ರೇಷನ್ ಕಾರ್ಡ್ ಇರೋರಿಗೆ ಬಿಗ್ ಅಪ್ಡೇಟ್! ಹೊಸ ಅರ್ಜಿ ಸಲ್ಲಿಸಲು ಕಂಡೀಷನ್
ಹೊಸ ರೇಷನ್ ಕಾರ್ಡ್ ಬೇಕು ಅಂದ್ರೆ ಈ ದಾಖಲೆ ಬೇಕೇ ಬೇಕು; ಇಲ್ಲವಾದರೆ ಅರ್ಜಿ ಹಾಕುವುದಕ್ಕೆ ಹೋಗಬೇಡಿ!
ರೇಷನ್ ಕಾರ್ಡ್ ( Ration card) ವಿಲೇವಾರಿ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಿವೆ, ರೇಷನ್ ಕಾರ್ಡ್ ವಿತರಣೆ (Ration Card distribution) ಮಾಡಬೇಕು ಎಂದು ವಿಪಕ್ಷ ನಾಯಕರು ಮಾತ್ರವಲ್ಲದೆ ಕಾಂಗ್ರೆಸ್ ಪಕ್ಷದ ನಾಯಕರು ಕೂಡ ಆಹಾರ ಇಲಾಖೆಯ ಸಚಿವ ಕೆಎಚ್ ಮುನಿಯಪ್ಪ (food minister K.H muniyappa) ಅವರಿಗೆ ಮನವಿ ಮಾಡಿದ್ದಾರೆ
ಈಗ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಸರ್ಕಾರದ ಬಳಿ ಸಂಗ್ರಹವಾಗಿರುವ ಹೊಸ ಪಡಿತರ ಚೀಟಿ ಅರ್ಜಿಗಳನ್ನ ತಕ್ಷಣ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಉಚಿತ ವಿದ್ಯುತ್! ಗೃಹಜ್ಯೋತಿ ಯೋಜನೆಗೆ ಹೊಸ ಅರ್ಜಿ ಸಲ್ಲಿಸುವುದು ಹೇಗೆ? ತಿಳಿಯಿರಿ
ಇನ್ಮುಂದೆ ಟೆನ್ಶನ್ ಬೇಡ, ರೇಷನ್ ಕಾರ್ಡ್ ಸಿಕ್ಕೆ ಸಿಗುತ್ತೆ!
ಸರ್ಕಾರದ ಯಾವುದೇ ಯೋಜನೆಯ ಪ್ರಯೋಜನ ಸಿಗಬೇಕು ಅಂದ್ರು ಆದ್ಯತಾ ಪಡಿತರ ಚೀಟಿಯನ್ನು ಹೊಂದಿರಬೇಕು. ಅಂತಹ ಕುಟುಂಬಗಳನ್ನು ಗುರುತಿಸಿ ಸರ್ಕಾರ ಉಚಿತ ಸೌಲಭ್ಯಗಳನ್ನು ನೀಡುತ್ತದೆ. ಹಾಗಾಗಿ ಈಗಾಗಲೇ ಸರ್ಕಾರಕ್ಕೆ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರು ಅದರ ವಿತರಣೆಗಾಗಿ ಕಾಯುತ್ತಿದ್ದಾರೆ.
ಸರ್ಕಾರ ಗುಡ್ ನ್ಯೂಸ್ ನೀಡಿದ್ದು ಮಾರ್ಚ್ 31ರ ಒಳಗೆ ಸರ್ಕಾರಕ್ಕೆ ಸಲ್ಲಿಕೆ ಆಗಿರುವ 2,96,986 ಅರ್ಜಿಗಳನ್ನು ಪರಿಶೀಲಿಸಿ ಅರ್ಹತೆಯ ಮೇರೆಗೆ ಬಿಪಿಎಲ್ ಮತ್ತು ಎಪಿಎಲ್ ಎಂದು ವಿಂಗಡಣೆ ಮಾಡಿ ಅಂತವರಿಗೆ ಸಂಬಂಧಪಟ್ಟ ರೇಷನ್ ಕಾರ್ಡ್ ವಿತರಣೆ ಮಾಡಲಿದೆ ಏಪ್ರಿಲ್ ಒಂದರಿಂದ ಬಹುತೇಕ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಅಥವಾ ಸೇವಾ ಕೇಂದ್ರಗಳಲ್ಲಿ ನೀವು ಪಡಿತರ ಚೀಟಿಯನ್ನು ಪಡೆದುಕೊಳ್ಳಬಹುದು.
ಈ ಮಹಿಳೆಯರಿಗೆ ಜಮಾ ಆಗಿಲ್ಲ ಗೃಹಲಕ್ಷ್ಮಿ 6ನೇ ಮತ್ತು 7ನೇ ಕಂತಿನ ಹಣ! ಕಾರಣ ಇಲ್ಲಿದೆ
ಹೊಸ ಪಡಿತರ ಚೀಟಿಗೂ ಅವಕಾಶ! ಅರ್ಹತೆಗಳು ಏನು?
ಹೌದು, ಈಗಾಗಲೇ ಸಲ್ಲಿಕೆ ಆಗಿರುವ ಅರ್ಜಿಗಳನ್ನ ವಿಲೇವಾರಿ ಮಾಡುವುದು ಮಾತ್ರವಲ್ಲದೆ ಹೊಸ ಪಡಿತರ ಚೀಟಿ ಪಡೆದುಕೊಳ್ಳುವುದಕ್ಕೆ ಅರ್ಜಿ ಸಲ್ಲಿಸಲು ಕೂಡ ಸರ್ಕಾರ ಅವಕಾಶ ಕೊಡಲಿದೆ.
ಈ ಅರ್ಜಿಗಳನ್ನ ಬಹಳ ಬೇಗ ಪರಿಶೀಲನೆ ಮಾಡಿ ವಿತರಣೆ ಮಾಡುವುದಾಗಿ ಸಚಿವ ಕೆಎಚ್ ಮುನಿಯಪ್ಪ ತಿಳಿಸಿದ್ದಾರೆ. ಹಾಗಾದ್ರೆ ಹೊಸ ಪಡಿತರ ಚೀಟಿ ಪಡೆದುಕೊಳ್ಳುವುದಕ್ಕೆ ಇರುವ ಅರ್ಹತೆಗಳೇನು ಹಾಗೂ ಬೇಕಾಗಿರುವ ದಾಖಲೆಗಳು ಏನು ಎಂಬುದನ್ನು ನೋಡೋಣ.
ಮಾರ್ಚ್ ತಿಂಗಳ ರದ್ದಾದ ಬಿಪಿಎಲ್ ಕಾರ್ಡ್ ಲಿಸ್ಟ್ ಬಿಡುಗಡೆ! ಯಾವುದೇ ಬೆನಿಫಿಟ್ ಸಿಗೋಲ್ಲ
ಬೇಕಾಗಿರುವ ದಾಖಲೆಗಳು!
ಆಧಾರ್ ಕಾರ್ಡ್ (Aadhaar Card)
ವೋಟರ್ ಐಡಿ (Voter ID)
ಡ್ರೈವಿಂಗ್ ಲೈಸನ್ಸ್
ಆದಾಯ ಪ್ರಮಾಣ ಪತ್ರ (Income Certificate)
ವಿಳಾಸ ಪ್ರಮಾಣ ಪತ್ರ
ಸ್ವಯಂ ಘೋಷಣಾ ಪ್ರಮಾಣ ಪತ್ರ
ಪಾಸ್ ಪೋರ್ಟ್ ಅಳತೆಯ ಫೋಟೋ
ಕುಟುಂಬ ಸದಸ್ಯರ ಬಗ್ಗೆ ಮಾಹಿತಿ
ಮೊಬೈಲ್ ಸಂಖ್ಯೆ ( ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವುದು ಕಡ್ಡಾಯ)
ಮಾರ್ಚ್ ತಿಂಗಳ ಅನ್ನಭಾಗ್ಯ ಯೋಜನೆ ಹಣ ಇಂತಹವರಿಗೆ ಮಾತ್ರ ಜಮೆ ಆಗಲಿದೆ!
ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು!
*ಭಾರತೀಯ ನಾಗರಿಕರಾಗಿದ್ದು ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು.
*ಈಗಾಗಲೇ ಪಡಿತರ ಚೀಟಿ ಹೊಂದಿದ್ದರೆ ಅಥವಾ ಪಡಿತರ ಚೀಟಿ ಕ್ಯಾನ್ಸಲ್ ಆಗಿದ್ದರೆ ಅಂತವರು ಮತ್ತೆ ಅರ್ಜಿ ಸಲ್ಲಿಸುವಂತಿಲ್ಲ.
*ನವ ದಂಪತಿಗಳು ಪ್ರತ್ಯೇಕವಾಗಿ ಜೀವನ ನಡೆಸುವುದಾದರೆ ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು.
*ಈಗಿರುವ ಕುಟುಂಬದಿಂದ ದೂರವಾಗಿ ವಾಸಿಸುವವರು ಅರ್ಜಿ ಸಲ್ಲಿಸಬಹುದು
*ನೀವು ಆದ್ಯತಾ ಪಡಿತರ ಚೀಟಿ ಗಾಗಿ ಅರ್ಜಿ ಸಲ್ಲಿಸಿದರು ಕೂಡ ನಿಮ್ಮ ಆದಾಯದ ಮೇರೆಗೆ ನಿಮಗೆ ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್ ಅನ್ನು ವಿತರಣೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
https://ahara.kar.nic.in/ ಆಹಾರ ಇಲಾಖೆಯ ಈ ವೆಬ್ಸೈಟ್ಗೆ ಹೋಗಿ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದು. ಆದರೆ ಸದ್ಯ ನಿಮಗೆ ಈ ಸೈಟ್ ತಾಂತ್ರಿಕ ಸಮಸ್ಯೆಗಳಿಂದ ಸರಿಯಾಗಿ ತೆರೆದುಕೊಳ್ಳದೆ ಇರಬಹುದು. ಅಂತಹ ಸಂದರ್ಭದಲ್ಲಿ ಏಪ್ರಿಲ್ 1ನೇ ತಾರೀಖಿನಿಂದ, ಸರ್ಕಾರ ಸೂಚಿಸಿದ ಸರ್ಕಾರಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
ಗೃಹಜ್ಯೋತಿ ಫ್ರೀ ವಿದ್ಯುತ್! ರಾತ್ರೋರಾತ್ರಿ ಸರ್ಕಾರದ ಮತ್ತೊಂದು ಮಹತ್ವದ ನಿರ್ಧಾರ
ರೇಷನ್ ಕಾರ್ಡ್ ಕ್ಯಾನ್ಸಲ್ ಆಗಿದ್ರೆ ಮತ್ತೆ ಅರ್ಜಿ ಸಲ್ಲಿಸುವಂತಿಲ್ಲ.
ಸರ್ಕಾರ ಈಗಾಗಲೇ ತಿಳಿಸಿರುವಂತೆ ಲಕ್ಷಾಂತರ ಪಡಿತರ ಚೀಟಿ ರದ್ದುಪಡಿಸಲಾಗಿದೆ ಅಕ್ರಮವಾಗಿ ಪಡಿತರ ಚೀಟಿ ಹೊಂದಿದ್ದರೆ ಅಥವಾ ಸರಕಾರದ ಮಾನದಂಡಗಳನ್ನು ನಿರ್ಲಕ್ಷಿಸಿ, ಬಿಪಿಎಲ್ ಕಾರ್ಡ್ ಹೊಂದಿದ್ದು ಸರ್ಕಾರದ ಪ್ರಯೋಜನ ಪಡೆದುಕೊಳ್ಳುತ್ತಿದ್ದರೆ, ಬಿಪಿಎಲ್ ಕಾರ್ಡ್ ಹೊಂದಿದ್ದರೂ ಕೂಡ ಕಳೆದ ಆರು ತಿಂಗಳಿನಿಂದ ಪಡೆದುಕೊಳ್ಳದೆ ಸರ್ಕಾರದ ಇತರ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಅಂತಹ ಕುಟುಂಬದ ರೇಷನ್ ಕಾರ್ಡ್ ರದ್ದುಪಡಿಸಲಾಗಿದೆ ಹಾಗಾಗಿ ಅಂತವರು ಅರ್ಜಿ ಸಲ್ಲಿಸುವಂತಿಲ್ಲ.
ಆಹಾರ ಇಲಾಖೆಯ https://ahara.kar.nic.in/ ವೆಬ್ಸೈಟ್ನಲ್ಲಿ ರದ್ದುಪಡಿಸಲಾಗಿರುವ ಅಥವಾ ತಡೆಹಿಡಿಯಲಾಗಿರುವ ರೇಷನ್ ಕಾರ್ಡ್ ಲಿಸ್ಟ್ ಚೆಕ್ ಮಾಡಿ ನಿಮ್ಮ ಹೆಸರು ಇದಿಯಾ ನೋಡಿ ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಿದ್ದರೆ ಮತ್ತೆ ಅರ್ಜಿ ಸಲ್ಲಿಸುವಂತಿಲ್ಲ.
Big Update for Ration Card Holders, Condition for filing fresh application