6 ಮತ್ತು 7ನೇ ಕಂತಿನ ಗೃಹಲಕ್ಷ್ಮಿ ಹಣ ಪಡೆಯೋಕೆ ಹೊಸ ರೂಲ್ಸ್! ತಪ್ಪದೆ ತಿಳಿಯಿರಿ
ಗೃಹಲಕ್ಷ್ಮಿ ಹಣ ಫೆಬ್ರವರಿ ತಿಂಗಳ ಕೊನೆಯ ಒಳಗೆ ಎಲ್ಲಾ ಫಲಾನುಭವಿ ಮಹಿಳೆಯರ ಖಾತೆಯನ್ನು (Bank Account) ಸೇರಲಿದೆ
ಮಹಿಳೆಯರ ಸಬಲೀಕರಣ (women empowerment) ಮಾತ್ರವಲ್ಲದೆ ಲಿಂಗ ಸಮಾನತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಯಾವ ಮಹಿಳೆಗೆ ದುಡಿಯಲು ಸಾಧ್ಯವಾಗುವುದಿಲ್ಲವೋ ಮನೆಯಲ್ಲಿಯೇ ಇರುತ್ತಾಳೋ ಅಂತವರಿಗೆ ಅನುಕೂಲವಾಗಲು ಸರ್ಕಾರ ಎರಡು ಸಾವಿರ ರೂಪಾಯಿಗಳನ್ನು ಉಚಿತವಾಗಿ ನೀಡುತ್ತಿದೆ.
ಇದಕ್ಕಾಗಿ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯನ್ನು ಜಾರಿಗೆ ತರಲಾಗಿದೆ. ಈಗಾಗಲೇ ಯೋಜನೆಗೆ ಏಳು ತಿಂಗಳು ಕಳೆದಿದ್ದು ಸುಮಾರು ಐದು ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ.
ಈ ದಾಖಲೆ ಇದ್ರೆ ಆನ್ಲೈನ್ ಮೂಲಕವೇ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು!
6ನೇ ಕಂತಿನ ಹಣವು ಕೂಡ ರಾಜ್ಯದ ಕೆಲವು ಜಿಲ್ಲೆಯ ಕೆಲವು ಪ್ರದೇಶಗಳಿಗೆ ಪ್ರಾಯೋಗಿಕವಾಗಿ ಬಿಡುಗಡೆಯಾಗಿದೆ. ಹಾಗೂ ಫೆಬ್ರವರಿ ತಿಂಗಳ ಕೊನೆಯ ಒಳಗೆ ಎಲ್ಲಾ ಫಲಾನುಭವಿ ಮಹಿಳೆಯರ ಖಾತೆಯನ್ನು (Bank Account) ಸೇರಲಿದೆ. ಇದರ ಜೊತೆಗೆ 7ನೇ ಕಂತಿನ ಹಣ ನಿಮ್ಮ ಖಾತೆಗೆ ಬರಬೇಕು ಅಂದ್ರೆ ಕೆಲವು ಪ್ರಮುಖ ಕೆಲಸಗಳನ್ನು ಮಾಡಿಕೊಳ್ಳಲೇಬೇಕು ಎಂದು ಸರ್ಕಾರ ತಿಳಿಸಿದೆ.
ಖಾತೆಗೆ ಹಣ ಜಮಾ ಆಗದೇ ಇರಲು ನೂರಾರು ಕಾರಣಗಳು!
ರಾಜ್ಯ ಸರ್ಕಾರಕ್ಕೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳಲು ಸಲ್ಲಿಕೆಯಾಗಿರುವ ಅರ್ಜಿಗಳು ಸುಮಾರು 1.27 ಕೋಟಿಗಿಂತಲೂ ಹೆಚ್ಚು. ಇವುಗಳಲ್ಲಿ 90% ನಷ್ಟು ಮಹಿಳೆಯರ ಖಾತೆಗೆ ಕನಿಷ್ಠ 2 ರಿಂದ 3 ಕಂತಿನ ಹಣವಾದರೂ ಬಿಡುಗಡೆ ಆಗಿದೆ.
ಆದರೆ, ಅರ್ಜಿ ಸಲ್ಲಿಸಿದ ನಂತರವೂ ಒಂದೇ ಒಂದು ಕಂತಿನ ಹಣವನ್ನು ಪಡೆದುಕೊಳ್ಳದೆ ಇರುವ ಮಹಿಳೆಯರು ಸುಮಾರು 10% ನಷ್ಟು ಇದ್ದಾರೆ ಎನ್ನಬಹುದು. ಆಧಾರ್ ಸೀಡಿಂಗ್ (Aadhaar seeding ) ಆಗಿಲ್ಲ, ಎನ್ ಪಿ ಸಿ ಐ ಆಗಿಲ್ಲ, ರೇಷನ್ ಕಾರ್ಡ್ ಕೆ ವೈ ಸಿ (KYC) ಆಗಿಲ್ಲ, ಬ್ಯಾಂಕ್ ಖಾತೆ, ರೇಷನ್ ಕಾರ್ಡ್ ಎಲ್ಲಾದ್ರಲ್ಲಿಯೂ ಯಜಮಾನ ಹೆಸರು ಮತ್ತು ಅಡ್ರೆಸ್ ಮ್ಯಾಚ್ ಆಗುತ್ತಿಲ್ಲ, ಸರ್ಕಾರದ ಕಡೆಯಿಂದ ತಾಂತ್ರಿಕ ದೋಷದಿಂದಾಗಿ ಹಣ ಬಿಡುಗಡೆ ಆಗುತ್ತಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಅರ್ಜಿ ಸಲ್ಲಿಸಿದ ಮಹಿಳೆಯರಿಗೆ ಹಣ ವರ್ಗಾವಣೆ ಆಗಿಲ್ಲ.
ರೈತರಿಗೆ ಮತ್ತೊಂದು ಗುಡ್ ನ್ಯೂಸ್! ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ
ಪರಿಹಾರವೇನು?
ಸಮಸ್ಯೆ ಇದ್ದ ಮೇಲೆ ಅದಕ್ಕೊಂದು ಪರಿಹಾರ ಕಂಡುಕೊಳ್ಳಲೇಬೇಕು. ಹಾಗಾಗಿ ಗೃಹಲಕ್ಷ್ಮಿ ಯೋಜನೆಗೆ ನೀವು ಅರ್ಜಿ ಸಲ್ಲಿಸಿ ನಿಮ್ಮ ಖಾತೆಗೆ ಹಣ ಬಾರದೆ ಇದ್ದರೆ ಮೊದಲು ಬ್ಯಾಂಕಿಗೆ ಹೋಗಿ ಎನ್ ಪಿ ಸಿ ಐ (NPCI) ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ.
ಇನ್ನು ಎರಡನೆಯದಾಗಿ ನೀವು ನಿಮ್ಮ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಸ್ವೀಕೃತಿ ಪ್ರಮಾಣ ಪತ್ರ, ನಿಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ವಿವರಗಳನ್ನು ತೆಗೆದುಕೊಂಡು ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಭೇಟಿ ನೀಡಿ. ಅಲ್ಲಿಯ ಸಿಡಿಪಿಓ (CDPO ) ಅಧಿಕಾರಿಗಳ ನಿಮ್ಮ ಗೃಹಲಕ್ಷ್ಮಿ ಖಾತೆಯನ್ನು ಚೆಕ್ ಮಾಡಿಸಿ, ಯಾಕೆ ಹಣ ಬರುತ್ತಿಲ್ಲ ಎನ್ನುವ ಕಾರಣ ಗೊತ್ತಾದ್ರೆ ಆ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗುತ್ತದೆ.
ಕೃಷಿ ಜಮೀನು ಹೊಂದಿರೋ ರೈತರಿಗೆ ಸಿಗಲಿದೆ 10,000 ರೂಪಾಯಿ! ಈ ರೀತಿ ಪಡೆಯಿರಿ
ಇನ್ನು ಮೂರನೆಯದಾಗಿ ಆದಾಯ ತೆರಿಗೆ ಪಾವತಿ (Income Tax payer) ಮಾಡುತ್ತಿರುವ ಮಹಿಳೆಯರು ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು ಸಾಕಷ್ಟು ಗೊಂದಲವನ್ನು ಕ್ರಿಯೇಟ್ ಮಾಡಿದೆ, ಯಾಕಂದರೆ ನಿಜವಾದ ಫಲಾನುಭವಿಗಳ ಹೆಸರನ್ನು ಕೂಡ ಈ ಲಿಸ್ಟ್ ನಲ್ಲಿ ಸೇರಿಸಲಾಗಿದೆ.
ಸರ್ಕಾರದ ಈ ತಾಂತ್ರಿಕ ದೋಷ (technical issues) ದಿಂದ ನಿಮ್ಮ ಹೆಸರು ಕೂಡ ಸೇರ್ಪಡೆಯಾಗಿದ್ದರೆ ನೀವು ಆದಾಯ ತೆರಿಗೆ ಪಾವತಿದಾರರು ಅಲ್ಲದೆ ಇದ್ದರೆ ಶಿಶು ಕಲ್ಯಾಣ ಅಭಿವೃದ್ಧಿ ಇಲಾಖೆಗೆ ನಾನು ಪಾವತಿದಾರನಲ್ಲ ಎನ್ನುವ ದೃಢೀಕರಣ ಪ್ರಮಾಣ ಪತ್ರವನ್ನು ನೀಡಬೇಕು. ನಂತರ ನಿಮ್ಮ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಿ. ಅಲ್ಲಿ ನಿಮ್ಮ ಹೆಸರು ತೆಗೆದು ಹಾಕಲಾಗುತ್ತದೆ ಹಾಗೂ ಮುಂದಿನ ತಿಂಗಳಿನಿಂದ ನಿಮ್ಮ ಖಾತೆಗೆ ಹಣ DBT ಆಗುತ್ತದೆ.
ಇಂತಹ ಮಹಿಳೆಯರ ಖಾತೆಗೆ ಪೆಂಡಿಂಗ್ ಗೃಹಲಕ್ಷ್ಮಿ ಹಣ ಜಮಾ! ಚೆಕ್ ಮಾಡಿಕೊಳ್ಳಿ
New rules to get Gruha Lakshmi Scheme money for 6th and 7th installment