ರೇಷನ್ ಕಾರ್ಡ್ ಇರೋರಿಗೆ ಇದು ಖುಷಿಯ ವಿಚಾರ! ಈಗ ಸಿಗುತ್ತೆ ಇನ್ನಷ್ಟು ಬೆನಿಫಿಟ್
ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಇದ್ದವರಿಗಂತೂ ಹಲವು ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ.
ನಾವು ಈ ದೇಶದ ಪ್ರಜೆಗಳು ಎಂದು ಗುರುತಿಸಿಕೊಳ್ಳಲು ಕೆಲವೊಂದು ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ. ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಓಟರ್ ಐಡಿ, ಚಾಲನಾ ಪರವಾನಗಿ ಹೀಗೆ ಹಲವು ದಾಖಲೆಗಳನ್ನು ಇಟ್ಟುಕೊಳ್ಳುವುದು ಅವಶ್ಯ. ಇದರ ಜೊತೆ ಪಡಿತರ ಚೀಟಿಯು (Ration Card) ಇಂದು ಮುಖ್ಯವಾದ ದಾಖಲೆಯಾಗಿದೆ.
ಪಡಿತರ ಚೀಟಿಯಲ್ಲಿ ಎರಡು ವಿಭಾಗವಾಗಿ ವಿಂಗಡಿಸಲಾಗಿದೆ. ಬಿಪಿಎಲ್ ಪಡಿತರ ಚೀಟಿ ಹಾಗು ಎಪಿಎಲ್ ಪಡಿತರ ಚೀಟಿ ಎಂದು. ಯಾವುದೇ ಪಡಿತರ ಚೀಟಿ ಇರಲಿ ಅದು ಇಂದು ಕೇವಲ ಗುರುತಿನ ದಾಖಲೆಯಾಗಿ ಉಳಿದಿಲ್ಲ.
ಫೆಬ್ರವರಿ ತಿಂಗಳ ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ! ನಿಮಗಿನ್ನೂ ಹಣ ಬಂದಿಲ್ವಾ?
ಇಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಾರಿಗೆ ತರುವ ಹಲವು ಯೋಜನೆಗಳಿಗೆ ಮಾನದಂಡವಾಗಿದೆ. ಬಿಪಿಎಲ್ ಗುರುತಿನ ಚೀಟಿ ಇದ್ದವರಿಗಂತೂ ಹಲವು ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ. ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಿಗೂ ಬಿಪಿಎಲ್ ಪಡಿತರ ಚೀಟಿಯೇ ಮಾನದಂಡವಾಗಿದೆ.
ಇದೀಗ ಪಡಿತರ ಚೀಟಿಯು ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಲು ಮಾನದಂಡವಾಗಿ ಬಳಸಲಾಗುತ್ತಿದೆ. ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಆಯುಷ್ಮಾನ್ ಯೋಜನೆಗೆ ಪಡಿತರ ಚೀಟಿಯೇ ಮುಖ್ಯ ದಾಖಲೆಯಾಗಿದೆ. ಇದನ್ನು ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿ ಆರೋಗ್ಯ ಕಾರ್ಡ್ ಎಂದು ವಿತರಿಸಲಾಗುತ್ತಿದೆ.
ಈ ಮುಖ್ಯಮಂತ್ರಿ ಆರೋಗ್ಯ ಕಾರ್ಡ್ ಹೊಂದಿರುವ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರು ಆಸ್ಪತ್ರೆಗಳಲ್ಲಿ ೫ ಲಕ್ಷ ರೂ.ಗಳ ವರೆಗೆ ಉಚಿತ ಚಿಕಿತ್ಸೆ ಪಡೆದುಕೊಳ್ಳಬಹುದು. ಎಪಿಎಲ್ ಪಡಿತರ ಚೀಟಿದಾರರು ೨ ಲಕ್ಷ ರೂ.ಗಳ ವರೆಗೆ ಉಚಿತ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ.
ಕುರಿ-ಕೋಳಿ-ಹಂದಿ ಸಾಕಣೆ ಮಾಡೋರಿಗೆ ಖುಷಿ ಸುದ್ದಿ; ತರಬೇತಿ ಜೊತೆ ಸಿಗುತ್ತೆ ಪ್ರೋತ್ಸಾಹ ಧನ
ಕೇವಲ ಸರ್ಕಾರಿ ಆಸ್ಪತ್ರೆ ಮಾತ್ರವಲ್ಲದೆ ಸರ್ಕಾರ ಗುರುತಿಸಿರುವ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಈ ಯೋಜನೆ ಜಾರಿ ಮಾಡಿರುವುದರಿಂದ ಬಡವರು ಸಹ ಉತ್ತಮ ಗುಣಮಟ್ಟದ ಚಿಕಿತ್ಸೆ ಪಡೆದುಕೊಳ್ಳಲು ಸಹಕಾರಿಯಾಗಿದೆ.
ತನಗೆ ಅನಾರೋಗ್ಯ ಉಂಟಾಗಿದೆ, ತನ್ನ ಬಳಿ ಹಣ ಇಲ್ಲ, ಹೇಗೆ ಚಿಕಿತ್ಸೆ ಪಡೆದುಕೊಳ್ಳುವುದು ಎಂದು ಚಿಂತಿಸುವ ಅವಶ್ಯಕತೆ ಇಲ್ಲ. ನೀವು ಮುಖ್ಯಮಂತ್ರಿ ಆರೋಗ್ಯ ಕಾರ್ಡ್ ಮಾಡಿಸಿಕೊಂಡಿದ್ದರೆ ಸಾಕು. ನಿಮಗೆ ೫ ಲಕ್ಷ ರೂ.ಗಳವರೆಗೆ ಎಲ್ಲ ಚಿಕಿತ್ಸೆಯೂ ಉಚಿತವಾಗಿ ಸಿಗುತ್ತದೆ. ನಿಮ್ಮ ಆರೋಗ್ಯ ಸೇವೆಯ ಹಣವನ್ನು ಸರ್ಕಾರವೇ ಭರಿಸುತ್ತದೆ.
ರೈತರಿಗೆ ಭರ್ಜರಿ ಉಡುಗೊರೆ ನೀಡಿದ ಸರ್ಕಾರ; ಪ್ರತಿ ಎಕರೆಗೆ ಸಿಗಲಿದೆ 10 ಸಾವಿರ
ಅರ್ಜಿ ಸಲ್ಲಿಸುವುದು ಹೇಗೆ?
ನೀವು ಮೊದಲು ಆರೋಗ್ಯ ಇಲಾಖೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ಅಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಪಟ್ಟ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಕಾರ್ಡ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು. ನಂತರ ನಿಮ್ಮ ಮೊಬೈಲ್ಗೆ ಒಂದು ಓಟಿಪಿ ಬರುತ್ತದೆ. ಅದನ್ನು ಅಲ್ಲಿ ನಮೂದು ಮಾಡಬೇಕು.
ನಂತರ ಅರ್ಜಿ ಫಾರಂ ತೆರೆದುಕೊಳ್ಳುತ್ತದೆ. ಅಲ್ಲಿ ಕೇಳಲಾಗಿರುವ ಮಾಹಿತಿಗಳನ್ನು ಸರಿಯಾಗಿ ಓದಿಕೊಂಡು ಭರ್ತಿ ಮಾಡಬೇಕು. ಹಾಗೂ ಸೂಕ್ತ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ನಂತರ ಸಬ್ಮಿಟ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಈ ರೀತಿಯಲ್ಲಿ ನೀವು ಆನ್ಲೈನ್ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಗೃಹಲಕ್ಷ್ಮಿ ಯೋಜನೆ 6ನೇ ಕಂತಿನ ಪೆಂಡಿಂಗ್ ಹಣ ಪಡೆಯೋಕೆ ಈ ಕೆಲಸ ಮಾಡಿ!
Now More Benefits to Ration Card Holders, here is the information