Karnataka NewsBangalore News

ಗೃಹಲಕ್ಷ್ಮಿ ಫಲಾನುಭವಿ ಗೃಹಿಣಿಯರಿಗೆ ಭರ್ಜರಿ ಸುದ್ದಿ; ಖಾತೆಗೆ ಒಟ್ಟಿಗೆ 6,000 ಜಮಾ!

ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಸಾಕಷ್ಟು ಮಹಿಳೆಯರ ಜೀವನದಲ್ಲಿ ದೊಡ್ಡ ಬೆಳಕಾಗಿ ಇಂದು ಪರಿಣಮಿಸಿದೆ. ಪ್ರತಿ ತಿಂಗಳು ಎರಡು ಸಾವಿರ ರೂಪಾಯಿಗಳನ್ನು ಕೂಡ ಸಂಪಾದನೆ ಮಾಡಲು ಸಾಧ್ಯವಾಗದೆ ಇರುವ ಮಹಿಳೆಯರಿಗೆ ನಿಜಕ್ಕೂ ಇದು ಆರ್ಥಿಕವಾಗಿ ಸಹಾಯ (financial help) ಮಾಡಿದೆ ಎನ್ನಬಹುದು.

ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದು ಆರು ತಿಂಗಳು ಕಳೆದು ಮಹಿಳೆಯರ ಖಾತೆಗೆ 12 ಸಾವಿರ ರೂಪಾಯಿಗಳು ಜಮಾ ಆಗಿದ್ದು ಆಗಿದೆ.

Gruha Lakshmi pending money is also deposited for the women of this district

ಆದರೂ ಕೂಡ ಇನ್ನೂ 20% ನಷ್ಟು ಮಹಿಳೆಯರ ಖಾತೆಗೆ (Bank Account) ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಂತಿನ ಹಣ ಬಂದು ಸೇರಿಲ್ಲ. ಕೆಲವರಿಗೆ ಮೊದಲ ಒಂದೆರಡು ಕಂತಿನ ಹಣ ಸೇರಿದ್ದರೆ, ಇನ್ನೂ ಕೆಲವರಿಗೆ ಮಧ್ಯದ ಒಂದೆರಡು ಕಂತಿನ ಹಣ ಬಂದಿದೆ. ಹಾಗೂ ಇನ್ನೂ ಹಲವರಿಗೆ ಒಂದೇ ಒಂದು ಕಂತಿನ ಹಣವು ಕೈ ಸೇರಿಲ್ಲ.

ರೇಷನ್ ಕಾರ್ಡ್ ಇದ್ರೂ ಇನ್ಮುಂದೆ ಇಂತಹವರಿಗೆ ಯಾವುದೇ ಯೋಜನೆಯ ಬೆನಿಫಿಟ್ ಇಲ್ಲ!

ಗೃಹಲಕ್ಷ್ಮಿ ಯೋಜನೆಯ ಹಣ ಯಾಕೆ ಬರ್ತಿಲ್ಲ ಗೊತ್ತಾ?

ಗೃಹಲಕ್ಷ್ಮಿ ಯೋಜನೆಯ ಹಣ ಬರಬೇಕು ಅಂದ್ರೆ ನಿಮ್ಮ ಖಾತೆಗೆ ಅಂದರೆ ಮಹಿಳೆಯರ ಖಾತೆಗೆ ಈಕೆ ವೈ ಸಿ ಅಪ್ಡೇಟ್ (E-KYC update) ಕಡ್ಡಾಯವಾಗಿದೆ. ಆದರೆ ಎಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಈ ಕೆ ವೈ ಸಿ, ಎನ್ ಪಿ ಸಿ ಐ ಮ್ಯಾಪಿಂಗ್ (NPCI mapping) ನಂತಹ ಯಾವ ಲಿಂಕಿಂಗ್ ಪ್ರೋಸೆಸ್ (linking process) ಕೂಡ ಆಗಿಲ್ಲ. ಅಷ್ಟೇ ಅಲ್ಲ ಎಷ್ಟೋ ಮಹಿಳೆಯರ ಖಾತೆ ಆಕ್ಟಿವ್ ಇಲ್ಲ. ಬಹಳ ಹಿಂದೆ ಬ್ಯಾಂಕ್ ನಲ್ಲಿ ಖಾತೆ ತೆರೆದು ಅದರಲ್ಲಿ ಒಂದೇ ಒಂದು ರೂಪಾಯಿ ಹಣಕಾಸಿನ ವ್ಯವಹಾರ ನಡೆಸದೆ ಇರುವುದರಿಂದ ಹಲವು ಮಹಿಳೆಯರ ಖಾತೆ ಸಕ್ರಿಯವಾಗಿಲ್ಲ.

ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಂಡರೆ ಮಾತ್ರ ಮಹಿಳೆಯರ ಖಾತೆಗೆ ಆಟೋಮ್ಯಾಟಿಕ್ ಆಗಿ ಸರ್ಕಾರ ವರ್ಗಾವಣೆ (DBT) ಮಾಡುವ ಹಣ ಖಾತಿಗೆ ಸೇರುತ್ತದೆ. ಇದೀಗ ಅನಾನುಭವಿ ಮಹಿಳೆಯರ ಖಾತೆಗೆ ಹಣ ಡಿಬಿಟಿ ಮಾಡುವ ಸಲುವಾಗಿ ಸರ್ಕಾರವೇ ಹೊಸ ಉಪಕ್ರಮ ಒಂದನ್ನು ಕೈಗೊಂಡಿದೆ.

ಉಚಿತ ವಿದ್ಯುತ್ ಕೊಟ್ಟ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ! ಇನ್ನಷ್ಟು ಬೆನಿಫಿಟ್

Gruha Lakshmi Yojanaಪ್ರತಿ ಜಿಲ್ಲೆಯ ಅಧಿಕಾರಿಗಳ ದಂಡು!

ಮಹಿಳೆಯರ ಬ್ಯಾಂಕ ಖಾತೆಯಲ್ಲಿ ಯಾವ ಸಮಸ್ಯೆ ಇದೆ ಎನ್ನುವುದನ್ನು ಪರಿಹರಿಸುವ ಸಲುವಾಗಿ ಸ್ವತಃ ಸಂಬಂಧಪಟ್ಟ ಅಧಿಕಾರಿಗಳೇ ಪ್ರತಿಯೊಂದು ಜಿಲ್ಲೆಗೂ ಹೋಗಿ ಪರಿಶೀಲನೆ ನಡೆಸುವಂತೆ ಸರ್ಕಾರ ಸೂಚಿಸಿದೆ

ಒಂದು ವೇಳೆ ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಇದ್ದರೆ ಅಂತಹ ಮಹಿಳೆಯರ ಹೆಸರಿನಲ್ಲಿ ಅಂಚೆ ಕಚೇರಿಯ ಖಾತೆ (post office account) ಯನ್ನು ತೆರೆಸಿ, ಅಲ್ಲಿಗೆ ನೇರವಾಗಿ ಹಣ ವರ್ಗಾವಣೆ ಮಾಡುವಂತೆ ಅಧಿಕಾರಗಳು ಸಹಾಯ ಮಾಡಲಿದ್ದಾರೆ.

ಇಷ್ಟು ಮಾತ್ರವಲ್ಲದೆ ಮಹಿಳೆಯರು ತಮ್ಮ ಖಾತೆಗೆ ಸಂಬಂಧಪಟ್ಟ ಸಮಸ್ಯೆ ಇದ್ದರೆ ಹತ್ತಿರದ ಅಂಗನವಾಡಿ ಸಹಾಯಕಿಯರು ಅಥವಾ ಆಶಾ ಕಾರ್ಯಕರ್ತೆಯರ ಸಹಾಯವನ್ನು ಪಡೆಯಬಹುದು

ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ; ಈ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ!

ಸರ್ಕಾರವೂ ಕೂಡ ಈಗಾಗಲೇ ಸೂಚಿಸಿರುವಂತೆ ಯಾವ ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ ಎನ್ನುವುದನ್ನು ಆಯಾ ತಾಲೂಕಿನ ಆಶಾ ಕಾರ್ಯಕರ್ತೆಯರು ಸರ್ಕಾರಕ್ಕೆ ಮಾಹಿತಿಯನ್ನು ಒದಗಿಸಬೇಕು.

ಹಾಗಾಗಿ ಮನೆ ಮನೆಗೆ ತೆರಳಿ ಈ ಕೆಲಸವನ್ನು ಮಾಡಲಾಗುತ್ತಿದೆ. ಆದ್ದರಿಂದ ಮಹಿಳೆಯರು ತಮಗೆ ಹಣ ಬಾರದೇ ಇದ್ದರೆ ಆಶಾ ಕಾರ್ಯಕರ್ತೆಯರು ಅಥವಾ ಅಂಗನವಾಡಿ ಸಹಾಯಕಿಯರನ್ನು ಸಂಪರ್ಕಿಸಿ ಅವರಿಂದ ಸರಿಯಾದ ಮಾಹಿತಿ ಪಡೆದುಕೊಳ್ಳು ಖಾತೆಯಲ್ಲಿ ಯಾವುದೇ ಸಮಸ್ಯೆ ಇದ್ರೆ ಪರಿಹಾರಕ್ಕೆ ಕೊಡಬಹುದು.

ಇನ್ನು ಮಾರ್ಚ್ ತಿಂಗಳಿನಲ್ಲಿ ಯಾವ ಮಹಿಳೆಯ ಖಾತೆ ಸರಿಯಾಗಿದೆಯೋ, ಅದನ್ನು ಪರಿಶೀಲಿಸಿ ಒಟ್ಟಿಗೆ ಆರು ಸಾವಿರ ರೂಪಾಯಿಗಳನ್ನು ಸರಕಾರ ಜಮಾ ಮಾಡುವ ಸಾಧ್ಯತೆ ಇದೆ

ಈಗಾಗಲೇ ಕೆಲವು ಮಹಿಳೆಯರ ಖಾತೆಗೆ ಕೇವಲ ಮೂರು ದಿನಗಳ ಅಂತರದಲ್ಲಿ ಎಲ್ಲಾ ಹಣ ಜಮಾ ಆಗಿರುವ ಉದಾಹರಣೆ ಇದೆ. ಹಾಗಾಗಿ ಮಹಿಳೆಯರ ಖಾತೆಯಲ್ಲಿ ಸಮಸ್ಯೆ ಇಲ್ಲದೆ ಇದ್ದಾಗ ಆಟೋಮ್ಯಾಟಿಕ್ ಆಗಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ (Money Deposit) ಆಗುತ್ತದೆ.

ಇನ್ಮುಂದೆ ಅತ್ತೆಯ ಜೊತೆ ಸೊಸೆಗೂ ಸಿಗುತ್ತಾ ಗೃಹಲಕ್ಷ್ಮಿ ಹಣ! ಇಲ್ಲಿದೆ ಡೀಟೇಲ್ಸ್

Big Update By Govt for Gruha lakshmi scheme Beneficiaries

Our Whatsapp Channel is Live Now 👇

Whatsapp Channel

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories