ಇನ್ಮುಂದೆ ಇಂತಹವರಿಗೆ ರೇಷನ್ ಕಾರ್ಡ್ ಪ್ರಯೋಜನ ಸಿಗೋದಿಲ್ಲ! ಎಲ್ಲಾ ಸೌಲಭ್ಯಗಳು ಕ್ಯಾನ್ಸಲ್

ಸಾಕಷ್ಟು ಜನ ಉಳ್ಳವರು ಕೂಡ ರೇಷನ್ ಕಾರ್ಡ್ ಹೊಂದಿದ್ದು ಪ್ರತಿ ತಿಂಗಳು ರೇಷನ್ ಖರೀದಿ ಮಾಡುವುದಕ್ಕೆ ನ್ಯಾಯಬೆಲೆ ಅಂಗಡಿಗೆ ಹೋಗುವುದೇ ಇಲ್ಲ.

ತಮ್ಮ ಬಳಿ ಬಿಪಿಎಲ್ ಕಾರ್ಡ್ (BPL Ration card) ಇದೆ, ಹಾಗಾಗಿ ಸರ್ಕಾರದ ಯಾವುದೇ ಯೋಜನೆಯನ್ನು ಸುಲಭವಾಗಿ ಪಡೆದುಕೊಳ್ಳಬಹುದು ಎಂದು ಬೀಗುತ್ತಿರುವವರಿಗೆ ಇದೀಗ ಸರ್ಕಾರ ಚಾಟಿ ಏಟು ನೀಡಿದೆ.

ಎಲ್ಲರಿಗೂ ತಿಳಿದಿರುವಂತೆ ಬಿಪಿಎಲ್ ಕಾರ್ಡ್ ಅನ್ನು ಬಡತನ ರೇಖೆಗಿಂತ ಕೆಳಗಿನವರಿಗೆ (below poverty line) ನೀಡಲಾಗುತ್ತದೆ ಇಂತಹ ಕುಟುಂಬದವರು ಯಾವುದೇ ಕಾರಣಕ್ಕೂ ಹಸಿವಿನಿಂದ ಸಾಯಬಾರದು ಎನ್ನುವುದು ಸರ್ಕಾರದ ಉದ್ದೇಶವಾಗಿದ್ದು, ಇದೇ ಕಾರಣಕ್ಕೆ ದೇಶದ ಪ್ರತಿಯೊಂದು ರಾಜ್ಯ ಹಾಗೂ ಜಿಲ್ಲೆಗಳಲ್ಲಿಯೂ ಕೂಡ ಲಕ್ಷಾಂತರ ಜನರು ಬಿಪಿಎಲ್ ಕಾರ್ಡ್ ಮೂಲಕ ಉಚಿತ ಪಡಿತರವನ್ನು ಪಡೆದುಕೊಳ್ಳುತ್ತಿದ್ದಾರೆ.

ಮಹಿಳೆಯರಿಗೆ ಸರ್ಕಾರದಿಂದಲೇ ಸಿಗಲಿದೆ ಬಡ್ಡಿ ರಹಿತ 3 ಲಕ್ಷ ರೂಪಾಯಿ ಸಾಲ; ಅರ್ಜಿ ಸಲ್ಲಿಸಿ

ಇನ್ಮುಂದೆ ಇಂತಹವರಿಗೆ ರೇಷನ್ ಕಾರ್ಡ್ ಪ್ರಯೋಜನ ಸಿಗೋದಿಲ್ಲ! ಎಲ್ಲಾ ಸೌಲಭ್ಯಗಳು ಕ್ಯಾನ್ಸಲ್ - Kannada News

ಸರ್ಕಾರ ಪಡಿತರ ಚೀಟಿ ವಿತರಣೆ ಯೋಜನೆ ಆರಂಭಿಸಿದ ನಂತರ ಕೋಟ್ಯಾಂತರ ಕುಟುಂಬಗಳು ನೆಮ್ಮದಿಯಿಂದ ಜೀವನ ನಡೆಸುವಂತೆ ಆಗಿದೆ ಯಾಕೆಂದರೆ ಈ ಒಂದು ಪಡಿತರ ಚೀಟಿ ಇದ್ರೆ ಸರ್ಕಾರದ ಎಲ್ಲಾ ಯೋಜನೆಗಳು ಕೂಡ ಸುಲಭವಾಗಿ ಅಂತವರ ಕೈ ಸೇರುತ್ತದೆ.

ಇನ್ನು ರಾಜ್ಯ ಸರ್ಕಾರ ಇತ್ತೀಚೆಗೆ ಘೋಷಿಸಿರುವ ಗ್ಯಾರಂಟಿ ಯೋಜನೆ (guarantee schemes) ಗಳಲ್ಲಿ ಅನ್ನಭಾಗ್ಯ ಯೋಜನೆ (Annabhagya scheme) ಕೂಡ ಒಂದು, ಈ ಯೋಜನೆಯ ಅಡಿಯಲ್ಲಿಯೂ ಕೂಡ ಸರ್ಕಾರ ನೀಡುವ ಬೆನಿಫಿಟ್ ಪಡೆದುಕೊಳ್ಳಲು ರೇಷನ್ ಕಾರ್ಡ್ ಎನ್ನುವುದು ಬಹಳ ಮುಖ್ಯವಾಗಿರುವ ದಾಖಲೆ.

ಇಂಥವರಿಗೆ ಸಿಗುವುದಿಲ್ಲ ಅನ್ನಭಾಗ್ಯ ಯೋಜನೆ ಹಣ!

ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆಜಿ ಉಚಿತ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರ ಇನ್ನು ಐದು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ ಎಂದು ಘೋಷಿಸಿತ್ತು ಆದರೆ ರಾಜ್ಯ ಸರ್ಕಾರದ ಬಳಿ ಅಷ್ಟೊಂದು ದಾಸ್ತಾನು ಇಲ್ಲದೆ ಇರುವ ಕಾರಣ, ಈಗಲೂ ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ 5 ಕೆಜಿ ಅಕ್ಕಿಗೆ 170ಗಳನ್ನು ಫಲಾನುಭವಿಗಳ ಖಾತೆಗೆ (Bank Account) ಜಮಾ (DBT) ಮಾಡಲಾಗುತ್ತಿದೆ. ಆದರೆ ಇನ್ನು ಮುಂದೆ ಅಕ್ಕಿ ಹಾಗಿರಲಿ ಕೊಡುತ್ತಿರುವ ಹಣವು ಕೂಡ ಇಂಥವರ ಕೈ ಸೇರುವುದಿಲ್ಲ. ಯಾಕೆ ಅಂತೀರಾ?

ಹೊಸ ರೇಷನ್ ಕಾರ್ಡ್ ವಿತರಣೆ ಹಾಗೂ ಹೊಸ ಅರ್ಜಿ ಸಲ್ಲಿಕೆಗೂ ಅವಕಾಶ! ಇಲ್ಲಿದೆ ಡೀಟೇಲ್ಸ್

BPL Ration Cardರೇಷನ್ ಕಾರ್ಡ್ ಇರುವುದು ಪಡಿತರ ವಸ್ತುಗಳನ್ನ ಪಡೆದುಕೊಳ್ಳುವುದಕ್ಕಾಗಿ. ಆದರೆ ಸಾಕಷ್ಟು ಜನ ಉಳ್ಳವರು ಕೂಡ ರೇಷನ್ ಕಾರ್ಡ್ ಹೊಂದಿದ್ದು ಪ್ರತಿ ತಿಂಗಳು ರೇಷನ್ ಖರೀದಿ ಮಾಡುವುದಕ್ಕೆ ನ್ಯಾಯಬೆಲೆ ಅಂಗಡಿಗೆ ಹೋಗುವುದೇ ಇಲ್ಲ. ಅದರ ಬದಲು ಸರ್ಕಾರದ ಇತರ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ.

ಇದಕ್ಕಾಗಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಯಾರು ಕಳೆದ ಆರು ತಿಂಗಳಿನಿಂದ ಪಡಿತರ ವಸ್ತುಗಳನ್ನ ಪಡೆದುಕೊಂಡಿಲ್ಲವೋ ಅಂತವರ ರೇಷನ್ ಕಾರ್ಡ್ ರದ್ದುಪಡಿಸಲು (ration card cancellation) ಸರ್ಕಾರ ನಿರ್ಧರಿಸಿದೆ. ಈಗಾಗಲೇ ಸರ್ಕಾರದ ಮಾನದಂಡಗಳನ್ನು ಉಲ್ಲಂಘಿಸಿ ಪಡಿತರ ಪಡೆದುಕೊಂಡಿರುವವರ ಕಾರ್ಡ್ ರದ್ದುಪಡಿಸಲಾಗಿದೆ.

ಹೊಸ ರೇಷನ್ ಕಾರ್ಡ್ ವಿತರಣೆ ಹಾಗೂ ಹೊಸ ಅರ್ಜಿ ಸಲ್ಲಿಕೆಗೂ ಅವಕಾಶ! ಇಲ್ಲಿದೆ ಡೀಟೇಲ್ಸ್

ಈ ರೀತಿ ಆರು ತಿಂಗಳಿಗಿಂತ ಹೆಚ್ಚಿನ ಸಮಯದವರೆಗೆ ಪಡಿತರ ಖರೀದಿ ಮಾಡದೆ ಇದ್ದರೆ ನಿಮ್ಮ ರೇಷನ್ ಕಾರ್ಡ್ ಕೂಡ ರದ್ದಾಗುತ್ತದೆ. ನೀವು ಸರ್ಕಾರದ ಯಾವುದೇ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಿಲ್ಲ ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಡಿ ಬಿ ಟಿ ಆಗುವುದಿಲ್ಲ.

ಇನ್ನು ಅನಿವಾರ್ಯ ಕಾರಣಗಳಿಂದ ಪಡಿತರ ಪಡೆದುಕೊಳ್ಳಲು ಸಾಧ್ಯವಾಗದೇ ಇದ್ದರೆ ಅದನ್ನು ಆಹಾರ ಇಲಾಖೆಗೆ ತಿಳಿಸಿ ನಿಮ್ಮ ರದ್ದಾಗಿರುವ ಅಥವಾ ತಡೆಹಿಡಿಯಲ್ಪಟ್ಟ ರೇಷನ್ ಕಾರ್ಡ್ ಅನ್ನು ಮರಳಿ ಪಡೆದುಕೊಳ್ಳಬಹುದು.

ಇದೆಲ್ಲದರ ಜೊತೆಗೆ ಏಪ್ರಿಲ್ ಒಂದು 2024 ರಿಂದ ಹೊಸ ಪಡಿತರ ಚೀಟಿ ವಿತರಣೆ ಕಾರ್ಯ ಕೂಡ ಆರಂಭವಾಗಲಿದ್ದು, ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಲಿಸ್ಟ್ ಇನ್ನಷ್ಟು ದೊಡ್ಡದಾಗಲಿದೆ.

ಗೃಹಲಕ್ಷ್ಮಿ ಯೋಜನೆ 7ನೇ ಕಂತಿನ ಹಣಕ್ಕೆ ಹೊಸ ನಿಯಮ ಘೋಷಿಸಿದ ಸರ್ಕಾರ!

such people will not get the benefit of ration card, All facilities are cancelled

Follow us On

FaceBook Google News

such people will not get the benefit of ration card, All facilities are cancelled