ಗೃಹಜ್ಯೋತಿ ಫ್ರೀ ವಿದ್ಯುತ್! ರಾತ್ರೋರಾತ್ರಿ ಸರ್ಕಾರದ ಮತ್ತೊಂದು ಮಹತ್ವದ ನಿರ್ಧಾರ
ವಿದ್ಯುತ್ ವಿತರಣೆ ಬಗ್ಗೆ ಸರ್ಕಾರದ ಮತ್ತೊಂದು ಮಹತ್ವದ ನಿರ್ಧಾರ; ತಟ್ಟಬಹುದಾ ಲೋಡ್ ಶೆಡ್ಡಿಂಗ್ ಸಮಸ್ಯೆ!
ವಿದ್ಯುತ್ (Electricity) ಬಳಕೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಿಗೆ ಆಗುತ್ತದೆ, ವಿದ್ಯುತ್ ಬೇಡಿಕೆಯು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರ ಬೇಡಿಕೆಗೆ ತಕ್ಕಂತೆ ವಿದ್ಯುತ್ ಒದಗಿಸಿ ಕೊಡುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಅದರಲ್ಲೂ ಉಚಿತ ವಿದ್ಯುತ್ ಅನ್ನು ಗೃಹಜ್ಯೋತಿ ಯೋಜನೆಯಡಿಯಲ್ಲಿ ನೀಡುತ್ತಿರುವುದರಿಂದ ಸರಕಾರಕ್ಕೆ ಆರ್ಥಿಕ ಹೊರೆಯೂ ಜಾಸ್ತಿಯಾಗಿದೆ.
ಆದರೆ ಈ ಎಲ್ಲಾ ಸಮಸ್ಯೆಗಳನ್ನು ನಿಭಾಯಿಸುತ್ತೇವೆ ಹೊರತು ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ (K.J George) ತಿಳಿಸಿದ್ದಾರೆ. ರಾಜ್ಯದಲ್ಲಿ ವಿದ್ಯುತ್ ಬಿಕ್ಕಟ್ಟು ಉಂಟಾಗಿದೆ. ಅನಿಯಮಿತ ಪವರ್ ಕಟ್, ಲೋಡ್ ಶೆಡ್ಡಿಂಗ್ (load shedding) ಭಯ ಜನರನ್ನು ಕಾಡುತ್ತಿರುವ ಹಿನ್ನೆಲೆಯಲ್ಲಿ ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಗೃಹಲಕ್ಷ್ಮಿ 7ನೇ ಕಂತಿನ ಬಗ್ಗೆ ಬೆಳ್ಳಂಬೆಳಗ್ಗೆ ಬಿಗ್ ಅಪ್ಡೇಟ್! ಇಲ್ಲಿದೆ ಮಹತ್ವದ ಮಾಹಿತಿ
ವಿದ್ಯುತ್ ಸಾಲ ಪಡೆದುಕೊಳ್ಳಲು ಸರ್ಕಾರದ ನಿರ್ಧಾರ!
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ವಿದ್ಯುತ್ ಬಳಕೆ ಅನಿಯಮಿತವಾಗಿ ಸಾಗಿದೆ. ಇಡೀ ಬೇಸಿಗೆ ಕಾಲದಲ್ಲಿ ಬಳಕೆ ಮಾಡುವಷ್ಟು ವಿದ್ಯುತ್ ಅನ್ನು ಆಗಸ್ಟ್ ಒಂದೇ ತಿಂಗಳಿನಲ್ಲಿ ಬಳಕೆ ಮಾಡಲಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ಸುಮಾರು 15 ಸಾವಿರ ಮೆಗಾ ವ್ಯಾಟ್ಗಿಂತಲೂ ಹೆಚ್ಚಿನ ವಿದ್ಯುತ್ ಬೇಡಿಕೆ ಇದೆ.
ಬಿಸಿ ದಗೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮತ್ತು ಮಳೆ ಇಲ್ಲದೆ ಕೃಷಿ ಭೂಮಿ ಒಣಗುತ್ತಿರುವ ಹಿನ್ನೆಲೆಯಲ್ಲಿ ರೈತರು ಕೂಡ ವಿದ್ಯುತ್ ಬಳಸಿಕೊಂಡು ನೀರಾವರಿ ಕೆಲಸ ಮಾಡಬೇಕಿದೆ. ಇದೆಲ್ಲ ಕಾರಣಕ್ಕೆ ವಿದ್ಯುತ್ ಬಳಕೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ. ಹಾಗಾಗಿ ಸರ್ಕಾರ ಇನ್ನು ಮುಂದೆ ವಿದ್ಯುತ್ ಅನ್ನು ಸರಿಯಾಗಿ ನೀಡುತ್ತದೆಯೋ ಇಲ್ವೋ ಎನ್ನುವ ಸಮಸ್ಯೆ ಜನರನ್ನು ಕಾಡಿದೆ.
ಹೊಸ ರೇಷನ್ ಕಾರ್ಡ್ ಪಡೆಯಲು ಈ ದಾಖಲೆಗಳು ಕಡ್ಡಾಯ! ಕೂಡಲೇ ಸಿದ್ದಪಡಿಸಿಕೊಳ್ಳಿ
ಲೋಡ್ ಶೆಡ್ಡಿಂಗ್ ಭಯ ಬೇಡ?
ಮಾರ್ಚ್ ತಿಂಗಳು ನಡೆಯುತ್ತಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಇದು ಪರೀಕ್ಷೆಯ ಸಮಯ ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗುವಂತೆ ವಿದ್ಯುತ್ ನೀಡಬೇಕು. ಒಂದು ವೇಳೆ ವಿದ್ಯುತ್ ಕಡಿತಗೊಂಡರೆ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತದೆ.
ಆದರೆ ಸರ್ಕಾರ ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಿದ್ದು ಹೊರ ರಾಜ್ಯದಿಂದ ವಿದ್ಯುತ್ ಎರವಲು ಪಡೆಯುತ್ತೇವೆ ಹೊರತು ಯಾವುದೇ ಕಾರಣಕ್ಕೂ ರಾಜ್ಯದ ಜನತೆಗೆ ವಿದ್ಯುತ್ ವಿಚಾರದಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ. ಅನಿಯಮಿತ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂದು ತಿಳಿಸಲಾಗಿದೆ.
ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆ ಹಣ ಬಂದಿಲ್ವಾ? ಕಾರಣ ಇಲ್ಲಿದೆ
ಟೆಂಡರ್ ಕರೆಯಲು ಸೂಚನೆ!
ರಾಜ್ಯ ಸರ್ಕಾರ ಈಗಾಗಲೇ ವಿದ್ಯುತ್ ಅಭಾವದ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದು ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗೆ 2 ಲಕ್ಷ ಟನ್ ಕಲ್ಲಿದ್ದಲು ಒದಗಿಸಲು ವಿನಂತಿಸಿಕೊಳ್ಳಲಾಗಿದೆ. ಇದಕ್ಕೆ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದೆ.
ಇದರ ಜೊತೆಗೆ ಉತ್ತರ ಪ್ರದೇಶ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, 300 ರಿಂದ 600 ಮೆಗಾ ವ್ಯಾಟ್ ವಿದ್ಯುತ್ ಒದಗಿಸಲು ಉತ್ತರ ಪ್ರದೇಶ ಸರ್ಕಾರ ಒಪ್ಪಿಕೊಂಡಿದೆ. ಇದೇ ರೀತಿ ರಾಜಸ್ಥಾನ ಸರ್ಕಾರದೊಂದಿಗೂ ಕೂಡ ಒಪ್ಪಂದ ಮಾಡಿಕೊಳ್ಳಲಾಗಿದೆ.
ರಾಜ್ಯದಲ್ಲಿ ವಾಸಿಸುವ ಯಾವುದೇ ಜನರಿಗೆ ವಿದ್ಯುತ್ ಅಭಾವ ಉಂಟಾಗಬಾರದು ಎಂದು ಬೆಸ್ಕಾಂ, ಎಸ್ಕಾಂ ಮೊದಲಾದ ವಿದ್ಯುತ್ ಸರಬರಾಜು ಕಂಪನಿಗಳಿಗೆ ತಿಳಿಸಲಾಗಿದೆ. ಇದರ ಜೊತೆಗೆ ವಿದ್ಯುತ್ ಖರೀದಿಯ ಟೆಂಡರ್ ಅನ್ನು ಅಲ್ಪಾವಧಿಗೆ ಕರೆಯಲಾಗಿದೆ.
ಇಲ್ಲಿವರೆಗೂ 1 ರೂಪಾಯಿ ಗೃಹಲಕ್ಷ್ಮಿ ಹಣ ಸಿಗಲೇ ಇಲ್ಲ ಅನ್ನೋರಿಗೆ ಬಿಗ್ ಅಪ್ಡೇಟ್
ರಾಜ್ಯದಲ್ಲಿ 270 ರಿಂದ 280 ಮಿಲಿಯನ್ ಯೂನಿಟ್ ವರೆಗೆ ವಿದ್ಯುತ್ ಬೇಡಿಕೆ ಇದೆ ಆದರೆ ಸುಮಾರು 30 ರಿಂದ 40 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ. ಇದನ್ನು ಸರಿದೂಗಿಸುವುದಕ್ಕೆ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾಡಬೇಕು. ಒತ್ತಿನಲ್ಲಿ ಸರ್ಕಾರ ಒಂದಲ್ಲ ಒಂದು ಕ್ರಮ ಕೈಗೊಳ್ಳುವುದರ ಮೂಲಕ ರಾಜ್ಯದಲ್ಲಿ ಇರುವ ಜನರಿಗೆ ವಿದ್ಯುತ್ ಸಮಸ್ಯೆ ಆಗದಂತೆ ಗಮನ ಹರಿಸುತ್ತೇವೆ ಎನ್ನುವ ಭರವಸೆ ನೀಡಿದೆ.
Gruha Jyothi Free Electricity, Another important decision of the government