ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿ ಯೋಜನೆಯ ಎಲ್ಲಾ ಪೆಂಡಿಂಗ್ ಹಣ ಪಡೆಯೋಕೆ ಹೀಗೆ ಮಾಡಿ

ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಆರಂಭವಾಗಿ ಐದಾರು ತಿಂಗಳುಗಳು ಕಳೆದಿವೆ ಇಲ್ಲಿಯವರೆಗೆ ಸರ್ಕಾರ ಸುಮಾರು 90% ನಷ್ಟು ಫಲಾನುಭವಿ ಮಹಿಳೆಯರ ಖಾತೆಗೆ (Bank Account) ಹಣ ಜಮಾ ಮಾಡಲು ಸಾಧ್ಯವಾಗಿದೆ

ರಾಜ್ಯ ಸರ್ಕಾರ (State government) ತನ್ನ ಕೆಲಸವನ್ನು ಸರಾಗವಾಗಿ ನೆರವೇರಿಸುತ್ತಿದೆ ಎಂದು ಹೇಳಬಹುದು, ಯಾಕೆಂದರೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಅವುಗಳಲ್ಲಿ ಹಲವು ಪ್ರಯೋಜನಗಳ ಜೊತೆಗೆ ಉಚಿತವಾಗಿ ಹಣ ಒದಗಿಸುವುದು ಸುಲಭದ ಮಾತಲ್ಲ ಇದಕ್ಕೆ ರಾಜ್ಯದ ಬೊಕ್ಕಸದ ಹಣ ಖಾಲಿ ಆಗ್ತಾ ಇರುವುದು ಒಂದು ಕಡೆ ಆದರೆ, ಇನ್ನೊಂದು ಕಡೆಗೆ ಎಲ್ಲ ಯೋಜನೆಗಳ ನಿರ್ವಹಣೆ ಕೂಡ ಬಹಳ ಮುಖ್ಯವಾಗಿರುತ್ತದೆ.

ಯಾವ ಮಹಿಳೆಯ ಹೆಸರಿನಲ್ಲಿ ಬಿಪಿಎಲ್ ಕಾರ್ಡ್ (BPL card) ಇದೆಯೋ ಅಥವಾ ಎಪಿಎಲ್ ಕಾರ್ಡ್ ಇದೆಯೋ ಅಂತವರು ಮನೆ ನಿರ್ವಹಣೆಗೆ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ 2000 ರೂಪಾಯಿಗಳನ್ನು ಪ್ರತಿ ತಿಂಗಳು ಪಡೆದುಕೊಳ್ಳುತ್ತಿದ್ದಾರೆ. ಇದು ಸರ್ಕಾರದ ಸಾಧನೆಗಳು ಎಂದು ಹೇಳಬಹುದು.

ಗೃಹಲಕ್ಷ್ಮಿ ಯೋಜನೆ ಫಲಾನುಭವಿ ಮಹಿಳೆಯರಿಗೆ ಸರ್ಕಾರದಿಂದ ಬಿಗ್ ಅಪ್ಡೇಟ್!

ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿ ಯೋಜನೆಯ ಎಲ್ಲಾ ಪೆಂಡಿಂಗ್ ಹಣ ಪಡೆಯೋಕೆ ಹೀಗೆ ಮಾಡಿ - Kannada News

ಇನ್ನು ಎರಡನೆಯದಾಗಿ ಅನ್ನಭಾಗ್ಯ ಯೋಜನೆ (Anna Bhagya scheme) ನೋಡುವುದಾದರೆ ಐದು ಕೆಜಿ ಅಕ್ಕಿಯನ್ನು ಉಚಿತವಾಗಿ ಒದಗಿಸಲು ಸಾಧ್ಯವಾಗದೆ ಇದ್ದರೂ ಆ ಅಕ್ಕಿಯ ಬದಲಿಗೆ ಹಣವನ್ನು ನಾವು ಪಡೆದುಕೊಳ್ಳುತ್ತಿದ್ದೇವೆ. ಪ್ರತಿ ಕೆಜಿಗೆ 34ಗಳಂತೆ 170 ರೂಪಾಯಿಗಳನ್ನು ಪ್ರತಿಯೊಬ್ಬ ಸದಸ್ಯ ಪ್ರತಿ ತಿಂಗಳು ಪಡೆದುಕೊಳ್ಳಲು ಸಾಧ್ಯವಾಗಿದೆ. ಈ ಹಣ ನೇರವಾಗಿ ಫಲಾನುಭವಿಗಳ ಖಾತೆಗೆ DBT ಆಗುತ್ತದೆ.

ಇನ್ನು ಮೂರನೆಯದಾಗಿ ಅಥವಾ ಸರ್ಕಾರ ಘೋಷಿಸಿದ 5ನೇ ಗ್ಯಾರಂಟಿ ಯೋಜನೆಯಾಗಿ ಯುವ ನಿಧಿ ಯೋಜನೆ (Yuva Nidhi scheme) ಯನ್ನು ಜಾರಿಗೆ ತರಲಾಗಿದ್ದು ಈ ಯೋಜನೆಯಡಿಯಲ್ಲಿ ನಿರುದ್ಯೋಗಿಗಳು ನಿರುದ್ಯೋಗ ಭತ್ಯೆ(unemployed allowance) ಪಡೆದುಕೊಳ್ಳುತ್ತಾರೆ. ಪದವೀಧರರಿಗೆ 3000 ಹಾಗೂ ಡಿಪ್ಲೋಮಾ ಮುಗಿಸಿದವರಿಗೆ 1500 ಪ್ರತಿ ತಿಂಗಳು ಸಿಗುತ್ತದೆ.

ಬರೋಬ್ಬರಿ 2.95 ಲಕ್ಷ ಫಲಾನುಭವಿಗಳ ಕೈ ಸೇರಲಿದೆ ಹೊಸ ರೇಷನ್ ಕಾರ್ಡ್!

ಎಲ್ಲಾ ಮಹಿಳೆಯರಿಗೂ ಸಿಗುತ್ತಿಲ್ಲ ಪ್ರಯೋಜನ

ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಆರಂಭವಾಗಿ ಐದಾರು ತಿಂಗಳುಗಳು ಕಳೆದಿವೆ ಇಲ್ಲಿಯವರೆಗೆ ಸರ್ಕಾರ ಸುಮಾರು 90% ನಷ್ಟು ಫಲಾನುಭವಿ ಮಹಿಳೆಯರ ಖಾತೆಗೆ (Bank Account) ಹಣ ಜಮಾ ಮಾಡಲು ಸಾಧ್ಯವಾಗಿದೆ. ಆದರೆ ಇನ್ನೂ ಉಳಿದ 10% ಮಹಿಳೆಯರಿಗೆ ಅರ್ಜಿ ಸಲ್ಲಿಸಿದ ನಂತರವೂ ಹಣ ಸಿಗುತ್ತಿಲ್ಲ.

ಎಲ್ಲಾ ಫಲಾನುಭವಿ ಮಹಿಳೆಯರ ಖಾತೆಗೆ ಹಣ ಜಮಾ ಮಾಡಲು ಸರ್ಕಾರ ಬೇರೆ ಬೇರೆ ರೀತಿಯ ಉಪಕ್ರಮಗಳನ್ನು ಕೈಗೊಂಡಿತ್ತು. ಆದರೆ ಹಣ ಮಾತ್ರ ಮಹಿಳೆಯರ ಖಾತೆಗೆ ತಲುಪಿಲ್ಲ. ಈಗ ನೀವು ಇದೊಂದು ಕೆಲಸ ಮಾಡಿದರೆ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ ಗ್ಯಾರಂಟಿ ಎನ್ನುತ್ತಿದೆ ಸರ್ಕಾರ.

ರೈತರಿಗೆ ಮತ್ತೊಂದು ಗುಡ್ ನ್ಯೂಸ್! ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ

Gruha Lakshmi Yojanaಮುಂದಿನ ಕಂತಿನ ಹಣ ಜಮಾ ಆಗಲು ಈ ಕೆಲಸ ಮಾಡಿ!

ನಿಮ್ಮ ಬ್ಯಾಂಕ್ ನ ಖಾತೆ ಸರಿ ಇಲ್ಲ ಎನಿಸಿದರೆ ನೀವು ಮೊದಲು ಪೋಸ್ಟ್ ಆಫೀಸ್ (post office) ಅಲ್ಲಿ ಒಂದು ಉಳಿತಾಯ ಖಾತೆಯನ್ನು ಆರಂಭಿಸಿ ಈ ರೀತಿ ಉಳಿತಾಯ ಖಾತೆಯನ್ನು ತೆರೆದು ಅದನ್ನ ನಿಮ್ಮ ಯೋಜನೆಗಳಿಗೆ ಲಿಂಕ್ ಮಾಡಿಕೊಳ್ಳಬಹುದು. ಅಂದರೆ ರೇಷನ್ ಕಾರ್ಡ್ ಇದೆ ಪೋಸ್ಟ್ ಆಫೀಸ್ ಖಾತೆಯ ಸಂಖ್ಯೆಯನ್ನು ಲಿಂಕ್ ಮಾಡಿಕೊಂಡರೆ ಮಿಸ್ ಆಗದೆ ನಿಮ್ಮ ಖಾತೆಗೆ ಎಲ್ಲಾ ಗ್ಯಾರಂಟಿ ಯೋಜನೆಯ ಡಿ ಬಿ ಟಿ ಹಣ ಜಮಾ ಆಗುತ್ತದೆ.

ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಅಥವಾ ನಿಮ್ಮ ಅರ್ಜಿಯಲ್ಲಿ ಯಾವುದಾದರೂ ಸಮಸ್ಯೆ ಇದೆಯೋ ಏನೋ ಎನ್ನುವುದನ್ನು ತಿಳಿದುಕೊಳ್ಳಲು ಹತ್ತಿರದ ಸಿಡಿಪಿಓ (CDPO) ಕಚೇರಿಗೆ ಹೋಗಿ ಚೆಕ್ ಮಾಡಿಸಿ. ಒಂದು ವೇಳೆ ತಾಂತ್ರಿಕ ದೋಷದಿಂದಾಗಿ ನಿಮ್ಮ ಖಾತೆಗೆ ಹಣ ಜಮಾ ಆಗದಿದ್ದರೆ ಈ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತಂದು ನಿಮ್ಮ ಖಾತೆಗೆ ಹಣ ಜಮಾ ಆಗುವಂತೆ ಸಹಕರಿಸುತ್ತಾರೆ.

ರೈತ ವಿದ್ಯಾನಿಧಿ ಮೂಲಕ ರೈತ ಮಕ್ಕಳಿಗೆ ವಿದ್ಯಾರ್ಥಿ ವೇತನ! ಪಡೆಯಲು ಅರ್ಜಿ ಸಲ್ಲಿಸಿ

DBT ಸ್ಟೇಟಸ್ ಚೆಕ್ ಮಾಡಿ!

ಇನ್ನೊಂದು ಮುಖ್ಯವಾಗಿರುವ ವಿಚಾರ ಅಂದ್ರೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಮೊಬೈಲ್ ಅಪ್ಲಿಕೇಶನ್ DBT Karnataka ಡೌನ್ಲೋಡ್ ಮಾಡಿಕೊಂಡು ಎಲ್ಲಾ ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿದ್ಯೋ ಇಲ್ವೋ ಎಂದು ಸ್ಟೇಟಸ್ ಚೆಕ್ ಮಾಡಿಕೊಳ್ಳಿ.

Do this to get all pending funds of Annabhagya, Gruha lakshmi, Yuvanidhi Yojana

Follow us On

FaceBook Google News

Do this to get all pending funds of Annabhagya, Gruha lakshmi, Yuvanidhi Yojana