Karnataka NewsBangalore News

ಯಶಸ್ವಿನಿ ಕಾರ್ಡ್ ಮಾಡಿಸಿಕೊಳ್ಳಿ 5 ಲಕ್ಷ ಬೆನಿಫಿಟ್ ಪಡೆಯಿರಿ! ಬಂಪರ್ ಯೋಜನೆ

ಸಹಕಾರಿ ಸಂಘಗಳ ಮೂಲಕ ಯಶಸ್ವಿನಿ ಕಾರ್ಡ್ (yashaswini card) ಹೊಂದಿದ್ದರೆ ಅತಿ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಸೌಲಭ್ಯ (medical facility) ವನ್ನು ಪಡೆದುಕೊಳ್ಳಬಹುದು.

ಹೀಗಾಗಿ ಸರ್ಕಾರ ಮತ್ತೆ ಯಶಸ್ವಿನಿ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡುತ್ತಿದೆ. ಇದರಿಂದ ಸಾಕಷ್ಟು ಬಡವರು ಅತಿ ಕಡಿಮೆ ವೆಚ್ಚದಲ್ಲಿ ಆರೋಗ್ಯ ವಿಮೆ (Health Insurance) ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿದೆ.

Get Yashaswini Card and Get 5 Lakh Benefit

ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣಕ್ಕಾಗಿ ಕಾಯುತ್ತಿರುವ ಜನರಿಗೆ ಹೊಸ ಅಪ್ಡೇಟ್

ಸಾಮಾನ್ಯವಾಗಿ ಆರೋಗ್ಯ ವಿಮೆ ಅಥವಾ ಅಪಘಾತ ವಿಮೆ ಮೊದಲಾದ ವಿಮಾ ಸವಲಭ್ಯಗಳನ್ನು ನೀವು ಪಡೆದುಕೊಳ್ಳಲು ಹೆಚ್ಚಿನ ಮೊತ್ತದ ಪ್ರೀಮಿಯಂ ಪಾವತಿಸಬೇಕು ಆದರೆ ನೀವು ಸಹಕಾರಿ ಸಂಘಗಳಲ್ಲಿ ಸದಸ್ಯತ್ವವನ್ನು ಪಡೆದುಕೊಂಡಿದ್ದರು ಅತಿ ಕಡಿಮೆ ಬೆಲೆಯಲ್ಲಿ ಯಶಸ್ವಿನಿ ಕಾರ್ಡ್ ಪಡೆದುಕೊಳ್ಳಲು ಸಾಧ್ಯವಿದೆ. ಇದರಿಂದ ಸಾಕಷ್ಟು ವೈದ್ಯಕೀಯ ಚಿಕಿತ್ಸೆಗಳನ್ನು ನಗದು ರಹಿತವಾಗಿ ಪಡೆದುಕೊಳ್ಳಲು ಸಾಧ್ಯವಿದೆ.

ಸದಸ್ಯತ್ವದ ಅಪ್ಡೇಟ್!

ಹೊಸದಾಗಿ ಯಶಸ್ವಿನಿ ಕಾರ್ಡ್ ಮಾಡಿಸಿಕೊಳ್ಳುವವರಿಗೆ ಹಾಗೂ ಈಗಾಗಲೇ ಇರುವ ಯಶಸ್ವಿನಿ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳುವವರಿಗೆ ಸಹಕಾರ ಸಂಘಗಳಿಂದ ಅಪ್ಡೇಟ್ ನೀಡಲಾಗಿದೆ. ನೀವು ಸಹಕಾರಿ ಸಂಘಗಳಲ್ಲಿ ಸದಸ್ಯತ್ವವನ್ನು ಹೊಂದಿದ್ದು ಅದನ್ನು ನವೀಕರಿಸಿಕೊಳ್ಳಲು ಫೆಬ್ರವರಿ 29, 2024 ಕೊನೆಯ ದಿನಾಂಕ ಎಂದು ತಿಳಿಸಲಾಗಿದೆ.

ಗೃಹಲಕ್ಷ್ಮಿ ಹಣ ಬಂದಿಲ್ಲ ಅನ್ನೋ ಮಹಿಳೆಯರಿಗೆ ಸಿಕ್ತು ಪರಿಹಾರ! ಇಲ್ಲಿದೆ ಮಾಹಿತಿ

ಯಶಸ್ವಿನಿ ಕಾರ್ಡ್ ನ ಪ್ರಯೋಜನಗಳು!

*ಸಹಕಾರಿ ಸಂಘಗಳ ಸದಸ್ಯತ್ವವನ್ನು ಪಡೆದುಕೊಂಡಿರುವ ಕುಟುಂಬ ಐದು ಲಕ್ಷ ರೂಪಾಯಿಗಳನ್ನು ವಾರ್ಷಿಕವಾಗಿ ನಗದು ರಹಿತ ಚಿಕಿತ್ಸೆಗಾಗಿ ಸರ್ಕಾರದಿಂದ ಪಡೆದುಕೊಳ್ಳಬಹುದು. ಯಶಸ್ವಿನಿ ಕಾರ್ಡ್ ನೆಟ್ವರ್ಕ್ ಹೊಂದಿರುವ ಆಸ್ಪತ್ರೆಗಳಲ್ಲಿ ಮಾತ್ರ ಈ ಸೇವೆ ಲಭ್ಯವಿದೆ ಎಂಬುದನ್ನು ಗಮನಿಸಿ.

*ಹೃದಯಕ್ಕೆ ಸಂಬಂಧಿಸಿದ ರೋಗಗಳು, ಕಿವಿ, ಕಣ್ಣು, ಮೂಗು, ಗಂಟಲು ಹೀಗೆ ಸಾಮಾನ್ಯ ಕಾಯಿಲೆಗಳವರೆಗೂ ಕೂಡ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ ಇದೆ.

*ಯಶಸ್ವಿನಿ ಕಾರ್ಡ್ ಅನ್ನು ರಾಜ್ಯಾದ್ಯಂತ ಸುಮಾರು 1650 ನೋಂದಾಯಿತ ಆಸ್ಪತ್ರೆಗಳಲ್ಲಿ ಬಳಸಿಕೊಳ್ಳಬಹುದಾಗಿದೆ.

ಒಬ್ಬ ವ್ಯಕ್ತಿ ಆಸ್ಪತ್ರೆಗೆ ದಾಖಲಾದ ನಂತರ ಔಷಧಿ ವೆಚ್ಚ, ಆಸ್ಪತ್ರೆಯ ಇತರ ವೆಚ್ಚ, ಆಪರೇಷನ್ ವೆಚ್ಚ ಮೊದಲಾದವುಗಳನ್ನು ಇದೇ ಯಶಸ್ವಿನಿ ಕಾರ್ಡ್ ಅಡಿಯಲ್ಲಿ ಪಡೆದುಕೊಳ್ಳಬಹುದು. ಇನ್ನು ವಿಮೆ ಹೊಂದಿರುವ ವ್ಯಕ್ತಿ ಆಸ್ಪತ್ರೆಗೆ ದಾಖಲಾದ್ರೆ ಜನರಲ್ ವಾರ್ಡ್ನಲ್ಲಿ ಮಾತ್ರ ಇರಬಹುದು. ಸ್ಪೆಷಲ್ ವಾರ್ಡ್ ನಲ್ಲಿ ಇರುವವರಿಗೆ ಯೋಜನೆ ಅಪ್ಲೈ ಆಗುವುದಿಲ್ಲ.

ಹೊಸ ರೇಷನ್ ಕಾರ್ಡ್ ವಿತರಣೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸರ್ಕಾರ; ಇಲ್ಲಿದೆ ಡೀಟೇಲ್ಸ್

Yashaswini cardಯಶಸ್ವಿನಿ ಕಾರ್ಡ್ ಮಾಡಿಸಿಕೊಳ್ಳಲು ಶುಲ್ಕ!

ನಗರವಾಸಿಗಳಿಗೆ ಮನೆಯ ಕುಟುಂಬದ ನಾಲ್ಕು ಸದಸ್ಯರಿಗೆ ಸೇರಿ 1000 ರೂಪಾಯಿ ಪಾವತಿಸಬೇಕು ಹೆಚ್ಚಿನ ಸದಸ್ಯರಿದರೆ ಪ್ರತಿ ಸದಸ್ಯರಿಗೆ 200 ರೂಪಾಯಿ ಹೆಚ್ಚುವರಿಯಾಗಿ ಪಾವತಿಸಬೇಕು.

ಗ್ರಾಮವಾಸಿಗಳಿಗೆ 500 ರೂಪಾಯಿಗಳನ್ನು ನಾಲ್ಕು ಜನ ಇರುವ ಕುಟುಂಬದ ಸದಸ್ಯರು ಪಾವತಿಸಬೇಕು. ಹೆಚ್ಚುವರಿ ಸದಸ್ಯರಿದ್ದರೆ ಪ್ರತಿ ಸದಸ್ಯರಿಗೆ ತಲಾ 100 ರೂಪಾಯಿಗಳನ್ನು ಹೆಚ್ಚುವರಿಯಾಗಿ ಪಾವತಿಸಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶುಲ್ಕ ಇಲ್ಲ.

ಇನ್ನೂ ಗೃಹಲಕ್ಷ್ಮಿ ಯೋಜನೆ ಹಣ ಖಾತೆಗೆ ಜಮಾ ಆಗದೇ ಇರೋರಿಗೆ ಭರ್ಜರಿ ಸುದ್ದಿ!

ಯಶಸ್ವಿನಿ ಕಾಡು ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು

ಆಧಾರ್ ಕಾರ್ಡ್
ರೇಷನ್ ಕಾರ್ಡ್
ಮನೆ ಪ್ರತಿಯೊಬ್ಬರ ಫೋಟೋ
ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರ ಜಾತಿ ಪ್ರಮಾಣ ಪತ್ರ.

ಅರ್ಜಿ ಸಲ್ಲಿಸುವುದು ಹೇಗೆ?

ಹತ್ತಿರದ ವ್ಯವಸಾಯ ಸೇವಾ ಸಹಕಾರಿ ಸಂಘ ಅಂದ್ರೆ ಸೊಸೈಟಿಯಲ್ಲಿ ಅಗತ್ಯ ಇರುವ ದಾಖಲೆಗಳನ್ನು ನೀಡಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 29 2024.

Get Yashaswini Card and Get 5 Lakh Benefit

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories