ಇಲ್ಲಿದೆ ಸಿಹಿ ಸುದ್ದಿ! ಹೊಸ ರೇಷನ್ ಕಾರ್ಡ್ ವಿತರಣೆ ದಿನಾಂಕ ಘೋಷಿಸಿದ ಸರ್ಕಾರ

ಇದೇ ಮಾರ್ಚ್ 31ರ ಒಳಗೆ ಅರ್ಜಿ ಪರಿಶೀಲನೆ ನಡೆಸಿ ಏಪ್ರಿಲ್ ಒಂದರಿಂದ ಹೊಸ ಪಡಿತರ ಚೀಟಿ ವಿತರಣೆ ಕಾರ್ಯ ಆರಂಭವಾಗಲಿದೆ.

ಹೊಸ ಪಡಿತರ ಚೀಟಿ (new ration card) ಇವತ್ತು ಸಿಗುತ್ತೆ, ನಾಳೆ ಸಿಗತ್ತೆ ಅಂತ ಶಬರಿಯಂತೆ ಕಳೆದ ಎರಡುವರೆ ವರ್ಷಗಳಿಂದ ಕಾಯುತ್ತಿರುವವರಿಗೆ ಸರ್ಕಾರ ಇದೀಗ ಗುಡ್ ನ್ಯೂಸ್ ನೀಡಿದೆ.

ಇನ್ನು ಮುಂದೆ ಟೆನ್ಶನ್ ಬೇಡ, ಸರಕಾರದ ಯಾವ ಯೋಜನೆ ಪ್ರಯೋಜನನ್ನು ಕೂಡ ನಿಮ್ಮ ಕೈ ತಪ್ಪಿ ಹೋಗುವುದಿಲ್ಲ. ಯಾಕಂದ್ರೆ ಸರ್ಕಾರ ಕಡೆಗೂ ಮೂರು ವರ್ಷಗಳಿಂದಲೂ ಬಿಡುಗಡೆ ಆಗದೆ ಇರುವ ಹೊಸ ಪಡಿತರ ಚೀಟಿಗಳನ್ನು ವಿತರಣೆ ಮಾಡಲು ಮುಂದಾಗಿದೆ.

ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣಕ್ಕಾಗಿ ಕಾಯುತ್ತಿರುವ ಜನರಿಗೆ ಹೊಸ ಅಪ್ಡೇಟ್

ಇಲ್ಲಿದೆ ಸಿಹಿ ಸುದ್ದಿ! ಹೊಸ ರೇಷನ್ ಕಾರ್ಡ್ ವಿತರಣೆ ದಿನಾಂಕ ಘೋಷಿಸಿದ ಸರ್ಕಾರ - Kannada News

ಎಲ್ಲಾ ಪಡಿತರ ಅರ್ಜಿಗಳ ಪರಿಶೀಲನೆ ಆರಂಭ!

ಬಡತನ ರೇಖೆಗಿಂತ ಕೆಳಗಿರುವವರು ಮಾತ್ರವಲ್ಲದೆ ಉಳ್ಳವರು ಕೂಡ ಬಿಪಿಎಲ್ ಪಡಿತರ ಚೀಟಿ (BPL Ration card) ಪಡೆದುಕೊಳ್ಳುವುದಕ್ಕಾಗಿಯೇ ಅರ್ಜಿ ಸಲ್ಲಿಸಿರುವುದು ವಿಪರ್ಯಾಸ ಹಾಗಾಗಿ ಈ ಅರ್ಜಿಗಳನ್ನು ವಿಲೇವಾರಿ ಮಾಡುವುದಕ್ಕೂ ಮೊದಲು ಅರ್ಜಿಗಳ ಪರಿಶೀಲನೆ ಮಾಡುವುದು ಸರ್ಕಾರಕ್ಕೆ ದೊಡ್ಡ ಕೆಲಸವಾಗಿದೆ.

ಆದರೆ ಆಹಾರ ಸಚಿವ ಕೆ ಹೆಚ್ ಮುನಿಯಪ್ಪ ಅವರು ತಿಳಿಸಿರುವಂತೆ ಇದೇ ಮಾರ್ಚ್ 31ರ ಒಳಗೆ ಅರ್ಜಿ ಪರಿಶೀಲನೆ ನಡೆಸಿ ಏಪ್ರಿಲ್ ಒಂದರಿಂದ ಹೊಸ ಪಡಿತರ ವಿತರಣೆ ಕಾರ್ಯ ಆರಂಭವಾಗಲಿದೆ. ನಿಮ್ಮ ಹತ್ತಿರದ ಸೇವಾ ಕೇಂದ್ರಗಳಲ್ಲಿ ಅಥವಾ ನ್ಯಾಯಬೆಲೆ ಅಂಗಡಿಯಲ್ಲಿ ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಅವಕಾಶ ನೀಡುವ ಸಾಧ್ಯತೆ ಇದೆ.

ಯಶಸ್ವಿನಿ ಕಾರ್ಡ್ ಮಾಡಿಸಿಕೊಳ್ಳಿ 5 ಲಕ್ಷ ಬೆನಿಫಿಟ್ ಪಡೆಯಿರಿ! ಬಂಪರ್ ಯೋಜನೆ

ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು!

ಇನ್ನು ಈಗಾಗಲೇ ಸಮಿತಿ ಆಗಿರುವ ಪಡಿತರ ಚೀಟಿ ಅರ್ಜಿಗಳ ವಿಲೇವಾರಿ ಜೊತೆಗೆ ಹೊಸದಾಗಿ ಅರ್ಜಿ ಸಲ್ಲಿಸುವ ಅವರಿಗೂ ಕೂಡ ಕರ್ನಾಟಕ ರಾಜ್ಯ ಸರ್ಕಾರ ಅವಕಾಶ ಮಾಡಿಕೊಡಲಿದೆ. ಅದಕ್ಕೂ ಕೂಡ ಕೆಲವು ಪ್ರಮುಖ ಮಾನದಂಡಗಳು ಇವೆ.

ಉದಾಹರಣೆಗೆ ಹೊಸದಾಗಿ ಮದುವೆ ಆಗಿರುವ ನವ ದಂಪತಿಗಳು ಅರ್ಜಿ ಸಲ್ಲಿಸಬಹುದು. ಅಥವಾ ಈಗಾಗಲೇ ಒಂದು ಕುಟುಂಬದಲ್ಲಿ ಇದ್ದು ಆ ಕುಟುಂಬದಲ್ಲಿ ರೇಷನ್ ಕಾರ್ಡ್ ನಲ್ಲಿ ಹೆಸರು ಇದ್ದರೆ ಆ ಹೆಸರನ್ನ ತೆಗೆಸಿ ನೀವೇ ಬೇರೆ ಮನೆಯಲ್ಲಿ ವಾಸಿಸುವುದಿದ್ದರೆ, ಆಗಲು ಅರ್ಜಿ ಸಲ್ಲಿಸಬಹುದು.

ಇವುಗಳನ್ನು ಹೊರತುಪಡಿಸಿ ಕೆಲವು ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಸರ್ಕಾರದ ಉಚಿತ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳುವುದಕ್ಕಾಗಿ ಬಯಸುವವರು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದು.

ಗೃಹಲಕ್ಷ್ಮಿ ಹಣ ಬಂದಿಲ್ಲ ಅನ್ನೋ ಮಹಿಳೆಯರಿಗೆ ಸಿಕ್ತು ಪರಿಹಾರ! ಇಲ್ಲಿದೆ ಮಾಹಿತಿ

BPL Ration Cardರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ!

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ ನಂತರ ಆ ಯೋಜನೆಗಳಿಗೆ ಪಡಿತರ ಚೀಟಿ ಅದರಲ್ಲೂ ಬಿಪಿಎಲ್ ಕಾರ್ಡ್ ಬಹಳ ಮುಖ್ಯವಾಗಿರುವ ದಾಖಲೆ ಎಂದು ಪರಿಗಣಿಸಿರುವ ಹಿನ್ನೆಲೆಯಲ್ಲಿ ಈಗಾಗಲೇ 4-5 ಬಾರಿ ಪಡಿತರ ಚೀಟಿಯಲ್ಲಿ ಕರೆಕ್ಷನ್ ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡಿತ್ತು.

ನಿಮ್ಮ ಪಡಿತದ ಚೀಟಿಯಲ್ಲಿ ಹೆಸರು ಬದಲಾವಣೆ, ವಿಳಾಸ ಬದಲಾವಣೆ, ಜನ್ಮ ದಿನಾಂಕ ಬದಲಾವಣೆ, ಹೊಸ ಹೆಸರುಗಳ ಸೇರ್ಪಡೆ, ಹಳೆಯ ಸದಸ್ಯರ ಹೆಸರನ್ನು ತೆಗೆದುಹಾಕುವುದು, ಮೃತಪಟ್ಟ ಸದಸ್ಯರ ಹೆಸರನ್ನು ತೆಗೆದುಹಾಕುವುದು ಹೀಗೆ ಎಲ್ಲ ರೀತಿಯ ತಿದ್ದುಪಡಿಗೆ ಸರ್ಕಾರ ಮತ್ತೆ ಅವಕಾಶ ನೀಡಲಿದೆ.

ಹೊಸ ರೇಷನ್ ಕಾರ್ಡ್ ವಿತರಣೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸರ್ಕಾರ; ಇಲ್ಲಿದೆ ಡೀಟೇಲ್ಸ್

ಅರ್ಜಿ ಸಲ್ಲಿಸುವುದು ಹೇಗೆ?

ಹೊಸ ಪಡಿತರ ಚೀಟಿ ಗಾಗಿ ಅಥವಾ ಪಡಿತರ ಚೀಟಿ ತಿದ್ದುಪಡಿಗಾಗಿ ನೀವು ಹತ್ತಿರದ ಗ್ರಾಮ ಒನ್, ಬಾಪೂಜಿ ಕೇಂದ್ರ, ಕರ್ನಾಟಕ ಒನ್ ಮೊದಲದ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದರು ಕೂಡ ನೀವು ಅದನ್ನು ಮನೆಯಲ್ಲಿ ಕುಳಿತು ಮಾಡಲು ಸಾಧ್ಯವಿಲ್ಲ. ಯಾಕಂದ್ರೆ ಸೇವಾ ಕೇಂದ್ರಗಳಲ್ಲಿ ವಿಶೇಷವಾದ ಯೂಸರ್ ಐಡಿ ಮತ್ತು ಪಾಸ್ವರ್ಡ್ ಮೂಲಕ ಮಾತ್ರ ವೆಬ್ ಪೋರ್ಟಲ್ ತೆರೆದುಕೊಳ್ಳುತ್ತದೆ. ಹಾಗಾಗಿ ನೀವು ನಿಮ್ಮ ಸ್ಲಾಟ್ ಕಾಯ್ದಿರಿಸಿಕೊಂಡು ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.

New ration card release date announced by Govt

Follow us On

FaceBook Google News

New ration card release date announced by Govt