ಇನ್ಮುಂದೆ ಅತ್ತೆಯ ಜೊತೆ ಸೊಸೆಗೂ ಸಿಗುತ್ತಾ ಗೃಹಲಕ್ಷ್ಮಿ ಹಣ! ಇಲ್ಲಿದೆ ಡೀಟೇಲ್ಸ್

ರಾಜ್ಯ ಸರ್ಕಾರ ಮಹಿಳೆಯರ ಸ್ವಾವಲಂಬನೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯನ್ನು ಪರಿಚಯಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಪ್ರಸ್ತುತಪಡಿಸಿದೆ. ಇದರಿಂದ ಪ್ರತಿ ತಿಂಗಳು ಮಹಿಳೆಯರು 2,000 ರೂಪಾಯಿಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ.

ಇನ್ನು ಕೆಲವು ಮಹಿಳೆಯರ ಖಾತೆಗೆ ಜಮಾ ಆಗಿಲ್ಲ ಗೃಹಲಕ್ಷ್ಮಿ ಹಣ!

ಸರ್ಕಾರವೇ ನೀಡಿರುವ ಅಂಕಿ ಅಂಶಗಳ ಪ್ರಕಾರ 80% ನಷ್ಟು ಮಹಿಳೆಯರಿಗೆ ಪ್ರತಿ ತಿಂಗಳು ಜಮಾ ಆಗುತ್ತಿದೆ. ಆದರೆ ಇನ್ನು 20% ನಷ್ಟು ಮಹಿಳೆಯರು ಒಂದು ಕಂತಿನ ಹಣವನ್ನು ಕೂಡ ಪಡೆದುಕೊಂಡಿಲ್ಲ ಅಥವಾ ಇನ್ನೂ ಕೆಲವು ಮಹಿಳೆಯರಿಗೆ ಮೊದಲ ಒಂದೆರಡು ತಿಂಗಳ ಹಣ ಬಂದಿದೆ ನಂತರದ ದಿನಗಳಲ್ಲಿ ಹಣ ಜಮಾ (DBT ) ಆಗಿಲ್ಲ.

ಗೃಹಲಕ್ಷ್ಮಿ ಹಣ ಬಾರದೇ ಇರುವ ಮಹಿಳೆಯರಿಗೆ ಬಂಪರ್ ಸುದ್ದಿ ಕೊಟ್ಟ ಸರ್ಕಾರ!

ಇಷ್ಟಕ್ಕೂ ಮಹಿಳೆಯರ ಖಾತೆಗೆ (Bank Account) ಹಣ ಜಮಾ ಆಗಿಲ್ಲ, ಯಾಕೆ ಎಂದು ನೋಡುವುದಾದರೆ, NPCI mapping, ಈಕೆ ವೈ ಸಿ ಅಪ್ಡೇಟ್ (E-KYC update) ಮೊದಲಾದ ಪ್ರಮುಖ ವಿಷಯಗಳು ಇನ್ನೂವರೆಗೆ ಆಗದೆ ಇರುವ ಹಿನ್ನೆಲೆಯಲ್ಲಿ ಜೊತೆಗೆ ಸರ್ಕಾರದ ಕೆಲವು ತಾಂತ್ರಿಕ ದೋಷಗಳು ಕೂಡ ಮಹಿಳೆಯರ ಖಾತೆಗೆ ಹಣ ಬರುವುದಕ್ಕೆ ಅಡ್ಡವಾಗಿದೆ ಎನ್ನಬಹುದು

ಆದರೆ ಇದೆಲ್ಲವನ್ನ ಪರಿಹರಿಸುವ ಸಲುವಾಗಿ ಸರ್ಕಾರ ಪ್ರತಿ ಜಿಲ್ಲೆಗೆ ಅಧಿಕಾರಿಗಳನ್ನು ಕಳುಹಿಸಿ ಮಹಿಳೆಯರ ಸಮಸ್ಯೆಯನ್ನು ಕೇಳಿ ಪರಿಹಾರ ಸೂಚಿಸುವಂತೆ ತಿಳಿಸಿದೆ.

Gruha Lakshmi Yojanaಅತ್ತೆ ಮರಣ ಹೊಂದಿದ್ರೆ ಸೊಸೆಗೆ ಹಣ!

ಒಂದು ವೇಳೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳುತ್ತಿರುವ ಮಹಿಳೆ ಮರಣ ಹೊಂದಿದರೆ ಮುಂದಿನ ಕಂತಿನ ಹಣ ಯಾರಿಗೆ ಹೋಗುತ್ತದೆ ಎನ್ನುವ ಪ್ರಶ್ನೆ ಹಲವರಲ್ಲಿ ಗೊಂದಲವನ್ನು ಸೃಷ್ಟಿ ಮಾಡಿದೆ. ಇಂತಹ ಘಟನೆಗಳು ಕೂಡ ನಡೆದಿವೆ.

ಸುಮಾರು 3000ಕ್ಕೂ ಹೆಚ್ಚಿನ ಮಹಿಳೆಯರು ಅರ್ಜಿ ಸಲ್ಲಿಸಿದ ನಂತರ ಮರಣ ಹೊಂದಿದ್ದು ಅವರು ಅರ್ಹರಾಗಿದ್ದರು ಕೂಡ ಹಣ ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಹಾಗಾದ್ರೆ ಆ ಹಣ ಯಾರಿಗೆ ಸಲ್ಲಬೇಕು ಎಂದು ಮನೆಯವರ ಪ್ರಶ್ನೆಯಾಗಿದೆ.

ಹೊಸ ರೇಷನ್ ಕಾರ್ಡ್ ಕುರಿತು ಬಿಗ್ ಅಪ್ಡೇಟ್! ಈ ದಿನ ಸಿಗಲಿದೆ ಹೊಸ ಕಾರ್ಡ್

ಸರ್ಕಾರ ಇದಕ್ಕೂ ಪರಿಹಾರವನ್ನು ಕೊಟ್ಟಿದ್ದು ಒಂದು ವೇಳೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳುತ್ತಿರುವ ಮಹಿಳೆ ಮರಣ ಹೊಂದಿದರೆ, ಆಕೆಯ ಖಾತೆಗೆ ಬರಬೇಕಿದ್ದ ಹಣವನ್ನು ಆಕೆಯ ಹಿರಿಯ ಸೊಸೆ ಪಡೆದುಕೊಳ್ಳಲು ಸಾಧ್ಯವಿದೆ.

ಇದಕ್ಕಾಗಿ ರೇಷನ್ ಕಾರ್ಡ್ ನ ಯಜಮಾನಿಯ ಸ್ಥಾನದಲ್ಲಿ ಸೊಸೆಯ ಹೆಸರನ್ನು ಸೇರಿಸಬೇಕು ಹಾಗೂ ಅತ್ತೆ ಮರಣ ಹೊಂದಿರುವ ಬಗ್ಗೆ ಅಧಿಕೃತ ಮಾಹಿತಿ ನೀಡಿ ಅರ್ಜಿ ಸಲ್ಲಿಸಿದರೆ ಅವರ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಗೃಹಲಕ್ಷ್ಮಿ ಯೋಜನೆಯ 6 ಕಂತಿನ ಹಣ ಈಗಾಗಲೇ ಬಿಡುಗಡೆ ಆಗಿದೆ. ಇನ್ನು 7ನೇ ಕಂತಿನ ಹಣ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು ಮಾರ್ಚ್ 20 ನೇ ತಾರೀಖಿನ ಒಳಗೆ ಮತ್ತೆ 2,000 ರೂಪಾಯಿ ಫಲಾನುಭವಿಗಳ ಖಾತೆಯನ್ನು ಸೇರಲಿವೆ.

ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ, ರೈತರಿಗೆ ಸಿಗಲಿದೆ 10,000 ಸಹಾಯಧನ!

daughter-in-law will also get Gruha Lakshmi Scheme money

Related Stories