Karnataka NewsBangalore News

ಗೃಹಲಕ್ಷ್ಮಿ ಯೋಜನೆ ಫಲಾನುಭವಿ ಮಹಿಳೆಯರಿಗೆ ಸರ್ಕಾರದಿಂದ ಬಿಗ್ ಅಪ್ಡೇಟ್!

ಸಾಕಷ್ಟು ಮಹಿಳೆಯರಿಗೆ ಗೃಹಲಕ್ಷ್ಮಿ (Gruha lakshmi scheme) ಯೋಜನೆ ಹಣ 2000 ಸಿಗುತ್ತದೆ. ಆದರೆ ಇನ್ನೊಂದು ಇಷ್ಟು ಮಹಿಳೆಯರು ಒಂದು ಕಂತಿನ ಹಣವಾದರೂ ಬಂದಿದ್ಯ ಅಂತ ಪದೇಪದೇ ಬ್ಯಾಂಕ್ (Bank) ಗೆ ಹೋಗಿ ತಮ್ಮ ಖಾತೆಯನ್ನು (Bank Account) ಪರಿಶೀಲಿಸಿಕೊಳ್ಳುತ್ತಿದ್ದಾರೆ.

ಆದರೆ ಅವರ ನಿರೀಕ್ಷೆಯಂತೆ ಅವರ ಖಾತೆಗೆ ಹಣ ಮಾತ್ರ ಬರ್ತಾ ಇಲ್ಲ. ಇದಕ್ಕೆ ಕಾರಣ ಬೇರೆ ಬೇರೆ ಕಡೆ ಬೇರೆ ಬೇರೆ ರೀತಿಯಾಗಿ ಹೇಳುತ್ತಿದ್ದಾರೆ. ಎಲ್ಲಾ ಕೆಲಸವನ್ನು ಮಾಡಿಕೊಂಡರು ನಮ್ಮ ಖಾತೆಗೆ ಹಣ ಯಾಕೆ ಬರ್ತಾ (Money Deposit) ಇಲ್ಲ ಅನ್ನೋದು ಮಹಿಳೆಯರ ಪ್ರಶ್ನೆ.

Gruha Lakshmi Yojana funds have been released, Check the women of this district

ಬರೋಬ್ಬರಿ 2.95 ಲಕ್ಷ ಫಲಾನುಭವಿಗಳ ಕೈ ಸೇರಲಿದೆ ಹೊಸ ರೇಷನ್ ಕಾರ್ಡ್!

ಈ ಕೆಲವು ಕೆಲಸಗಳನ್ನು ಮಾಡಿಕೊಂಡಿದ್ದೀರಾ ಮತ್ತೊಮ್ಮೆ ಚೆಕ್ ಮಾಡಿ?

*ನಿಮ್ಮ ಖಾತೆಗೆ ಹಣ ಜಮಾ ಆಗುತ್ತಿಲ್ಲ ಎಂದಾದರೆ ಮೊದಲು ಅದಕ್ಕೆ ಏನು ಕಾರಣ ಎಂಬುದನ್ನು ತಿಳಿದುಕೊಳ್ಳಿ. ಅದಕ್ಕಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಗೆ ಭೇಟಿ ನೀಡಿ ನೀವು ಅರ್ಜಿ ಸಲ್ಲಿಸಿದ ಬಗ್ಗೆ ಮಾಹಿತಿಯನ್ನು ನೀಡಿ. ನಂತರ ನಿಮ್ಮ ರೇಷನ್ ಕಾರ್ಡ್ (Ration Card) ಆಧಾರ್ ಕಾರ್ಡ್ (Aadhaar Card) ಹಾಗೂ ಅರ್ಜಿ ಸಲ್ಲಿಸಿದ ನಂತರ ಸಿಕ್ಕಿರುವ ಸ್ವೀಕೃತಿ ಪ್ರತಿ ತೆಗೆದುಕೊಂಡು ಹೋಗಿ ಅವುಗಳನ್ನ ಕೂಡ ನೀಡಬೇಕು ಆಗ ನಿಮ್ಮ ಖಾತೆಯನ್ನು ಪರಿಶೀಲನೆ ಮಾಡಿ ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ ಆಗಿದೆಯೋ ಇಲ್ಲವೋ ಎಂಬುದನ್ನು ಮೊದಲು ಪರಿಶೀಲಿಸಲಾಗುತ್ತದೆ.

*ಸಿಡಿಪಿಓ ಕಚೇರಿಯಲ್ಲಿ ನಿಮ್ಮ ಗೃಹಲಕ್ಷ್ಮಿ ಯೋಜನೆಗೆ ಹಣ ಪಡೆದುಕೊಳ್ಳಲು ಅರ್ಹರು ಎನ್ನುವ ಅನುಮೋದನೆ ಸಿಕ್ಕಿದೆಯೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಬೇಕು. ಅನುಮೋದನೆ ಸಿಕ್ಕಿದ್ದರೆ ಕೆಲವು ತಾಂತ್ರಿಕ ದೋಷಗಳಿಂದ ನಿಮ್ಮ ಖಾತೆಗೆ ಹಣ ಬಾರದೆ ಇರಬಹುದು ಇದು ಸರ್ಕಾರದ ಗಮನಕ್ಕೆ ಬಂದರೆ ಆ ಸಮಸ್ಯೆಯನ್ನು ಪರಿಹರಿಸಿ ನಿಮ್ಮ ಖಾತೆಗೆ ಹಣ ಬರುವಂತೆ ಮಾಡುತ್ತಾರೆ. ಹಾಗಾಗಿ CDPO ಅಧಿಕಾರಿಗಳು ನಿಮಗೆ ಸಹಾಯ ಮಾಡಬಲ್ಲರು.

6 ಮತ್ತು 7ನೇ ಕಂತಿನ ಗೃಹಲಕ್ಷ್ಮಿ ಹಣ ಪಡೆಯೋಕೆ ಹೊಸ ರೂಲ್ಸ್! ತಪ್ಪದೆ ತಿಳಿಯಿರಿ

*ಇನ್ನು ಮುಂದಿನ ಪರಿಹಾರ ಅಂದ್ರೆ ನಿಮಗೆಲ್ಲ ತಿಳಿದಿರುವ ಹಾಗೆ ಆಧಾರ್ ಕಾರ್ಡ್ ಲಿಂಕ್, ಬ್ಯಾಂಕ್ ಖಾತೆಗೆ ಕೆ ವೈ ಸಿ, ರೇಷನ್ ಕಾರ್ಡ್ ಅಪ್ಡೇಟ್ (Ration Card Update) ಮತ್ತು ಕೆವೈಸಿ ಹಾಗೂ NPCI ಇವಿಷ್ಟು ನಿಮ್ಮ ಖಾತೆಗೆ ಆಟೋಮ್ಯಾಟಿಕ್ ಆಗಿ ಹಣ ಬರಲು ಮಾಡಿಕೊಳ್ಳಬೇಕಾದ ಕೆಲಸಗಳು ಇವುಗಳು ಸರಿಯಾಗಿ ಕೊಡುವುದು ಬಹಳ ಮುಖ್ಯ.

ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ, ನಿಮ್ಮ ಬ್ಯಾಂಕ್ ನ ಖಾತೆ ಎಲ್ಲಿದೆಯೋ ಅದೇ ಬ್ಯಾಂಕ್ ಶಾಖೆಗೆ ಹೋಗಿ ನಮ್ಮ ಖಾತೆಗೆ ಇನ್ನೂ ಹಣ ಬಂದಿಲ್ಲ ಹಾಗಾಗಿ ಕೆವೈಸಿ ಅಪ್ಡೇಟ್ (E-KYC) ಅಥವಾ ಎನ್ ಪಿ ಸಿ ಐ ಮ್ಯಾಪಿಂಗ್ (NPCI mapping ) ಆಗಿದ್ಯೋ ಇಲ್ವೋ ಎಂಬುದನ್ನು ಚೆಕ್ ಮಾಡಿ ಎಂದು ಸಿಬ್ಬಂದಿಗಳ ಬಳಿ ಹೇಳಿ. ಒಂದು ವೇಳೆ ಏನಾದರೂ ಸಮಸ್ಯೆ ಇದ್ದರೆ ಅದನ್ನ ತಕ್ಷಣ ಅಪ್ಡೇಟ್ ಮಾಡಿಸಿಕೊಳ್ಳಿ ಮುಂದಿನ ಕಂತಿನ ಹಣ ಬರಲು ಸಹಾಯವಾಗುತ್ತದೆ.

ಈ ದಾಖಲೆ ಇದ್ರೆ ಆನ್ಲೈನ್ ಮೂಲಕವೇ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು!

Gruha Lakshmi Yojana*ಇನ್ನೊಂದು ಮುಖ್ಯವಾಗಿರುವ ವಿಚಾರ ಅಂದ್ರೆ ತೆರಿಗೆ ಪಾವತಿ ಮಾಡುವ (Income Tax payer) ಸಾಕಷ್ಟು ಮಹಿಳೆಯರು ಅರ್ಜಿ ಸಲ್ಲಿಸಿದ್ದರಿಂದ ಸರ್ಕಾರ ಅವುಗಳನ್ನು ರಿಜೆಕ್ಟ್ ಮಾಡಿದೆ ಆದರೆ ಹೀಗೆ ಬೇರೆಯವರ ಅಪ್ಲಿಕೇಶನ್ ರಿಜೆಕ್ಟ್ ಮಾಡುವ ಸಮಯದಲ್ಲಿ ಫಲಾನುಭವಿಗಳ ಹೆಸರು ಕೂಡ ಅಂತವರ ಪಟ್ಟಿಯಲ್ಲಿ ಸೇರಿಕೊಂಡಿದೆ.

ಒಂದು ವೇಳೆ ನಿಮ್ಮ ಹೆಸರು ಕೂಡ ಸೇರಿಕೊಂಡಿದ್ದರೆ ಸಿಟಿ ಪಿಯು ಕಚೇರಿಯಲ್ಲಿ ನಿಮಗೆ ತಿಳಿಯುತ್ತದೆ ತಕ್ಷಣ ನೀವು ಆದಾಯ ತೆರಿಗೆ ಪಾವತಿದಾರರಲ್ಲ ಎನ್ನುವ ದೃಢೀಕರಣ ಪ್ರಮಾಣ ಪತ್ರವನ್ನು ಶಿಶು ಅಭಿವೃದ್ದಿ ಇಲಾಖೆ ಕೊಟ್ಟು ಅಲ್ಲಿಂದ ಅದು ಪ್ರಧಾನ ಕಚೇರಿಗೆ ತಲುಪಿ ನಂತರ ನಿಮ್ಮ ಹೆಸರನ್ನು ಈ ಲಿಸ್ಟ್ ನಿಂದ ತೆಗೆದು ಹಾಕಲಾಗುತ್ತದೆ. ಇಷ್ಟ ಆದ್ರೆ ನಿಮ್ಮ ಖಾತೆಗೆ ಹಣ ಬರುವುದು ಗ್ಯಾರಂಟಿ.

ಇಂತಹ ಮಹಿಳೆಯರ ಖಾತೆಗೆ ಪೆಂಡಿಂಗ್ ಗೃಹಲಕ್ಷ್ಮಿ ಹಣ ಜಮಾ! ಚೆಕ್ ಮಾಡಿಕೊಳ್ಳಿ

ಈಗಾಗಲೇ ಹಳ್ಳಿ ಹಳ್ಳಿಗಳಲ್ಲಿ ಮನೆ ಮನೆಗೆ ಅಂಗನವಾಡಿ ಸಹಾಯಕಿಯರು ಆಶಾ ಕಾರ್ಯಕರ್ತೆಯರು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ಮಹಿಳೆಯರಲ್ಲಿ ಅರಿವು ಮೂಡಿಸುವುದು ಹಾಗೂ ಯಾರಿಗೆ ಹಣ ಜಮಾ ಆಗಿಲ್ಲವೊ ಅಂತವರ ಸಮಸ್ಯೆಯನ್ನು ಪರಿಹರಿಸುವ ಕೆಲಸ ಮಾಡುತ್ತಿದ್ದಾರೆ ಹಾಗಾಗಿ ನೀವು ಅಂಥವರ ಸಹಾಯವನ್ನು ಕೂಡ ಪಡೆದುಕೊಳ್ಳಿ.

ಒಟ್ಟಿನಲ್ಲಿ ನಾನು ಅರ್ಜಿ ಸಲ್ಲಿಸಿದರೂ ನನ್ನ ಖಾತೆಗೆ ಮಾತ್ರ ಗೃಹಲಕ್ಷ್ಮಿ ಹಣ ಜಮಾ ಆಗಿಲ್ಲ ಎಂದು ನಿರಾಸೆಗೊಳ್ಳುವ ಬದಲು ಈ ಮೇಲಿನ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸುವುದರ ಮೂಲಕ ನಿಮ್ಮ ಖಾತೆಗೆ ಹಣ ಬರುವಂತೆ ಮಾಡಿಕೊಳ್ಳಿ.

Big Update from Govt for Women Beneficiaries of Gruha Lakshmi Yojana

Our Whatsapp Channel is Live Now 👇

Whatsapp Channel

Related Stories