ಇಷ್ಟು ದಿನ ಆದ್ರೂ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ! ಅನ್ನೋರಿಗೆ ಬಿಗ್ ಅಪ್ಡೇಟ್

ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಹಣ ಪ್ರತಿ ಒಬ್ಬ ಮಹಿಳೆಗೂ ತಲುಪಬೇಕು ಎನ್ನುವುದು ಸರ್ಕಾರದ ಉದ್ದೇಶ. ಅದರ ಪ್ರಕಾರ ಕಳೆದ ಆರು ತಿಂಗಳುಗಳಿಂದ ಪ್ರತಿಯೊಬ್ಬ ಫಲಾನುಭವಿ ಮಹಿಳೆಯರ ಖಾತೆಗೆ (Bank Account) ಹಣ ವರ್ಗಾವಣೆ ಮಾಡಲಾಗುತ್ತಿದೆ.
ಇಷ್ಟಾಗಿಯೂ ಕೆಲವರ ಖಾತೆಗೆ ಹಣ ಇನ್ನು ಬಂದಿಲ್ಲ. ಇದಕ್ಕೆ ಸರ್ಕಾರ ಕೆಲವು ಕಾರಣಗಳನ್ನು ಕೂಡ ಸೂಚಿಸಿದೆ. ಹಾಗಾದ್ರೆ ನಿಮ್ಮ ಖಾತೆಗೆ ಹಣ ಬರುತ್ತಿಲ್ಲ ಎಂದರೆ ಯಾಕೆ ಬರುತ್ತಿಲ್ಲ ಎನ್ನುವ ಬಗ್ಗೆ ಸರ್ಕಾರೂ ಕೆಲವು ಕಾರಣಗಳನ್ನ ಸೂಚಿಸಿದ್ದು ನೀವು ಆ ಕೆಲಸಗಳನ್ನು ಮಾಡಿಕೊಂಡರೆ ತಪ್ಪದೇ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗುತ್ತದೆ.
ಹೊಸ ರೇಷನ್ ಕಾರ್ಡ್ ಅರ್ಜಿಗೆ ಅವಕಾಶ! ಇನ್ನೊಂದೆಡೆ ಅಕ್ರಮ ರೇಷನ್ ಕಾರ್ಡ್ ಕ್ಯಾನ್ಸಲ್
ಖಾತೆಗೆ ಹಣ ಬರುತ್ತಿಲ್ಲ ಯಾಕೆ?
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವವರು ಸಾವಿರ ಮಹಿಳೆಯರಲ್ಲ, ಬದಲಿಗೆ ಕೋಟ್ಯಾಂತರ ಮಹಿಳೆಯರು! ಇಷ್ಟು ಮಹಿಳೆಯರಿಗೆ ಏಕಕಾಲದಲ್ಲಿ ಹಣ ವರ್ಗಾವಣೆ (Money Transfer) ಮಾಡುವುದು ಅಷ್ಟು ಸುಲಭವಲ್ಲ.
ಪ್ರತಿ ತಿಂಗಳು ಕೋಟ್ಯಾಂತರ ರೂಪಾಯಿ ಹಣವನ್ನು ಗೃಹಲಕ್ಷ್ಮಿ ಯೋಜನೆಗಾಗಿ ಸರ್ಕಾರ ಮೀಸಲಿಟ್ಟಿದೆ. ಅದೇ ರೀತಿ ತಿಳಿಸಿರುವ ದಿನಾಂಕದಂದು ಪ್ರತಿಯೊಬ್ಬರ ಖಾತೆಗೂ ಹಣ ವರ್ಗಾವಣೆ (DBT) ಆಗುತ್ತಿದೆ. ಆದರೆ ಕೆಲವು ತಾಂತ್ರಿಕ ದೋಷಗಳು (technical issues) ಹಾಗೂ ಮಹಿಳೆಯರು ತಮ್ಮ ಖಾತೆಗೆ ಸಂಬಂಧಪಟ್ಟಂತೆ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳದೆ ಇರುವುದರಿಂದ ಫಲಾನುಭವಿ ಮಹಿಳೆಯರ ಖಾತೆಗೆ ಹಣ ಬರುತ್ತಿಲ್ಲ.
ಈಗ ನಾವು ತಿಳಿಸಿರುವ ಒಂದೆರಡು ಕೆಲಸಗಳನ್ನು ನೀವು ಸರಿಯಾಗಿ ನಿರ್ವಹಿಸಿದರೆ ನಿಮ್ಮ ಖಾತೆಗೆ ಮಿಸ್ ಆಗದೆ 7ನೇ ಕಂತಿನ ಹಣ ಜಮಾ ಹಾಗೆ ಆಗುತ್ತದೆ. ಹಾಗಾದ್ರೆ ಆ ಕೆಲಸ ಏನು ಹೇಗೆ ಮಾಡಿಕೊಳ್ಳಬೇಕು. ಎಲ್ಲಾ ವಿಚಾರಗಳ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.
ಇನ್ಮುಂದೆ ಗೃಹಲಕ್ಷ್ಮಿ ಹಣ ಇಂತಹ ಮಹಿಳೆಯರ ಖಾತೆಗೆ ಜಮಾ ಆಗೋದಿಲ್ಲ; ಇಲ್ಲಿದೆ ಕಾರಣ
ಬ್ಯಾಂಕ್ ಸಿಬ್ಬಂದಿಗಳೊಂದಿಗೆ ಮಾತುಕತೆ!
ಮೊದಲನೇದಾಗಿ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿಯು ನಿಮ್ಮ ಖಾತೆಗೆ ಹಣ ಬರುತ್ತಿಲ್ಲ ಎಂದಾದರೆ ಮೊದಲನೇದಾಗಿ ಈ ಕೆಲಸ ಮಾಡಿ. ನಿಮ್ಮ ಬ್ಯಾಂಕ್ ಪಾಸ್ ಬುಕ್ (bank passbook) ಅನ್ನು ಬ್ಯಾಂಕ್ ಗೆ ತೆಗೆದುಕೊಂಡು ಹೋಗಿ ಅಲ್ಲಿಯ ಸಿಬ್ಬಂದಿಗಳಿಗೆ ನಿಮ್ಮ ಬ್ಯಾಂಕ್ ಪಾಸ್ ಬುಕ್ ಕೊಟ್ಟು ನಮ್ಮ ಖಾತೆಗೆ NPCI ಮ್ಯಾಪಿಂಗ್ ಹಾಗೂ ಈಕೆ ವೈ ಸಿ (E-KYC) ಆಗಿದೆಯೋ ಇಲ್ಲವೋ ಎನ್ನುವುದನ್ನ ಚೆಕ್ ಮಾಡಿಸಿ.
ಒಂದು ವೇಳೆ ಆಗಿಲ್ಲ ಎಂದರೆ ತಕ್ಷಣ ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿ. ಈಕೆ ವೈ ಸಿ ಹಾಗೂ ಎನ್ ಪಿ ಸಿ ಐ ಮ್ಯಾಪಿಂಗ್ ಮಾಡಿಸಿಕೊಳ್ಳಿ. ಗೃಹಲಕ್ಷ್ಮಿ ಯೋಜನೆಯ ಹಣ ಆಟೋಮೆಟಿಕ್ ಆಗಿ ನಿಮ್ಮ ಖಾತೆಗೆ ಜಮಾ ಆಗುವುದರಿಂದ ನೀವು ಡಿಜಿಟಲ್ ಆಗಿ ಯಾವೆಲ್ಲ ಕೆಲಸವನ್ನು ಮಾಡಿಕೊಳ್ಳಬೇಕೊ ಅದನ್ನ ಮಾಡಿಕೊಂಡರೆ ಮಾತ್ರ ನಿಮ್ಮ ಖಾತೆಗೆ ಹಣ ವರ್ಗಾವಣೆ (Money Deposit) ಆಗುತ್ತದೆ.
ಹೊಸ ರೇಷನ್ ಕಾರ್ಡ್ ವಿತರಣೆ ಬಗ್ಗೆ ಸರ್ಕಾರದ ಅಪ್ಡೇಟ್; ಸಿಗಲಿದೆ ಹೊಸ ಕಾರ್ಡ್!
ಹೊಸದಾಗಿ ಅರ್ಜಿ ಸಲ್ಲಿಸುವುದು!
ಎಷ್ಟು ಮಹಿಳೆಯರು ಬ್ಯಾಂಕ್ ಗೆ ಹೋಗಿ ಈಕೆ ವೈ ಸಿ ಪ್ರಕ್ರಿಯೆ ಮುಗಿಸಿದ್ದಾರೆ. ಅಂತವರಿಗೂ ಕೂಡ ಹಣ ವರ್ಗಾವಣೆ ಆಗಿಲ್ಲ ಇದಕ್ಕೆ ನೀವು ಸಲ್ಲಿಸಿರುವ ಅರ್ಜಿಯಲ್ಲಿ ಯಾವುದಾದರೂ ಸಮಸ್ಯೆ ಆಗಿರುವ ಸಾಧ್ಯತೆ ಇದೆ. ಅಥವಾ ಅರ್ಜಿ ಸಲ್ಲಿಸುವಾಗ ಕೆಲವು ಸರ್ವರ್ ಸಮಸ್ಯೆಗಳಿಂದಾಗಿ ನಿಮ್ಮ ಅರ್ಜಿ ಸರಿಯಾಗಿ ಸಲ್ಲಿಕೆ ಆಗದೆ ಇರಬಹುದು.
ಇಂತಹ ಮಹಿಳೆಯರಿಗೆ ಸರ್ಕಾರ ಮತ್ತೊಮ್ಮೆ ಅವಕಾಶ ನೀಡಿದ್ದು ಗೃಹಲಕ್ಷ್ಮಿ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸಬಹುದು. ಈ ರೀತಿ ಮಾಡುವುದರಿಂದ ಕಳೆದ ಆರು ತಿಂಗಳ ಹಣ ಬರದೆ ಇದ್ದರೂ ಕೂಡ ಮುಂದಿನ ಕಂತಿನ ಅಂದರೆ ಏಳನೇ ಕಂತಿನ ಹಣ ತಪ್ಪದೆ ನಿಮ್ಮ ಖಾತೆಗೆ ಜಮಾ ಆಗುತ್ತದೆ.
ಮಾರ್ಚ್ ತಿಂಗಳ ರೇಷನ್ ಹಾಗೂ ಅನ್ನಭಾಗ್ಯ ಯೋಜನೆ ಹಣ ಜಮಾ! ಚೆಕ್ ಮಾಡಿಕೊಳ್ಳಿ
ಅಂಚೆ ಕಚೇರಿಯಲ್ಲಿ ಖಾತೆ ತೆರೆದು ನೋಡಿ!
ಸಾಕಷ್ಟು ಮಹಿಳೆಯರು ಬ್ಯಾಂಕಿನಲ್ಲಿ ಖಾತೆ ಹೊಂದಿದ್ದಾರೆ. ಆದರೆ ಆ ಬ್ಯಾಂಕ್ ಖಾತೆ ಸಕ್ರಿಯವಾಗಿಲ್ಲ. ಇನ್ನು ಎರಡನೆಯದಾಗಿ ರೇಷನ್ ಕಾರ್ಡ್ (Ration Card) ನಲ್ಲಿ ಯಜಮಾನೀಯ ಹೆಸರನ್ನು ಸೇರಿಸಲಾಗಿದೆ. ಆದರೆ ಬ್ಯಾಂಕ್ ಖಾತೆ ಅವರ ಹೆಸರಿನಲ್ಲಿ ಇಲ್ಲದೆ ಇರಬಹುದು.
ಈ ಸಮಸ್ಯೆಯಿಂದಾಗಿಯೂ ನಿಮ್ಮ ಖಾತೆಗೆ ಹಣ ಬರುವ ಸಾಧ್ಯತೆ ಇಲ್ಲ. ಹಾಗಂತ ಮಾತ್ರಕ್ಕೆ ಟೆನ್ಶನ್ ಬೇಡ, ಹತ್ತಿರದ ಪೋಸ್ಟ್ ಆಫೀಸ್ (post office) ಗೆ ಹೋಗಿ ಹೊಸದಾಗಿ ಒಂದು ಖಾತೆಯನ್ನು ತೆರೆಯಿರಿ. ನಂತರ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಲು ಆರಂಭವಾಗುತ್ತದೆ ನೋಡಿ.
ಅಧಿಕಾರಿಗಳನ್ನು ಸಂಪರ್ಕಿಸುವುದು!
ಇಷ್ಟೆಲ್ಲಾ ಮಾಡಿಯೂ ನಿಮ್ಮ ಖಾತೆಗೆ ಹಣ ಬರುತ್ತಿಲ್ಲ ಎಂದಾದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಗೆ ಭೇಟಿ ನೀಡಿ ಸಿಡಿಪಿಓ ಅಧಿಕಾರಿ (CDPO officers) ಗಳನ್ನು ಭೇಟಿ ಮಾಡಬಹುದು. ಅವರು ನಿಮ್ಮ ಖಾತೆಗೆ ಯಾಕೆ ಹಣ ಬರಲು ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಪರಿಶೀಲಿಸಿ, ಕಾರಣ ಮತ್ತು ಪರಿಹಾರ ಎರಡನ್ನು ಸೂಚಿಸುತ್ತಾರೆ.
ಏಳನೇ ಕಂತಿನ ಹಣ ಜಮಾ ಆಗಲು ಕೆಲವೇ ದಿನಗಳು ಬಾಕಿ!
ಸರ್ಕಾರ 6 ಕಂತಿನ ಹಣವನ್ನ ಮಹಿಳೆಯರ ಖಾತೆಗೆ ಜಮಾ ಮಾಡಿದೆ. ಇಷ್ಟಾಗಿಯೂ ಕೆಲವರ ಖಾತೆಗೆ ಹಣ ಬಂದಿಲ್ಲ. ಇದಕ್ಕಾಗಿ ನಾವು ಮೇಲೆ ತಿಳಿಸಿರುವ ಕೆಲಸಗಳನ್ನು ಮಾಡಿಸಿಕೊಳ್ಳಿ. ನಿಮ್ಮ ಖಾತೆಗೂ ಹಣ ಜಮಾ ಆಗುತ್ತದೆ. ಅದರಲ್ಲಿಯೂ ಮಾರ್ಚ್ ಎರಡು ಮತ್ತು ಮೂರನೇ ವಾರಗಳ ಅಂತರದಲ್ಲಿ 7ನೇ ಕಂತಿನ ಹಣ ಬಿಡುಗಡೆ ಆಗಲಿದ್ದು, ಅಷ್ಟರ ಒಳಗೆ ನೀವು ಈ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿಕೊಂಡರೆ ತಪ್ಪದೇ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗುತ್ತದೆ.
ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರು ಮನೆ ಮನೆಗೆ ಬಂದು ಮಹಿಳೆಯರ ಬಳಿ ಡಾಟಾ ಕಲೆಕ್ಟ್ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ನಿಮ್ಮ ಖಾತೆಗೆ ಹಣ ಬಾರದೆ ಇದ್ದರೆ ಸರಿಯಾಗಿ ವಿಚಾರವನ್ನು ತಿಳಿಸಿ. ನಿಮ್ಮ ಹೆಸರನ್ನು ಅವರು ಸರ್ಕಾರಕ್ಕೆ ಸಲ್ಲಿಸುತ್ತಾರೆ ಹಾಗೂ ಮುಂದಿನ ದಿನಗಳಲ್ಲಿ ನಿಮ್ಮ ಖಾತೆಗೆ ಹಣ ಬರಲು ಯಾವ ಕ್ರಮ ಕೈಗೊಳ್ಳಬೇಕೋ ಅದನ್ನು ಸರ್ಕಾರವೇ ಕೈಗೊಳ್ಳುತ್ತದೆ.
ಗೃಹಲಕ್ಷ್ಮಿ ಯೋಜನೆ 7ನೇ ಕಂತಿನ ಹಣ ಇಂಥವರಿಗೆ ಮಾತ್ರ ಜಮಾ! ಬಿಗ್ ಅಪ್ಡೇಟ್
ಲೋಕಸಭಾ ಚುನಾವಣೆ ಇನ್ನೇನು ಹತ್ತಿರದಲ್ಲಿಯೇ ಇದೆ. ಹಾಗಾಗಿ ಮಹಿಳೆಯರಿಗೆ ನಿರಾಸೆ ಮಾಡಲು ಸರ್ಕಾರ ಸಿದ್ಧವಿಲ್ಲ. ಇದರಿಂದ ಸಾಕಷ್ಟು ಬೇರೆ ಬೇರೆ ಉಪಕ್ರಮಗಳನ್ನ ಸರ್ಕಾರ ಕೈಗೊಂಡಿದ್ದು, ಎಲ್ಲಾ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಮಾಡಲು ಪ್ರಯತ್ನಿಸುತ್ತಿದೆ. ಆದ್ದರಿಂದ ಮಹಿಳೆಯರು ತಮ್ಮ ಖಾತೆಗೆ ಹಣ ಬಾರದೆ ಇದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿದರೆ ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಮಿಸ್ ಆಗದೆ ಖಾತೆಗೆ ಹಣ ವರ್ಗಾವಣೆ ಆಗುತ್ತದೆ.
ಕಳೆದ ತಿಂಗಳಿನ ಹಣ ಮಾತ್ರ ನಿಮ್ಮ ಖಾತೆಗೆ ಬಂದಿಲ್ಲ ಎನ್ನುವುದಾದರೆ ನಿಮಗೆ ಹಣ ಜಮಾ ಆಗಿದ್ದು ನೋಟಿಫಿಕೇಶನ್ ಬಾರದೇ ಇರಬಹುದು ಅಂತಹ ಸಂದರ್ಭದಲ್ಲಿ ಬ್ಯಾಂಕ್ಗೆ ಹೋಗಿ ನಿಮ್ಮ ಪಾಸ್ ಬುಕ್ ಅಪ್ಡೇಟ್ ಮಾಡಿಸಿ. ಹಣ ಜಮಾ ಆಗಿದ್ದರೆ ನಿಮಗೆ ಮಾಹಿತಿ ಲಭ್ಯವಾಗುತ್ತದೆ.
Big update for those who have not received the money of Gruha Lakshmi Yojana
ಹೊಸದಾಗಿ ಅರ್ಜಿ ಸಲ್ಲಿಸುವುದು!
ಏಳನೇ ಕಂತಿನ ಹಣ ಜಮಾ ಆಗಲು ಕೆಲವೇ ದಿನಗಳು ಬಾಕಿ!



