Karnataka NewsBangalore News

ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಹತ್ವದ ಅಪ್ಡೇಟ್! ಮಹಿಳೆಯರಿಗೆ ಇನ್ನೊಂದು ಸಿಹಿ ಸುದ್ದಿ

ದಿನದಿಂದ ದಿನಕ್ಕೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತವೆ, ಅದರಲ್ಲಿಯೂ ಗೃಹಲಕ್ಷ್ಮಿ (Gruha lakshmi scheme) ಹಾಗೂ ಅನ್ನಭಾಗ್ಯ (Annabhagya scheme) ವಿಚಾರದಲ್ಲಿ ಜನರಲ್ಲಿಯೂ ಸಾಕಷ್ಟು ಗೊಂದಲಗಳು ಸೃಷ್ಟಿ ಆಗಿವೆ. ಇದಕ್ಕೆ ಮುಖ್ಯ ಕಾರಣ ಫಲಾನುಭವಿಗಳಿಗೆ ಸರಿಯಾದ ಯೋಜನೆಯ ಪ್ರಯೋಜನ ಸಿಗದೇ ಇರುವುದು.

ಹೌದು, ಗೃಹಲಕ್ಷ್ಮಿ ಯೋಜನೆಗೆ ಕೋಟ್ಯಾಂತರ ಜನ ಅರ್ಜಿ ಸಲ್ಲಿಸಿದ್ದರು ಕೂಡ ಅರ್ಜಿ ಸಲ್ಲಿಸಿದವರ ಪೈಕಿ 80% ನಷ್ಟು ಜನರಿಗೆ ಹಣ ಸಿಕ್ಕಿದೆ ಇನ್ನು 20% ಮಹಿಳೆಯರ ಖಾತೆಗೆ (Bank Account) ಹಣ ಮಾತ್ರ ವರ್ಗಾವಣೆ ಆಗಿಲ್ಲ.

Gruha Lakshmi Yojana funds have been released, Check the women of this district

ಹೊಸ ರೇಷನ್ ಕಾರ್ಡ್ ಅರ್ಜಿಗೆ ಸಿದ್ಧಮಾಡಿಕೊಳ್ಳಿ! ಈ ದಾಖಲೆ ಕೂಡ ಇಟ್ಟುಕೊಳ್ಳಿ

ಅದೇ ರೀತಿ ಅನ್ನಭಾಗ್ಯ ಯೋಜನೆಯನ್ನು ನೋಡುವುದಾದರೆ 5 ಕೆಜಿ ಅಕ್ಕಿಯ ಬದಲು ಬಿಪಿಎಲ್ ಪಡಿತರ ಚೀಟಿ (BPL Ration Card) ಹೊಂದಿರುವ ಕುಟುಂಬಗಳಿಗೆ ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ 170ಗಳನ್ನು ಕುಟುಂಬದಲ್ಲಿ ಇರುವ ಪ್ರತಿಯೊಬ್ಬ ಸದಸ್ಯನಿಗೂ ಕೂಡ ತಲುಪಿಸಲಾಗುತ್ತಿದೆ. ಅಂದರೆ ಕುಟುಂಬ ಯಜಮಾನನ ಖಾತೆಗೆ ಸದಸ್ಯರ ಹಣವನ್ನು ವರ್ಗಾವಣೆ ಮಾಡಲಾಗುತ್ತಿದೆ.

ಕಳೆದ ಆರು ತಿಂಗಳಿನಿಂದ ಈ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದಿದ್ದರು ಕೂಡ ಎಷ್ಟು ಫಲಾನುಭವಿಗಳನ್ನು ತಲುಪಿದೆ ಎಂದು ಕೇಳಿದರೆ ರಾಜ್ಯ ಸರ್ಕಾರ ಸಂಪೂರ್ಣವಾಗಿ ಈ ಯೋಜನೆಯಲ್ಲಿ ಯಶಸ್ವಿಯಾಗಿಲ್ಲ ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ.

ಯಾಕಂದ್ರೆ ಸಾಕಷ್ಟು ಜನ ಪಡಿತರ ಚೀಟಿ ಹೊಂದಿದ್ದು ಅನ್ನ ಭಾಗ್ಯ ಯೋಜನೆ ಹಣ ಪಡೆದುಕೊಳ್ಳುತ್ತಿಲ್ಲ ಅದೇ ರೀತಿ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಆಗಿದ್ದರು ಕೂಡ ಹಣ ಖಾತೆಗೆ ವರ್ಗಾವಣೆ (DBT ) ಆಗಿಲ್ಲ ಇದಕ್ಕೆಲ್ಲ ತಾಂತ್ರಿಕ ದೋಷ (technical issues) ಗಳು ಕಾರಣವಾಗಿರಬಹುದು ಎಂದು ಸರ್ಕಾರ ತಿಳಿಸಿದ್ದು, ಇವುಗಳ ಪರಿಹಾರಕ್ಕೂ ಕೂಡ ತಂಡವನ್ನು ರಚಿಸಿರುವುದಾಗಿ ಮಾಹಿತಿ ನೀಡಿದೆ.

ನಿಮಗೆ ಅನ್ನಭಾಗ್ಯ ಯೋಜನೆ ಹಣ ಬಂದಿದೆಯೋ ಇಲ್ವೋ! ಈ ರೀತಿ ಚೆಕ್ ಮಾಡಿಕೊಳ್ಳಿ

Gruha Lakshmi Yojanaಪ್ರತಿ ಜಿಲ್ಲೆಗೆ ಬರಲಿದ್ದಾರೆ ಅಧಿಕಾರಿಗಳು!

ಗೃಹಲಕ್ಷ್ಮಿ ಯೋಜನೆಯ ಹಣ ಸುಮಾರು 8.2 ಲಕ್ಷ ಮಹಿಳೆಯರ ಖಾತೆಯನ್ನು ತಲುಪಿಲ್ಲ. ಹಾಗಾಗಿ ಇದಕ್ಕೆ ಕಾರಣ ಹಾಗೂ ಪರಿಹಾರವನ್ನು ಸೂಚಿಸಲು ಅಧಿಕಾರಿಗಳು ಜಿಲ್ಲೆಗೆ ಬರುತ್ತಿದ್ದಾರೆ ಯಾವುದೇ ಮಹಿಳೆಯ ಬ್ಯಾಂಕ ಖಾತೆಯಲ್ಲಿ ಸಮಸ್ಯೆ ಇದ್ದರೆ ಅವರ ಬಳಿ ಅಂಚೆ ಕಚೇರಿಯಲ್ಲಿ ಖಾತೆ ತೆರೆಸಿ, ಆ ಖಾತೆಗೆ ಗೃಹಲಕ್ಷ್ಮಿ ಹಣ ಬರುವಂತೆ ಮಾಡಲಾಗುವುದು.

ಇದರ ಜೊತೆಗೆ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರು ಗೃಹಿಣಿಯರ ಜೊತೆಗೆ ನಿಂತು ಅವರ ಸಮಸ್ಯೆ ಪರಿಹರಿಸಿ ಮುಂದಿನ ಕಂತಿನ ಹಣವಾದರೂ ಅವರ ಖಾತೆಗೆ ಬರುವಂತೆ ಮಾಡಲು ಸರ್ಕಾರ ಸೂಚಿಸಿದೆ.

ಉಚಿತ ವಿದ್ಯುತ್! ಗೃಹಜ್ಯೋತಿ ಫಲಾನುಭವಿಗಳಿಗೆ ಸಿಹಿ ಸುದ್ದಿ ನೀಡಿದ ಸಿದ್ಧರಾಮಯ್ಯ ಸರ್ಕಾರ

ಸೊಸೆಯಂದಿರಿಗೆ ಬಂಪರ್ ಆಫರ್ ನೀಡಿದ ಸರ್ಕಾರ!

ಸರ್ಕಾರದ ನಿಯಮದ ಪ್ರಕಾರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಮನೆಯ ಹಿರಿಯ ಮಹಿಳೆ ಅಂದರೆ ಅತ್ತೆಗೆ ಅವಕಾಶ ಇದೆ ಆದರೆ ಸೊಸೆಯಂದರಿಗೆ ಅವಕಾಶ ಇಲ್ಲ.

ಇಷ್ಟಾಗಿಯೂ ಮನೆಯಲ್ಲಿ ಹಿರಿಯ ಮಹಿಳೆ ಮೃತಪಟ್ಟರೆ ಅಥವಾ ಗೃಹಲಕ್ಷ್ಮಿ ಹಣ ಪಡೆದುಕೊಳ್ಳುತ್ತಿರುವ ಮಹಿಳೆಯ ಸಾವು ಉಂಟಾದರೆ, ಆಕೆಯ ಹೆಸರನ್ನು ರೇಷನ್ ಕಾರ್ಡ್ ನಿಂದ ತೆಗೆದು, ಯಜಮಾನ ಹೆಸರಿನ ಸ್ಥಾನದಲ್ಲಿ ಮನೆಯ ಹಿರಿಯ ಸೊಸೆಯ ಹೆಸರನ್ನು ಸೇರಿಸಿ ಅವರ ಖಾತೆಗೆ ಗೃಹಲಕ್ಷ್ಮಿ ಹಣ ಬರುವಂತೆ ಮಾಡಲಾಗುವುದು.

ಹಾಗಾಗಿ ಒಂದು ಕುಟುಂಬದಲ್ಲಿ ಹಿರಿಯ ಮಹಿಳೆ ಮೃತಪಟ್ಟರು ಕೂಡ ಆ ಮನೆಯ ಇತರ ಸದಸ್ಯರು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಮುಂದಿನ ದಿನಗಳಲ್ಲಿ ಪಡೆದುಕೊಳ್ಳಲು ಸಾಧ್ಯವಿದೆ.

ನಿಮ್ಮ ಜಮೀನಿನ ಪಹಣಿಗೆ ಆಧಾರ್ ಲಿಂಕ್ ಮಾಡಬೇಕು; ಆನ್ಲೈನ್ ನಲ್ಲೇ ಮಾಡಿಕೊಳ್ಳಿ

ಅನ್ನ ಭಾಗ್ಯ ಯೋಜನೆ ಹಣ ಯಾಕೆ ಖಾತೆಗೆ ಬರುತ್ತಿಲ್ಲ!

Annabhagya Schemeಬಿಪಿಎಲ್ ಕಾರ್ಡ್ ಅಥವಾ ಅಂತ್ಯೋದಯ ಕಾರ್ಡ್ ಜನರಿಗೆ ನೀಡುವುದು ಉಚಿತವಾಗಿ ಪಡಿತರ ಪಡೆದುಕೊಳ್ಳುವ ಸಲುವಾಗಿ ಅಂದರೆ ಬಡವರ ಹಸಿವನ್ನು ನೀಗಿಸಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಆದರೆ ಸಾಕಷ್ಟು ಜನರು ಅನಗತ್ಯವಾಗಿ ಬಿಪಿಎಲ್ ಕಾರ್ಡ್ ಹೊಂದಿದ್ದು, ಕಳೆದ ಆರು ತಿಂಗಳಿನಿಂದ ಪಡಿತರ ಪಡೆದುಕೊಳ್ಳದೆ ಸರ್ಕಾರದ ಇತರ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ

ಇಂಥವರನ್ನು ಗುರುತಿಸಿ ಅವರ ರೇಷನ್ ಕಾರ್ಡ್ ತಕ್ಷಣ ರದ್ದುಪಡಿಸಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ ಲಕ್ಷಾಂತರ ಪಡಿತರ ಕಾರ್ಡ್ ರದ್ದು ಪಡಿಸಲಾಗಿದೆ. ಹೀಗಾಗಿ ಅಂತವರ ಖಾತೆಗೆ ಅನ್ನ ಭಾಗ್ಯ ಯೋಜನೆಯ ಹಣ ಜಮಾ ಆಗುವುದಿಲ್ಲ.

Important update about Gruha Lakshmi Yojana, Another good news for women

Our Whatsapp Channel is Live Now 👇

Whatsapp Channel

Related Stories