ಇನ್ನೂ ಗೃಹಲಕ್ಷ್ಮಿ ಯೋಜನೆ ಹಣ ಖಾತೆಗೆ ಜಮಾ ಆಗದೇ ಇರೋರಿಗೆ ಭರ್ಜರಿ ಸುದ್ದಿ!
ಅಗಸ್ಟ್ 31ನೇ ತಾರೀಖಿನಿಂದ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 2,000 ಗಳನ್ನು ಮಹಿಳೆಯರ ಖಾತೆಗೆ (Bank Account) ಜಮಾ ಮಾಡುವ ಪ್ರಕ್ರಿಯೆ ಆರಂಭವಾಯಿತು.
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಮೂಲಕ ಈಗಾಗಲೇ ಸಾಕಷ್ಟು ಮಹಿಳೆಯರು ಆರು ಕಂತುಗಳ ಹಣವನ್ನು ಅಂದರೆ 12,000ಗಳನ್ನು ಸರ್ಕಾರದಿಂದ ಉಚಿತವಾಗಿ ಪಡೆದುಕೊಂಡಿದ್ದಾರೆ.
ಮಹಿಳೆಯರ ಸಣ್ಣ ಪುಟ್ಟ ತಿಂಗಳ ಖರ್ಚುಗಳನ್ನು ನಿಭಾಯಿಸಲು ಪ್ರತಿ ತಿಂಗಳು ನೀಡುತ್ತಿರುವ ಎರಡು ಸಾವಿರ ರೂಪಾಯಿಗಳು ನಿಜಕ್ಕೂ ಉತ್ತಮ ಲಾಭ ನೀಡಿದೆ ಎನ್ನಬಹುದು. ಈ ನಿಟ್ಟಿನಲ್ಲಿ ಸಾಕಷ್ಟು ಏಳು ಬೀಳುಗಳ ನಡುವೆ ಗೃಹಲಕ್ಷ್ಮಿ ಯೋಜನೆ ಬಹುತೇಕ ಯಶಸ್ವಿಯಾಗಿದೆ.
ರದ್ದಾದ ರೇಷನ್ ಕಾರ್ಡ್ ಪಟ್ಟಿ ಪ್ರಕಟ! ನಿಮ್ಮ ಹೆಸರು ಸಹ ಇದಿಯಾ ಚೆಕ್ ಮಾಡಿ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿಯೇ ಹೆಚ್ಚಿನ ಅನುದಾನವನ್ನು ಪಡೆದುಕೊಂಡಿರುವ ಯೋಜನೆ ಗೃಹಲಕ್ಷ್ಮಿ ಯೋಜನೆ. ಈ ಯೋಜನೆಗೆ ಕೋಟ್ಯಾಂತರ ಕರ್ನಾಟಕದ ಮಹಿಳೆಯರು ಅರ್ಜಿ ಸಲ್ಲಿಸಿ, ಇಂದು ಸರ್ಕಾರದಿಂದ ಉಚಿತ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ.
ಆದರೆ ಈಗ ಗೃಹಲಕ್ಷ್ಮಿ ಯೋಜನೆಯ ಸಾಧಕ- ಬಾಧಕಗಳನ್ನು ನೋಡಿದಾಗ ಅರ್ಹ ಫಲಾನುಭವಿ ಮಹಿಳೆಯರು ಕೂಡ ಹಣ ಪಡೆಯದೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ.
ಆರು ಕಂತಿನ ಹಣ ಬಿಡುಗಡೆ ಆದ್ರೂ ಎಲ್ಲಾ ಮಹಿಳೆಯರಿಗೆ ತಲುಪಿದೆಯೇ?
ಅಗಸ್ಟ್ 31ನೇ ತಾರೀಖಿನಿಂದ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 2,000 ಗಳನ್ನು ಮಹಿಳೆಯರ ಖಾತೆಗೆ (Bank Account) ಜಮಾ ಮಾಡುವ ಪ್ರಕ್ರಿಯೆ ಆರಂಭವಾಯಿತು. ಇಲ್ಲಿಯವರೆಗೆ ಆರು ಕಂತುಗಳನ್ನು ಬಿಡುಗಡೆ ಮಾಡಲಾಗಿದ್ದು, ಸಾಕಷ್ಟು ಮಹಿಳೆಯರು 12 ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ.
ಇಷ್ಟಾಗಿಯೂ ಸುಮಾರು 8.20 ಲಕ್ಷ ಮಹಿಳೆಯರು ಇದುವರೆಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನೇ ನೋಡಿಲ್ಲ. ಅಥವಾ ಕೆಲವರಿಗೆ ಒಂದೆರಡು ತಿಂಗಳಿನ ಉಳಿದ ಕಂತಿನ ಹಣ ಬಂದೆ ಇಲ್ಲ. ಇದಕ್ಕೆ ಪ್ರಮುಖ ಕಾರಣ ತಾಂತ್ರಿಕ ಸಮಸ್ಯೆ (technical issues ) ಇರಬಹುದು. ಅಥವಾ ಮಹಿಳೆಯರು ಕೆವೈಸಿ ಅಪ್ಡೇಟ್ (E-KYC update) ಮಾಡಿಸಿಕೊಳ್ಳದೆ ಇರುವುದು, ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ (ration Card correction) ಆಗದೆ ಇರುವುದು ಅಥವಾ ಅಪ್ಡೇಟ್ ಆಗದೆ ಇರುವುದು ರೇಷನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಆಗದೆ ಇರುವುದು ಹೀಗೆ ಬೇರೆ ಬೇರೆ ಕಾರಣಗಳು ಕೂಡ ಸೇರಿವೆ.
ಯುವನಿಧಿ ಯೋಜನೆ ಹಣ ಪಡೆಯೋಕೆ ಹೊಸ ನಿಯಮ! ಇನ್ಮುಂದೆ ಈ ದಾಖಲೆ ಕಡ್ಡಾಯ
ಅರ್ಹ ಫಲಾನುಭವಿಗಳಿಗೆ ಹಣ ಸಿಗುವುದಿಲ್ಲವೇ?
ಈ ಬಗ್ಗೆ ವಿಧಾನಸಭಾ ಕಲಾಪದಲ್ಲಿ ಚರ್ಚೆ ಮಾಡಲಾಗಿದೆ. ಮಹಿಳೆಯರಿಗೆ ಇನ್ನೂ ಹಣ ಜಮಾ ಆಗಿಲ್ಲ ಎನ್ನುವ ವಿಚಾರವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಅವರನ್ನು ಪ್ರಶ್ನೆ ಮಾಡಲಾಗಿತ್ತು.
ಅದಕ್ಕೆ ಉತ್ತರ ನೀಡಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಮಹಿಳೆಯರ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇರುವ ಕಾರಣ ಅಂತಹ ಮಹಿಳೆಯರಿಗೆ ಹಣ ಸಿಗುತ್ತಿಲ್ಲ ಆದರೆ ಈ ತಾಂತ್ರಿಕ ದೋಷಗಳನ್ನು ಸದ್ಯದಲ್ಲಿಯೇ ಪರಿಹರಿಸಿ ಫಲಾನುಭವಿಗಳಿಗೆ ಹಣ ಬರುವಂತೆ ಮಾಡಲಾಗುವುದು.
6ನೇ ಕಂತಿನ ಗೃಹಲಕ್ಷ್ಮಿ ಹಣ ಇಂತಹವರ ಖಾತೆಗೆ ಜಮಾ ಆಗೋದಿಲ್ಲ! ಇಲ್ಲಿದೆ ಕಾರಣ
ಪ್ರತಿ ತಿಂಗಳು 15 ನೇ ತಾರೀಖಿನಿಂದ ಪ್ರತಿ ಕಂತಿನ ಹಣ ಬಿಡುಗಡೆ ಮಾಡುವ ಪ್ರಕ್ರಿಯೆ ಆರಂಭವಾಗುತ್ತದೆ. ಯಾವುದೇ ಮಹಿಳೆಯರು ಕೂಡ ತಮ್ಮ ಖಾತೆಗೆ ಹಣ ಬಾರದೆ ಇದ್ದರೆ ಸಂಬಂಧ ಪಟ್ಟ ಇಲಾಖೆಗೆ ಅಥವಾ ಸಿಡಿಪಿಓ ಕಚೇರಿಗೆ ಹೋಗಿ ದೂರನ್ನು ನೀಡಿ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಿಕೊಂಡು ಪ್ರತಿ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುವಂತೆ ಮಾಡಿಕೊಳ್ಳಬಹುದು.
ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿರುವ ಈ ಮಾತುಗಳು ಮಹಿಳೆಯರಿಗೆ ಇನ್ನಷ್ಟು ಉತ್ತೇಜನ ನೀಡಿದೆ. ಹಾಗಾಗಿ ಮುಂದಿನ ಕಂತಿನ ಹಣ ಬಿಡುಗಡೆಯ ನಿರೀಕ್ಷೆಯಲ್ಲಿ ಇರುವ ಮಹಿಳೆಯರು ಒಂದು ವೇಳೆ ಖಾತೆಗೆ ಹಣ ಬಾರದೆ ಇದ್ದರೆ ಆತಂಕ ಪಟ್ಟುಕೊಳ್ಳುವ ಅಗತ್ಯ ಇಲ್ಲ. ಎಲ್ಲರ ಖಾತೆಗೂ ಹಣ ಬಂದೇ ಬರುತ್ತದೆ ಎಂದು ಸಚಿವೆ ಭರವಸೆ ನೀಡಿದ್ದಾರೆ.
ಹೊಸ ರೇಷನ್ ಕಾರ್ಡಿಗಾಗಿ ಕಾದು ಕುಳಿತವರಿಗೆ ಸಿಹಿ ಸುದ್ದಿ! ಇಲ್ಲಿದೆ ಬಿಗ್ ಅಪ್ಡೇಟ್
Good news for those who not Get Gruha Lakshmi Yojana Money