6ನೇ ಕಂತಿನ ಗೃಹಲಕ್ಷ್ಮಿ ಹಣ ಇಂತಹವರ ಖಾತೆಗೆ ಜಮಾ ಆಗೋದಿಲ್ಲ! ಇಲ್ಲಿದೆ ಕಾರಣ
ಫೆಬ್ರವರಿ ತಿಂಗಳಲ್ಲಿ ಜನವರಿ ತಿಂಗಳ ಹಣ ಬಿಡುಗಡೆ ಆಗಿದೆ. ಅಂದರೆ ಆರನೇ ಕಂತಿನ ಗೃಹಲಕ್ಷ್ಮಿ ಯೋಜನೆಯ (Grua Lakshmi Scheme) ಹಣ ಬಿಡುಗಡೆ ಆಗಿದೆ, ಇದರಿಂದ ಸಾಕಷ್ಟು ಮಹಿಳೆಯರ ಖಾತೆಗೆ (Bank Account) ಹಣ ವರ್ಗಾವಣೆ ಆಗಿದೆ. ಆದರೂ ಇನ್ನೂ ಹಲವರಿಗೆ ಆರನೇ ಕಂತಿನ ಹಣ ಯಾವಾಗ ಬರುತ್ತದೆ ಎಂದು ಕಾದು ಕುಳಿತಿದ್ದಾರೆ.
ರಾಜ್ಯ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ ನಂತರ ಹಾಗೂ ಅದನ್ನ ಜಾರಿಗೆ ತಂದ ನಂತರ ಎಲ್ಲಾ ಯೋಜನೆಗಳ ಮೂಲಕ ಜನರ ಮೆಚ್ಚುಗೆಯನ್ನು ಗಳಿಸಿಕೊಂಡಿದ್ದಾರೆ.
ಹೊಸ ರೇಷನ್ ಕಾರ್ಡಿಗಾಗಿ ಕಾದು ಕುಳಿತವರಿಗೆ ಸಿಹಿ ಸುದ್ದಿ! ಇಲ್ಲಿದೆ ಬಿಗ್ ಅಪ್ಡೇಟ್
ಅದರಲ್ಲೂ ಗೃಹಲಕ್ಷ್ಮಿ ಯೋಜನೆ ಅತಿ ಹೆಚ್ಚು ಅನುದಾನ ಪಡೆದುಕೊಂಡ ಯೋಜನೆ ಆಗಿದ್ದು ಮಹಿಳೆಯರ ಸ್ವಾವಲಂಬನೆಯ ಜೀವನಕ್ಕೆ ಸಹಕಾರಿಯಾಗಿದೆ. ಪ್ರತಿ ತಿಂಗಳು 2000ಗಳನ್ನು ಪಡೆದುಕೊಳ್ಳುವುದು ಚಿಕ್ಕ ವಿಷಯವೇನು ಅಲ್ಲ. ಹಾಗಾಗಿ ಈ ವಿಷಯಕ್ಕೆ ಸರ್ಕಾರಕ್ಕೆ ಗೃಹಿಣಿಯರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಗೃಹಲಕ್ಷ್ಮಿ ಹಣ ಇಂಥವರಿಗೆ ಬರುವುದೇ ಇಲ್ಲ!
ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳಲು ಕೂಡ ಕೆಲವು ಮಾನದಂಡಗಳನ್ನು ವಿಧಿಸಿದೆ. ಆ ಮಾನದಂಡಗಳನ್ನು ನಿರ್ಲಕ್ಷಿಸಿ ಅರ್ಜಿ ಸಲ್ಲಿಸಿದಂತಹ ಅರ್ಜಿಗಳನ್ನು ಸರ್ಕಾರ ನಿರ್ಲಕ್ಷ ಮಾಡಿದೆ
ಉದಾಹರಣೆಗೆ ಆದಾಯ ತೆರಿಗೆ ಪಾವತಿ ಮಾಡುವ ಕುಟುಂಬದ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ ಆದರೆ ಸಾಕಷ್ಟು ಅರ್ಜಿಗಳು ಸಲ್ಲಿಕೆ ಆಗಿದ್ದವು. ಅಂತಹ ಅರ್ಜಿಗಳನ್ನು ಪರಿಶೀಲಿಸಿ ರಿಜೆಕ್ಟ್ ಮಾಡಲಾಗಿದೆ.
ಮನೆ, ಆಸ್ತಿ, ಜಮೀನಿಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಿ! ಇಲ್ಲಿದೆ ಮಹತ್ವದ ಮಾಹಿತಿ
ಇನ್ನು ಈಕೆ ವೈ ಸಿ (E-KYC ) ಮಲ್ಲಿಸಿಕೊಳ್ಳದಿದ್ದರೆ ಎನ್‌ಪಿಸಿಐ ಮ್ಯಾಪಿಂಗ್ ಸರಿಯಾಗಿ ಆಗದೆ ಇದ್ದರೆ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಅಪ್ಡೇಟ್ ಆಗದೆ ಇದ್ದರೆ ನಿಮ್ಮ ಖಾತೆಗೆ ಸರಿಯಾಗಿ ಹಣ ಜಮಾ ಆಗಲು ಸಾಧ್ಯವಿಲ್ಲ.
ರೈತರ ಮಕ್ಕಳಿಗೆ ಸಿಗಲಿದೆ “ರೈತ ವಿದ್ಯಾನಿಧಿ” ವಿದ್ಯಾರ್ಥಿ ವೇತನ! ಅರ್ಜಿ ಸಲ್ಲಿಸಿ
6ನೇ ಕಂತಿನ ಹಣ ಬಿಡುಗಡೆ
ಗೃಹಲಕ್ಷ್ಮಿ ಯೋಜನೆಯ 5 ಕಂತಿನ ಹಣ ಬಿಡುಗಡೆ ಆಗಿದೆ. ಅಂದ್ರೆ ಸಾಕಷ್ಟು ಮಹಿಳೆಯರು 10,000ಗಳನ್ನು ಕೇವಲ ಗ್ರಹಲಕ್ಷ್ಮಿ ಯೋಜನೆ ಒಂದರಿಂದ ಪಡೆದುಕೊಂಡಿದ್ದಾರೆ ಎನ್ನಬಹುದು.
ಈಗಾಗಲೇ ಫೆಬ್ರವರಿ ತಿಂಗಳಿನಲ್ಲಿ 6ನೇ ಕಂತಿನ ಹಣವನ್ನು ಕೂಡ ಬಿಡುಗಡೆ ಮಾಡಲಾಗಿದೆ. ಲಕ್ಷಾಂತರ ಮಹಿಳೆಯರ ಖಾತೆಗೆ ಡಿ ಬಿ ಟಿ DBT) ಆಗಿದೆ. ಒಂದು ವೇಳೆ ನಮ್ಮ ಖಾತೆಗೆ ಹಣ ಬಂದಿದ್ಯೋ ಇಲ್ವೋ ಎನ್ನುವುದನ್ನು ತಿಳಿದುಕೊಳ್ಳುವುದು ಹೇಗೆ ಎನ್ನುವುದನ್ನು ನೋಡೋಣ.
ಮೊದಲಿಗೆ ಸರ್ಕಾರ DBT Karnataka ಮೊಬೈಲ್ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ. ನಂತರ ಆಧಾರ್ ಸಂಖ್ಯೆಯನ್ನು ನಮೂದಿಸಿ ನಿಮ್ಮ ಮೊಬೈಲ್ಗೆ ಓಟಿಪಿ ಬರುತ್ತದೆ ಅದನ್ನು ನಮೂದಿಸಿ ಲಾಗಿನ್ ಆಗಿ.
ಲೇಬರ್ ಕಾರ್ಡ್ ಪಡೆದುಕೊಳ್ಳಲು ಮತ್ತೊಮ್ಮೆ ಅವಕಾಶ, ಈ ಕೂಡಲೇ ಅರ್ಜಿ ಸಲ್ಲಿಸಿ!
ನಂತರ ನೀವು ನಾಲ್ಕು ಅಂಕಿಗಳ mPIN ರಚಿಸಬೇಕು. ಇಷ್ಟು ಮಾಡಿದ್ರೆ ನಿಮ್ಮ ಅಪ್ಲಿಕೇಶನ್ ಬಳಕೆಗೆ ಸಿದ್ಧ. ಅಪ್ಲಿಕೇಶನ್ ಒಳಗಡೆ ಪ್ರವೇಶಿಸಿದ ನಂತರ ಪಾವತಿ ಸ್ಥಿತಿ ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ನಿಮ್ಮ ಖಾತೆಗೆ ಡಿ ಬಿಟಿ ಆಗುವ ಎಲ್ಲಾ ಯೋಜನೆಗಳ ಹೆಸರು ಕಾಣಿಸುತ್ತದೆ. ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಎಂದು ಆಯ್ಕೆ ಮಾಡಿಕೊಂಡು ನಿಮ್ಮ DBT ಸ್ಟೇಟಸ್ ಚೆಕ್ ಮಾಡಬಹುದು.
Grua Lakshmi money of 6th installment will not be deposited to such people