ಯುವನಿಧಿ ಯೋಜನೆ ಹಣ ಪಡೆಯೋಕೆ ಹೊಸ ನಿಯಮ! ಇನ್ಮುಂದೆ ಈ ದಾಖಲೆ ಕಡ್ಡಾಯ

ಯುವನಿಧಿ ಯೋಜನೆಯ ಮುಂದಿನ ಕಂತಿನ ಹಣ ಬಿಡುಗಡೆ ಆಗಬೇಕು ಅಂದ್ರೆ ಈ ದಾಖಲೆ ಸಲ್ಲಿಸುವುದು ಕಡ್ಡಾಯ!

ರಾಜ್ಯ ಸರ್ಕಾರದ 5ನೆಯ ಗ್ಯಾರಂಟಿ ಯೋಜನೆ ಯುವ ನಿಧಿ ಯೋಜನೆ (Yuva Nidhi scheme) ಆಗಿದೆ. ಈ ಯೋಜನೆ ಆರಂಭವಾಗಿ ಮೊದಲ ಕಂತಿನ ಹಣವು ಕೂಡ ಫಲಾನುಭವಿಗಳ ಖಾತೆಗೆ (Bank Account) ಜಮಾ ಆಗಿದೆ.

ಇನ್ನೇನು ಫೆಬ್ರವರಿ ತಿಂಗಳಿನ ಅಂದರೆ ಎರಡನೇ ಕಂತಿನ ಹಣ ಬಿಡುಗಡೆ ಆಗಲಿಕ್ಕಿದೆ. ಆದರೆ ಈ ಹಣವನ್ನು ಪಡೆದುಕೊಳ್ಳಲಿಕ್ಕೆ ಯುವಕ ಯುವತಿಯರು ಮೊದಲು ಈ ಒಂದು ಪ್ರಮುಖ ದಾಖಲೆಯನ್ನು ಸಲ್ಲಿಕೆ ಮಾಡಬೇಕು. ಇಲ್ಲವಾದರೆ ಯಾವುದೇ ಕಾರಣಕ್ಕೂ ಹಣ ಜಮಾ ಮಾಡಲು ಸಾಧ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ.

6ನೇ ಕಂತಿನ ಗೃಹಲಕ್ಷ್ಮಿ ಹಣ ಇಂತಹವರ ಖಾತೆಗೆ ಜಮಾ ಆಗೋದಿಲ್ಲ! ಇಲ್ಲಿದೆ ಕಾರಣ

ಯುವನಿಧಿ ಯೋಜನೆ ಹಣ ಪಡೆಯೋಕೆ ಹೊಸ ನಿಯಮ! ಇನ್ಮುಂದೆ ಈ ದಾಖಲೆ ಕಡ್ಡಾಯ - Kannada News

ಯುವ ನಿಧಿ ಯೋಜನೆಯಿಂದ ಲಕ್ಷಾಂತರ ಯುವಕರಿಗೆ ಲಾಭ!

ಕಳೆದ ಆರು ತಿಂಗಳಿನಿಂದ ಪದವಿ ಶಿಕ್ಷಣ (degree courses) ವನ್ನ ಮುಗಿಸಿ ಅಥವಾ ಡಿಪ್ಲೋಮೋ (diploma) ಶಿಕ್ಷಣವನ್ನು ಮುಗಿಸಿ ಕೆಲಸಕ್ಕಾಗಿ ಹುಡುಕಾಟ ನಡೆಸಿ ಇನ್ನೂ ಕೆಲಸ ಸಿಗದೇ ಇರುವ ಯುವಕ ಯುವತಿಯರಿಗೆ ಯುವ ನಿಧಿ ಯೋಜನೆಯ ಅಡಿಯಲ್ಲಿ ಮಾಸಿಕ ಭತ್ಯೆ ಅಥವಾ ನಿರುದ್ಯೋಗ ಭತ್ಯೆ (unemployment allowance) ಯನ್ನು ನೀಡಲಾಗುತ್ತಿದೆ.

ಪದವಿ ಮುಗಿಸಿ ಕೆಲಸದ ಹುಡುಕಾಟದಲ್ಲಿ ಇರುವ ಯುವಕರಿಗೆ ರೂ.3,000 ಹಾಗೂ ಡಿಪ್ಲೋಮಾ ಮುಗಿಸಿದವರಿಗೆ 1,500 ಪ್ರತಿ ತಿಂಗಳು ಅವರ ಖಾತೆಗೆ ಜಮಾ ಮಾಡುವ ಯೋಜನೆ ಇದಾಗಿದೆ. ಮುಂದಿನ ಎರಡು ವರ್ಷಗಳವರೆಗೆ ಫಲಾನುಭವಿಗಳು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಯುವಕರು ಎರಡು ವರ್ಷಗಳ ಒಳಗೆ ಅಥವಾ ಈ ಅವಧಿಯಲ್ಲಿ ಯಾವುದೇ ಸಮಯದಲ್ಲಿ ಕೆಲಸ ಸಿಕ್ಕರೂ ಕೂಡ ಅದನ್ನ ಸರ್ಕಾರದ ಗಮನಕ್ಕೆ ತರಬೇಕು ಆದರೆ ಕೆಲಸ ಸಿಕ್ಕ ನಂತರ ದೃಢೀಕರಣ ಪ್ರಮಾಣ ಪತ್ರವನ್ನು ಕೊಡದೆ ಇದ್ದರೆ ಹಾಗೂ ಕೆಲಸ ಸಿಕ್ಕಿರುವ ವಿಚಾರ ಸರ್ಕಾರಕ್ಕೆ ಗೊತ್ತಾದರೆ ಅದು ಶಿಕ್ಷಾರ್ಹ ಅಪರಾಧ ಆಗಬಹುದು ಜೊತೆಗೆ ಭಾರಿ ಪ್ರಮಾಣದ ದಂಡವನ್ನು ಪಾವತಿಸಬೇಕಾಗಬಹುದು.

ಹೊಸ ರೇಷನ್ ಕಾರ್ಡಿಗಾಗಿ ಕಾದು ಕುಳಿತವರಿಗೆ ಸಿಹಿ ಸುದ್ದಿ! ಇಲ್ಲಿದೆ ಬಿಗ್ ಅಪ್ಡೇಟ್

Yuva Nidhi Yojana - Yuva Nidhi Schemeಈ ದಾಖಲೆ ಸಲ್ಲಿಸಿದವರಿಗೆ ಮಿಸ್ ಆಗಲ್ಲ ಯುವ ನಿಧಿ ಹಣ!

ಹೌದು, ಪ್ರತಿ ಒಬ್ಬ ಯುವಕ ಅಥವಾ ಯುವತಿ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೂ ಮೊದಲು ಸರ್ಕಾರ ಕೆಲವೊಂದಷ್ಟು ಪ್ರಮುಖ ದಾಖಲೆ (documents) ಗಳನ್ನು ಕೇಳಿತ್ತು. ಕೊಟ್ಟು ಅರ್ಜಿ ಸಲ್ಲಿಸಿದವರಿಗೆ ಮೊದಲ ಕಂತಿನ ಹಣ ಕೂಡ ಬಿಡುಗಡೆ ಆಗಿದೆ.

ಇನ್ನೇನು ಫೆಬ್ರವರಿ ತಿಂಗಳಿನಲ್ಲಿ ಯುವ ನಿಧಿ ಯೋಜನೆಯ ಎರಡನೇ ಕಂತಿನ ಹಣ ಬಿಡುಗಡೆ ಆಗಲಿದೆ ಹಾಗೂ ಮಾರ್ಚ್ 15 ನೇ ತಾರೀಖಿನ ಒಳಗೆ ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೆ ಅವರ ವಿದ್ಯಾಭ್ಯಾಸಕ್ಕೆ ತಕ್ಕ ಹಾಗೆ ಹಣವನ್ನು ಜಮಾ ಮಾಡಲಾಗುತ್ತದೆ.

ರೈತರ ಮಕ್ಕಳಿಗೆ ಸಿಗಲಿದೆ “ರೈತ ವಿದ್ಯಾನಿಧಿ” ವಿದ್ಯಾರ್ಥಿ ವೇತನ! ಅರ್ಜಿ ಸಲ್ಲಿಸಿ

‘ಸ್ವಯಂ ಉದ್ಯೋಗಿ ಅಲ್ಲ’ ಎನ್ನುವ ಪ್ರಮಾಣ ಪತ್ರ ಸಲ್ಲಿಕೆ ಮಾಡಬೇಕು!

ಪ್ರತಿ ತಿಂಗಳು ಕೂಡ ಯುವ ನಿಧಿ ಯೋಜನೆಯ ಮಾಸಿಕ ಭತ್ಯೆ ಪಡೆದುಕೊಳ್ಳಲು ಫಲಾನುಭವಿಗಳು ಈ ಪ್ರಮುಖ ದಾಖಲೆಗಳನ್ನು ಆನ್ಲೈನ್ ಪೋರ್ಟಲ್ (online portal) ನಲ್ಲಿ ಅಪ್ಲೋಡ್ ಮಾಡಬೇಕಾಗುತ್ತದೆ. ಮೊದಲನೇದಾಗಿ ತನಗೆ ಕೆಲಸ ಸಿಕ್ಕಿಲ್ಲ ಎನ್ನುವ ದೃಢೀಕರಣ ಪ್ರಮಾಣಪತ್ರವನ್ನು ಅಪ್ಲೋಡ್ ಮಾಡಬೇಕು ಹಾಗೂ ಎರಡನೆಯದಾಗಿ ತಾನು ಸ್ವಯಂ ಉದ್ಯೋಗಿ ಅಲ್ಲ ಎನ್ನುವ ಪ್ರಮಾಣ ಪತ್ರವನ್ನು ಕೂಡ ಸಲ್ಲಿಕೆ ಮಾಡಬೇಕು.

ಈ ರೀತಿ ಸ್ವಯಂ ಘೋಷಿತ ಪ್ರಮಾಣ ಪತ್ರವನ್ನು ಆನ್ಲೈನ್ ನಲ್ಲಿ ಅಪ್ಲೋಡ್ ಮಾಡದೇ ಇದ್ರೆ ಅಂತಹ ಫಲಾನುಭವಿಗಳಿಗೆ ಯುವ ನಿಧಿ ಯೋಜನೆಯ ಹಣ ಅವರ ಖಾತೆಗೆ ಡಿಬಿಟಿ ಆಗುವುದಿಲ್ಲ.

ಲೇಬರ್ ಕಾರ್ಡ್ ಪಡೆದುಕೊಳ್ಳಲು ಮತ್ತೊಮ್ಮೆ ಅವಕಾಶ, ಈ ಕೂಡಲೇ ಅರ್ಜಿ ಸಲ್ಲಿಸಿ!

ಈ ದಿನಾಂಕದ ಒಳಗೆ ಸ್ವಯಂ ಘೋಷಿತ ಪ್ರಮಾಣ ಪತ್ರ ಅಪ್ಲೋಡ್ ಮಾಡಿ!

http://sevasindhugs.karnataka.gov.in/ ಸೇವಾ ಸಿಂಧು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನೀವು ಸ್ವಯಂ ಘೋಷಿತ ಪ್ರಮಾಣ ಪತ್ರವನ್ನು ಅಪ್ಲೋಡ್ ಮಾಡಬೇಕು ಇನ್ನು ಈ ರೀತಿ ಪ್ರಮಾಣ ಪತ್ರವನ್ನು ಅಪ್ಲೋಡ್ ಮಾಡಲು ಫೆಬ್ರವರಿ 29, 2024 ಕೊನೆಯ ದಿನಾಂಕವಾಗಿದೆ.

ಒಂದು ವೇಳೆ ಈ ದಿನಾಂಕದ ಒಳಗೆ ನೀವು ಘೋಷಣಾ ಪ್ರಮಾಣ ಪತ್ರ ಸಲ್ಲಿಕೆ ಮಾಡದೆ ಇದ್ದರೆ ಅಂತವರನ್ನು ಈ ಯೋಜನೆಯಿಂದ ಹೊರಗಿಡಲಾಗುತ್ತದೆ. ಹಾಗಾಗಿ ಫಲಾನುಭವಿಗಳು ಮುಂದಿನ ಕಂತಿನ ಹಣವನ್ನು ಪಡೆದುಕೊಳ್ಳಲು, ಸ್ವಯಂ ಘೋಷಿತ ದೃಢೀಕರಣ ಪ್ರಮಾಣಪತ್ರವನ್ನು ಸಲ್ಲಿಕೆ ಮಾಡಿ.

New rule to get Yuva Nidhi scheme Money, this document is mandatory

Follow us On

FaceBook Google News

New rule to get Yuva Nidhi scheme Money, this document is mandatory