ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆ ಹಣ ಬಂದಿಲ್ವಾ? ಕಾರಣ ಇಲ್ಲಿದೆ
ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ಬಾರದೆ ಇರಲು ಬ್ಯಾಂಕ್ ಖಾತೆಗೆ ಎನ್‌ಪಿಸಿಐ ಮ್ಯಾಪಿಂಗ್ ಆಗದೆ ಇರುವುದು ಪ್ರಮುಖ ಕಾರಣವಾಗಿರುತ್ತದೆ.
ಇದೀಗ ಪ್ರತಿ ತಿಂಗಳು 15ನೇ ತಾರೀಖಿನಿಂದ 20ನೇ ತಾರೀಕಿನವರೆಗೂ ಜನ ತುಂಬಾನೇ ಅಲರ್ಟ್ ಆಗಿರುತ್ತಾರೆ. ತಮ್ಮ ಖಾತೆಗೆ (Bank Account) ಹಣ ಬಂದಿದ್ಯ ಅಂತ ಮತ್ತೆ ಮತ್ತೆ ಚೆಕ್ ಮಾಡುತ್ತಾರೆ.
ಇದಕ್ಕೆಲ್ಲಾ ಮುಖ್ಯವಾದ ಕಾರಣ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು. ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಅಡಿಯಲ್ಲಿ 2000ಗಳನ್ನು ಮಹಿಳೆಯರು ಪಡೆದುಕೊಳ್ಳುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯ (Annabhagya Yojana) ಅಡಿಯಲ್ಲಿ ಕನಿಷ್ಠ 170 ಫಲಾನುಭವಿ ಕುಟುಂಬದ ಖಾತೆಯನ್ನು ತಲುಪುತ್ತಿದೆ.
ಮೊಬೈಲ್ ಮೂಲಕವೇ ನಿಮ್ಮ ಜಮೀನು, ಆಸ್ತಿ ಪಹಣಿಗೆ ಆಧಾರ್ ಜೋಡಣೆ ಮಾಡಿಕೊಳ್ಳಿ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಇಂದು ಕೋಟ್ಯಂತರ ಕುಟುಂಬಗಳು ಪಡೆದುಕೊಳ್ಳುತ್ತಿವೆ ಎಂದು ಹೇಳಬಹುದು. ಇಷ್ಟಾಗಿಯೂ ಒಂದಷ್ಟು ಜನರ ಅರ್ಜಿಗಳು ರಿಜೆಕ್ಟ್ ಆಗಿವೆ.
ಒಂದಷ್ಟು ಜನರಿಗೆ ಸರ್ಕಾರದ ಯಾವುದೇ ಪ್ರಯೋಜನಗಳು ಕೂಡ ಸಿಗುತ್ತಿಲ್ಲ. ಹಾಗಾದ್ರೆ ಇದನ್ನ ನೀವು ಪರಿಶೀಲಿಸುವುದು ಹೇಗೆ ಎಂಬುದನ್ನು ನೋಡೋಣ.
ನಿಮ್ಮ ಅರ್ಜಿ ಸ್ಥಿತಿಯನ್ನು ಈ ರೀತಿ ಚೆಕ್ ಮಾಡಿ
* ಮೊದಲು https://mahitikanaja.karnataka.gov.in/ ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿರುವ ಈ ಮಾಹಿತಿ ಕಣಜ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
* ನಂತರ ಪಡಿತರ ಚೀಟಿ ಪ್ರತ್ಯೇಕ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
* ಈಗ ನೀವು ನಿಮ್ಮ ಪಡಿತರ ಚೀಟಿಯ ಸಂಖ್ಯೆ ಮತ್ತು ಜಿಲ್ಲೆ ಆಯ್ಕೆ ಮಾಡಿ ಸಬ್ಮಿಟ್ ಮಾಡಿದರೆ, ನಿಮ್ಮ ರೇಷನ್ ಕಾರ್ಡ್ ಆಕ್ಟಿವ್ ಆಗಿದ್ಯೋ ಇಲ್ವೋ ಎನ್ನುವುದನ್ನು ತಿಳಿದುಕೊಳ್ಳಬಹುದು.
* ರೇಷನ್ ಕಾರ್ಡ್ ಎನ್ನುವುದು ಗ್ಯಾರಂಟಿ ಯೋಜನೆಗಳಿಗೆ ಬಹಳ ಮುಖ್ಯವಾಗಿರುವ ದಾಖಲೆ ಆಗಿರುವ ಹಿನ್ನೆಲೆಯಲ್ಲಿ ರೇಷನ್ ಕಾರ್ಡ್ ಆಕ್ಟಿವ್ ಇದ್ರೆ ತಪ್ಪದೆ ನಿಮ್ಮ ಖಾತೆಗೆ ಡಿ ಬಿ ಟಿ ಮಾಡಲಾಗುವುದು.
ಇಲ್ಲಿವರೆಗೂ 1 ರೂಪಾಯಿ ಗೃಹಲಕ್ಷ್ಮಿ ಹಣ ಸಿಗಲೇ ಇಲ್ಲ ಅನ್ನೋರಿಗೆ ಬಿಗ್ ಅಪ್ಡೇಟ್
ಗೃಹಲಕ್ಷ್ಮಿ ಸ್ಟೇಟಸ್ ತಿಳಿದುಕೊಳ್ಳಿ!
* ಇದೇ ಮಾಹಿತಿ ಕಣಜ ವೆಬ್ಸೈಟ್ ನಲ್ಲಿ ಗ್ಯಾರಂಟಿ ಯೋಜನೆಗಳು ಎನ್ನುವ ಆಯ್ಕೆ ಕಾಣಿಸುತ್ತಿದೆ ಅದರ ಮೇಲೆ ಕ್ಲಿಕ್ ಮಾಡಿ.
* ಇಲ್ಲಿ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಚೆಕ್ ಮಾಡಲು ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ.
* ಈಗ ನೀವು ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಿದ ದಿನಾಂಕ, ಸ್ಟೇಟಸ್, ಅಪ್ರೂವ್ ಇಲ್ಲವೋ ಎಲ್ಲ ಮಾಹಿತಿಯನ್ನು ತಿಳಿಯಬಹುದು.
* ಇಲ್ಲಿ ಅಪ್ಲಿಕೇಶನ್ ಅಪ್ರೂವ್ಡ್ ಎನ್ನುವ ಸ್ಟೇಟ್ಮೆಂಟ್ ಕಾಣಿಸಿದರೆ ನಿಮ್ಮ ಅರ್ಜಿ ಒಪ್ಪಿಗೆ ಆಗಿರುವ ದಿನಾಂಕ ನಿಮ್ಮ ಖಾತೆಗೆ ಡಿಬಿಟಿ ಆಗಿರುವ ಮೊತ್ತ ಎಲ್ಲಾ ಮಾಹಿತಿಗಳನ್ನು ತಿಳಿದುಕೊಳ್ಳಬಹುದು.
ಇನ್ಮುಂದೆ ಇಂತಹವರಿಗೆ ರೇಷನ್ ಕಾರ್ಡ್ ಪ್ರಯೋಜನ ಸಿಗೋದಿಲ್ಲ! ಎಲ್ಲಾ ಸೌಲಭ್ಯಗಳು ಕ್ಯಾನ್ಸಲ್
ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ಬಾರದೆ ಇರಲು ಬ್ಯಾಂಕ್ ಖಾತೆಗೆ ಎನ್‌ಪಿಸಿಐ ಮ್ಯಾಪಿಂಗ್ ಆಗದೆ ಇರುವುದು ಅಥವಾ ಈ ಕೆ ವೈ ಸಿ ಅಪ್ಡೇಟ್ ಆಗದೆ ಇರುವುದು ಪ್ರಮುಖ ಕಾರಣವಾಗಿರುತ್ತದೆ. ಇದರ ಜೊತೆಗೆ ತಾಂತ್ರಿಕ ದೋಷಗಳು ಕೂಡ ದೊಡ್ಡ ಸಮಸ್ಯೆ ಆಗಿದ್ದು, ಮಹಿಳೆಯರು ಖಾತೆಗೆ ಹಣ ಬಾರದೆ ಇದ್ದಾಗ ಹತ್ತಿರದ ಕಚೇರಿಗೆ ಹೋಗಿ ಸಮಸ್ಯೆಯನ್ನು ತಿಳಿಸಿದರೆ ಅವರು ಸೂಕ್ತ ಮಾರ್ಗದರ್ಶನ ನೀಡಿ ಮುಂದಿನ ಕಂತಿನ ಹಣ ನಿಮ್ಮ ಖಾತೆಗೆ ಬರುವಂತೆ ಮಾಡುತ್ತಾರೆ.
not received Gruha Lakshmi Yojana and Annabhagya Yojana money, here is the reason