ಹೊಸ ರೇಷನ್ ಕಾರ್ಡ್ ವಿತರಣೆ ಬಗ್ಗೆ ಸರ್ಕಾರದ ಅಪ್ಡೇಟ್; ಸಿಗಲಿದೆ ಹೊಸ ಕಾರ್ಡ್!

Story Highlights

ರಾಜ್ಯ ಸರ್ಕಾರದ ಬಳಿ ಇರುವ ಮೂರು ಲಕ್ಷದಷ್ಟು ರೇಷನ್ ಕಾರ್ಡ್ ಅನ್ನು ರಾಜ್ಯಾದ್ಯಂತ ಸಂಬಂಧ ಪಟ್ಟ ಫಲಾನುಭವಿಗಳಿಗೆ ವಿತರಣೆ ಮಾಡಲಾಗುವುದು.

ರೇಷನ್ ಕಾರ್ಡ್ ವಿತರಣೆ (ration card distribution) ಯ ಬಗ್ಗೆ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸಲ್ಲಿಕೆಯಾಗಿರುವ ಪ್ರತಿಯೊಂದು ಅರ್ಜಿಯನ್ನು ಕೂಲಂಕುಶವಾಗಿ ಪರಿಶೀಲಿಸಿ ನಂತರ ವಿತರಣೆ ಮಾಡಲಾಗುವುದು ಎಂದು ಆಹಾರ ಸಚಿವ ಕೆ ಹೆಚ್ ಮುನಿಯಪ್ಪ (Food minister K.H muniyappa) ತಿಳಿಸಿದ್ದಾರೆ.

ಈಗ ಸಿಕ್ಕಿರುವ ಮಾಹಿತಿಯ ಪ್ರಕಾರ ಮಾರ್ಚ್ 10 ರಿಂದಲೇ ಹೊಸ ರೇಷನ್ ಕಾರ್ಡ್ ವಿತರಣೆ ಆರಂಭವಾಗಲಿದೆ ಹಾಗೂ ಏಪ್ರಿಲ್ 15 ನೇ ತಾರೀಖಿನವರೆಗೂ ಕೂಡ ಹೊಸ ರೇಷನ್ ಕಾರ್ಡ್ ಅರ್ಜಿ ವಿಲೇವಾರಿ ನಡೆಸಲಾಗುವುದು

ಮಾರ್ಚ್ ತಿಂಗಳ ರೇಷನ್ ಹಾಗೂ ಅನ್ನಭಾಗ್ಯ ಯೋಜನೆ ಹಣ ಜಮಾ! ಚೆಕ್ ಮಾಡಿಕೊಳ್ಳಿ

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ! (Application for new ration card)

ಈಗಾಗಲೇ ರಾಜ್ಯ ಸರ್ಕಾರದ ಬಳಿ ಇರುವ ಮೂರು ಲಕ್ಷದಷ್ಟು ರೇಷನ್ ಕಾರ್ಡ್ ಅನ್ನು ರಾಜ್ಯಾದ್ಯಂತ ಸಂಬಂಧ ಪಟ್ಟ ಫಲಾನುಭವಿಗಳಿಗೆ ವಿತರಣೆ ಮಾಡಲಾಗುವುದು. ಇದರ ಜೊತೆಗೆ ಹೊಸದಾಗಿ ಅರ್ಜಿ ಸಲ್ಲಿಸುವ ಅವರಿಗೂ ಕೂಡ ಸರ್ಕಾರ ಅವಕಾಶ ನೀಡಲಿದೆ.

ಏಪ್ರಿಲ್ ಒಂದರಿಂದ ನೀವು ಹೊಸ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು. ಇದಕ್ಕೆ ಬೇಕಾಗಿರುವ ದಾಖಲೆಗಳು ಯಾವವು ಹಾಗೂ ಅರ್ಹತೆಗಳು ಏನು ಎಂಬುದನ್ನು ತಿಳಿದುಕೊಂಡು ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ ನಂತರ ಅರ್ಜಿ ಆಹ್ವಾನಿಸಿದ ತಕ್ಷಣ ಅರ್ಜಿ ಸಲ್ಲಿಸಲು ಸಹಾಯಕವಾಗುತ್ತದೆ.

ಹೊಸ ಪಡಿತರ ಚೀಟಿ ಪಡೆಯಲು ದಾಖಲೆಗಳು (needed documents to apply)

ಆದಾಯ ಪ್ರಮಾಣ ಪತ್ರ
ವಿಳಾಸದ ಪುರಾವೆ
ಆಧಾರ್ ಕಾರ್ಡ್
ಮನೆಯ ಸದಸ್ಯರ ವಿವರ
ಪಾಸ್ಪೋರ್ಟ್ ಅಳತೆಯ ಫೋಟೋ

ಗೃಹಲಕ್ಷ್ಮಿ ಯೋಜನೆ 7ನೇ ಕಂತಿನ ಹಣ ಇಂಥವರಿಗೆ ಮಾತ್ರ ಜಮಾ! ಬಿಗ್ ಅಪ್ಡೇಟ್

BPL Ration Cardರೇಷನ್ ಕಾರ್ಡ್ ವಿತರಣೆ ಹೇಗೆ ಮಾಡಲಾಗುತ್ತದೆ!

ನೀವು ಆನ್ಲೈನ್ ಮೂಲಕ ಅಥವಾ ಆಫ್ಲೈನ್ ನಲ್ಲಿ ಸೇವಾ ಕೇಂದ್ರಕ್ಕೆ ಹೋಗಿ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಅರ್ಜಿ ಸಲ್ಲಿಸಬಹುದು. ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ, ನೀವು ಅರ್ಜಿ ಸಲ್ಲಿಸಿದ ಮಾತ್ರಕ್ಕೆ ನಿಮ್ಮ ಅರ್ಜಿ ಒಪ್ಪಿಗೆ ಆಗುತ್ತದೆ ಎಂದು ಅರ್ಥವಲ್ಲ.

ಅರ್ಜಿ ಸಲ್ಲಿಸಿದ ಬಳಿಕ ಆಹಾರ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಾರೆ. ನೀವು ಬಿಪಿಎಲ್ ಕಾರ್ಡ್ ಕಾಗಿ ಅರ್ಜಿ ಸಲ್ಲಿಸಿದ್ದರೆ ನೀವು ಸರ್ಕಾರದ ಮಾನದಂಡದ ಒಳಗೆ ಬರುತ್ತಿರೋ ಅಥವಾ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಅರ್ಹರೋ ಎನ್ನುವುದನ್ನು ಪರಿಶೀಲಿಸಲಾಗುತ್ತದೆ. ನೀವು ಕೊಟ್ಟಿರುವ ಮಾಹಿತಿ ಹಾಗೂ ದಾಖಲೆಗಳು ಸರಿಯಾಗಿ ಇದ್ದಲ್ಲಿ ಮಾತ್ರ ನಿಮಗೆ ಹೊಸ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುವುದು.

ರೇಷನ್ ಕಾರ್ಡ್ ಇರೋರಿಗೆ ಬಿಗ್ ಅಪ್ಡೇಟ್! ಹೊಸ ಅರ್ಜಿ ಸಲ್ಲಿಸಲು ಕಂಡೀಷನ್

ಹೊಸ ರೇಷನ್ ಕಾರ್ಡ್ ಗಾಗಿ ಹೊಸದಾಗಿ ಮದುವೆ ಆಗಿರುವ ಹಾಗೂ ತಮ್ಮ ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ದಂಪತಿಗಳು ಅರ್ಜಿ ಸಲ್ಲಿಸಬಹುದು. ಒಂದೇ ಕುಟುಂಬದಲ್ಲಿ ಇದ್ದು, ಈಗಾಗಲೇ ರೇಷನ್ ಕಾರ್ಡ್ ಇದ್ದರೆ ಮತ್ತೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.

ರೇಷನ್ ಕಾರ್ಡ್ ಈಗಾಗಲೇ ಪಡೆದುಕೊಂಡಿದ್ದು ಅದನ್ನ ಸರ್ಕಾರ ಈಗಾಗಲೇ ರದ್ದುಪಡಿಸಿದರೆ ಮತ್ತೆ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಎಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಸರ್ಕಾರ ಘೋಷಣೆ ಮಾಡಿಲ್ಲ ಹಾಗಾಗಿ ಯಾವಾಗ ಅರ್ಜಿ ಸಲ್ಲಿಕೆ ಆರಂಭವಾಗುತ್ತದೆ. ಅಂದಿನಿಂದ ನೀವು ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು.

ಉಚಿತ ವಿದ್ಯುತ್! ಗೃಹಜ್ಯೋತಿ ಯೋಜನೆಗೆ ಹೊಸ ಅರ್ಜಿ ಸಲ್ಲಿಸುವುದು ಹೇಗೆ? ತಿಳಿಯಿರಿ

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ

https://ahara.kar.nic.in/ ಆಹಾರ ಇಲಾಖೆಯ ಈ ಅಧಿಕೃತ ವೆಬ್ಸೈಟ್ನ ಲಿಂಕ್ ಮೇಲೆ ಕ್ಲಿಕ್ ಮಾಡಿ. ಆನ್ಲೈನ್ ಸೇವೆಗಳು ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಹೊಸ ಪಡಿತರ ಚೀಟಿ ಗಾಗಿ ಅರ್ಜಿಯನ್ನು ಆಯ್ಕೆ ಇರುತ್ತದೆ ಅದನ್ನು ಟ್ಯಾಪ್ ಮಾಡಿ.

ನಂತರ ಅಗತ್ಯ ಇರುವ ಮಾಹಿತಿ ಮತ್ತು ದಾಖಲೆಗಳನ್ನು ನೀಡಿ ನೀವು ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ನಿಮ್ಮ ಅರ್ಜಿ ಸಲ್ಲಿಕೆಯಾಗಿ ಅದಕ್ಕೆ ಪರವಾನಿಗೆ ಸಿಕ್ಕ ನಂತರ ಹತ್ತಿರದ ರೇಷನ್ ಕಾರ್ಡ್ ಅಥವಾ ನ್ಯಾಯಬೆಲೆ ಅಂಗಡಿಯಲ್ಲಿ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಸಾಧ್ಯವಿದೆ.

Karnataka Government Update on New Ration Card, know the details

Related Stories