ಇನ್ಮುಂದೆ ಈ ಮಹಿಳೆಯರು ಎಷ್ಟೇ ಪ್ರಯತ್ನ ಪಟ್ಟರು ಸಿಗೋಲ್ಲ ಗೃಹಲಕ್ಷ್ಮಿ ಯೋಜನೆ ಹಣ
ರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಮನೆಯ ಯಜಮಾನಿಯ ಖಾತೆಗೆ (Bank Account) ಪ್ರತಿ ತಿಂಗಳು ೨೦೦೦ ರೂ. ನೀಡುವ ಗೃಹ ಲಕ್ಷ್ಮಿ ಯೋಜನೆ (Gruha Lakshmi Yojana) ಕೂಡ ಒಂದಾಗಿದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಮನೆಯ ಯಜಮಾನಿಯ ಖಾತೆಗೆ (Bank Account) ಪ್ರತಿ ತಿಂಗಳು ೨೦೦೦ ರೂ. ನೀಡುವ ಗೃಹ ಲಕ್ಷ್ಮಿ ಯೋಜನೆ (Gruha Lakshmi Yojana) ಕೂಡ ಒಂದಾಗಿದೆ. ಈ ಯೋಜನೆ ಆರಂಭದಿಂದಲೂ ಕುಂಟುತ್ತ ಸಾಗಿದೆ.
ಇದುವರೆಗೆ ಅರ್ಜಿ ಸಲ್ಲಿಸಿದ ಎಲ್ಲ ಫಲಾನುಭವಿಗಳಿಗೂ ಯೋಜನೆ ತಲುಪಿಸಲು ಸಾಧ್ಯವಾಗಿಲ್ಲ. ಆದರೂ ಸರ್ಕಾರವು ಕೈ ಕಟ್ಟಿ ಕುಳಿತಿಲ್ಲ. ತನ್ನ ಕೈಲಾದ ಎಲ್ಲ ಪ್ರಯತ್ನಗಳನ್ನು ಮಾಡಿ ಫಲಾನುಭವಿಗಳಿಗೆ ಯೋಜನೆ ತಲುಪಿಸುವ ಪ್ರಯತ್ನ ಮಾಡುತ್ತಿದೆ.
ಮಾರ್ಚ್ ತಿಂಗಳ ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆ ಆರಂಭ; ಹಣ ಬಂದಿದ್ಯಾ ಚೆಕ್ ಮಾಡಿಕೊಳ್ಳಿ
ಈ ನಡುವೆ ರಾಜ್ಯ ಸರ್ಕಾರವು ಗೃಹ ಲಕ್ಷ್ಮಿ ಯೋಜನೆ (Gruha Lakshmi Scheme) ಫಲಾನುಭವಿಗಳಿಗೆ ಹೊಸ ನಿಯಮ ಜಾರಿಗೆ ತಂದಿದೆ. ಈ ಪ್ರಕಾರ ನೀವು ನಡೆದುಕೊಂಡಿಲ್ಲ ಎಂದಾದರೆ ನಿಮ್ಮ ಗೃಹ ಲಕ್ಷ್ಮಿ ಯೋಜನೆ ಹಣ ಇನ್ಮುಂದೆ ಬರುವುದಿಲ್ಲ. ಹಾಗಾದರೆ ಯಾವ ನಿಯಮ ಜಾರಿಗೆ ತರಲಾಗಿದೆ ಎಂದು ತಿಳಿದುಕೊಳ್ಳೋಣ.
ಗೃಹ ಲಕ್ಷ್ಮಿ ಯೋಜನೆ ಅಡಿಯಲ್ಲಿ ೨೦೦೦ ರೂ. ಬಂದಿಲ್ಲ ಎಂದಾದರೆ ಅದಕ್ಕೆ ಮುಖ್ಯ ಕಾರಣ ತಾಂತ್ರಿಕ ದೋಷ. ಈ ತಾಂತ್ರಿಕ ದೋಷ ನಿವಾರಿಸುವ ಪ್ರಯತ್ನದಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳು ನಿರತರಾಗಿದ್ದಾರೆ.
ರಾಜ್ಯ ಸರ್ಕಾರ ಈ ಯೋಜನೆ ಫಲಾನುಭವಿ ಆಗಲು ಸಾಕಷ್ಟು ಮಾನದಂಡ ವಿಧಿಸಿದೆ. ಅದರಲ್ಲಿ ನೀವು ಗೃಹ ಲಕ್ಷ್ಮಿ ಯೋಜನೆಗೆ ನೀಡಿದ ಬ್ಯಾಂಕ್ ಖಾತೆಗೆ (Bank Account) ಆಧಾರ್ ಲಿಂಕ್ ಆಗಿರಬೇಕು. ಹಾಗೂ ಆ ಖಾತೆ ಸದಾ ಎಕ್ಟಿವ್ ಆಗಿ ಇರಬೇಕು.
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದ್ದೀರಾ? ಈ ಕಾರಣಕ್ಕೆ ರದ್ದಾಗುತ್ತೆ ನಿಮ್ಮ ಅರ್ಜಿ
ಇದರ ಜೊತೆ ನೀವು ಗೃಹಲಕ್ಷ್ಮಿ ಯೋಜನೆ ಅರ್ಜಿಯಲ್ಲಿ ಸಲ್ಲಿಸಿದ ಹೆಸರು ಹಾಗೂ ಪಡಿತರ ಚೀಟಿಯಲ್ಲಿ (Ration Card) ಇರುವ ಹೆಸರು ಒಂದೇ ರೀತಿಯಲ್ಲಿ ಇರಬೇಕು. ಯಾವುದೇ ಒಂದು ಅಕ್ಷರ ವ್ಯತ್ಯಾಸವಾದರೂ ನಿಮಗೆ ಯೋಜನೆಯ ಹಣ ಬರುವುದಿಲ್ಲ.
ಗೃಹ ಲಕ್ಷ್ಮಿ ಯೋಜನೆಯ ಹಣ ಬರಬೇಕು ಎಂದಾದರೆ ನೀವು ಈ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಒಂದು ವೇಳೆ ನೀವು ಈ-ಕೆವೈಸಿ ಮಾಡಿಸಿಕೊಳ್ಳದಿದ್ದರೆ ಹಣ ಬರುವುದಿಲ್ಲ.
ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳು ಎನ್ಪಿಸಿಐ ಮ್ಯಾಪಿಂಗ್ ಮಾಡಿಸುವುದು ಕಡ್ಡಾಯವಾಗಿದೆ. ಫೆಬ್ರವರಿ ತಿಂಗಳಿನಲ್ಲಿ ಯಾರು ಎನ್ಪಿಸಿಐ ಮ್ಯಾಪಿಂಗ್ ಮಾಡಿಸಿಲ್ಲವೋ ಅಂತಹವರ ಖಾತೆಗೆ ೬ ಹಾಗೂ ೭ನೇ ಕಂತಿನ ಹಣ ಬಂದಿರುವುದಿಲ್ಲ.
ಇಷ್ಟು ದಿನ ಆದ್ರೂ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ! ಅನ್ನೋರಿಗೆ ಬಿಗ್ ಅಪ್ಡೇಟ್
ಗೃಹ ಲಕ್ಷ್ಮಿ ಹಣ ಜಮಾ ಆಗಿದೆಯಾ? ಪರಿಶೀಲನೆ ಮಾಡುವುದು ಹೇಗೆ?
ಗೃಹ ಲಕ್ಷ್ಮಿ ಯೋಜನೆ ಹಣ ಜಮಾ ಆಗಿದೆಯೋ ಇಲ್ಲವೋ ಎಂದು ಚೆಕ್ ಮಾಡಲು ಮೊದಲು ಡಿಬಿಟಿ ಕರ್ನಾಟಕ ಆಪ್ ಡೌನ್ಲೋಡ್ ಮಾಡಬೇಕು.
ಆಪ್ ಡೌನ್ ಲೋಡ್ ಆದ ಮೇಲೆ ಫಲಾನುಭವಿಯ ಆಧಾರ್ ನಂಬರ್ ಹಾಗೂ ಮೊಬೈಲ್ ನಂಬರ್ ಅಲ್ಲಿ ಎಂಟ್ರಿ ಮಾಡಬೇಕು.
ಆಗ ಮೊಬೈಲ್ಗೆ ಒಂದು ಓಟಿಪಿ ಬರುತ್ತದೆ. ಅದನ್ನು ಎಂಟ್ರಿ ಮಾಡಬೇಕು. ಹೀಗೆ ಲಾಗಿನ್ ಆಗಿ ಖಾತೆ ರಚಿಸಬೇಕು. ಇದಾದ ಬಳಿಕ ಯಾವ ಯಾವ ತಿಂಗಳ ಹಣ ಜಮಾ ಆಗಿದೆ ಎನ್ನುವುದನ್ನು ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ.
ಹೊಸ ರೇಷನ್ ಕಾರ್ಡ್ ಅರ್ಜಿಗೆ ಅವಕಾಶ! ಇನ್ನೊಂದೆಡೆ ಅಕ್ರಮ ರೇಷನ್ ಕಾರ್ಡ್ ಕ್ಯಾನ್ಸಲ್
Such People will not get Gruha Lakshmi Yojana money, Know the Reason