Karnataka NewsBengaluru News

ಗೃಹಲಕ್ಷ್ಮಿ ಯೋಜನೆ 6ನೇ ಕಂತಿನ ಪೆಂಡಿಂಗ್ ಹಣ ಪಡೆಯೋಕೆ ಈ ಕೆಲಸ ಮಾಡಿ!

ಗೃಹಿಣಿಯರೇ, ಇನ್ಮುಂದೆ ಅರ್ಜಿ ಸಲ್ಲಿಸಿಯೂ ತಮ್ಮ ಖಾತೆಗೆ ಹಣ ಬಂದಿಲ್ಲ ಅಂತಹ ಟೆನ್ಶನ್ ಮಾಡಿಕೊಳ್ಳುವ ಅಗತ್ಯವಿಲ್ಲ. ನಾವು ಈಗ ತಿಳಿಸುವ ಕೆಲವು ಕೆಲಸಗಳನ್ನು ಮಾಡಿಕೊಂಡರೆ ತಪ್ಪದೆ ನಿಮ್ಮ ಖಾತೆಗೂ (Bank Account) ಹಣ ಜಮಾ ಆಗುತ್ತೆ.

ಸರ್ಕಾರ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಹಣ ಪ್ರತಿಯೊಬ್ಬ ಫಲಾನುಭವಿ ಖಾತೆಗೆ ವರ್ಗಾವಣೆ ಆಗಬೇಕು ಎನ್ನುವ ಕಾರಣಕ್ಕೆ ಬೇರೆ ಬೇರೆ ರೀತಿಯ ಉಪಕ್ರಮ (initiative) ಗಳನ್ನು ಕೈಗೊಂಡಿದ್ದು ಇಂದು ಶೇಕಡ 90ರಷ್ಟು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗಿದೆ.

ಗೃಹಲಕ್ಷ್ಮಿ ಹಣ ಬಂದಿಲ್ಲ ಅನ್ನೋರೆ ಹೆಚ್ಚು, ಹಣ ತುಂಬೋದ್ರಲ್ಲಿ ದೊಡ್ಡ ಟ್ವಿಸ್ಟ್

ಅನ್ನಭಾಗ್ಯ ಯೋಜನೆಯ ಬಿಗ್ ಅಪ್ಡೇಟ್; ಫೆಬ್ರವರಿ ತಿಂಗಳ ಹಣ ಪಡೆಯೋಕೆ ಹೀಗೆ ಮಾಡಿ

ಆದರೆ ಇನ್ನೂ 10% ನಷ್ಟು ಮಹಿಳೆಯರಿಗೆ ಹಣ ವರ್ಗಾವಣೆ ಆಗಿಲ್ಲ. ಇದರ ಬಗ್ಗೆ ಸರ್ಕಾರ ಈಗಾಗಲೇ ತಲೆ ಕೆಡಿಸಿಕೊಂಡಿದೆ. ಮಹಿಳೆಯರು ಇನ್ನು ಮುಂದೆ ಚಿಂತೆ ಮಾಡುವ ಅಗತ್ಯವಿಲ್ಲ. ಸರ್ಕಾರ ತಿಳಿಸಿರುವ ಈ ಕೆಲವು ಪ್ರಮುಖ ಪರಿಶೀಲನೆಗಳನ್ನು ಮಾಡಿಕೊಂಡರೆ ಅಂತವರ ಖಾತೆಗೂ ಕೂಡ ಹಣ ಬರುವುದು ಮಿಸ್ ಆಗೋದೇ ಇಲ್ಲ.

ಮಹಿಳೆಯರು ತಮ್ಮ ಖಾತೆಗೆ ಹಣ ಬರಬೇಕು ಅಂದ್ರೆ ಮೊಟ್ಟಮೊದಲನೆಯದಾಗಿ ಖಾತೆಯನ್ನು ಚೆಕ್ ಮಾಡಬೇಕು. ಇಲ್ಲಿಯವರೆಗೆ ಎಷ್ಟು ಕಂತಿನ ಹಣ ಬಂದಿದೆ ಅಥವಾ ಒಂದೇ ಒಂದು ಕಂತಿನ ಹಣವು ಬರಲೇ ಇಲ್ಲವೋ.. ಒಂದು ವೇಳೆ ಜಮಾ ಆಗಿದ್ದರೆ ಯಾವ ತಿಂಗಳಿನ ಹಣ ಜಮಾ ಆಗಿದೆ ಈ ಮೊದಲಾದ ಸ್ಟೇಟಸ್ (status) ತಿಳಿದುಕೊಂಡರೆ ಮುಂದಿನ ಕಂತಿನ ಹಣ ಮಿಸ್ ಆಗದಂತೆ ಖಾತೆಗೆ ಜಮಾ ಆಗಲು ಯಾವ ಕೆಲಸ ಮಾಡಬೇಕು ಎನ್ನುವುದನ್ನು ತಿಳಿಯಬಹುದು.

ಮೃತ ಮಹಿಳೆ ಅಕೌಂಟ್‌ಗೂ ಬರುತ್ತಾ ಗೃಹಲಕ್ಷ್ಮಿ ಯೋಜನೆ ಹಣ! ಮಹತ್ವದ ಮಾಹಿತಿ

ಎನ್ ಪಿಸಿಐ ಮ್ಯಾಪಿಂಗ್! (NPCI mapping)

ನಿಮಗೆ ಇಲ್ಲಿಯವರೆಗೆ ಗೃಹಲಕ್ಷ್ಮಿ ಯೋಜನೆಯ ಒಟ್ಟು ಐದು ಕಂತಿನ ಹಣ ಜಮಾ ಆಗಿದೆಯಾ? ಹಾಗಾದ್ರೆ ನಿಮಗೆ ಮುಂದಿನ ತಿಂಗಳ ಹಣ ಖಂಡಿತ ಜಮಾ ಆಗುತ್ತದೆ ಎನ್ಪಿಸಿಐ ಮ್ಯಾಪಿಂಗ್ ಅನ್ನು ಪ್ರತ್ಯೇಕವಾಗಿ ಮಾಡಿಸುವ ಅಗತ್ಯ ಇಲ್ಲ.

ಆದರೆ ಕೇವಲ ಒಂದರಿಂದ ಎರಡು ಕಂತಿನ ಹಣ ಮಾತ್ರ ಪಡೆದುಕೊಂಡು ಉಳಿದ ಕಂತಿನ ಹಣ ಬಂದೇ ಇಲ್ವಲ್ಲ ಅಂತ ತಲೆ ಕೆಡಿಸಿಕೊಳ್ಳುತ್ತಿರುವ ಮಹಿಳೆಯರು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ನಿಮ್ಮ ಖಾತೆಗೆ NPCI mapping ಮಾಡಿಕೊಡಿ ಎಂದು ಕೇಳಿ. ನೀವು ಒಂದು ಅರ್ಜಿ ಫಾರ್ಮ್ ಭರ್ತಿ ಮಾಡಬೇಕಾಗುತ್ತದೆ.

ಇಂತಹ ಮಹಿಳೆಯರ ಖಾತೆಗೆ ಜಮಾ ಆಯ್ತು ಗೃಹಲಕ್ಷ್ಮಿ ಪೆಂಡಿಂಗ್ ಹಣ! ಚೆಕ್ ಮಾಡಿ

Gruha Lakshmi YojanaE-KYC ಅಪ್ಡೇಟ್ (update)!

ಈಕೆ ವೈ ಸಿ ಅಪ್ಡೇಟ್ ಮಾಡಿಸಿಕೊಳ್ಳುವುದು ಕೂಡ ಬಹಳ ಮುಖ್ಯವಾಗಿರುತ್ತದೆ. ಇದು ಆರು ತಿಂಗಳ ಹಿಂದೆ ಈಕೆ ವೈ ಸಿ ಯನ್ನು ಬ್ಯಾಂಕ ಖಾತೆಗೆ ಮಾಡಿಸಿದ್ದರೆ ಅದನ್ನು ಮತ್ತೆ ಅಪ್ಡೇಟ್ ಮಾಡಿಕೊಳ್ಳಿ. ಒಂದು ವೇಳೆ ತಾಂತ್ರಿಕ ದೋಷ (technical issues) ದಿಂದ ನಿಮ್ಮ ಖಾತೆಗೆ ಹಣ ಬಾರದೇ ಇದ್ದರೆ ಈ ಅಪ್ಡೇಟ್ ಮಾಡಿಕೊಳ್ಳುವುದರಿಂದ ಆ ತಾಂತ್ರಿಕ ದೋಷ ಸಮಸ್ಯೆ ನಿವಾರಣೆಯಾಗಿ ನಿಮ್ಮ ಖಾತೆಗೆ ಹಣ ಬರಲು ಸಹಾಯವಾಗುತ್ತದೆ.

ಸಿಡಿಪಿಓ ಕಚೇರಿಗೆ ತಪ್ಪದೆ ಭೇಟಿ ನೀಡಿ!

ಹತ್ತಿರದ ಸಿಡಿಪಿಓ ಕಚೇರಿಗೆ (CDPO office) ಭೇಟಿ ನೀಡಿ ನಿಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ ಅವರಿಂದ ಸರಿಯಾದ ಪರಿಹಾರ ಸೂಚಿಸಲಾಗುತ್ತದೆ. ಗೃಹಲಕ್ಷ್ಮಿ ಅರ್ಜಿ ಸಲ್ಲಿಸಿದ ನಂತರ ಒಂದು ಸ್ವೀಕೃತಿ ಪ್ರತಿ ಕೊಡಲಾಗುತ್ತದೆ. ಅದರ ಜೊತೆಗೆ ನಿಮ್ಮ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ (Ration Card) ಪ್ರತಿ ತೆಗೆದುಕೊಂಡು ಅಧಿಕಾರಿಗಳ ಬಳಿ ಕೊಟ್ಟರೆ ಅವರು ನಿಮ್ಮ ಅರ್ಜಿ ಪರಿಶೀಲನೆ (application verification) ಮಾಡುತ್ತಾರೆ ಹಾಗೂ ಎಲ್ಲಿ ದೋಷ ಇದೆ? ಯಾವ ಸಮಸ್ಯೆ ಇದೆ ಎಂಬುದನ್ನ ತಿಳಿದು ನಿಮಗೆ ಪರಿಹಾರವನ್ನು ನೀಡುತ್ತಾರೆ.

ಒಂದು ವೇಳೆ ತಾಂತ್ರಿಕ ದೋಷದಿಂದ ನಿಮ್ಮ ಖಾತೆಗೆ ಹಣ ಬಾರದೆ ಇದ್ದರೆ ಅದನ್ನು ಸರ್ಕಾರದ ಗಮನಕ್ಕೂ ತರುವುದು ಸಿಡಿಪಿಓ ಅಧಿಕಾರಿಗಳ ಕೆಲಸವಾಗಿರುತ್ತದೆ.

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದ್ದವರಿಗೆ ಸಿಹಿ ಸುದ್ದಿ! ಇದೇ ತಿಂಗಳು ಕಾರ್ಡ್ ವಿತರಣೆ

ಪೋಸ್ಟ್ ಆಫೀಸ್ ನಲ್ಲಿ ಖಾತೆ ತೆರೆದು ನೋಡಿ! (Post office saving scheme)

ಬ್ಯಾಂಕುಗಳಲ್ಲಿ ಲಕ್ಷಾಂತರ ಗೃಹಲಕ್ಷ್ಮಿ ಖಾತೆಗಳೇ ತೆರೆಯಲಾಗಿದೆ. ಹೀಗಾಗಿ ಅದೆಷ್ಟೋ ಜನರ ಖಾತೆಗೆ ಹಣ ಜಮಾ ಆಗದೆ ಇರಬಹುದು. ಹಾಗಾಗಿ ನೀವು ಅಂಚೆ ಕಚೇರಿಯಲ್ಲಿ ಖಾತೆಯನ್ನು ತೆರೆಯುವುದು ಸೂಕ್ತ ಎಂದು ಈ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಕೂಡ ತಿಳಿಸಿದ್ದರು. ಹಾಗಾಗಿ ನೀವು ಪೋಸ್ಟ್ ಆಫೀಸ್ ನಲ್ಲಿ ಖಾತೆ ತೆರೆದರೆ ಗೃಹಲಕ್ಷ್ಮಿ ಪೆಂಡಿಂಗ್ ಹಣವು ಕೂಡ ತಕ್ಷಣ ಖಾತೆಗೆ ಜಮಾ ಆಗಲು ಆರಂಭವಾಗುತ್ತದೆ.

ಗೃಹಲಕ್ಷ್ಮಿ ಸ್ಟೇಟಸ್ ಒಮ್ಮೆ ಚೆಕ್ ಮಾಡಿ!

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ DBT ಸ್ಟೇಟಸ್ ಚೆಕ್ ಮಾಡುವುದಕ್ಕಾಗಿ DBT Karnataka ಎನ್ನುವ ಮೊಬೈಲ್ ಆಪ್ ಬಿಡುಗಡೆ ಮಾಡಿದೆ. ಇದನ್ನು ನೀವು ನಿಮ್ಮ ಆಂಡ್ರಾಯ್ಡ್ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ಆಧಾರ್ ಸಂಖ್ಯೆಯನ್ನು ಹಾಕಿ. ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಮಾತ್ರವಲ್ಲದೆ ಇತರ ಯೋಜನೆಯ ಡಿ ಬಿ ಟಿ ಸ್ಟೇಟಸ್ ಕೂಡ ಚೆಕ್ ಮಾಡಬಹುದು.

ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿ ಯೋಜನೆಯ ಎಲ್ಲಾ ಪೆಂಡಿಂಗ್ ಹಣ ಪಡೆಯೋಕೆ ಹೀಗೆ ಮಾಡಿ

Do this to get Gruha Lakshmi Yojana 6th installment pending money

Our Whatsapp Channel is Live Now 👇

Whatsapp Channel

Related Stories