Karnataka NewsBangalore News

ಮಾರ್ಚ್ ತಿಂಗಳ ರದ್ದಾದ ಬಿಪಿಎಲ್ ಕಾರ್ಡ್ ಲಿಸ್ಟ್ ಬಿಡುಗಡೆ! ಯಾವುದೇ ಬೆನಿಫಿಟ್ ಸಿಗೋಲ್ಲ

ಬಡತನ ರೇಖೆಗಿಂತ ಕೆಳಗಿರುವವರಿಗೆ (Below poverty line) ಪಡಿತರ ವಸ್ತುಗಳನ್ನ ಪಡೆದುಕೊಳ್ಳಲು ಬಿಪಿಎಲ್ ರೇಷನ್ ಕಾರ್ಡ್ (BPL Ration card) ವಿತರಣೆ ಮಾಡಲಾಗಿದೆ.

ದೇಶದಲ್ಲಿ ಯಾವುದೇ ಒಬ್ಬ ವ್ಯಕ್ತಿ ಕೂಡ ಹಸಿವಿನಿಂದ ಸಾಯಬಾರದು ಎನ್ನುವ ಕಾರಣಕ್ಕೆ ಉಚಿತವಾಗಿ ಪಡಿತರ ವಸ್ತುಗಳನ್ನ ನೀಡುವ ಸಲುವಾಗಿ ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ (AAY card) ವಿತರಣೆ ಮಾಡಲಾಗಿದೆ

BPL Ration Card

ಇದರ ಜೊತೆಗೆ ಸರ್ಕಾರದ ಕೆಲವು ಪ್ರಯೋಜನಗಳನ್ನು ಪಡೆದುಕೊಳ್ಳಲು ಹಾಗೂ ಪ್ರಮುಖ ಗುರುತಿನ ಚೀಟಿಯಾಗಿ ಎಪಿಎಲ್ ಕಾರ್ಡ್ ಅನ್ನು ಕೂಡ ವಿತರಣೆ ಮಾಡಲಾಗುತ್ತದೆ.

ಮಾರ್ಚ್ ತಿಂಗಳ ಅನ್ನಭಾಗ್ಯ ಯೋಜನೆ ಹಣ ಇಂತಹವರಿಗೆ ಮಾತ್ರ ಜಮೆ ಆಗಲಿದೆ!

ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸಾಕಷ್ಟು ಸರ್ಕಾರದಿಂದ ಬೆನಿಫಿಟ್ ಸಿಗುತ್ತೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಬಿಪಿಎಲ್ ಕಾರ್ಡ್ ಹೊಂದಿರುವವರು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.

ನಮ್ಮ ರಾಜ್ಯದಲ್ಲಿ ಸುಮಾರು 1.27 ಕೋಟಿ ಬಿಪಿಎಲ್ ಕಾರ್ಡ್ ಹೋಲ್ಡರ್ ಇದ್ದಾರೆ. 4.36 ಕೋಟಿ ಕುಟುಂಬಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದೆ. ದೂರದೃಷ್ಟವಶಾತ್ ಇಲ್ಲಿಯವರೆಗೆ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್ ಅನ್ನು ಸರ್ಕಾರ ರದ್ದುಪಡಿಸಿದೆ!

ಗೃಹಜ್ಯೋತಿ ಫ್ರೀ ವಿದ್ಯುತ್! ರಾತ್ರೋರಾತ್ರಿ ಸರ್ಕಾರದ ಮತ್ತೊಂದು ಮಹತ್ವದ ನಿರ್ಧಾರ

ಈ ಕಾರಣಕ್ಕೆ ಬಿಪಿಎಲ್ ಕಾರ್ಡ್ ರದ್ದು!

BPL Ration Cardಸಾರ್ವಜನಿಕರ ಅನುಕೂಲಕ್ಕಾಗಿ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗಿದೆ ಆದರೆ ಇದರ ದುರುಪಯೋಗಪಡಿಸಿಕೊಳ್ಳುತ್ತಿರುವವರೇ ಹೆಚ್ಚು. ನಿಜಕ್ಕೂ ಅನುಕೂಲ ಇರುವವರು ಹಾಗೂ ಬಿಪಿಎಲ್ ಕಾರ್ಡ್ ಅಗತ್ಯವೇ ಇಲ್ಲದೆ ಇರುವವರು ಕೂಡ ಇಂದು ಅಕ್ರಮವಾಗಿ ಬಿಪಿಎಲ್ ಕಾರ್ಡ್ ಬಳಸಿಕೊಳ್ಳುತ್ತಿದ್ದಾರೆ.

ಕಳೆದ ಆರು ತಿಂಗಳಿನಿಂದ ಬಿಪಿಎಲ್ ಕಾರ್ಡ್ ಹೊಂದಿರುವ ಲಕ್ಷಾಂತರ ಜನ ಪಡಿತರ ವಸ್ತುಗಳನ್ನ ಪಡೆದುಕೊಳ್ಳುತ್ತಿಲ್ಲ. ನ್ಯಾಯ ಬೆಲೆ ಅಂಗಡಿಗೆ ಕಳೆದ ಆರು ತಿಂಗಳಿನಿಂದ ಭೇಟಿ ಕೊಟ್ಟಿಲ್ಲ. ಆದರೆ ಸರ್ಕಾರದಿಂದ ಸಿಗುವ ಇತರ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇತ್ತೀಚಿಗೆ ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಯ ಪ್ರತಿಫಲ ಕೂಡ ಈ ಅಕ್ರಮ ಬಿಪಿಎಲ್ ಹೋಲ್ಡರ್ ಗಳಿಗೆ ಸಿಗುತ್ತಿದೆ.

ಗೃಹಲಕ್ಷ್ಮಿ 7ನೇ ಕಂತಿನ ಬಗ್ಗೆ ಬೆಳ್ಳಂಬೆಳಗ್ಗೆ ಬಿಗ್ ಅಪ್ಡೇಟ್! ಇಲ್ಲಿದೆ ಮಹತ್ವದ ಮಾಹಿತಿ

ಇದನ್ನು ಕೂಲಂಕುಶವಾಗಿ ಪರಿಶೀಲಿಸಿರುವ ಸರ್ಕಾರ ಕಳೆದ ವರ್ಷ ಸುಮಾರು ನಾಲ್ಕು ಲಕ್ಷ ಅಕ್ರಮ ಬಿಪಿಎಲ್ ಕಾರ್ಡ್ ರದ್ದುಪಡಿ ಮಾಡಿದೆ. ಈ ಕಾರ್ಯ ಈ ವರ್ಷವೂ ಕೂಡ ಮುಂದುವರೆದಿದ್ದು ಈಗಾಗಲೇ ಸಾಕಷ್ಟು ಜನ ಬಿಪಿಎಲ್ ಪಡಿತರ ಚೀಟಿಯನ್ನು ಕಳೆದುಕೊಂಡಿದ್ದಾರೆ.

ರೇಷನ್ ಕಾರ್ಡ್ ರದ್ದಾಗಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಹೇಗೆ?

* ಮೊದಲಿಗೆ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in/Home/EServices ಗೆ ಭೇಟಿ ನೀಡಿ

* ಎಡ ಭಾಗದಲ್ಲಿ ಮೂರು ಲೈನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ

* ಅಲ್ಲಿ ಇ – ಪಡಿತರ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ.

* ಮುಂದೆ ರದ್ದುಪಡಿಸಲಾದ ಅಥವಾ ತಡೆಹಿಡಿಯಲಾದ ರೇಷನ್ ಕಾರ್ಡ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

* ಈಗ ತೆರೆದುಕೊಳ್ಳುವ ಹೊಸ ಪುಟದಲ್ಲಿ ನಿಮ್ಮ ಜಿಲ್ಲೆ, ತಾಲೂಕು ಆಯ್ಕೆ ಮಾಡಿ ಭರ್ತಿ ಮಾಡಿದ್ರೆ ಕ್ಯಾನ್ಸಲ್ ಆಗಿರುವ ಪಡಿತರ ಚೀಟಿ ಲಿಸ್ಟ್ ತೆರೆದುಕೊಳ್ಳುತ್ತದೆ. ಇದರಲ್ಲಿ ನಿಮ್ಮ ಹೆಸರು ಕೂಡ ಇದ್ರೆ ಇನ್ನು ಮುಂದೆ ಗ್ಯಾರಂಟಿ ಯೋಜನೆಯ ಪ್ರಯೋಜನಗಳು ನಿಮಗೆ ಸಿಗುವುದಿಲ್ಲ.

ಹೊಸ ರೇಷನ್ ಕಾರ್ಡ್ ಪಡೆಯಲು ಈ ದಾಖಲೆಗಳು ಕಡ್ಡಾಯ! ಕೂಡಲೇ ಸಿದ್ದಪಡಿಸಿಕೊಳ್ಳಿ

Canceled BPL card list released for March, Can’t get any benefit

Our Whatsapp Channel is Live Now 👇

Whatsapp Channel

Related Stories