ಉಚಿತ ವಿದ್ಯುತ್ ಕೊಟ್ಟ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ! ಇನ್ನಷ್ಟು ಬೆನಿಫಿಟ್

Story Highlights

ಉಚಿತ ವಿದ್ಯುತ್ ನೀಡಿದ ರಾಜ್ಯ ಸರ್ಕಾರ ಈಗ ಮತ್ತೊಂದು ಗುಡ್ ನ್ಯೂಸ್ ನೀಡಿದೆ; ಯಾರಿಗೆ ಸಿಗಲಿದೆ ಈ ಪ್ರಯೋಜನ ಗೊತ್ತಾ?

ಇತ್ತೀಚೆಗೆ ಹಣದುಬ್ಬರ ಸಮಸ್ಯೆಯನ್ನು ಅನುಭವಿಸುತ್ತಿರುವ ಸಾರ್ವಜನಿಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ದಿನದಿಂದ ದಿನಕ್ಕೆ ಒಂದು ದರ ಪರಿಷ್ಕರಣೆ ಮಾಡಿ ಸರ್ಕಾರ ಬೆಲೆ ಏರಿಕೆ ಮಾಡುತ್ತಲೇ ಇದೆ. ಅವುಗಳಲ್ಲಿ ವಿದ್ಯುತ್ ದರ ಏರಿಕೆ (electricity current increased) ಕೂಡ ಒಂದು, ಈ ನಡುವೆ ಕಳೆದ ಒಂದೆರಡು ವರ್ಷಗಳಲ್ಲಿ ವಿದ್ಯುತ್ ದರದಲ್ಲಿ ಯಾವುದೇ ರೀತಿಯ ಕಡಿತವನ್ನು ಮಾಡಲಾಗಿಲ್ಲ.

ಹೌದು, ವಿದ್ಯುತ್ ದರ ಕೆಲವೊಮ್ಮೆ ಸ್ಥಿರವಾಗಿದ್ದರೆ ಇನ್ನೂ ಸಾಕಷ್ಟು ಸಮಯ ಯೂನಿಟ್ ದರವನ್ನ ಸರ್ಕಾರ ಹೆಚ್ಚಿಸಿದೆ, ಇತ್ತೀಚಿನ ದಿನಗಳಲ್ಲಿ ಗೃಹಜ್ಯೋತಿ ಯೋಜನೆ (Gruha jyothi Yojana) ಯಡಿಯಲ್ಲಿ 200 ಯೂನಿಟ್ ಉಚಿತವಾಗಿ ಗ್ರಾಹಕರಿಗೆ ನೀಡಿದ ಬಳಿಕವೂ ವಿದ್ಯುತ್ ದರ ಹೆಚ್ಚಳ ಮಾಡಲಾಗಿತ್ತು.

ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ; ಈ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ!

ಆದರೆ ಈಗ ಲೋಕಸಭಾ ಚುನಾವಣೆ (Loksabha election) ಗೂ ಮುನ್ನ ರಾಜ್ಯ ಸರ್ಕಾರ ಜನತೆಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ್ದು ಉಚಿತ ವಿದ್ಯುತ್ ನೀಡುವುದು ಮಾತ್ರವಲ್ಲದೆ ವಿದ್ಯುತ್ ದರ ಇಳಿಕೆಗೂ ಕೂಡ ಮುಂದಾಗಿದೆ.

100 ಯೂನಿಟ್ ಗಿಂತ ಹೆಚ್ಚಿಗೆ ವಿದ್ಯುತ್ ಬಳಸುವವರಿಗೆ ಗುಡ್ ನ್ಯೂಸ್!

ರಾಜ್ಯ ಸರ್ಕಾರ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾಗುವುದಕ್ಕೂ ಮೊದಲು ಈ ಹೊಸ ದರ ಪರಿಷ್ಕರಣೆ ನಡೆಸಿದ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದರೆ ಯಾವುದೇ ತರ ಪರಿಷ್ಕರಣೆ ಮಾಡಲು ಸಾಧ್ಯವಾಗುವುದಿಲ್ಲ.

ಹಾಗಾಗಿ ಚುನಾವಣೆಗು ಮೊದಲೇ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ. ರಾಜ್ಯದಲ್ಲಿ 100 ಯೂನಿಟ್ ಗಿಂತ ಯಾರು ಹೆಚ್ಚಿನ ವಿದ್ಯುತ್ ಬಳಸುತ್ತಿದ್ದರು ಅಂತವರಿಗೆ ಪ್ರತಿ ಯೂನಿಟ್ಗೆ 1.10 ರೂಪಾಯಿ ಕಡಿತಗೊಳಿಸಲು ಸರ್ಕಾರ ಮುಂದಾಗಿದೆ.

ಇನ್ಮುಂದೆ ಅತ್ತೆಯ ಜೊತೆ ಸೊಸೆಗೂ ಸಿಗುತ್ತಾ ಗೃಹಲಕ್ಷ್ಮಿ ಹಣ! ಇಲ್ಲಿದೆ ಡೀಟೇಲ್ಸ್

Electricity Billಹೌದು, ಸರ್ಕಾರದ ಈ ತರ ಹೇಳಿಕೆ 100 ಯೂನಿಟ್ ಗಿಂತಲೂ ಹೆಚ್ಚಿನ ವಿದ್ಯುತ್ ಬಳಕೆ ಮಾಡುವವರಿಗೆ ಪ್ರಯೋಜನಕಾರಿ ಆಗಿದೆ. 210 ಯೂನಿಟ್ ವಿದ್ಯುತ್ ಬಳಸುವವರಿಗೆ 230 ರೂಪಾಯಿಗಳ ಉಳಿತಾಯ ಆಗಲಿದೆ. ನೂರು ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವವರಿಗೆ ಈ ದರ ಇಳಿಕೆ ಯಾವುದೇ ಪ್ರಯೋಜನ ನೀಡುವುದಿಲ್ಲ.

ರೇಷನ್ ಕಾರ್ಡ್ ಇರೋರಿಗೆ ಮತ್ತೊಂದು ಬೆನಿಫಿಟ್; ಸಿಗಲಿದೆ 5000 ರೂಪಾಯಿ!

ಆದರೆ ರಾಜ್ಯದಲ್ಲಿ ಈಗಾಗಲೇ ಗೃಹಜ್ಯೋತಿ ಯೋಜನೆ ಚಾಲ್ತಿಯಲ್ಲಿ ಇದ್ದು ನೂರು ಯೂನಿಟ್ ಗಿಂತಲೂ ಕಡಿಮೆ ವಿದ್ಯುತ್ ಬಳಕೆ ಮಾಡುವವರಿಗೆ ವಿದ್ಯುತ್ ಬಿಲ್ ಪಾವತಿ ಮಾಡುವ ಅಗತ್ಯವೇ ಇಲ್ಲ. ಒಟ್ಟಿನಲ್ಲಿ ಕಳೆದ ಕೆಲವು ಅವಧಿಗಳಿಂದ ಇಳಿಕೆ ಆಗದೆ ಇದ್ದ ವಿದ್ಯುತ್ ದರ ಪರಿಷ್ಕರಣೆ ಮಾಡಿ, ಬೆಲೆ ಇಳಿಕೆ ಮಾಡಿರುವುದು ಸಾಕಷ್ಟು ಗೃಹ ಬಳಕೆಯ ಗ್ರಾಹಕರಿಗೆ ಅನುಕೂಲವಾಗಿದೆ.

Big Update from the government Along with free electricity