ಪುರುಷರಿಗೂ ಸಿಗುತ್ತಾ ₹2000 ರೂಪಾಯಿ! ಸರ್ಕಾರದ ಮತ್ತೊಂದು ಗ್ಯಾರಂಟಿ ಯೋಜನೆ

ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳು ಬಹುತೇಕ ಮಹಿಳೆಯರ ಪರವಾಗಿಯೇ ಇದೆ ಇದರಿಂದ ಪುರುಷರಿಗೆ ಹೆಚ್ಚಾಗಿ ಲಾಭ ಸಿಗುತ್ತಿಲ್ಲ.

Bengaluru, Karnataka, India
Edited By: Satish Raj Goravigere

ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ, ಗೃಹ ಜ್ಯೋತಿ ಯೋಜನೆ, ಅನ್ನಭಾಗ್ಯ, ಯೋಜನೆ, ಶಕ್ತಿ ಯೋಜನೆ ಹಾಗೂ ಯುವ ನಿಧಿ ಯೋಜನೆ (guarantee schemes) ಯ ಪ್ರಯೋಜನಗಳನ್ನು ಇಂದು ಸಾಕಷ್ಟು ಜನ ಪಡೆದುಕೊಳ್ಳುತ್ತಿದ್ದಾರೆ.

ಕೋಟ್ಯಾಂತರ ಕುಟುಂಬಗಳು ರಾಜ್ಯ ಸರ್ಕಾರದ ಈ ಯೋಜನೆಗಳ ಮೂಲಕ ಸಣ್ಣ ಮಟ್ಟಿಗೆ ನೆಮ್ಮದಿಯ ಜೀವನ ಕಂಡುಕೊಳ್ಳಲು ಸಾಧ್ಯವಾಗಿದೆ. ಇನ್ನು ಇದರ ಜೊತೆಗೆ ರಾಜ್ಯ ಸರ್ಕಾರ ಇನ್ನಷ್ಟು ಯೋಜನೆಗಳನ್ನು ಜಾರಿಗೆ ತರುವ ಎಲ್ಲಾ ಸಾಧ್ಯತೆಗಳು ಇವೆ.

If you start this business, you will get 15 thousand income per Month

ಜಮಾ ಆಗಲಿದೆ 7ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ; ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ

ಗೃಹಲಕ್ಷ್ಮಿ ಯೋಜನೆಗೆ ಕೋಟ್ಯಾಂತರ ರೂಪಾಯಿ ಅನುಮೋದನೆ!

ಪ್ರತಿ ವರ್ಷ ಕೇವಲ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಒಂದಕ್ಕೆ 24,000 ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರ ಮೀಸಲಿಟ್ಟಿದೆ ಎಂದು ಇತ್ತೀಚೆಗೆ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ (Lakshmi hebbalkar) ತಿಳಿಸಿದ್ದಾರೆ.

ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಬಿಜೆಪಿ ಪಕ್ಷ 5,000 ಕೋಟಿ ಖರ್ಚು ಮಾಡಿ ರಾಮಮಂದಿರ ನಿರ್ಮಾಣ (Rama Mandir) ಮಾಡುತ್ತದೆ ಆದರೆ ನಾವು ಅದೇ ಹಣವನ್ನು ಬಡವರಿಗೆ ನೀಡಿ ಆ ಮೂಲಕ ರಾಮ ರಾಜ್ಯ ನಿರ್ಮಾಣ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕಿಯರಿಗೆ ಅನುಕೂಲವಾಗುವಂತಹ ಸೌಲಭ್ಯಗಳನ್ನು ಕೂಡ ಒದಗಿಸುವ ಬಗ್ಗೆ ಚಿಂತನೆ ನಡೆಸಿರುವುದಾಗಿ ತಿಳಿಸಿದ್ದಾರೆ.

ರೇಷನ್ ಕಾರ್ಡ್ ವಿತರಣೆಗೆ ದಿನಾಂಕ ಫಿಕ್ಸ್; ಹೊಸ ರೇಷನ್ ಕಾರ್ಡ್ ಅರ್ಜಿಗೂ ಅವಕಾಶ!

Govt Schemeಪುರುಷರಿಗೂ ಸಿಗುತ್ತಾ 2,000 ರೂ.?

ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳು ಬಹುತೇಕ ಮಹಿಳೆಯರ ಪರವಾಗಿಯೇ ಇದೆ ಇದರಿಂದ ಪುರುಷರಿಗೆ ಹೆಚ್ಚಾಗಿ ಲಾಭ ಸಿಗುತ್ತಿಲ್ಲ. ಇದರಿಂದಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ಪುರುಷರಿಗೂ ಕೂಡ 2000 ಗಳನ್ನ ಉಚಿತವಾಗಿ ನೀಡಬೇಕು ಹಾಗೂ ಬಸ್ಗಳಲ್ಲಿ ಪ್ರಯಾಣ ದರ ಕಡಿಮೆ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಹತ್ವದ ಅಪ್ಡೇಟ್! ಮಹಿಳೆಯರಿಗೆ ಇನ್ನೊಂದು ಸಿಹಿ ಸುದ್ದಿ

ಈಗಾಗಲೇ ಹರಿಯಾಣ (state of Haryana) ರಾಜ್ಯದಲ್ಲಿ ಉಚಿತ ಬಸ್ ಸೇವೆ ಆರಂಭವಾಗಿದ್ದು, ಮಹಿಳೆಯರಿಗೆ ಮಾತ್ರವಲ್ಲದೆ ಪುರುಷರು ಕೂಡ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.

ಹಾಗಾಗಿ ಸದ್ಯದಲ್ಲಿಯೇ ಉಚಿತ ಬಸ್ ಪ್ರಯಾಣ ಅಥವಾ ಗೃಹಲಕ್ಷ್ಮಿ ಯೋಜನೆಯಂತೆ ಇನ್ನೊಂದು ಯೋಜನೆಯ ಮೂಲಕ 2,000 ರೂಪಾಯಿಗಳನ್ನು ವಿತರಣೆ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ.

Men also get 2000 rupees, Another guarantee scheme of Govt