುಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಗೃಹಲಕ್ಷ್ಮಿ ಯೋಜನೆ ಹಾಗೂ ಮತ್ತಿತರ ಸರ್ಕಾರಿ ಯೋಜನೆಯ ಪ್ರಯೋಜನವೂ ಕೂಡ ಸಿಗುತ್ತಿದೆ. ಆದರೆ ಇಂಥವರಿಗೆ ಇನ್ನು ಮುಂದೆ ರೇಷನ್ ಕಾರ್ಡ್ ಇದ್ರೂ ಪ್ರಯೋಜನಕ್ಕೆ ಬಾರದೆ ಇರಬಹುದು ಯಾಕೆ ಗೊತ್ತಾ?

ಇನ್ಮುಂದೆ ಬೆಂಗಳೂರಿನಲ್ಲಿ ಬೋರ್‌ವೆಲ್ ಕೊರೆಸೋದಕ್ಕೆ ಬೇಕು ಪರ್ಮಿಷನ್! ಹೊಸ ರೂಲ್ಸ್

BPL Ration Cardರೇಷನ್ ಕಾರ್ಡ್ ದುರುಪಯೋಗ ಆಗುತ್ತಿದೆ!

ಈಗಾಗಲೇ ಸಾಕಷ್ಟು ಜನ ರೇಷನ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಅರ್ಜಿ ಸಲ್ಲಿಸಿದ್ದಾರೆ ಆದರೂ ಅಂತವರಿಗೆ ಹೊಸ ರೇಷನ್ ಕಾರ್ಡ್ ಸಿಕ್ಕಿಲ್ಲ ಅಂತದ್ರಲ್ಲಿ ಈಗಾಗಲೇ ಪಡಿತರ ಚೀಟಿಯನ್ನು ಉಳ್ಳವರು ಕೂಡ ಪಡೆದುಕೊಂಡಿದ್ದು ಕಳೆದ ಆರು ತಿಂಗಳಿನಿಂದ ಪಡಿತರ ವಸ್ತು ತೆಗೆದುಕೊಂಡಿಲ್ಲ. ಬದಲಿಗೆ ಸರ್ಕಾರದ ಉಚಿತ ಶಿಕ್ಷಣ ಹಾಗೂ ವೈದ್ಯಕೀಯ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಇಂಥವರನ್ನ ಗುರುತಿಸಿರುವ ರಾಜ್ಯ ಸರ್ಕಾರ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ಮಹಿಳೆಯರಿಗೆ ಸಿಹಿ ಸುದ್ದಿ; ಗೃಹಲಕ್ಷ್ಮಿ ಯೋಜನೆ 7ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ್!

ರದ್ದುಪಡಿಸಲಾಗುತ್ತದೆ ರೇಷನ್ ಕಾರ್ಡ್! (Ration card cancellation)

ಇಂಥವರ ರೇಷನ್ ಕಾರ್ಡ್ ರದ್ದು ಪಡಿ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಹೌದು, ಕಳೆದ ಆರು ತಿಂಗಳಿನಿಂದ ಯಾರು ಪಡಿತರ ವಸ್ತುಗಳನ್ನ ಪಡೆದುಕೊಂಡಿಲ್ಲವೋ ಅಂತವರ ರೇಷನ್ ಕಾರ್ಡ್ ಅನ್ನು ರದ್ದು ಪಡಿಸಲಾಗುತ್ತದೆ ಅಥವಾ ತಡೆಹಿಡಿಯಲಾಗುತ್ತದೆ

ಒಂದು ವೇಳೆ ನಿಮ್ಮ ಬಳಿ ಸೂಕ್ತವಾದ ಕಾರಣ ಇದ್ದು ಕಳೆದ ಆರು ತಿಂಗಳಿನಿಂದ ಪಡಿತರ ತೆಗೆದುಕೊಳ್ಳಲು ಸಾಧ್ಯವಾಗದೆ ಇದ್ದಲ್ಲಿ ನೀವು ಆಹಾರ ಇಲಾಖೆಗೆ ಅರ್ಜಿ ಸಲ್ಲಿಸಿ ಸೂಕ್ತ ಕಾರಣಗಳನ್ನು ಕೊಟ್ಟರೆ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ಹಿಂಪಡೆಯಲು ಸಾಧ್ಯವಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ನಿಮ್ಮ ಬಳಿ ಬಿಪಿಎಲ್ ರೇಷನ್ ಕಾರ್ಡ್ ಇದ್ದರೂ ಕೂಡ ಸರ್ಕಾರದ ಯಾವ ಯೋಜನೆಯ ಪ್ರಯೋಜನವು ನಿಮಗೆ ಸಿಗುವುದಿಲ್ಲ.

ಅನ್ನಭಾಗ್ಯ ಯೋಜನೆ ಹಣ DBT ಆಗದೆ ಇರುವವರಿಗೆ ಸರ್ಕಾರದ ಹೊಸ ಮಾರ್ಗಸೂಚಿ!

ಬಿಪಿಎಲ್ ರೇಷನ್ ಕಾರ್ಡ್ ಇದ್ದರೂ ಕೂಡ ನಮ್ಮ ಖಾತೆಗೆ ಹಣ ವರ್ಗಾವಣೆ ಆಗುತ್ತಿಲ್ಲ ಎನ್ನುವವರು ನಿಮ್ಮ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗಿದ್ಯೋ ಇಲ್ಲವೋ ಎನ್ನುವುದನ್ನು ಚೆಕ್ ಮಾಡಿಕೊಳ್ಳಿ.

ಇದರ ಜೊತೆಗೆ ಬ್ಯಾಂಕ್ ಖಾತೆಗೆ (Bank Account) ಈಕೆ ವೈ ಸಿ ಆಗುವುದು ಕಡ್ಡಾಯವಾಗಿದೆ. ಹಾಗಾಗಿ ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರೈಸಿಕೊಂಡರೆ ನಿಮಗೆ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ಖಂಡಿತವಾಗಿಯೂ ಜಮಾ ಆಗುತ್ತದೆ.

Big Update on Ration Card, cancellation of such people Card

Our Whatsapp Channel is Live Now 👇

Whatsapp Channel

Related Stories