Kannada News Karnataka News

ನಿಮಗೆ ಅನ್ನಭಾಗ್ಯ ಯೋಜನೆ ಹಣ ಬಂದಿದೆಯೋ ಇಲ್ವೋ! ಈ ರೀತಿ ಚೆಕ್ ಮಾಡಿಕೊಳ್ಳಿ

Do this if Annabhagya Yojana money not reached your Bank account yet

ಐದು ಗ್ಯಾರಂಟಿ ಯೋಜನೆಗಳಲ್ಲಿ ಉಚಿತವಾಗಿ 10 ಕೆ.ಜಿ. ಅಕ್ಕಿ ನೀಡುವ ಅನ್ನ ಭಾಗ್ಯ ಯೋಜನೆಯೂ (Annabagya Yojana) ಒಂದಾಗಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರವು (State Congress government) ಅಧಿಕಾರಕ್ಕೆ ಬರುವ ಮುನ್ನ ನೀಡಿದ ಮಾತಿನಂತೆ ಅಧಿಕಾರಕ್ಕೆ ಬಂದ ಮೇಲೆ ಐದು ಗ್ಯಾರಂಟಿ ಯೋಜನೆ (guarantee schemes) ಗಳನ್ನು ಜಾರಿಗೆ ತಂದಿದೆ.

ಅದರಲ್ಲಿ ಉಚಿತವಾಗಿ 10 ಕೆ.ಜಿ. ಅಕ್ಕಿ ನೀಡುವ ಅನ್ನ ಭಾಗ್ಯ ಯೋಜನೆಯೂ (Annabagya Yojana) ಒಂದಾಗಿದೆ. ಈ ಯೋಜನೆಯ ಜಾರಿಯಲ್ಲಿಯೇ ವಿಘ್ನ ಎದುರಾಗಿತ್ತು. ಕೇಂದ್ರ ಸರ್ಕಾರವು ತನ್ನ ಬಳಿ ಹೆಚ್ಚುವರಿಯಾಗಿ 10 ಕೆ.ಜಿ. ಅಕ್ಕಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿತ್ತು. ಇದಾದ ಬಳಿಕ ರಾಜ್ಯ ಸರ್ಕಾರವು ದೇಶದ ಹಲವಾರು ರಾಜ್ಯ ಸರ್ಕಾರಗಳ ಬಳಿ ಮಾತುಕತೆ ನಡೆಸಿತು.

ಉಚಿತ ವಿದ್ಯುತ್! ಗೃಹಜ್ಯೋತಿ ಫಲಾನುಭವಿಗಳಿಗೆ ಸಿಹಿ ಸುದ್ದಿ ನೀಡಿದ ಸಿದ್ಧರಾಮಯ್ಯ ಸರ್ಕಾರ

ಎಲ್ಲಿಯೂ ಅಕ್ಕಿ ಲಭ್ಯವಾಗದ ಕಾರಣ ಪ್ರತಿಯೊಬ್ಬರಿಗೆ 5 ಕೆ.ಜಿ. ಅಕ್ಕಿಯ ಬದಲು ಪ್ರತಿ ಕೆ.ಜಿ. ಅಕ್ಕಿಗೆ 34 ರೂ. ನಂತೆ 170 ರೂ. ಪ್ರತಿ ತಿಂಗಳು ಜಮಾ ಮಾಡುವುದಾಗಿ ತಿಳಿಸಿದೆ. ಇದಕ್ಕೂ ಸಹ ನಿಭಂದನೆಗಳಿವೆ. ಪ್ರತಿ ತಿಂಗಳು ಪಡಿತರ ಪಡೆಯುವ ಬಿಪಿಎಲ್ ಕಾರ್ಡ್ ದಾರರಿಗೆ (BPL card holders) ಮಾತ್ರ ನೀಡಲಾಗುತ್ತದೆ.

ಎಪಿಎಲ್ ಕಾರ್ಡ್ ದಾರರಿಗೆ ನೀಡಲಾಗುವುದಿಲ್ಲ. ಪ್ರತಿ ತಿಂಗಳು ಪಡಿತರ ಪಡೆಯದ ಬಿಪಿಎಲ್ ಕಾರ್ಡ್ ದಾರರಿಗೂ ಸಹ ಯಾವುದೇ ಹಣ ಜಮಾ ಮಾಡಲಾಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಹಾಗಾದರೆ ಈ ಹಣ ಜಮಾ ಆಗಿದೆಯೋ ಇಲ್ಲವೋ ಎಂದು ತಿಳಿಯುವುದು ಹೇಗೆ ಗೊತ್ತಾ?

ನಿಮ್ಮ ಜಮೀನಿನ ಪಹಣಿಗೆ ಆಧಾರ್ ಲಿಂಕ್ ಮಾಡಬೇಕು; ಆನ್ಲೈನ್ ನಲ್ಲೇ ಮಾಡಿಕೊಳ್ಳಿ

Annabhagya Schemeಅನ್ನ ಭಾಗ್ಯ ಯೋಜನೆಯ ಸ್ಟೇಟಸ್ ಚೆಕ್ ಮಾಡಿ (check your dbt status)

ಮೊದಲು ನೀವು ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ಗೆ (official website) https://www.karnataka.gov.in/ ಭೇಟಿ ನೀಡಿ.

ಅಲ್ಲಿ ಇ-ಸರ್ವೀಸ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಅಲ್ಲಿ ಡಿಬಿಟಿ ಸ್ಟೇಟಸ್ ಲಿಂಕ್ ಮೇಲೆ ಕ್ಲಿಕ್ ಮಾಡಿ.

ನೀವು ರೇಶನ್ ಕಾರ್ಡ್ನ ಯಾವ ಸ್ಟೇಟಸ್ ತಿಳಿದುಕೊಳ್ಳಲು ಬಯಸುತ್ತಿರಿ ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಿ.

ಈಗ ನಿಮ್ಮ ಪಡಿತರ ಚೀಟಿಯ ಸಂಖ್ಯೆಯನ್ನು ನಮೂದು ಮಾಡಿ. ಹಾಗೂ ಕಂಟಿನ್ಯೂ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ನಿಮ್ಮ ಪಡಿತರ ಚೀಟಿಗೆ ಯಾವ ಯಾವ ತಿಂಗಳಿನಲ್ಲಿ ಹಣ ಜಮಾ ಮಾಡಲಾಗಿದೆ ಎನ್ನುವುದು ಕಾಣಿಸುತ್ತದೆ. ಹಾಗೂ ನೀವು ಯಾವ ಯಾವ ತಿಂಗಳು ಪಡಿತರ ಪಡೆದಿದ್ದೀರಿ ಎನ್ನುವುದನ್ನು ಸಹ ಇದೇ ರೀತಿಯಲ್ಲಿ ನೋಡಬಹುದು.

ಗೃಹಲಕ್ಷ್ಮಿ ಫಲಾನುಭವಿ ಗೃಹಿಣಿಯರಿಗೆ ಭರ್ಜರಿ ಸುದ್ದಿ; ಖಾತೆಗೆ ಒಟ್ಟಿಗೆ 6,000 ಜಮಾ!

ಹೀಗೆ ಕರ್ನಾಟಕದಲ್ಲಿರುವ ಎಲ್ಲ ಜನರು ಕೂಡ ಗ್ಯಾರಂಟಿ ಯೋಜನೆಗಳ ಲಾಭ ಪಡೆದುಕೊಳ್ಳಬೇಕು ಎನ್ನುವ ಸಲುವಾಗಿ ಸರ್ಕಾರವು ತನ್ನ ಹಲವು ನಿಯಮಗಳಲ್ಲಿ ಬದಲಾವಣೆ ಮಾಡಿ ಸರಳೀಕರಣ ಮಾಡಿದೆ. ಅಲ್ಲದೆ ಈ ಯೋಜನೆಗಳ ಜಾರಿಗೆ ಸಮಿತಿ ಸಹ ನೇಮಕ ಮಾಡಲಾಗಿದೆ.

ಆ ಸಮಿತಿಯು ಈ ಗ್ಯಾರಂಟಿ ಯೋಜನೆಯು ಸರಿಯಾಗಿ ಜಾರಿಯಾಗುವಂತೆ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ಸೌಲಭ್ಯ ಸಿಗುವಂತೆ ನೋಡಿಕೊಳ್ಳುತ್ತದೆ. ಈ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯ ಸಿಗುವಂತೆ ರಾಜ್ಯ ಸರ್ಕಾರ ನೋಡಿಕೊಳ್ಳುತ್ತಿದೆ ಎಂದರೆ ಅದು ಅತಿಶಯೋಕ್ತಿ ಅಲ್ಲ.

Have you received Annabhagya Yojana money, Check Like This