ರಾಜ್ಯದಲ್ಲಿ ಮಹಿಳೆಯರ ಸಬಲೀಕರಣ (women empowerment) ಕ್ಕಾಗಿ ಒಂದಲ್ಲ ಒಂದು ರೀತಿಯ ಯೋಜನೆಗಳನ್ನು ಪರಿಚಯಿಸಲಾಗಿದ್ದು ಅವುಗಳಲ್ಲಿ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಕೂಡ ಒಂದು.

ಈ ಯೋಜನೆ ಆರಂಭವಾಗಿ ಆರು ತಿಂಗಳು ಕಳೆದಿವೆ ಆರು ಕಂತಿನ ಹಣ ಕೂಡ ಬಿಡುಗಡೆ ಆಗಿದೆ ಪ್ರತಿ ಕಂತಿಗೆ 2000 ಗಳಂತೆ ಇಲ್ಲಿಯವರೆಗೆ ಶೇಕಡ 90ರಷ್ಟು ಮಹಿಳೆಯರ ಖಾತೆಗೆ ಕನಿಷ್ಠ 10,000ಗಳನ್ನು ಬಿಡುಗಡೆ ಮಾಡಲಾಗಿದೆ.

Gruha Lakshmi money received only 2,000, Update About Pending Money

ಆದರೆ ಸಾಕಷ್ಟು ಮಹಿಳೆಯರ ಖಾತೆಗೆ (Bank Account) ಹಣ ಬಿಡುಗಡೆ ಆಗಿಲ್ಲ. ಫಲಾನುಭವಿಗಳಾಗಿದ್ದರೂ ಕೂಡ ಅಂತಹ ಮಹಿಳೆಯರ ಖಾತೆಗೆ ಅರ್ಜಿ ಸಲ್ಲಿಸಿದ ನಂತರ ಹಣ ಬರುತ್ತಿಲ್ಲ ಯಾಕೆ ಎನ್ನುವ ಪ್ರಶ್ನೆ ಹಾಗೂ ಗೊಂದಲ ಈಗಲೂ ಹಾಗೆಯೇ ಉಳಿದಿದೆ. ಇದಕ್ಕೆ ಕಾರಣ ಕೆಲವು ತಾಂತ್ರಿಕ ದೋಷ (technical issues) ಗಳು ಎಂದೇ ಹೇಳಬಹುದು.

ರದ್ದಾದ ಬಿಪಿಎಲ್ ರೇಷನ್ ಕಾರ್ಡ್ ಮರು ವಿತರಣೆಗೆ ಸಿದ್ಧತೆ; ಇಲ್ಲಿದೆ ಮಹತ್ವದ ಮಾಹಿತಿ

ಯಾಕಂದ್ರೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ಯಾವುದೇ ಕೆಲಸ ಮಾಡುವುದಿದ್ದರೂ ಎಲ್ಲವೂ ಆನ್ಲೈನ್ ಮೂಲಕವೇ ಆಗುತ್ತಿದೆ ಉದಾಹರಣೆಗೆ NPCI ಮಾಡಿಸಿಕೊಳ್ಳುವುದು ಆಧಾರ್ ಅಪ್ಡೇಟ್, ಬ್ಯಾಂಕ್ ಖಾತೆಗೆ ಕೆವೈಸಿ (EKYC) ಮಾಡಿಸಿಕೊಳ್ಳುವುದು, ರೇಷನ್ ಕಾರ್ಡ್ ಕೆ ವೈ ಸಿ ಹೀಗೆ ಪ್ರತಿಯೊಂದು ಕೂಡ ಆನ್ಲೈನ್ ಅವಲಂಬಿಸುವುದು ಅನಿವಾರ್ಯ. ಆದರೆ ಸಾಕಷ್ಟು ಬಾರಿ ಸರ್ವರ್ ಸಮಸ್ಯೆ (server problem) ಉಂಟಾಗಿ ಜನರಿಗೆ ಸುಲಭವಾಗಿ ಆನ್ಲೈನ್ ಮೂಲಕ ಲಿಂಕಿಂಗ್ ಪ್ರೋಸೆಸ್ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಈ ರೀತಿ ಸರ್ಕಾರದ ನಿಯಮಗಳನ್ನು ಅನುಸರಿಸುವುದರಲ್ಲಿಯೇ ಮಹಿಳೆಯರು ಬ್ಯುಸಿ ಆಗಿದ್ದಾರೆ. ಪ್ರತಿ ತಿಂಗಳು ಪ್ರಯತ್ನಿಸಿದರು ಕೂಡ ಈ ಲಿಂಕಿಂಗ್ ಕೆಲಸಗಳು ನಡೆಯುತ್ತಿಲ್ಲ. ಬ್ಯಾಂಕ್ ಗಳು ಕೆಲವು ಕಡೆ ಸರಿಯಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ ಇದೆಲ್ಲ ಕಾರಣದಿಂದ ಮಹಿಳೆಯರ ಖಾತೆಗೆ ಹಣ ಬರುತ್ತಿಲ್ಲ. ಆದರೆ ಸರ್ಕಾರ ಒಂದಲ್ಲ ಒಂದು ರೀತಿಯ ಉಪಕ್ರಮಗಳನ್ನು ಕೈಗೊಂಡು ಪರಿಹಾರ ಸೂಚಿಸಲು ಪ್ರಯತ್ನಿಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಹೊಸದಾಗಿ ಮದುವೆಯಾದ ದಂಪತಿಗಳಿಗೆ ಸಿಗಲಿದೆ 50,000 ಸಹಾಯಧನ! ಪಡೆಯಿರಿ

6ನೇ ಕಂತಿನ ಹಣ ಬರಲು ಈ ಕೆಲಸ ಮಾಡಿ!

Gruha Lakshmi Yojanaಈಗಾಗಲೇ 8ನೇ ಕಂತಿನ ಹಣವನ್ನು ಕೂಡ ಫೆಬ್ರವರಿ ಆರನೇ ತಾರೀಖಿನಿಂದ ಬಿಡುಗಡೆ ಮಾಡಲಾಗಿದೆ. ದಿನಕ್ಕೆ ಒಂದಿಷ್ಟು ಜನರಿಗೆ ಹಣ ವರ್ಗಾವಣೆ ಆಗುತ್ತಿದೆ. ಹಾಗಾಗಿ ಅರ್ಜಿ ಸಲ್ಲಿಸಿದ ಎಲ್ಲರ ಖಾತೆಗೆ 6ನೇ ಕಂತಿನ ಹಣ ಬಿಡುಗಡೆ ಆಗುವ ಹೊತ್ತಿಗೆ ಫೆಬ್ರವರಿ ತಿಂಗಳ ಕೊನೆ ತಲುಪಬಹುದು.

ಫೆಬ್ರವರಿ ತಿಂಗಳ ಆರನೇ ಕಂತಿನ ಹಣ ನಿಮ್ಮ ಖಾತೆಗೆ ಬರಬೇಕು ಅಂದ್ರೆ ತಕ್ಷಣ ಬ್ಯಾಂಕ್ ಗೆ ಹೋಗಿ ಕೆವೈಸಿ ಪ್ರಕ್ರಿಯೆ ಹಾಗೂ npci ಸರಿಯಾಗಿದೆಯೋ ಇಲ್ಲವೋ ಎನ್ನುವುದನ್ನು ಚೆಕ್ ಮಾಡಿಕೊಳ್ಳಿ ನಿಮಗೆ ಐದು ತಿಂಗಳ ಹಣ ಬಂದಿದ್ದರೆ. NPCI ಮಾಡಿಸುವ ಅಗತ್ಯವಲ್ಲ ಅದು ಆಟೋಮ್ಯಾಟಿಕ್ ಆಗಿ ಆಗಿರುತ್ತದೆ.

ಹೊಸ ರೇಷನ್ ಕಾರ್ಡ್ ವಿತರಣೆಗೆ ಡೇಟ್ ಫಿಕ್ಸ್; ಬಿಪಿಎಲ್ ಕಾರ್ಡ್ ವಿತರಣೆಗೆ ನಿರ್ಧಾರ

ಇನ್ನು ಉಳಿದಂತೆ, ಆದಾಯ ತೆರಿಗೆ ಪಾವತಿದಾರರ (Income Tax payer) ಲಿಸ್ಟ್ ನಲ್ಲಿ ಬೈ ಮಿಸ್ಟೇಕ್ ನಿಮ್ಮ ಹೆಸರು ಸೇರ್ಪಡೆಗೊಂಡಿದ್ದರೆ ಅದನ್ನು ನೀವು ತೆಗೆಸಿ ಹಾಕಬೇಕು. ಅದಕ್ಕಾಗಿ ಶಿಶು ಕಲ್ಯಾಣ ಅಭಿವೃದ್ಧಿ ಇಲಾಖೆಗೆ ಅರ್ಜಿ ಸಲ್ಲಿಸಿ ‘ನಾನು ತೆರಿಗೆ ಪಾವತಿದಾರನಲ್ಲ’ ಎನ್ನುವ ದೃಢೀಕರಣ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ.

ಈ ಎಲ್ಲಾ ಪ್ರಕ್ರಿಯೆಗೂ ಸ್ವಲ್ಪ ಸಮಯ ಹಿಡಿಯುವುದರಿಂದ ಆರನೇ ಕಂತಿನ ಹಣ ಕೆಲವು ಮಹಿಳೆಯರಿಗೆ ಮಿಸ್ ಆಗುವ ಸಾಧ್ಯತೆ ಇದೆ. ಪೆಂಡಿಂಗ್ ಇರುವ ಹಣವನ್ನು ಒಟ್ಟಿಗೆ ಕೊಡುತ್ತೇವೆ ಎಂದು ಸರ್ಕಾರ ಹೇಳಿದ್ದರು ಸಾಕಷ್ಟು ಜನರಿಗೆ ಇದರ ಪ್ರಯೋಜನ ಸಿಕ್ಕಿಲ್ಲ. ಹಾಗಾಗಿ ನೀವು ಗೃಹಲಕ್ಷ್ಮಿ ಯೋಜನೆಯ ಕನಿಷ್ಠ 7ನೇ ಕಂತಿನ ಹಣವನ್ನು ಪಡೆದುಕೊಳ್ಳಲು ನಿಮ್ಮ ಖಾತೆಯಲ್ಲಿ ಅಗತ್ಯ ಇರುವ ಬದಲಾವಣೆಗಳನ್ನು ಮಾಡಿಕೊಳ್ಳಿ.

ಮುಂದಿನ ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಬರಬೇಕು ಅಂದ್ರೆ ಈ ಕೆಲಸ ಮಾಡಲೇಬೇಕು!

ಈಗಲೇ ಗೃಹಲಕ್ಷ್ಮಿ ಸ್ಟೇಟಸ್ ತಿಳಿದುಕೊಳ್ಳಿ!

ಈ ಕೆಲಸವನ್ನು ಕೂಡ ನೀವು ಮಾಡಬಹುದು ಇದಕ್ಕಾಗಿ ನಿಮ್ಮ ಮೊಬೈಲ್ ನಲ್ಲಿ (ಸ್ಮಾರ್ಟ್ ಫೋನ್) ಪ್ಲೇ ಸ್ಟೋರ್ ಗೆ ಹೋಗಿ ಕರ್ನಾಟಕದ ಅಧಿಕೃತ ಅಪ್ಲಿಕೇಶನ್, DBT Karnataka ಎಂದು ಸರ್ಚ್ ಮಾಡಿ.

ಈಗ ಒಂದು ಅಪ್ಲಿಕೇಶನ್ ಕಾಣಿಸುತ್ತದೆ. ಅದನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿ.

ಅಪ್ಲಿಕೇಶನ್ ನಲ್ಲಿ ಲಾಗಿನ್ ಆಗಲು ನಿಮ್ಮ ಆಧಾರ ಸಂಖ್ಯೆಯನ್ನು ನಮೂದಿಸಬೇಕು. ನಂತರ ನಿಮ್ಮ ಮೊಬೈಲ್ ಗೆ ಓಟಿಪಿ ಕಳುಹಿಸಲಾಗುತ್ತದೆ. ಅದನ್ನು ಕೂಡ ನಮೂದಿಸಿ.

ಈಗ ನೀವು ನಿಮ್ಮ ಖಾತೆಗೆ ಆಗಿರುವ ಎಲ್ಲಾ ಡಿಬಿಟಿ ಹಣದ ಬಗ್ಗೆ ಮಾಹಿತಿ ಪಡೆಯಬಹುದು.

Gruha Lakshmi money is not deposited in the account of such women, Here is the cause and solution