ಇಂತಹ ಮಹಿಳೆಯರ ಖಾತೆಗೆ ಪೆಂಡಿಂಗ್ ಗೃಹಲಕ್ಷ್ಮಿ ಹಣ ಜಮಾ! ಚೆಕ್ ಮಾಡಿಕೊಳ್ಳಿ
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಗೆ ಅರ್ಜಿ ಸಲ್ಲಿಸಿದ ಕೋಟ್ಯಾಂತರ ಮಹಿಳೆಯರಲ್ಲಿ ಸಾಕಷ್ಟು ಮಂದಿ ಐದು ಕಂತಿನ ಹಣವನ್ನು ಅಂದರೆ 10 ಸಾವಿರ ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ.
ಆದರೆ ಇದುವರೆಗೆ ಯಾರ ಖಾತೆಗೆ ಹಣ ಬಂದಿಲ್ಲವೋ ಅವರು ಕೂಡ ಒಟ್ಟಿಗೆ ಪೆಂಡಿಂಗ್ (pending amount) ಇರುವ 10,000ಗಳನ್ನು ಪಡೆದುಕೊಂಡಿರುವ ಬಗ್ಗೆ ವರದಿಯಾಗಿದೆ. ಇದರಿಂದಾಗಿ ಸಾಕಷ್ಟು ಮಹಿಳೆಯರು ಸಂತಸಗೊಂಡಿದ್ದಾರೆ. 6ನೇ ಕಂತಿನ ಹಣದ ನಿರೀಕ್ಷೆಯಲ್ಲಿ ಇರುವವರೆಗೂ ಕೂಡ ಸರ್ಕಾರ ಗುಡ್ ನ್ಯೂಸ್ ನೀಡಿದೆ.
ರಾಜ್ಯದ ಜನತೆಗೆ ಮತ್ತೆ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ! ಇಲ್ಲಿದೆ ಡೀಟೇಲ್ಸ್
ಡಿಸೆಂಬರ್ ತಿಂಗಳಿನಿಂದಲೇ ಬ್ಯಾಂಕ್ ಖಾತೆಗೆ (Bank Account) ಈಕೆ ವೈ ಸಿ (E-KYC) ಮಾಡಿಸಿಕೊಳ್ಳಬೇಕು ಹಾಗೂ npci ಮಾಡಿಸಿಕೊಳ್ಳುವುದು ಕೂಡ ಕಡ್ಡಾಯ ಎಂದು ಸರ್ಕಾರ ತಿಳಿಸಿದೆ.. ಇಲ್ಲಿಯವರೆಗೆ ಯಾರು ಈ ಕೆಲಸ ಮಾಡಿಕೊಂಡಿದ್ದಾರೋ ಅಂತವರ ಖಾತೆಗೆ ಜಮಾ (DBT) ಆಗದೇ ಇದ್ದ ಕಂತಿನ ಹಣವನ್ನು ಸೇರಿಸಿ, 10,000 ಜಮಾ ಆಗಿರುವುದು ದಾಖಲಾಗಿದೆ.
ಜನವರಿ ತಿಂಗಳ ಅಂತ್ಯದಲ್ಲಿ ಅಂದರೆ 23 24 ಮತ್ತು 25ನೇ ತಾರೀಕಿನಂದು ಸಾಕಷ್ಟು ಮಹಿಳೆಯರ ಖಾತೆಗೆ ತಲಾ ಎರಡು ಸಾವಿರ ರೂಪಾಯಿಗಳಂತೆ ಬ್ಯಾಕ್ ಟು ಬ್ಯಾಕ್ ಹಣ ಬಂದು ತಲುಪಿದೆ.
ಸ್ವಂತ ಮನೆ ಇಲ್ಲದವರಿಗೆ ಸಿದ್ದರಾಮಯ್ಯ ಸರ್ಕಾರದಿಂದ ಸಿಹಿ ಸುದ್ದಿ! ಉಚಿತ ಮನೆ ವಿತರಣೆ
ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪ್ರತಿ ತಿಂಗಳು ಮಹಿಳೆಯರ ಖಾತೆಗೆ ಸರ್ಕಾರ ಡಿ ಬಿ ಟಿ ಮಾಡುತ್ತಿದೆ. ಆದರೆ ಇದು ಸಂಪೂರ್ಣ ಆಟೋಮ್ಯಾಟಿಕ್ ಆಗಿದ್ದು, ಕೆಲವೊಮ್ಮೆ ಸರ್ವರ್ ಸಮಸ್ಯೆ ಹಾಗೂ ತಾಂತ್ರಿಕ ದೋಷ (technical issues) ಗಳಿಂದಾಗಿ ಮಹಿಳೆಯರ ಖಾತೆಗೆ ತಲುಪಲು ಸಾಧ್ಯವಾಗದೆ ಇರಬಹುದು.
ಹೀಗಾಗಿ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಂಡು ಸರ್ಕಾರದ ನಿಯಮ ಪಾಲಿಸಿದ ಸಾಕಷ್ಟು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಂತಿನ ಹಣವನ್ನ ಒಟ್ಟಿಗೆ ಪಡೆದುಕೊಂಡಿದ್ದಾರೆ.
ಗೃಹಲಕ್ಷ್ಮಿ ಹಣ ಇಂತಹ ಮಹಿಳೆಯರ ಖಾತೆಗೆ ಜಮಾ ಆಗುತ್ತಿಲ್ಲ! ಕಾರಣ ಹಾಗೂ ಪರಿಹಾರ ಇಲ್ಲಿದೆ
6ನೇ ಕಂತಿನ ಹಣ ಮಾತ್ರವಲ್ಲ 7ನೇ ಕಂತಿನ ಹಣವು ಜಮಾ ಆಗಲಿದೆ
ಫೆಬ್ರವರಿ ತಿಂಗಳ ಮೊದಲ ವಾರದಿಂದಲೇ ಆರನೇ ಕಂತಿನ ಹಣವನ್ನು ಕೂಡ ಬಿಡುಗಡೆ ಮಾಡಲು ಬ್ಯಾಂಕ್ ಗೆ ಸರ್ಕಾರದಿಂದ ಹಣ ಜಮಾ ಮಾಡಲಾಗಿದೆ. ರಾಜ್ಯದ ಕೆಲವು ಜಿಲ್ಲೆಗಳ ಕೆಲವು ಪ್ರದೇಶದ ಮಹಿಳೆಯರಿಗೆ ಮಾತ್ರ ಆರನೇ ಕಂತಿನ ಹಣ ಜಮಾ ಆಗಿದೆ. ಹಾಗೂ ಈ ಪ್ರಕ್ರಿಯೆ ಮುಂದುವರೆದಿದ್ದು ಫೆಬ್ರವರಿ ತಿಂಗಳ ಕೊನೆಯ ದಿನದ ಒಳಗೆ ಫಲಾನುಭವಿಗಳ ಖಾತೆಗೆ ಮತ್ತೆ ಎರಡು ಸಾವಿರ ರೂಪಾಯಿ ಬಂದು ಬೀಳಲಿದೆ.
ಹಾಗೆ ನಿಮ್ಮ ಖಾತೆಗೆ ಎಲ್ಲಾ ಕಂತಿನ ಹಣ ಜಮಾ ಮಾಡಬೇಕು ಅಂದ್ರೆ ಮೊದಲು ಬ್ಯಾಂಕ್ ಶಾಖೆಗೆ ಹೋಗಿ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿದ್ಯೋ ಇಲ್ವೋ ಎನ್ನುವುದನ್ನು ಚೆಕ್ ಮಾಡಿ. ತಕ್ಷಣ ಈಕೆ ವೈ ಸಿ ಅಪ್ಡೇಟ್ ಮಾಡಿಸಿ.
ಹಾಗೆಯೇ NPCI ಮ್ಯಾಪಿಂಗ್ ಕೂಡ ಆಗಿರಬೇಕು. ಈ ಕೆಲಸ ಆದರೆ ಮುಂದಿನ ಕಂತುಗಳ ಎರಡು ಸಾವಿರ ರೂಪಾಯಿ ಹಣ ನಿಮ್ಮ ಖಾತೆಗೆ ಬರುವುದು ಮಿಸ್ ಆಗುವುದೇ ಇಲ್ಲ.
ರದ್ದಾದ ಬಿಪಿಎಲ್ ರೇಷನ್ ಕಾರ್ಡ್ ಮರು ವಿತರಣೆಗೆ ಸಿದ್ಧತೆ; ಇಲ್ಲಿದೆ ಮಹತ್ವದ ಮಾಹಿತಿ
Gruha Lakshmi Scheme Pending money deposit to the account of such women
Our Whatsapp Channel is Live Now 👇