ಹೊಸದಾಗಿ ಮದುವೆಯಾದ ದಂಪತಿಗಳಿಗೆ ಸಿಗಲಿದೆ 50,000 ಸಹಾಯಧನ! ಪಡೆಯಿರಿ

ಮದುವೆ (marriage) ಎನ್ನುವುದು ಬಹಳ ಮುಖ್ಯವಾಗಿರುವ ಸಂಬಂಧ. ಎರಡು ಮನಸುಗಳು ಮದುವೆ ಎನ್ನುವ ಬಂಧದ ಮೂಲಕ ಒಂದಾಗುತ್ತವೆ. ಮದುವೆಯನ್ನು ಸಾಕಷ್ಟು ಅದ್ದೂರಿಯಿಂದ ಗುರು ಹಿರಿಯರ ಸಮ್ಮುಖದಲ್ಲಿ ನಡೆಸಲಾಗುತ್ತದೆ. ಆದರೆ ಆರ್ಥಿಕವಾಗಿ ಹಿಂದುಳಿದವರಿಗೆ ಮದುವೆಯ ಕನಸು ಕೇವಲ ಕನಸಾಗಿಯೇ ಇರುತ್ತದೆ.

ಆದರೆ ವಿವಾಹದ ಬಂಧದಲ್ಲಿ ಪ್ರತಿಯೊಂದು ಪ್ರೀತಿಸುವ ಜೋಡಿಯನ್ನು ಬೆಸೆಯಲು ಸಾಮೂಹಿಕ ವಿವಾಹ (mass marriage) ಅತ್ಯಂತ ಸಹಾಯಕವಾಗಿದೆ ಎನ್ನುವುದು. ಹೌದು, ಆರ್ಥಿಕವಾಗಿ ಹಿಂದುಳಿದ ಸಾಕಷ್ಟು ಜನ ಕೆಲವು ಧಾರ್ಮಿಕ ಸಂಸ್ಥೆಗಳು, ಟ್ರಸ್ಟ್ ಗಳು ನೆರವೇರಿಸುವಂತಹ ಸಾಮೂಹಿಕ ವಿವಾಹದಲ್ಲಿ ಮದುವೆ ಆಗಬಹುದು. ಇಂತಹ ಮದುವೆ ಆಗುವ ನವ ಜೋಡಿಗೆ ಬಂಗಾರದ ಮಾಂಗಲ್ಯ ತಾಳಿ ಹಾಗೂ ವಸ್ತ್ರಗಳನ್ನು ಉಚಿತವಾಗಿ ಸಾಮೂಹಿಕ ವಿವಾಹ ನಡೆಸುವವರೇ ನೀಡುತ್ತಾರೆ.

ಹೊಸ ರೇಷನ್ ಕಾರ್ಡ್ ವಿತರಣೆಗೆ ಡೇಟ್ ಫಿಕ್ಸ್; ಬಿಪಿಎಲ್ ಕಾರ್ಡ್ ವಿತರಣೆಗೆ ನಿರ್ಧಾರ

ಸಾಮೂಹಿಕ ವಿವಾಹಕ್ಕೆ ಸರ್ಕಾರದ ಬೆಂಬಲ!

2015 16ನೇ ಸಾಲಿನ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಹೀಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರೇ ಆಗಲು ಬಜೆಟ್ ಮಂಡಿಸಿದ್ದು ಸಾಮೂಹಿಕ ವಿವಾಹಕ್ಕೆ ಟ್ರಸ್ಟ್ ಗಳ ಜೊತೆಗೆ ಸರ್ಕಾರವು ಕೈಜೋಡಿಸುವುದಾಗಿ ತಿಳಿಸಿದರು. ಇದಕ್ಕಾಗಿ ಸರಳ ವಿವಾಹ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಇದೀಗ ಮತ್ತೆ ರಾಜ್ಯ ಬಜೆಟ್ ನಲ್ಲಿ ಸರಳ ವಿವಾಹ ಯೋಜನೆಗೆ ಮಾನ್ಯತೆ ನೀಡಲಾಗಿದ್ದು, ವಧು ವರರ ಮುಂದಿನ ಜೀವನಕ್ಕೆ ನೆರವಾಗಲು ಸರ್ಕಾರ ಮತ್ತೊಂದು ಹೊಸ ಉಪಕ್ರಮ ಕೈಗೊಂಡಿದೆ.

ಮುಂದಿನ ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಬರಬೇಕು ಅಂದ್ರೆ ಈ ಕೆಲಸ ಮಾಡಲೇಬೇಕು!

ಸರಳ ವಿವಾಹ ಯೋಜನೆ! (Saral Vivah Yojana)

Saral Vivah Yojanaಬಡವ ಹಾಗೂ ಹಿಂದುಳಿದ ವರ್ಗದ ಜನ ವಿವಾಹವಾಗಲು ಸರ್ಕಾರವು ಕೂಡ ಸರಳ ವಿವಾಹ ಯೋಜನೆಯ ಮೂಲಕ ಸಹಕರಿಸುತ್ತಿದೆ. ಸಾಕಷ್ಟು ಧಾರ್ಮಿಕ ಸಂಘಗಳು ಹೀಗೆ ವಿವಾಹ ಆಗುವವರಿಗೆ ಆರ್ಥಿಕ ನೆರವು ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.

ಈಗ ಈ ಮನವಿಯನ್ನು ಮಾನ್ಯ ಮಾಡಿರುವ ರಾಜ್ಯ ಸರ್ಕಾರ ಹೊಸದಾಗಿ ವಿವಾಹವಾಗುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದಂಪತಿಗಳಿಗೆ 50,000ಗಳನ್ನು ನೇರವಾಗಿ ಅವರ ಖಾತೆಗೆ ಡಿಬಿಟಿ ಮಾಡುವುದಾಗಿ ತಿಳಿಸಿದೆ. ಹಾಗಾದ್ರೆ ಸರ್ಕಾರದ ಯೋಜನೆಯ ಪ್ರಯೋಜನ ಪಡೆದುಕೊಳ್ಳುವುದು ಹೇಗೆ ನೋಡೋಣ.

ಸಿಹಿ ಸುದ್ದಿ! ಏ.1ರಿಂದ ಎಪಿಎಲ್ ಹಾಗೂ ಬಿಪಿಎಲ್ ರೇಷನ್ ಕಾರ್ಡುಗಳು ವಿತರಣೆ

ಸರಳ ವಿವಾಹ ಯೋಜನೆ ಪ್ರಯೋಜನ ಪಡೆದುಕೊಳ್ಳಲು ಇರುವ ನಿಯಮಗಳು!

*ಮದುವೆ ಆಗುವ ಮೊದಲು ಕರ್ನಾಟಕಕ್ಕೆ ಸೇರಿದವರಾಗಿರಬೇಕು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆ ಆಗಬೇಕು.

* ಕನಿಷ್ಠ 10 ಜೋಡಿ ಇರುವ ಸಾಮೂಹಿಕ ವಿವಾಹದಲ್ಲಿ ಮದುವೆ ಆಗಿರಬೇಕು.

*ಮದುವೆಯಾಗಲು ಹುಡುಗಿಗೆ ಕನಿಷ್ಠ 18 ವರ್ಷ ಹಾಗೂ ಹುಡುಗನಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು.

*ವಧು ವರರ ಕುಟುಂಬದ ವಾರ್ಷಿಕ ಆದಾಯ ಎರಡು ಲಕ್ಷ ಮೀರಬಾರದು.

*ಮೊದಲನೇ ಮದುವೆ ಆಗುತ್ತಿರುವ ಜೋಡಿಗೆ ಮಾತ್ರ ಸರ್ಕಾರದ ಯೋಜನೆಯ ಪ್ರಯೋಜನ ಸಿಗುತ್ತದೆ ಎರಡು ಅಥವಾ ಮೂರನೇ ಮದುವೆ ಆಗುವ ಜೋಡಿಗೆ ಸಿಗುವುದಿಲ್ಲ.

ಸ್ವಂತ ಮನೆ ಇಲ್ಲದವರಿಗೆ 36,000 ಮನೆ ವಿತರಣೆಗೆ ಸರ್ಕಾರ ನಿರ್ಧಾರ; ಇಲ್ಲಿದೆ ಮಾಹಿತಿ

*ನೀವು ಎಲ್ಲಿ ಸಾಮೂಹಿಕ ವಿವಾಹದಲ್ಲಿ ಮದುವೆ ಆಗುತ್ತಿರುವ ಅಂತಹ ಟ್ರಸ್ಟ್ ಅಥವಾ ಸಂಘ ಸಂಸ್ಥೆಗಳು ಜಿಲ್ಲಾ ನೋಂದಣಿ ಕಚೇರಿಯಲ್ಲಿ ಸಾಮೂಹಿಕ ವಿವಾಹ ನಡೆಸುವುದಾಗಿ ನೋಂದಾಯಿಸಿಕೊಂಡಿರಬೇಕು.

*ಸಾಮೂಹಿಕ ವಿವಾಹ ಆದ ನಂತರ ಮದುವೆ ಮಾಡಿಸಿರುವವರ ಬಳಿ ಪ್ರಮಾಣ ಪತ್ರ ಫೋಟೋ ಮೊದಲಾದ ದಾಖಲೆಗಳನ್ನು ಪಡೆದುಕೊಳ್ಳಬೇಕು ಈ ದಾಖಲೆಗಳ ಮೂಲಕ ಅರ್ಜಿ ಸಲ್ಲಿಸಿ ಸರ್ಕಾರದಿಂದ ಸಿಗುವ 50,000 ರೂ.ಸಹಾಯಧನವನ್ನು ಪಡೆದುಕೊಳ್ಳಬಹುದು.

50,000 subsidy for newly married couples in this Scheme

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories