ಗೃಹಲಕ್ಷ್ಮಿ ಯೋಜನೆ ಹೊಸ ಅಪ್ಡೇಟ್! ಈ ಮಹಿಳೆಯರಿಗೆ ಬರೋಲ್ಲ 6ನೇ ಕಂತಿನ ಹಣ
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದ್ದು ಯಾವ ಮಹಿಳೆಯರಿಗೆ ಹಣ ಜಮಾ ಆಗಿಲ್ವೋ ಅದಕ್ಕೆ ತಾಂತ್ರಿಕ ದೋಷ (technical issues) ಕಾರಣವಾಗಿದ್ದರೆ ಅದನ್ನು ಸರಿಪಡಿಸಿ ತಕ್ಷಣ ಅವರ ಖಾತೆಗೂ (Bank Account) ಕೂಡ ಹಣ ಬರುವಂತೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.
ಮಾನದಂಡಗಳನ್ನು ಮೀರಿ ಅರ್ಜಿ ಹಾಕಿದವರ ಅರ್ಜಿ ತಿರಸ್ಕಾರ!
ಸರ್ಕಾರ ಬಿಡುಗಡೆ ಮಾಡಿರುವ ಎಲ್ಲಾ ಗ್ಯಾರಂಟಿ ಯೋಜನೆಗಳಿಗೂ ಕೂಡ ಒಂದಲ್ಲಾ ಒಂದು ರೀತಿಯ ಮಾನದಂಡಗಳನ್ನು ವಿಧಿಸಿದೆ. ಇದರ ಆಧಾರದ ಮೇಲೆ ಯೋಜನೆಯ ಪ್ರಯೋಜನವನ್ನು ಜನರು ಪಡೆದುಕೊಳ್ಳಬಹುದು.
ಇದೀಗ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಪರಿಶೀಲನೆ ನಡೆದು ಮಾನದಂಡಗಳನ್ನು ಮೀರಿ ಅರ್ಜಿ ಸಲ್ಲಿಸಿದವರ ಸಂಖ್ಯೆ ಹೆಚ್ಚಾಗಿ ಕಂಡುಬಂದಿದೆ. ಇಂತಹ ಅರ್ಜಿಗಳನ್ನ ಸರ್ಕಾರ ತಿರಸ್ಕರಿಸಿದೆ.
ರೇಷನ್ ಕಾರ್ಡ್ ಪರಿಶೀಲನೆ, ಇಂಥವರ ರೇಷನ್ ಕಾರ್ಡ್ ಅರ್ಜಿ ತಿರಸ್ಕರಿಸಿದ ಸರ್ಕಾರ
ಆದಾಯ ತೆರಿಗೆ ಪಾವತಿ (income tax payer) ಮಾಡುವ ಕುಟುಂಬದ ಮಹಿಳೆ ಅಥವಾ ಸರ್ಕಾರಿ ನೌಕರಿ (government job) ಯಲ್ಲಿ ಇರುವ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಲ್ಲ. ಇಂತವರು ಅರ್ಜಿ ಸಲ್ಲಿಸಿದರು ಕೂಡ ಆ ಅರ್ಜಿ ಮಾನ್ಯ ಆಗುವುದಿಲ್ಲ. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗಿದೆ.
ಆದರೆ ಇಲ್ಲಿ ಒಂದು ಸಮಸ್ಯೆ ಉಂಟಾಗಿದ್ದು ತಾಂತ್ರಿಕ ದೋಷದಿಂದಾಗಿ ಸುಮಾರು 26 ಸಾವಿರ ಫಲಾನುಭವಿ ಮಹಿಳೆಯರ ಅರ್ಜಿಗಳು ಕೂಡ ತಿರಸ್ಕೃತಗೊಂಡಿವೆ ಅಂತವರ ಖಾತೆಗೆ ಹಣ ಜಮಾ ಆಗುತ್ತಿಲ್ಲ.
ಇದನ್ನ ಗಮನಿಸಿರುವ ಸರ್ಕಾರ ಮುಂದಿನ ಕಂತಿನ ಹಣ ಮಿಸ್ ಆಗದಂತೆ ಇಂಥವರ ಖಾತೆಗೆ ಜಮಾ ಮಾಡುವುದಾಗಿ ತಿಳಿಸಿದೆ. ಆದರೆ ಯಾರು ತಾಂತ್ರಿಕ ತಪ್ಪಿನಿಂದ ಫಲಾನುಭವಿಗಳಾಗಿದ್ದರೂ ಕೂಡ ಹಣವನ್ನು ಪಡೆದುಕೊಳ್ಳುತ್ತಿಲ್ಲವೋ ಅಂತವರು ತಾವು ತೆರಿಗೆ ಪಾವತಿದಾರರಲ್ಲ ಎನ್ನುವ ದೃಢೀಕರಣ ಪತ್ರವನ್ನು ನೀಡಬೇಕಾಗುತ್ತದೆ.
RTE ಮೂಲಕ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಸಲು ದಿನಾಂಕ ಘೋಷಣೆ
ಹೌದು, ನಾವು ತೆರಿಗೆ ಪಾವತಿದಾರರಲ್ಲ ಎಂದು ಸುಮ್ಮನೆ ಹೇಳಿದರೆ ಸಾಧ್ಯವಿಲ್ಲ, ಒಂದು ವೇಳೆ ನಿಮ್ಮ ಅರ್ಜಿ ತಿರಸ್ಕೃತಗೊಂಡಿದ್ದರೆ, ಖಾತೆಗೆ ಹಣ ಜಮಾ ಆಗಿಲ್ಲ ಎನ್ನುವುದನ್ನು ಬ್ಯಾಂಕಿನಲ್ಲಿ ಖಚಿತಪಡಿಸಿಕೊಂಡ ನಂತರ, ನೀವು ಆದಾಯ ಪಾವತಿ ತೆರಿಗೆದಾರರಲ್ಲ ಎನ್ನುವ ದೃಢೀಕರಣ ಪ್ರಮಾಣಪತ್ರವನ್ನು ಹತ್ತಿರದ ಶಿಶು ಕಲ್ಯಾಣ ಇಲಾಖೆಗೆ ಸಲ್ಲಿಸಬೇಕು ಅಲ್ಲಿಂದ ಮೇಲಾಧಿಕಾರಿಗಳಿಗೆ ಅಥವಾ ಸಂಬಂಧಪಟ್ಟ ಪ್ರಧಾನ ಕಚೇರಿಗೆ ನಿಮ್ಮ ಮನವಿಯನ್ನು ಕಳುಹಿಸಲಾಗುತ್ತದೆ. ನಂತರ ಅದನ್ನು ಪರಿಶೀಲನೆ ಮಾಡಿ ಅನರ್ಹರ ಪಟ್ಟಿಯಿಂದ ನಿಮ್ಮ ಹೆಸರನ್ನು ತೆಗೆದುಹಾಕಲಾಗುತ್ತದೆ.
ಗೃಹಲಕ್ಷ್ಮಿ ಯೋಜನೆ 6ನೇ ಕಂತಿನ ಹಣಕ್ಕೆ ಬಿಗ್ ಅಪ್ಡೇಟ್! ಮಹಿಳೆಯರಿಗೆ ಶುಭ ಸುದ್ದಿ
6ನೇ ಕಂತಿನ ಹಣ ಬಿಡುಗಡೆ!
ಈಗಾಗಲೇ ರೂ.10,000ಗಳನ್ನು 5 ಕಂತಿನ ಮೂಲಕ ಸಾಕಷ್ಟು ಗೃಹಿಣಿಯರು ಪಡೆದುಕೊಂಡಿದ್ದಾರೆ. ಆದರೆ 6ನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎಂದು ಕಾದು ಕುಳಿತಿರುವವರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಇದೆ ಫೆಬ್ರವರಿ 15 ರಿಂದ ಗೃಹಲಕ್ಷ್ಮಿ ಯೋಜನೆಯ ಹಣ ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುವುದು.
ಇನ್ನು ತಾಂತ್ರಿಕದ ವಿಷಯದಿಂದ ಯಾರ ಹೆಸರು ಅನರ್ಹರ ಪಟ್ಟಿಯಲ್ಲಿ ಸೇರಿಕೊಂಡಿತ್ತೋ ಆ ಸಮಸ್ಯೆಯನ್ನು ಪರಿಹರಿಸಿ 6 ಮತ್ತು 7ನೇ ಕಂತಿನ ಹಣವನ್ನು ಒಟ್ಟಿಗೆ ಜಮಾ ಮಾಡಲಾಗುವುದು. ಫಲಾನುಭವಿ ಮಹಿಳೆಯರಿಗೆ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ ಎಂದು ಆಹಾರ ಇಲಾಖೆ, ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಿಳಿಸಿದೆ.
ಹೀಗಾಗಿ ನೀವು ಇಲ್ಲಿಯವರೆಗೆ ಹಣ ಪಡೆದುಕೊಂಡಿದ್ದರೆ ಮುಂದಿನ ಕಂತಿನ ಹಣವು ಕೂಡ ನಿಮ್ಮ ಖಾತೆಗೆ ಬರಲು ನಿಮ್ಮ ಖಾತೆಯ ಕೆ ವೈ ಸಿ ಅಪ್ಡೇಟ್ ಹಾಗೂ ಎನ್ ಪಿ ಸಿ ಐ ಕೂಡ ಮಾಡಿಸಿಕೊಳ್ಳಿ ಈ ರೀತಿ ಯಾವುದೇ ತಾಂತ್ರಿಕ ಸಮಸ್ಯೆ ಇಲ್ಲದೆ ಇದ್ದರೆ ನಿಮ್ಮ ಖಾತೆಗೆ ಮಿಸ್ ಆಗದೆ ಹಣ ಜಮಾ (Money Deposit) ಆಗುತ್ತದೆ.
ಫೆಬ್ರವರಿ ತಿಂಗಳಿನಲ್ಲಿ ರದ್ದಾದ ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ! ಪಟ್ಟಿ ಚೆಕ್ ಮಾಡಿ
Gruha Lakshmi Yojana New Update, These women will not get the 6th installment money