ಫೆಬ್ರವರಿ ತಿಂಗಳಿನಲ್ಲಿ ರದ್ದಾದ ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ! ಪಟ್ಟಿ ಚೆಕ್ ಮಾಡಿ

Story Highlights

ಬಿಡುಗಡೆಯಾಯಿತು ಫೆಬ್ರವರಿ ತಿಂಗಳಿನಲ್ಲಿ ರದ್ದಾದ ರೇಷನ್ ಕಾರ್ಡ್ ಲಿಸ್ಟ್; ನಿಮ್ಮ ಅಕ್ಕ ಪಕ್ಕದ ಮನೆಯವರ ಹೆಸರು ಇರಬಹುದು ನೋಡಿ!

ಗ್ಯಾರಂಟಿ ಯೋಜನೆ (guarantee schemes) ಜನರಿಗೆ ಎಷ್ಟು ಖುಷಿ ಕೊಟ್ಟಿದೆಯೋ, ರೇಷನ್ ಕಾರ್ಡ್ ರದ್ದುಪಡಿ (ration card cancellation) ಎನ್ನುವುದು ಅಷ್ಟೇ ಬೇಸರವನ್ನು ಮೂಡಿಸಿದೆ. ಯಾಕಂದ್ರೆ ಗ್ಯಾರಂಟಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುವುದಕ್ಕೆ ರೇಷನ್ ಕಾರ್ಡ್ ಬಹಳ ಮುಖ್ಯವಾಗಿರುತ್ತದೆ.

ಆದರೆ ಈಗ ಸಾಕಷ್ಟು ಜನ ತಮ್ಮ ಬಿಪಿಎಲ್ ಕಾರ್ಡ್ (BPL Ration Card) ಅನ್ನು ಕಳೆದುಕೊಂಡಿದ್ದಾರೆ, ಹಾಗಾಗಿ ನೇರವಾಗಿ ಸರ್ಕಾರದ ಗ್ಯಾರಂಟಿ ಯೋಜನೆಯಿಂದ ವಂಚಿತರಾಗಿದ್ದಾರೆ ಎನ್ನಬಹುದು.

ರೇಷನ್ ಕಾರ್ಡ್ ರದ್ದುಪಡಿ ವಿಚಾರದಲ್ಲಿ ರಾಜ್ಯ ಸರ್ಕಾರ ಬಹಳ ಕಟ್ಟುನಿಟ್ಟಿನ ಕ್ರಮವನ್ನೇ ಕೈಗೊಂಡಿದೆ ಎನ್ನಬಹುದು. ಇತ್ತೀಚಿಗೆ ಪ್ರತಿ ತಿಂಗಳು ಕೂಡ ರೇಷನ್ ಕಾರ್ಡ್ ಪರಿಶೀಲನೆ ನಡೆಸಿ ಅನರ್ಹರ ರೇಷನ್ ಕಾರ್ಡ್ ಅನ್ನು ಕ್ಯಾನ್ಸಲ್ ಮಾಡಲಾಗುತ್ತಿದೆ.

ಕುರಿ ಮೇಕೆ ಸಾಕಾಣಿಕೆಗೆ ಸರ್ಕಾರದಿಂದಲೇ ಸಿಗಲಿದೆ ಸಬ್ಸಿಡಿ ಸಾಲ! ಅರ್ಜಿ ಸಲ್ಲಿಸಿ

ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರತಿ ತಿಂಗಳು ಕ್ಯಾನ್ಸಲ್ ಆಗಿರುವ ರೇಷನ್ ಕಾರ್ಡ್ ಹೋಲ್ಡರ್ ಹೆಸರುಗಳನ್ನು ಪ್ರಕಟಿಸಲಾಗುತ್ತದೆ. ಪ್ರಕಟಿಸಿರುವ ಈ ಲಿಸ್ಟ್ ನಲ್ಲಿ ಯಾರ ಹೆಸರು ಇರುತ್ತದೆಯೋ ಅಂತಹವರ ಖಾತೆಗೆ (Bank Account) ಯಾವುದೇ ಸರ್ಕಾರದ DBT ಹಣ ಜಮಾ ಆಗುವುದಿಲ್ಲ.

ಅನರ್ಹರ ಲಿಸ್ಟ್ ಬಿಡುಗಡೆ!

ಆಹಾರ ಮತ್ತು ನಾಗರಿಕ ವ್ಯವಹಾರಗಳ ಇಲಾಖೆ ಫೆಬ್ರುವರಿ ತಿಂಗಳಿನಲ್ಲಿ ರದ್ದುಪಡಿ ಮಾಡಲಾಗಿರುವ ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ ಮಾಡಿದೆ. ಈಗಾಗಲೇ ಲಕ್ಷಾಂತರ ಜನ ತಮ್ಮ ಬಿಪಿಎಲ್ ಹಾಗೂ ಎ ಎ ವೈ ಕಾರ್ಡ್ ಗಳನ್ನು ಕಳೆದುಕೊಂಡಿದ್ದಾರೆ.

ಒಂದು ವೇಳೆ ಅನರ್ಹರ ಪಟ್ಟಿಗೆ ನೀವು ಸೇರದೆ ಇದ್ದರೆ, ಕೆಲವು ತಾಂತ್ರಿಕ ದೋಷಗಳಿಂದ ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಿದ್ದರೆ ನೀವು ಆಹಾರ ಇಲಾಖೆಗೆ ದೂರು ಸಲ್ಲಿಸಿ ನಿಮ್ಮ ರದ್ದಾಗಿರುವ ರೇಷನ್ ಕಾರ್ಡ್ ಅನ್ನು ಪುನ: ಪಡೆದುಕೊಳ್ಳಲು ಅವಕಾಶವಿದೆ. ಆದರೆ ಇದಕ್ಕೆ ಸರಿಯಾದ ದಾಖಲೆಗಳನ್ನು ನೀವು ಕೊಡಬೇಕು.

ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರ ಕೈಗೆ ಸಿಗಲಿದೆ ಹಕ್ಕು ಪತ್ರ!

Ration card Cancellationರದ್ದುಪಡಿಕೊಂಡಿರುವ ಲಿಸ್ಟ್ ಚೆಕ್ ಮಾಡುವುದು ಹೇಗೆ? (How to check cancelled list)

https://ahara.kar.nic.in/Home/EServices ಆಹಾರ ಇಲಾಖೆಯ ಈ ಅಧಿಕೃತ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಎಡ ಭಾಗದಲ್ಲಿ ಕಾಣಿಸಿರುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ. ಈ ಪಡಿತರ ಸ್ಥಿತಿ ಎನ್ನುವ ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ.

ರದ್ದುಪಡಿಕೊಂಡಿರುವ/ ತಡೆಹಿಡಿಯಲಾದ ರೇಷನ್ ಕಾರ್ಡ್ ಲಿಸ್ಟ್ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಟ್ಯಾಪ್ ಮಾಡಿ.

ಹೊಸ ಪುಟ ತೆರೆದುಕೊಳ್ಳುತ್ತದೆ ಅಲ್ಲಿ ನೀವು ನಿಮ್ಮ ಜಿಲ್ಲೆ, ತಾಲೂಕು, ತಿಂಗಳು ಮತ್ತು ವರ್ಷ ಆಯ್ಕೆ ಮಾಡಬೇಕು. ಬಳಿಕ ಗೋ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.

10ನೇ ತರಗತಿ ಪಾಸಾಗಿದ್ರೆ ಬಿಎಂಟಿಸಿಯಲ್ಲಿ ಹುದ್ದೆ, 30,000 ಸಂಬಳ; ಅರ್ಜಿ ಸಲ್ಲಿಸಿ!

ಈಗ ಯಾರ ರೇಷನ್ ಕಾರ್ಡ್ ರದ್ದಾಗಿದೆ ಎನ್ನುವ ಲಿಸ್ಟ್ ನಿಮ್ಮ ಕಣ್ಣ ಮುಂದೆ ಇದೆ. ಇಲಿ ರೇಷನ್ ಕಾರ್ಡ್ ರದ್ದಾಗಿರುವುದಕ್ಕೆ ಕಾರಣವನ್ನು ಕೂಡ ಕೊಟ್ಟಿರುತ್ತಾರೆ. No record found ಎನ್ನುವ ಸಂದೇಶ ಪರದೆಯ ಮೇಲೆ ಕಾಣಿಸಿದರೆ ನಿಮ್ಮ ತಾಲೂಕಿನಲ್ಲಿ ಈ ತಿಂಗಳಲ್ಲಿ ಯಾರ ರೇಷನ್ ಕಾರ್ಡ್ ಕೂಡ ರದ್ದಾಗಿಲ್ಲ ಎನ್ನುವ ಅರ್ಥ.

ರೇಷನ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಸರ್ಕಾರ ಅದರ ಮಹಾನದಂಡಗಳನ್ನು ತಿಳಿಸಿದೆ. ಆದರೆ ಇದನ್ನ ಅಲ್ಲ ಕಳೆದು ಸಾಕಷ್ಟು ಜನ ರೇಷನ್ ಕಾರ್ಡ್ ಪಡೆದುಕೊಂಡಿದ್ದಾರೆ. ಹಾಗಾಗಿ ಅನರ್ಹರ BPL ಮತ್ತು AAY ಕಾರ್ಡ್ ರದ್ದುಪಡಿಸಲಾಗಿದೆ. ಒಂದು ಕಡೆ ರೇಷನ್ ಕಾರ್ಡ್ ರದ್ದುಪಡಿ ಮಾಡಲಾಗುತ್ತಿದೆ ಹಾಗೂ ಇನ್ನೊಂದು ಕಡೆ ಹೊಸ ರೇಷನ್ ಕಾರ್ಡ್ ವಿತರಣೆಗೆ ಸರ್ಕಾರ ಸಜ್ಜಾಗಿದೆ ಎನ್ನುವ ಮಾಹಿತಿ ಇದೆ.

ರೈತನನ್ನು ಮದುವೆಯಾದ ಯುವತಿಗೆ 5 ಲಕ್ಷ ರೂಪಾಯಿ; ಕನ್ಯಾ ಭಾಗ್ಯದ ಬಗ್ಗೆ ಸರ್ಕಾರದ ನಿರ್ಧಾರ!

canceled ration card list Released For the month of February

Related Stories