ಗೃಹಲಕ್ಷ್ಮಿ ಹಣ ಬಾರದೇ ಇರುವ ಮಹಿಳೆಯರಿಗೆ ಬಂಪರ್ ಸುದ್ದಿ ಕೊಟ್ಟ ಸರ್ಕಾರ!
ಸಣ್ಣಪುಟ್ಟ ಸಮಸ್ಯೆಗಳನ್ನ ಪರಿಹರಿಸಿಕೊಂಡು ಮುಂದಿನ ತಿಂಗಳ ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಬರುವಂತೆ ಮಾಡಿಕೊಳ್ಳಿ
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಸಾಕಷ್ಟು ಸವಾಲುಗಳನ್ನು ಎದುರಿಸಿ ಇಂದು ಬಹುತೇಕ ಯಶಸ್ಸಿನ ಹಾದಿಯಲ್ಲಿ ಇದೆ ಎನ್ನಬಹುದು. ಯಾಕೆಂದರೆ ಕೋಟ್ಯಾಂತರ ಜನ ಈ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿ ಇಂದು ಪ್ರತಿ ತಿಂಗಳು 2000ಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ.
ಇಷ್ಟಾಗಿಯೂ ಕೆಲವು ಫಲಾನುಭವಿ ಮಹಿಳೆಯರ ಖಾತೆಗೆ (Bank Account) ಹಣ ಬಾರದೆ ಇರುವ ಹಿನ್ನೆಲೆಯಲ್ಲಿ ಮಹಿಳೆಯರ ಅಸಮಾಧಾನ ಕೂಡ ಈ ಯೋಜನೆಗೆ ಕಾರಣವಾಗಿದೆ ಎನ್ನಬಹುದು.
ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಬಹಳ ಮುಖ್ಯವಾಗಿರುವ ಯೋಜನೆ ಎನ್ನಬಹುದು ರಾಜ್ಯದಲ್ಲಿ ಈ ಯೋಜನೆಯ ಬಗ್ಗೆ ನಡೆದಷ್ಟು ಚರ್ಚೆ ಬೇರೆ ಯಾವ ಯೋಜನೆಯ ಬಗ್ಗೆ ನಡೆದಿರಲು ಸಾಧ್ಯವೇ ಇಲ್ಲ.
ಹೊಸ ರೇಷನ್ ಕಾರ್ಡ್ ಕುರಿತು ಬಿಗ್ ಅಪ್ಡೇಟ್! ಈ ದಿನ ಸಿಗಲಿದೆ ಹೊಸ ಕಾರ್ಡ್
ಅಷ್ಟರಮಟ್ಟಿಗೆ ಇದು ಫೇಮಸ್ ಆಗಿದೆ. ಇಲ್ಲಿಯವರೆಗೆ ಆರು ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದ್ದು ಪ್ರತಿ ಕಂತಿಗೆ ಎರಡು ಸಾವಿರ ರೂಪಾಯಿಗಳಂತೆ 12,000ಗಳನ್ನು ಉಚಿತವಾಗಿ ಮಾಡಿಕೊಂಡಿದ್ದಾರೆ. ಮಹಿಳೆಯರ ಸಬಲೀಕರಣ ಸರ್ಕಾರದ ಉದ್ದೇಶವಾಗಿದ್ದು ಈ ಉದ್ದೇಶ ಸಫಲವಾಗಿದೆ ಎನ್ನಬಹುದು.
8.2 ಲಕ್ಷ ಮಹಿಳೆಯರ ಖಾತೆಗೆ ಬಂದಿಲ್ಲ ಹಣ!
ಇನ್ನು ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಂತಿನ ಹಣ ಎಲ್ಲಾ ಮಹಿಳೆಯರಿಗೂ ತಲುಪಿದೆ ಎನ್ನುವ ಪ್ರಶ್ನೆ ಬಂದರೆ ಇಲ್ಲ ಎಂದೆ ಹೇಳಬೇಕು. ಯಾಕಂದ್ರೆ ಮಹಿಳೆಯರಿಗೆ ಹಣ ವರ್ಗಾವಣೆ ಮಾಡುವ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಕೂಡ ಮೂಡಿವೆ.
ಸುಮಾರು 8.2 ಲಕ್ಷ ಮಹಿಳೆಯರ ಖಾತೆಗೆ ಹಣ ಬಂದಿಲ್ಲ ಇದಕ್ಕೆ ಕೆ ವೈ ಸಿ ಅಪ್ಡೇಟ್ ಆಗದೆ ಇರುವುದು, ಹಾಗೂ npci ಮ್ಯಾಪಿಂಗ್ ಆಗದೆ ಇರುವುದು ಕೂಡ ಮುಖ್ಯ ಕಾರಣವಾಗಿದೆ. ಸರ್ವರ್ ಸಮಸ್ಯೆ ಹಾಗೂ ಮತ್ತಿತರ ತಾಂತ್ರಿಕ ದೋಷಗಳು ಮಹಿಳೆಯರ ಖಾತೆಗೆ ಹಣ ಬಾರದಂತೆ ಮಾಡಿವೆ.
ಗ್ರಾಮ ಪಂಚಾಯತ್ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ! ಕೈ ತುಂಬಾ ಸಂಬಳ
ಹಣ ಬಂದೇ ಬರುತ್ತೆ – ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ!
ಹೌದು, ಇತ್ತೀಚಿಗೆ ಕಲಾಪದಲ್ಲಿ ಮಾತನಾಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಾಕಷ್ಟು ಮಹಿಳೆಯರ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇರುವ, ಹಣ ಜಮಾ ಆಗಿಲ್ಲ. ಹಾಗಂತ ಯಾರೋ ಚಿಂತೆ ಪಟ್ಟುಕೊಳ್ಳುವ ಅಗತ್ಯ ಇಲ್ಲ ಎಲ್ಲಾ ತಾಂತ್ರಿಕ ದೋಷಗಳನ್ನು ಕೂಡ ಪರಿಹರಿಸಿ ಪ್ರತಿಯೊಬ್ಬರ ಖಾತೆಗೆ ಹಣ ಬರುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆಗೆ ಸರ್ಕಾರ ಹೊಸ ತಂತ್ರ! ಮಹಿಳೆಯರಿಗೆ ಬಿಗ್ ರಿಲೀಫ್
ಕಳೆದ ತಿಂಗಳು ಕೂಡ ಇದೇ ಭರವಸೆಯನ್ನು ಸರ್ಕಾರ ನೀಡಿದ್ದು ಆದರೂ ಹಲವರ ಖಾತೆಗೆ ಹಣ ಮಾತ್ರ ವರ್ಗಾವಣೆ ಆಗಿಲ್ಲ. ಆದರೆ hope for the best ಎನ್ನುವಂತೆ ನಿಮ್ಮ ಖಾತೆಯಲ್ಲಿ ಇರುವ ಸಣ್ಣಪುಟ್ಟ ಸಮಸ್ಯೆಗಳನ್ನ ಪರಿಹರಿಸಿಕೊಳ್ಳಲು ಪ್ರಯತ್ನಿಸಿ ಹಾಗೂ ಮುಂದಿನ ತಿಂಗಳ ಹಣ ನಿಮ್ಮ ಖಾತೆಗೆ ಬರುವಂತೆ ಮಾಡಿಕೊಳ್ಳಿ. ನಿಮಗೆ ಯಾವುದೇ ಸಮಸ್ಯೆಗೆ ಪರಿಹಾರ ಬೇಕಿದ್ದಲ್ಲಿ ಸಿಡಿಪಿಓ ಕಚೇರಿಗೆ ಭೇಟಿ ಮಾಡಿ ಅಧಿಕಾರಿಗಳಿಗೆ ನಿಮ್ಮ ಸಮಸ್ಯೆಯನ್ನು ತಿಳಿಸಿ ಪರಿಹಾರ ಪಡೆದುಕೊಳ್ಳಬಹುದು.
ಇಲ್ಲಿದೆ ಸಿಹಿ ಸುದ್ದಿ! ಹೊಸ ರೇಷನ್ ಕಾರ್ಡ್ ವಿತರಣೆ ದಿನಾಂಕ ಘೋಷಿಸಿದ ಸರ್ಕಾರ
The government has given Update to who are not getting Gruha Lakshmi Scheme money