ಗೃಹಲಕ್ಷ್ಮಿ ಯೋಜನೆ 7ನೇ ಕಂತಿನ ಹಣಕ್ಕೆ ಹೊಸ ನಿಯಮ ಘೋಷಿಸಿದ ಸರ್ಕಾರ!

Story Highlights

ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಹಣ ಪಡೆದುಕೊಳ್ಳುತ್ತಿರುವವರಿಗೆ ಹಾಗೂ ಈಗ ಹೊಸ ಅರ್ಜಿಯನ್ನು ಸಲ್ಲಿಸಿದವರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ.

ರಾಜ್ಯದ ಮಹಿಳಾ ಸಬಲೀಕರಣ (women empowerment) ಕ್ಕೆ ಸರ್ಕಾರ ಬದ್ಧವಾಗಿದೆ, ಈ ಹಿನ್ನೆಲೆಯಲ್ಲಿ ಮಹಿಳೆಯರು ಆರ್ಥಿಕವಾಗಿಯೂ ಕೂಡ ತಮ್ಮ ಜೀವನವನ್ನು ತಾವೇ ಕಟ್ಟಿಕೊಳ್ಳಲು ಅನುಕೂಲವಾಗುವಂತೆ ಹಲವು ಯೋಜನೆಗಳು ರಾಜ್ಯ ಸರ್ಕಾರದಿಂದ ಜಾರಿಗೆ ಬಂದಿವೆ.

ಬೇರೆ ಬೇರೆ ಉದ್ಯೋಗ ಮಾಡುವುದಕ್ಕೆ ಮಹಿಳೆಯರಿಗೆ ಸಾಲ ಸೌಲಭ್ಯ (Loan facility) ನೀಡುವ ಯೋಜನೆಯನ್ನು ಕೂಡ ಜಾರಿಗೆ ತರಲಾಗಿದ್ದು ಸಂಪೂರ್ಣ ಬಡ್ಡಿ ರಹಿತ ಸಾಲ (Loan without interest) ವನ್ನು ಮಹಿಳೆಯರು ಪಡೆಯಬಹುದಾಗಿದೆ

ಇಂಥವರಿಗೆ ರೇಷನ್ ಕಾರ್ಡ್ ಇದ್ರೂ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆ ಹಣ ಸಿಗೋಲ್ಲ

ಇದರ ಜೊತೆಗೆ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಎರಡು ಸಾವಿರ ರೂಪಾಯಿಗಳು ಪ್ರತಿ ತಿಂಗಳು ಗೃಹಿಣಿಯರ ಸಣ್ಣಪುಟ್ಟ ಖರ್ಚುಗಳನ್ನು ನಿಭಾಯಿಸಲು ಸಹಾಯಕವಾಗಿದೆ ಎನ್ನಬಹುದು.

6ನೇ ಕಂತಿನ ಹಣ ಬಾರದೆ ಇದ್ರೆ 4,000 ರೂಪಾಯಿ ಸಿಗುತ್ತೆ!

ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಹಣ ಪಡೆದುಕೊಳ್ಳುತ್ತಿರುವವರಿಗೆ ಹಾಗೂ ಈಗ ಹೊಸ ಅರ್ಜಿಯನ್ನು ಸಲ್ಲಿಸಿದವರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಫೆಬ್ರುವರಿ ತಿಂಗಳಿನಲ್ಲಿ ಬಿಡುಗಡೆ ಆದ ಆರನೇ ಕಂತಿನ ಹಣ ಸಿಗದೇ ಇದ್ದರೆ ಕೆಳಗಿನ ಕೆಲವು ಪ್ರಮುಖ ಕೆಲಸಗಳನ್ನು ನೀವು ಮಾಡಿಸಿಕೊಂಡರೆ ನಿಮ್ಮ ಖಾತೆಗೆ (Bank Account) ಏಳನೇ ಕಂತಿನ ಹಣವು ಸೇರಿ ಒಟ್ಟಿಗೆ ನಾಲ್ಕು ಸಾವಿರ ರೂಪಾಯಿಗಳನ್ನು ಸರ್ಕಾರ ಇದೇ ಮಾರ್ಚ್ ತಿಂಗಳಿನಲ್ಲಿ ಜಮಾ ಮಾಡಲಿದೆ.

ಪುರುಷರಿಗೂ ಸಿಗುತ್ತಾ ₹2000 ರೂಪಾಯಿ! ಸರ್ಕಾರದ ಮತ್ತೊಂದು ಗ್ಯಾರಂಟಿ ಯೋಜನೆ

Gruha Lakshmi Yojanaಈ ರೀತಿ ಮಾಡಿದ್ರೆ ಗೃಹಲಕ್ಷ್ಮಿ ಹಣ ಖಾತೆಗೆ ವರ್ಗಾವಣೆ ಆಗುತ್ತೆ ಎನ್ನುತ್ತೆ ಸರ್ಕಾರ!

* ಈ ಕೆವೈಸಿ ಅಪ್ಡೇಟ್ (E-KYC update) – ನೀವು ಬ್ಯಾಂಕ್ ನಲ್ಲಿ ಕೆವೈಸಿ ಮಾಡಿಸಿರಬಹುದು, ಆದರೆ ಕೆಲವು ತಾಂತ್ರಿಕ ಸಮಸ್ಯೆಗಳು ಅಥವಾ ಇತರ ಬದಲಾವಣೆಗಳಿಂದಾಗಿ ಈಕೆ ವೈ ಸಿ ಯನ್ನು ನೀವು ಮತ್ತೆ ಅಪ್ಡೇಟ್ ಮಾಡಿಸುವುದು ಬಹಳ ಮುಖ್ಯ ಇದಕ್ಕಾಗಿ ಬ್ಯಾಂಕ್ ಖಾತೆಗೆ ಹೋಗಿ ಅಲ್ಲಿ ಈಕೆ ವೈ ಸಿ ಅಪ್ಡೇಟ್ ಮಾಡಿಸಲು ಹೇಳಿ.

* ಇನ್ನು ಎರಡನೆಯದಾಗಿ NPCI (National payment Corporation of India) mapping ಕೂಡ ಕಡ್ಡಾಯವಾಗಿದೆ. ಇದಕ್ಕಾಗಿಯೂ ನೀವು ಬ್ಯಾಂಕ್ ಗೆ ಹೋಗಿ ಸಿಬ್ಬಂದಿಗಳ ಬಳಿ, ಎನ್‌ಪಿಸಿಐ ಮ್ಯಾಪಿಂಗ್ ಅನ್ನು ನಿಮ್ಮ ಖಾತೆಗೆ ಮಾಡಿಸಿಕೊಡಲು ಹೇಳಿ. ಈ ರೀತಿ ಮಾಡಿಕೊಂಡಾಗ ಸರ್ಕಾರದಿಂದ ನೇರವಾಗಿ ನಿಮ್ಮ ಖಾತೆಗೆ ಹಣ ಡಿ ಬಿ ಟಿ ಆಗಲು ಸಹಾಯವಾಗುತ್ತದೆ.

ಗ್ರಾಮ ಒನ್ ಪ್ರಾಂಚೈಸಿ ತೆರೆಯಲು ಆನ್ಲೈನ್ ಅರ್ಜಿ ಸಲ್ಲಿಸಿ! ಈ ದಾಖಲೆ ಇದ್ರೆ ಸಾಕು

* ನಿಮ್ಮ ಬಳಿ ಬಿಪಿಎಲ್ ರೇಷನ್ ಕಾರ್ಡ್ (Ration Card) ಇದ್ರೆ ಸಾಲದು. ಅದನ್ನ ಆಧಾರ್ ಕಾರ್ಡ್ (Aadhaar card) ಜೊತೆಗೆ ಜೋಡಣೆ ಮಾಡಿಕೊಳ್ಳಬೇಕು. ಈ ಕೆಲಸವನ್ನ ಇನ್ನು ನೀವು ಮಾಡಿದೆ ಇದ್ರೆ ತಕ್ಷಣ ಅದನ್ನು ಮಾಡಿಕೊಳ್ಳಿ ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಪ್ರಕ್ರಿಯೆ ಮಾಡಿಸಿಕೊಳ್ಳಬಹುದು.

* ಇನ್ನು ಅದೆಷ್ಟೋ ಮಹಿಳೆಯರ ಬ್ಯಾಂಕ್ ಖಾತೆ ನಿಷ್ಕ್ರಿಯಗೊಂಡಿರಬಹುದು ಅಂತಹ ಸಂದರ್ಭದಲ್ಲಿ ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳುವುದರ ಮೂಲಕ ನಿಮ್ಮ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಿಕೊಳ್ಳಿ.
ಈ ಕೆಲವು ಪ್ರಮುಖ ವಿಷಯಗಳ ಬಗ್ಗೆ ನೀವು ನೆನಪಿನಲ್ಲಿ ಇಟ್ಟುಕೊಂಡು ಅವುಗಳನ್ನು ಮಾಡಿಕೊಂಡರೆ ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿ ಯೋಜನೆಯ ಮುಂದಿನ ಕಂತಿನ ಹಣ ನಿಮ್ಮ ಖಾತೆಗೆ ಬಾರದೇ ಇರಲು ಸಾಧ್ಯವೇ ಇಲ್ಲ.

ಜಮಾ ಆಗಲಿದೆ 7ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ; ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ

govt has announced a new rule for the money of the 7th installment of Gruha lakshmi Yojana

Related Stories