Karnataka NewsBengaluru News

ಮಹಿಳೆಯರಿಗೆ ಸಿಹಿ ಸುದ್ದಿ; ಗೃಹಲಕ್ಷ್ಮಿ ಯೋಜನೆ 7ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ್!

ಗೃಹಜ್ಯೋತಿ ಯೋಜನೆ, ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆ, ಯುವಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಗಳು ರಾಜ್ಯ ಸರ್ಕಾರ ವಿಧಾನಸಭಾ ಎಲೆಕ್ಷನ್ ನಲ್ಲಿ ಗೆದ್ದ ನಂತರ ಜಾರಿಗೆ ತಂದಿರುವ ಪ್ರಮುಖ ಐದು ಗ್ಯಾರಂಟಿ ಯೋಜನೆಗಳು.

ನುಡಿದಂತೆ ನಡೆಯುತ್ತೇವೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ತಿಳಿಸಿದಂತೆ 5 ಗ್ಯಾರಂಟಿ ಯೋಜನೆಯ ಜಾರಿಗೆ ತಂದಿದೆ ಅದರಲ್ಲಿಯೂ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿದ್ದಕ್ಕೆ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಕೋಟ್ಯಂತರ ಫಲಾನುಭವಿಗಳೆ ಸಾಕ್ಷಿ.

Gruha Lakshmi pending money is also deposited for the women of this district

ಹೌದು, ಅತ್ಯಂತ ಹೆಚ್ಚಿನ ಹಣಕಾಸು ಮೀಸಲಿಟ್ಟು ಗೃಹಲಕ್ಷ್ಮಿ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ, ಮಹಿಳೆಯರು ಇಂದು ಪ್ರತಿ ತಿಂಗಳು 2000 ಗಳನ್ನ ಪಡೆದುಕೊಳ್ಳಲು ಸಾಧ್ಯವಿದೆ. ಈಗಾಗಲೇ 12,000ಗಳನ್ನು ಆರು ಕಂತಿನಲ್ಲಿ ಮಹಿಳೆಯರ ಖಾತೆಗೆ (Bank Account) ಜಮಾ ಮಾಡಲಾಗಿದೆ. ಗೃಹಲಕ್ಷ್ಮಿ ಯೋಜನೆ ಆರಂಭದಿಂದ ಇಲ್ಲಿಯವರೆಗೆ ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸುತ್ತದೆ.

ಅನ್ನಭಾಗ್ಯ ಯೋಜನೆ ಹಣ DBT ಆಗದೆ ಇರುವವರಿಗೆ ಸರ್ಕಾರದ ಹೊಸ ಮಾರ್ಗಸೂಚಿ!

ಒಂದು ರೀತಿಯಲ್ಲಿ ಸಕ್ಸಸ್ ಆದಂತೆ ಕಂಡರು, ಇನ್ನೊಂದು ಕಡೆಗೆ ಒಂದಷ್ಟು ಮಹಿಳೆಯರ ಖಾತೆಗೆ ಹಣ ಬಾರದೆ ಇರುವುದು ಗೃಹಲಕ್ಷ್ಮಿ ಯೋಜನೆ, ಉದ್ದೇಶ ಸಂಪೂರ್ಣವಾಗಿ ಸಫಲವಾಗಿಲ್ಲ ಎಂದು ಅನಿಸುತ್ತದೆ.

ಇದಕ್ಕಾಗಿಯೇ ಸರ್ಕಾರ ಬೇರೆ ಬೇರೆ ಉಪಕ್ರಮಗಳನ್ನು ಕೈಗೊಂಡಿದ್ದು ಹಳ್ಳಿಹಳ್ಳಿಗೆ ಅಧಿಕಾರಿಗಳನ್ನು ಕಳಿಸಿ ಮಹಿಳೆಯರ ಸಮಸ್ಯೆಯನ್ನು ತಿಳಿದು ಅವರಿಗೆ ತಕ್ಷಣ ಪರಿಹಾರ ಸೂಚಿಸುವಂತೆ ತಿಳಿಸಿದೆ.

ಇದರ ಜೊತೆಗೆ ಗೃಹಲಕ್ಷ್ಮಿ ಕ್ಯಾಂಪ್ ಗಳು, ಅದಾಲತ್ಗಳು. ಆಶಾ ಕಾರ್ಯಕರ್ತೆಯರು ಅಥವಾ ಅಂಗನವಾಡಿ ಸಹಾಯಕಿಯರು ಮನೆಗೆ ಬಂದು ಮಹಿಳೆಯರ ಸಮಸ್ಯೆಯನ್ನು ಪರಿಹರಿಸುವುದು ಹೀಗೆ ಬೇರೆ ಬೇರೆ ರೀತಿಯ ವ್ಯವಸ್ಥೆಯನ್ನು ಮಾಡಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆಯಾಗಲು (Money Transfer) ಸರ್ಕಾರ ಪ್ರಯತ್ನಿಸುತ್ತಿದೆ.

ಬಿಪಿಎಲ್ ಕಾರ್ಡ್ ಇರೋರಿಗೆ ಗುಡ್ ನ್ಯೂಸ್; ಹೊಸ ಕಾರ್ಡ್ ಜೊತೆಗೆ ಅನ್ನಭಾಗ್ಯ ಹಣ ಜಮಾ!

ನಿಮ್ಮ ಬ್ಯಾಂಕ್ ಖಾತೆಗೆ ಕೆವೈಸಿ ಆಗಿದೆಯಾ?

ಶೇ. 10ರಷ್ಟು ಮಹಿಳೆಯರ ಖಾತೆಗೆ ಹಣ ಬಾರದೆ ಇರಲು ಇದು ಪ್ರಮುಖ ಕಾರಣವಾಗಿದೆ. ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರೂ ಕೂಡ ಕೆವೈಸಿ ಆಗಿರುವುದಿಲ್ಲ. ಆಧಾರ್ ಸೀಡಿಂಗ್, ಎನ್‌ಪಿಸಿಐ ಮ್ಯಾಪಿಂಗ್ ಮೊದಲಾದ ಡಿಜಿಟಲ್ ಕೆಲಸಗಳು ಆಗದೆ ಇದ್ರೆ ಮಹಿಳೆಯರ ಖಾತೆಗೆ ಆಟೋಮ್ಯಾಟಿಕ್ ಆಗಿ ಡಿ ಬಿ ಟಿ ಹಣ ಬರುವುದಿಲ್ಲ. ಹಾಗಾಗಿ ನೀವು ನಿಮ್ಮ ಹತ್ತಿರದ ಬ್ಯಾಂಕುಗೆ (Bank) ಹೋಗಿ ಈ ಕೆಲಸವನ್ನು ಪೂರ್ಣಗೊಳಿಸಿಕೊಳ್ಳಿ.

Gruha Lakshmi Yojanaಇನ್ನು ತಾಂತ್ರಿಕ ದೋಷದಿಂದ ಸಮಸ್ಯೆ ಉಂಟಾದರೆ ಅದನ್ನು ಸರ್ಕಾರದ ಗಮನಕ್ಕೆ ತಂದರೆ. ಯಾವ ಮಹಿಳೆಯರ ಖಾತೆಯಲ್ಲಿ ತಾಂತ್ರಿಕ ದೋಷ ಉಂಟಾಗಿದೆ ಅದನ್ನು ಪರಿಶೀಲಿಸಿ ತಕ್ಷಣ ಪೆಂಡಿಂಗ್ ಇರುವ ಹಣವನ್ನು ಕೂಡ ಡಿ ಬಿ ಟಿ ಮಾಡುವುದಾಗಿ ಸರ್ಕಾರ ತಿಳಿಸಿದೆ.

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆಗಳಿದ್ದರೂ ಕೂಡ ನೀವು ಹತ್ತಿರದ ಸಿ ಡಿ ಪಿ ಓ ಕಚೇರಿಗೆ ಭೇಟಿ ನೀಡಿ ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು.

ಇನ್ಮುಂದೆ ಈ ಮಹಿಳೆಯರು ಎಷ್ಟೇ ಪ್ರಯತ್ನ ಪಟ್ಟರು ಸಿಗೋಲ್ಲ ಗೃಹಲಕ್ಷ್ಮಿ ಯೋಜನೆ ಹಣ

7ನೇ ಕಂತಿನ ಹಣ ಬಿಡುಗಡೆ!

ಈಗಾಗಲೇ ಆರು ಕಂತಿನ ಹಣ ಅಂದರೆ 12,000ಗಳನ್ನ ಪಡೆದುಕೊಂಡಿರುವ ಮಹಿಳೆಯರು ಮುಂದಿನ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಸಾಮಾನ್ಯವಾಗಿ ಪ್ರತಿ ತಿಂಗಳ 20ನೇ ತಾರೀಕಿನಿಂದ ಹಣ ವರ್ಗಾವಣೆ ಪ್ರಕ್ರಿಯೆ ಆರಂಭವಾಗುತ್ತದೆ.

ಮಾರ್ಚ್ ತಿಂಗಳಿನ ಎರಡನೇ ವಾರ ಅಥವಾ ಮೂರನೇ ವಾರ 7ನೇ ಕಂತಿನ ಹಣ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಲಾಗಿದೆ. ಅಂದರೆ ಮಾರ್ಚ್ ತಿಂಗಳು ಮುಗಿಯುವುದರ ಒಳಗೆ ಫಲಾನುಭವಿಗಳ ಖಾತೆಗೆ ಹಣ ಬರುತ್ತದೆ. ಅಷ್ಟೇ ಅಲ್ಲ ಖಾತೆಯಲ್ಲಿ ಇರುವ ಸಮಸ್ಯೆ ಪರಿಹರಿಸಿಕೊಂಡರೆ ಅಂತಹ ಮಹಿಳೆಯರ ಖಾತೆಗೆ ಪೆಂಡಿಂಗ್ ಇರುವ ಹಣವನ್ನು ಕೂಡ ಸರ್ಕಾರ ಜಮಾ ಮಾಡುತ್ತದೆ.

ಮಾರ್ಚ್ ತಿಂಗಳ ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆ ಆರಂಭ; ಹಣ ಬಂದಿದ್ಯಾ ಚೆಕ್ ಮಾಡಿಕೊಳ್ಳಿ

Gruha Lakshmi Yojana 7th Pending Money release date fixed

Related Stories