ಇನ್ಮುಂದೆ ಬೆಂಗಳೂರಿನಲ್ಲಿ ಬೋರ್‌ವೆಲ್ ಕೊರೆಸೋದಕ್ಕೆ ಬೇಕು ಪರ್ಮಿಷನ್! ಹೊಸ ರೂಲ್ಸ್

ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಬೋರ್ವೆಲ್ (borewell) ತೆಗೆಸಿ ನೀರು ಬಳಕೆ ಮಾಡುತ್ತಿದ್ದ ಕಾರಣದಿಂದಾಗಿ ಅಂತರ್ಜಲ ಮಟ್ಟ ಕುಸಿದಿದೆ ಎಂದು ಅಂದಾಜಿಸಲಾಗಿದೆ.

ರಾಜ್ಯದ್ಯಂತ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರು (silicon city Bengaluru) ಕೂಡ ಸಾಕಷ್ಟು ಸಮಸ್ಯೆಯನ್ನ ಎದುರಿಸುವಂತೆ ಆಗಿದೆ.

ಬೆಂಗಳೂರಿನಲ್ಲಿ ಸಾಕಷ್ಟು ಪ್ರದೇಶದಲ್ಲಿ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ಬಂದಿದೆ. ಇದಕ್ಕಾಗಿ ಬೆಂಗಳೂರಿನ ಜಲ ಮಂಡಳಿ ಸಾರ್ವಜನಿಕರಿಗೆ ನೀರು ಒದಗಿಸುವುದಕ್ಕೆ ಸಾಕಷ್ಟು ಪ್ರಯತ್ನ ಪಡುತ್ತಿದೆ.

ಮಹಿಳೆಯರಿಗೆ ಸಿಹಿ ಸುದ್ದಿ; ಗೃಹಲಕ್ಷ್ಮಿ ಯೋಜನೆ 7ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ್!

ಇನ್ಮುಂದೆ ಬೆಂಗಳೂರಿನಲ್ಲಿ ಬೋರ್‌ವೆಲ್ ಕೊರೆಸೋದಕ್ಕೆ ಬೇಕು ಪರ್ಮಿಷನ್! ಹೊಸ ರೂಲ್ಸ್ - Kannada News

ಒಂದು ಕಡೆ ಮಳೆಯ ಅಭಾವ ಇನ್ನೊಂದು ಕಡೆ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಬೋರ್ವೆಲ್ (borewell) ತೆಗೆಸಿ ನೀರು ಬಳಕೆ ಮಾಡುತ್ತಿದ್ದ ಕಾರಣದಿಂದಾಗಿ ಅಂತರ್ಜಲ ಮಟ್ಟ ಕುಸಿದಿದೆ ಎಂದು ಅಂದಾಜಿಸಲಾಗಿದೆ.

ಹಾಗಾಗಿ ಇನ್ನು ಮುಂದೆ ಬೆಂಗಳೂರಿನಲ್ಲಿ ಬೋರ್ವೆಲ್ ತೆಗೆಯುದಿದ್ದರೆ ಅದಕ್ಕೆ ಸಂಬಂಧಪಟ್ಟ ಪ್ರಾಧಿಕಾರದ ಪರ್ಮಿಷನ್ (permission) ಪಡೆದುಕೊಳ್ಳಲೇಬೇಕು.

ಆರಂಭವಾಗಿದೆ ಹೊಸ ವೆಬ್ಸೈಟ್!

ಬೆಂಗಳೂರು ಜಲ ಮಂಡಳಿ ಬೋರ್ವೆಲ್ ತೆಗೆಸುವುದಕ್ಕೆ, ಪರ್ಮಿಷನ್ ತೆಗೆದುಕೊಳ್ಳಲು ವೆಬ್ಸೈಟ್ ಒಂದನ್ನು ಆರಂಭಿಸಿದೆ, ಆ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಿ ಪರವಾನಿಗೆ ಪಡೆದುಕೊಳ್ಳಬೇಕು

ಒಂದುವೇಳೆ ಪರವಾನಿಗೆ ಪಡೆದುಕೊಳ್ಳದೆ ಬೋರ್ವೆಲ್ ತೆಗೆಸಲು ಪ್ರಯತ್ನಿಸಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಿಳಿಸಿದ್ದಾರೆ.

ಅನ್ನಭಾಗ್ಯ ಯೋಜನೆ ಹಣ DBT ಆಗದೆ ಇರುವವರಿಗೆ ಸರ್ಕಾರದ ಹೊಸ ಮಾರ್ಗಸೂಚಿ!

Borewellಕೊಳವೆಬಾವಿ ತೆಗೆಸಲು ಅನುಮತಿ ಪಡೆಯದೆ ಇದ್ದರೆ ಕಠಿಣ ಕ್ರಮ!

ಕರ್ನಾಟಕ ಅಂತರ್ಜಲ ಅಧಿನಿಯಮ 2011, 11 ಅನ್ವಯ ಯಾರಾದ್ರೂ ಜಲ ಮಂಡಳಿಯ ಅನುಮತಿ ಪಡೆದುಕೊಳ್ಳದೆ, ಕೊಳವೆಬಾವಿ ತೆರಿಸಲು ಹೋದರೆ ಆ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿಯಮಾನುಸಾರ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಬಿಪಿಎಲ್ ಕಾರ್ಡ್ ಇರೋರಿಗೆ ಗುಡ್ ನ್ಯೂಸ್; ಹೊಸ ಕಾರ್ಡ್ ಜೊತೆಗೆ ಅನ್ನಭಾಗ್ಯ ಹಣ ಜಮಾ!

ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಉಂಟಾಗುತ್ತಿರುವ ನೀರಿನ ಅಭಾವದ ಸಮಸ್ಯೆಯನ್ನು ಸರಿಪಡಿಸಲು ಕರ್ನಾಟಕ ಜಲ ಮಂಡಳಿ ಸಾಕಷ್ಟು ಪ್ರಯತ್ನ ಪಡುತ್ತಿದೆ. ಇದರ ಜೊತೆಗೆ ಹಿತಮಿತವಾಗಿ ನೀರು ಖರ್ಚು ಮಾಡುವಂತೆ ಮಂಡಳಿ ಸಾರ್ವಜನಿಕರಿಗೆ ಸೂಚನೆ ನೀಡಿದೆ.

permission is needed for drilling a borewell in Bangalore, New Rules

Follow us On

FaceBook Google News

permission is needed for drilling a borewell in Bangalore, New Rules