ಸ್ವಂತ ಮನೆ ಇಲ್ಲದವರಿಗೆ 36,000 ಮನೆ ವಿತರಣೆಗೆ ಸರ್ಕಾರ ನಿರ್ಧಾರ; ಇಲ್ಲಿದೆ ಮಾಹಿತಿ
36,000 ಮನೆ ವಿತರಣೆಗೆ ರಾಜ್ಯ ಸರ್ಕಾರದ ನಿರ್ಧಾರ; ಸ್ವಂತ ಮನೆ ಇಲ್ಲದವರಿಗೆ ಬಂಪರ್ ಆಫರ್
ಮೂಲಭೂತ ಅವಶ್ಯಕತೆಗಳಲ್ಲಿ ಮನೆ (own house) ಹೊಂದಿರುವುದು ಕೂಡ ಒಂದು. ಅದರಲ್ಲೂ ಬಾಡಿಗೆ ಮನೆಯಲ್ಲಿ ಅಥವಾ ಇತರ ಸ್ಥಳದಲ್ಲಿ ಕಷ್ಟಪಟ್ಟು ಬದುಕುವುದಕ್ಕಿಂತಲೂ ಒಂದು ಸಣ್ಣ ಗುಡಿಸಲಾಗಿದ್ದರು ಸಾಕು ತನ್ನದೇ ಸ್ವಂತ ಮನೆ ಆಗಿರಬೇಕು ಎಂದು ಬಯಸುವವರು ಸಾಕಷ್ಟು ಜನ ಇದ್ದಾರೆ.
ಇಂಥವರಿಗಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಉತ್ತಮ ರೀತಿಯಲ್ಲಿ ಮನೆ ನಿರ್ಮಾಣ ಮಾಡಿ ಕೊಟ್ಟು ದೇಶದ ಆರ್ಥಿಕ ಪರಿಸ್ಥಿತಿಯನ್ನು ಕೂಡ ಸುಧಾರಿಸಲು ಪ್ರಯತ್ನಿಸುತ್ತಿವೆ ಎನ್ನಬಹುದು.
ಯುವನಿಧಿ ಯೋಜನೆಯಲ್ಲಿ ಬಿಗ್ ಅಪ್ಡೇಟ್; ಹಣ ಪಡೆಯಲು ಇನ್ಮುಂದೆ ಈ ದಾಖಲೆ ಕಡ್ಡಾಯ!
36,000 ವಸತಿ ವಿತರಣೆಗೆ ಸರ್ಕಾರದ ನಿರ್ಧಾರ!
ವಸತಿ ರಹಿತ ಬಡವರಿಗೆ (homeless poor people) 36,000 ವಸತಿ ಒದಗಿಸಲು ಸರ್ಕಾರ ನಿರ್ಧರಿಸಿದೆ. ವಸತಿ ಅಥವಾ ಸ್ವಂತ ಮನೆ ಹೊಂದಿರುವುದು ಪ್ರತಿಯೊಬ್ಬರ ಕನಸು ಆದರೆ ಆರ್ಥಿಕ ದುರ್ಬಲತೆ ಎನ್ನುವುದು ಪ್ರತಿಯೊಬ್ಬರಿಗೂ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಲು ಅವಕಾಶ ಮಾಡಿ ಕೊಡುವುದಿಲ್ಲ.
ಹೀಗಾಗಿ ರಾಜ್ಯ ಸರ್ಕಾರದ ವಸತಿ ಯೋಜನೆಯ ಪ್ರಯೋಜನ ಪಡೆದುಕೊಂಡು ಮನೆ ಇಲ್ಲದವರು ಒಂದು ಸ್ವಂತ ಮನೆ ಪಡೆದುಕೊಳ್ಳಲು ಸಾಧ್ಯವಿದೆ. ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ (Loan facility) ಹಾಗೂ ಸರ್ಕಾರದಿಂದ ಸಬ್ಸಿಡಿ ಕೂಡ ಪಡೆದುಕೊಂಡು ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಲು ಸರ್ಕಾರ ಅವಕಾಶ ಮಾಡಿಕೊಡುತ್ತಿದೆ.
ಉಚಿತ ಕರೆಂಟ್ ಗೃಹಜ್ಯೋತಿ ಯೋಜನೆಯಲ್ಲಿ ಬಿಗ್ ಅಪ್ಡೇಟ್! ಈಗ ಇನ್ನಷ್ಟು ಬೆನಿಫಿಟ್
ಫೆಬ್ರವರಿ ತಿಂಗಳಲ್ಲಿ 36,000 ಮನೆಗಳ ವಿತರಣೆ!
ಈ ತಿಂಗಳ ಅಂತ್ಯದ ಒಳಗೆ ಬಡವರಿಗೆ ನಿರ್ಗತಿಕರಿಗೆ ಸ್ವಂತ ಮನೆ ಇಲ್ಲದೆ ಇರುವವರಿಗೆ 36,000 ಮನೆಗಳ ವಿತರಣೆ ಮಾಡುವ ಸಂಕಲ್ಪವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಿದೆ ಎನ್ನಬಹುದು. ಈ ಬಗ್ಗೆ ರಾಜ್ಯ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮಾಹಿತಿ ನೀಡಿದ್ದಾರೆ.
ಗ್ರಾಮೀಣ ಭಾಗದಲ್ಲಿ ಮನೆಗಳ ಹಂಚಿಕೆ!
ಇದೇ ಬರುವ 20ನೇ ತಾರೀಕಿನಂದು, ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಗ್ರಾಮೀಣ ಭಾಗದಲ್ಲಿ ಮನೆ ವಿತರಣೆ ಮಾಡುವುದಕ್ಕೆ ವಿಡಿಯೋ ಕಾನ್ಫರೆನ್ಸ್ (video conference) ಮೂಲಕ ಚಾಲನೆ ನೀಡಲಿದ್ದಾರೆ ಎಂದು ಸಚಿವರ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಇಂತಹ ಕೃಷಿಕ ರೈತರಿಗೆ ಸಿಗಲಿದೆ 4.40 ಲಕ್ಷ ರೂ. ಸಹಾಯಧನ! ಈ ರೀತಿ ಪಡೆದುಕೊಳ್ಳಿ
ಸರ್ಕಾರ ನಿರ್ಮಿಸಿರುವ ಮನೆ ಹೇಗಿದೆ!
ಸದ್ಯ, 36,000 ಫ್ಲಾಟ್ ಗಳನ್ನು ವಿತರಣೆ ಮಾಡಲು ರಾಜ್ಯ ಸರ್ಕಾರ ಬರದಿಂದ ಸಿದ್ಧತೆ ನಡೆಸಿದೆ. ಇನ್ನು ಈ ಮನೆಗಳಲ್ಲಿ ಕುಡಿಯುವ ನೀರು, ಒಳಚರಂಡಿ, ಮನೆಗಳಿಗೆ ವಿದ್ಯುತ್ ಸಂಪರ್ಕ ಮೊದಲಾದ ವ್ಯವಸ್ಥೆಯನ್ನು ಮಾಡಿಕೊಡಲು ರಾಜ್ಯ ಸರ್ಕಾರ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಗ್ರಾಮೀಣ ಭಾಗದಲ್ಲಿ ಬಡವರಿಗೆ ಮನೆ ನಿರ್ಮಾಣ ಮಾಡಿಕೊಡುವ ರಾಜ್ಯ ಸರ್ಕಾರದ ಕನಸು ಈಡೇರುತ್ತಿದೆ. ಕೇವಲ 36,000 ಮನೆಗಳು ಮಾತ್ರವಲ್ಲದೆ ರಾಜ್ಯದಲ್ಲಿ ಇರುವ ಪ್ರತಿಯೊಬ್ಬ ಫಲಾನುಭವಿಗಳಿಗೆ ಉಚಿತ ಹಾಗೂ ಸಬ್ಸಿಡಿ (subsidy ) ದರದಲ್ಲಿ ಮನೆ ನಿರ್ಮಾಣ ಮಾಡಿಕೊಡುವ ಕನಸನ್ನು ರಾಜ್ಯ ಸರ್ಕಾರ ಹೊತ್ತಿದೆ.
ಗೃಹಲಕ್ಷ್ಮಿ ಯೋಜನೆ ಹೊಸ ಅಪ್ಡೇಟ್! ಈ ಮಹಿಳೆಯರಿಗೆ ಬರೋಲ್ಲ 6ನೇ ಕಂತಿನ ಹಣ
ಇನ್ನು ಮನೆ ವಿತರಣೆ ವಿಚಾರದಲ್ಲಿ ಗುತ್ತಿಗೆದಾರರು ಯಾವುದೇ ರೀತಿಯ ವಂಚನೆ ಮಾಡದಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ವಾರ್ನಿಂಗ್ ಮಾಡಿದೆ. ಒಂದು ವೇಳೆ ಗುತ್ತಿಗೆದಾರರು ಸಮಸ್ಯೆ ಉಂಟು ಮಾಡಿದರೆ, ತಕ್ಷಣ ಅದನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಬೇಕು ಹಾಗೂ ಅಂತಹ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಸದ್ಯ 36,000 ಮನೆಗಳು ವಿತರಣೆ ಆಗಲಿದ್ದು ಸಾಕಷ್ಟು ನಿರ್ಗತಿಕ ಕುಟುಂಬದವರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.
Government decision to distribute 36,000 houses to those who do not have their own house