ಲೇಬರ್ ಕಾರ್ಡ್ ಪಡೆದುಕೊಳ್ಳಲು ಮತ್ತೊಮ್ಮೆ ಅವಕಾಶ, ಈ ಕೂಡಲೇ ಅರ್ಜಿ ಸಲ್ಲಿಸಿ!
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (Karnataka Building and Other Construction Workers’ Welfare Board) ಮೂಲಕ ರಾಜ್ಯ ಸರ್ಕಾರ ಕಾರ್ಮಿಕರಿಗೆ ಅನುಕೂಲವಾಗುವಂತಹ ಬೇರೆ ಬೇರೆ ಯೋಜನೆಗಳನ್ನು ಜಾರಿಗೆ ತರುತ್ತಿದೆ.
ಇದರಿಂದ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಸಾಕಷ್ಟು ಜನರಿಗೆ ಅನುಕೂಲವಾಗುತ್ತದೆ. ಆದರೆ ಕಾರ್ಮಿಕರ (labours) ವರ್ಗದವರು ಸರ್ಕಾರದಿಂದ ಬಿಡುಗಡೆ ಆಗಿರುವ ಯಾವುದೇ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಬಯಸಿದರೆ, ಕಾರ್ಮಿಕ ಇಲಾಖೆಯ ಅಡಿಯಲ್ಲಿ ನೋಂದಾಯಿಸಿಕೊಳ್ಳುವುದು ಹಾಗೂ ಲೇಬರ್ ಕಾರ್ಡ್ (labour card) ಹೊಂದಿರುವುದು ಬಹಳ ಮುಖ್ಯ.

ಮನೆಯ ಯಜಮಾನಿ ಮೃತಪಟ್ಟರೆ ಗೃಹಲಕ್ಷ್ಮಿ ಹಣ ಯಾರಿಗೆ ಸಿಗುತ್ತೆ? ಇಲ್ಲಿದೆ ಮಾಹಿತಿ
ಹೌದು, ಯಾರ ಬಳಿ ಲೇಬರ್ ಕಾರ್ಡ್ ಇರುತ್ತದೆಯೋ ಅವರು ತಮಗೆ ಸಂಬಂಧ ಪಟ್ಟ ಸರ್ಕಾರದ ಯಾವುದೇ ಯೋಜನೆಯ ಲಾಭ ಪಡೆದುಕೊಳ್ಳಬಹುದು. ಹಾಗಾದ್ರೆ ಈ ಲೇಬರ್ ಕಾರ್ಡ್ ಪಡೆದುಕೊಳ್ಳುವುದು ಹೇಗೆ ಹಾಗೂ ಬೇಕಾಗಿರುವ ಅರ್ಹತೆಗಳೇನು? ಮೊದಲಾದ ಮಾಹಿತಿಗಳನ್ನು ನೋಡೋಣ.
ಲೇಬರ್ ಕಾರ್ಡ್ ಪ್ರಯೋಜನಗಳು! (Benefits of labour card)
ಕಾರ್ಮಿಕ ವರ್ಗದವರು ಅಂದರೆ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿರುವವರು ಲೇಬರ್ ಕಾರ್ಡ್ ಅನ್ನು ಹೊಂದಿದ್ದರೆ ಅವರಿಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಸಿಗುತ್ತದೆ. ವಿಮಾ ಸೌಲಭ್ಯದಿಂದ ಹಿಡಿದು ಕುಟುಂಬಕ್ಕೆ ಅಗತ್ಯ ಇರುವ ಇನ್ನು ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ಲೇಬರ್ ಕಾರ್ಡ್ ನಿಂದ ಕಾರ್ಮಿಕರಿಗೆ ಸಿಗುವ ಕೆಲವು ಪ್ರಮುಖ ಪ್ರಯೋಜನಗಳನ್ನು ನೋಡುವುದಾದರೆ,
ಅಪಘಾತ ವಿಮೆ
ವೈದ್ಯಕೀಯ ಚಿಕಿತ್ಸೆಗೆ ಸಹಾಯಧನ
ಮಗು ಮತ್ತು ತಾಯಿಯ ಆರೈಕೆ
ಮಕ್ಕಳಿಗೆ ಪೌಷ್ಟಿಕ ಆಹಾರ
ವಿದ್ಯಾರ್ಥಿಗಳಿಗೆ ಅನುಕೂಲ
ಮದುವೆಗೆ ಸಹಾಯಧನ
ಪಿಂಚಣಿ ಸೌಲಭ್ಯ
ಶ್ರಮ ಸಮರ್ಥ ಟೂಲ್ ಕಿಟ್
ಅಂತ್ಯಕ್ರಿಯ ವೆಚ್ಚ
ರೇಷನ್ ಕಾರ್ಡ್ ಇರೋರಿಗೆ ಇದು ಖುಷಿಯ ವಿಚಾರ! ಈಗ ಸಿಗುತ್ತೆ ಇನ್ನಷ್ಟು ಬೆನಿಫಿಟ್
ಅಂದರೆ ಒಂದು ಕಾರ್ಮಿಕ ವರ್ಗದ ಕುಟುಂಬದ ಮಗುವಿನ ಜನನದಿಂದ ಆ ಕುಟುಂಬದ ಸದಸ್ಯರ ಮರಣದ ವರೆಗೆ ಆರ್ಥಿಕವಾಗಿ ಅಗತ್ಯವಿರುವ ಸಾಕಷ್ಟು ಸೌಲಭ್ಯಗಳು ಈ ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡ್ ನಿಂದ ಪಡೆದುಕೊಳ್ಳಬಹುದು.
ಲೇಬರ್ ಕಾರ್ಡ್ ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು! (Eligibility to get labour card)
ಲೇಬರ್ ಕಾರ್ಡ್ ಪಡೆದುಕೊಳ್ಳಲು ಒಂದು ವರ್ಷದ ಕಟ್ಟಡದ ನಿರ್ಮಾಣದಲ್ಲಿ ಕನಿಷ್ಠ 90 ದಿನಗಳ ಕೆಲಸ ಮಾಡಿರಬೇಕು. 18 ರಿಂದ 50 ವರ್ಷ ಒಳಗಿನ ಕಾರ್ಮಿಕ ವರ್ಗದವರು ಅರ್ಜಿ ಸಲ್ಲಿಸಬೇಕು.
ಫೆಬ್ರವರಿ ತಿಂಗಳ ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ! ನಿಮಗಿನ್ನೂ ಹಣ ಬಂದಿಲ್ವಾ?
ಲೇಬರ್ ಕಾರ್ಡ್ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು! (Documents)
90 ದಿನಗಳ ಕೆಲಸ ಮಾಡಿದ ಪ್ರಮಾಣ ಪತ್ರ
ಆಧಾರ್ ಕಾರ್ಡ್
ಬ್ಯಾಂಕ್ ಖಾತೆಯ ವಿವರ
ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
ನೋಂದಣಿ ಪ್ರಕ್ರಿಯೆ ಆರಂಭ!
ಹಿರಿಯ ಕಾರ್ಮಿಕ ನಿರೀಕ್ಷಕರ ಬಳಿ ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ. ಮಾರ್ಚ್ 31, 2024ರ ವರೆಗೆ ಅವಕಾಶ ಇದೆ. ಕಟ್ಟಡ ಮತ್ತು ಇತರ ಕಾರ್ಮಿಕರ ನೋಂದಣಿ ಅಭಿಯಾನ ನಡೆಸಲಾಗುತ್ತಿದ್ದು ನೀವು ಈ ಮೂಲಕ ಲೇಬರ್ ಕಾರ್ಡ್ ಪಡೆದುಕೊಳ್ಳಲು ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಹಿರಿಯ ನಿರೀಕ್ಷಕರ ಕಛೇರಿ 155214 ಈ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ.
ಕುರಿ-ಕೋಳಿ-ಹಂದಿ ಸಾಕಣೆ ಮಾಡೋರಿಗೆ ಖುಷಿ ಸುದ್ದಿ; ತರಬೇತಿ ಜೊತೆ ಸಿಗುತ್ತೆ ಪ್ರೋತ್ಸಾಹ ಧನ
Another chance to get Labour card, apply now